Gold Purchase: ಗಟ್ಟಿ ಚಿನ್ನವೋ ಆಭರಣ ಚಿನ್ನವೋ ಖರೀದಿಗೆ ಯಾವುದು ಉತ್ತಮ? ಇಲ್ಲಿದೆ 10 ಪ್ರಶ್ನೆಗಳಿಗೆ ಆಭರಣ ಮಾರಾಟಗಾರರ ಉತ್ತರ

ಚಿನ್ನವನ್ನು ಖರೀದಿ ಮಾಡುವಾಗ ಗಮನಿಸಬೇಕಾದ ಅಂಶಗಳೇನು ಎಂಬ ಬಗ್ಗೆ ಆಭರಣ ಮಾರಾಟಗಾರರಾದ ಎನ್​.ರಾಘವೇಂದ್ರ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ.

Gold Purchase: ಗಟ್ಟಿ ಚಿನ್ನವೋ ಆಭರಣ ಚಿನ್ನವೋ ಖರೀದಿಗೆ ಯಾವುದು ಉತ್ತಮ? ಇಲ್ಲಿದೆ 10 ಪ್ರಶ್ನೆಗಳಿಗೆ ಆಭರಣ ಮಾರಾಟಗಾರರ ಉತ್ತರ
ಎನ್​.ರಾಘವೇಂದ್ರ
Follow us
Srinivas Mata
|

Updated on:May 03, 2022 | 11:58 AM

“ಹತ್ತು ವರ್ಷದ ಹಿಂದೆ ಅಕ್ಷಯ ತೃತೀಯ (Akshaya Tritiya) ಅಂದರೆ ಚಿನ್ನಕ್ಕೆ ಎಷ್ಟು ಬೇಡಿಕೆ ಇತ್ತೋ ಆ ಮಟ್ಟಕ್ಕೆ ಇಳಿದು ಹೋಗಿದೆ. ಕೊರೊನಾ, ಮತ್ತೆ ಅದರ ಜತೆಗೆ ಬೆಲೆ ಏರಿಳಿತ ಸೇರಿಕೊಂಡು ಖರೀದಿಯಲ್ಲಿ ದೊಡ್ಡ ಉತ್ಸಾಹ ಕಾಣ್ತಿಲ್ಲ. ಹಾಗಂತ ತಗೊಳ್ಳೋರೆ ಇಲ್ಲ ಅಂತಲ್ಲ. ಪ್ರಮಾಣ ಕಡಿಮೆ ಆಗಿದೆ. ನಮಗೆ ರೆಗ್ಯುಲರ್ ಕಸ್ಟಮರ್ಸ್ ಇದ್ದಾರೆ. ನಾವು ಆರ್ಡರ್ ತೆಗೆದುಕೊಳ್ಳೋದೆ ಜಾಸ್ತಿ. ಆದ್ದರಿಂದ ತುಂಬ ದೊಡ್ಡ ವ್ಯತ್ಯಾಸ ಏನೂ ಆಗಿಲ್ಲ,” ಅಂತಲೇ “ಟಿವಿ9 ಕನ್ನಡ ಡಿಜಿಟಲ್” ಜತೆ ಮಾತಿಗೆ ಶುರು ಮಾಡಿದರು ಬನಶಂಕರಿ 3ನೇ ಹಂತದಲ್ಲಿ ಇರುವ ಗಣೇಶ್ ಜ್ಯುವೆಲ್ಲರ್ಸ್ ಮಾಲೀಕರಾದ ಎನ್. ರಾಘವೇಂದ್ರ. ಅವರು ಕೂತಿದ್ದ ಕುರ್ಚಿಯ ಹಿಂಭಾಗದಲ್ಲೇ ಇದ್ದ ಲಕ್ಷ್ಮೀ ದೇವಿಯ ನಕಾಶೆ ಗಮನ ಸೆಳೆದಾಗ, ಅವರು ಅದಕ್ಕೆ ಕಾರಣವನ್ನೂ ವಿವರಿಸುತ್ತಾ ಹೋದರು. ಇದು ಸಂಪೂರ್ಣ ಹ್ಯಾಂಡ್​ ಮೇಡ್. ಇದೊಂದು ಕಲೆ. ಮೂಗು, ಕಣ್ಣು ಹೀಗೆ ಪುಟ್ಟ-ಪುಟ್ಟ ಅಂಶಗಳನ್ನು ತಿದ್ದಿ-ತೀಡಿದಂತೆ ಕೈನಲ್ಲೇ ಮಾಡಿದ ಐಟಂ ಇದು. ಇಂಥದ್ದನ್ನು ಮಾಡುವವರು ಸಿಗುವುದೇ ಅಪರೂಪ ಎಂದರು. ಚಿನ್ನದ ಖರೀದಿಗೆ ಸಂಬಂಧಿಸಿದಂತೆ ನಮ್ಮ ಪ್ರಶ್ನೆಗಳನ್ನು ಅವರ ಮುಂದೆ ಇಡಲಾಯಿತು. ಅವುಗಳಿಗೆ ಅವರು ಉತ್ತರಿಸಿದ್ದು ಹೀಗೆ.

  1. ಮಕ್ಕಳ ಮದುವೆಗೆ ಚಿನ್ನ ಬೇಕು ಅಂದುಕೊಳ್ಳುವವರು ಹೇಗೆ ಯೋಜನೆ ಮಾಡಿಕೊಳ್ಳಬೇಕು? ರಾಘವೇಂದ್ರ: ಫಿಸಿಕಲ್ ಆಗಿಯೇ ತಿಂಗಳಿಗೆ ಒಂದು- ಎರಡು ಗ್ರಾಮ್​ನಂತೆ ಚಿನ್ನದ ನಾಣ್ಯ ಖರೀದಿಸಬಹುದು. 24 ಕ್ಯಾರೆಟ್​ ಚಿನ್ನ ಹಾಗೆ ಕೊಳ್ಳುತ್ತಾ ಹೋದರೆ 100 ಗ್ರಾಮ್​ ಆಯಿತು ಅಂದ ಮೇಲೆ ಬೇಕಾದಲ್ಲಿ ಗಟ್ಟಿಯಾಗಿ ಮಾಡಿಸಬಹುದು. ಅಮ್ಮನ ಒಡವೆ ಮಕ್ಕಳಿಗೆ ಕೊಡಬಹುದು. ಅದು ಭಾವನಾತ್ಮಕ ವಿಷಯ. ಆದರೆ ಮಕ್ಕಳು ಚಿಕ್ಕವರಿರುವಾಗಲೇ ಅವರ ಮದುವೆಗೆ ಒಡವೆ ತೆಗೆದಿಡಬಾರದು. ಅದರ ಡಿಸೈನ್ ಔಟ್​ಡೇಟ್ ಆಗಿಬಿಡುತ್ತದೆ. ಮಕ್ಕಳಿಗೂ ಅದು ಇಷ್ಟವಾಗಲ್ಲ. ಈಗಾಗಲೇ ಹೇಳಿದಂತೆ ತಿಂಗಳಿಗೆ ಒಂದೆರಡು ಗ್ರಾಮ್​ನಂತೆ ತೆಗೆದಿಟ್ಟುಕೊಳ್ಳಬಹುದು.
  2. ಒಂದು ಅಥವಾ ಎರಡು ಗ್ರಾಮ್ ಅಂದರೆ ಐವತ್ತರಿಂದ ನೂರು ನಾಣ್ಯ ಆಗುತ್ತದೆ. ಅದನ್ನು ಇಟ್ಟುಕೊಳ್ಳುವುದು ಕಷ್ಟ ಆಗುತ್ತದೆ ಅಲ್ಲವಾ? ರಾಘವೇಂದ್ರ: ಐವತ್ತು ಅಥವಾ 100 ನಾಣ್ಯ ಆಯಿತು ಅಂದರೆ, ಅಥವಾ ಅದಕ್ಕಿಂತ ಕಡಿಮೆ ಇರುವಾಗಲೇ ನಮ್ಮಂಥವರ ಅಥವಾ ನಮ್ಮ ಬಳಿ ತಂದುಕೊಟ್ಟರೆ ಗಟ್ಟಿಯಾಗಿ ಮಾಡಿಕೊಡ್ತೀವಿ.
  3. ಈ ರೀತಿ ಗಟ್ಟಿ ಮಾಡಿಕೊಡುವುದಕ್ಕೆ ಎಷ್ಟು ಖರ್ಚಾಗುತ್ತದೆ? ರಾಘವೇಂದ್ರ: ಗ್ರಾಮ್​ಗೆ ಇಂತಿಷ್ಟು ಅಂತ ಶುಲ್ಕ ಆಗುತ್ತದೆ. ಆದರೆ ಅದು ಖಂಡಿತಾ ದುಬಾರಿ ಆಗಲ್ಲ.
  4. ಗಟ್ಟಿಯನ್ನು ವಾಪಸ್ ಕೊಡುವಾಗ ಅದಕ್ಕೂ ಶುಲ್ಕ ಹಾಕುತ್ತಾರಲ್ಲಾ? ರಾಘವೇಂದ್ರ: ಕೆಲವು ಕಡೆ ಅದಕ್ಕೆ ಹ್ಯಾಂಡ್ಲಿಂಗ್ ಚಾರ್ಜಸ್ ಅಂತ ಹಾಕ್ತಾರೆ. ನಾವಂತೂ ನಮ್ಮ ಗ್ರಾಹಕರಿಗೆ ಅದನ್ನು ಹಾಕಲ್ಲ. ಆ ದಿನದ ಚಿನ್ನದ ಬೆಲೆ ಏನಿರುತ್ತದೆ ಅದನ್ನು ಕೊಡ್ತೀವಿ.
  5. ಗ್ರಾಹಕರು ಆಭರಣ ಖರೀದಿಸುವಾಗ ಏನನ್ನು ಗಮನಿಸಬೇಕು? ರಾಘವೇಂದ್ರ: ಮೊದಲಿಗೆ ಗುಣಮಟ್ಟ. ಚಿನ್ನದ ಗುಣಮಟ್ಟ ಹೇಗಿದೆ ಎಂಬುದನ್ನು ಗಮನಿಸಬೇಕು. ಆ ನಂತರ ವರ್ಕ್​ಮನ್​ಶಿಪ್. ಅದಾದ ಮೇಲೆ ಫಿನಿಷಿಂಗ್. ಮೊದಲನೆಯದನ್ನು ಖಾತ್ರಿ ಮಾಡಿಕೊಳ್ಳುವುದು ತುಂಬ ಕಷ್ಟ ಏನಲ್ಲ. ಆದರೆ ವರ್ಕ್​ಮನ್​ಷಿಪ್, ಫಿನಿಷಿಂಗ್ ಅನುಭವದಿಂದ ಗೊತ್ತಾಗುತ್ತದೆ. ಜತೆಗೆ ಕೆಲವು ಆಭರಣ ಮಳಿಗೆಗಳು ಆ ಬಗ್ಗೆ ನಂಬಿಕೆ ಉಳಿಸಿಕೊಂಡುಬಂದಿವೆ.
  6. ಗುಣಮಟ್ಟ ತಿಳಿಯುವುದು ಏನೂ ಕಷ್ಟ ಇಲ್ಲ ಅಲ್ಲವಾ? ಗ್ರಾಮ್​ಗೆ ಇಷ್ಟು ಅಂತ ಕೊಟ್ಟರೆ ಹಾಲ್​ಮಾರ್ಕ್ ಹಾಕಿಕೊಡ್ತಾರೆ? ರಾಘವೇಂದ್ರ: ಹಾಲ್​ಮಾರ್ಕ್ ಕೇಂದ್ರಗಳಲ್ಲಿ, ಹಲವು ಕಡೆ ಆಭರಣ ಮಳಿಗೆಗಳಲ್ಲೇ ಪರೀಕ್ಷೆ ಮಾಡಿ, ತಿಳಿಸುತ್ತಾರೆ.
  7. ಜಿಎಸ್​ಟಿ ಹಾಕುವುದರಿಂದ ಗ್ರಾಹಕರಿಗೆ ಹೊರೆ ಬೀಳುತ್ತದೆ. ಅದನ್ನು ತಪ್ಪಿಸುವುದಕ್ಕೆ ದಾರಿ ಇದೆಯಾ? ರಾಘವೇಂದ್ರ: ಖಂಡಿತಾ ಇಲ್ಲ. ಹಾಗೊಂದು ವೇಳೆ ಹೇಳಿದರು ಅಂದರೆ ನಿಮ್ಮನ್ನು ಅವರು ದಾರಿ ತಪ್ಪಿಸುತ್ತಿದ್ದಾರೆ ಅಂತಲೇ ಅರ್ಥ. ಹಾಲ್​ಮಾರ್ಕ್​ನಲ್ಲಿ ಎಚ್​ಯುಐಡಿ ಸಂಖ್ಯೆ ಅಂತ ಬರುತ್ತದೆ. ಪ್ರತಿ ಐಟಂ ಮೇಲೆ ಅದಿರಬೇಕು. ಅದು ಇರುವುದರಿಂದ ಎಷ್ಟು ಆಭರಣ ತಯಾರಾಯಿತು, ಎಷ್ಟು ಮಾರಾಟ ಆಯಿತು ಅನ್ನೋದು ಗೊತ್ತಾಗುತ್ತದೆ. ಬಿಲ್​ನಲ್ಲೂ ಎಚ್​ಯುಐಡಿ ಸಂಖ್ಯೆಯನ್ನು ಕಡ್ಡಾಯವಾಗಿ ಹಾಕಬೇಕು. ಜಿಎಸ್​ಟಿಯನ್ನು ತಪ್ಪಿಸಿದ ಯಾವ ವ್ಯವಹಾರವೂ ಸಾಧ್ಯವಿಲ್ಲ.
  8. ಹೂಡಿಕೆ ಉದ್ದೇಶಕ್ಕೆ ಚಿನ್ನ ಖರೀದಿಸುವವರಿಗೆ ನಿಮ್ಮ ಸಲಹೆ ಏನು? ರಾಘವೇಂದ್ರ: ಗೋಲ್ಡ್ ಇಟಿಎಫ್, ಸವರನ್ ಗೋಲ್ಡ್ ಬಾಂಡ್.
  9. ಚಿನ್ನ ಖರೀದಿಯ ವೇಳೆ ಮೋಸ ಹೋಗದಿರಲು ಏನು ಮಾಡಬೇಕು? ರಾಘವೇಂದ್ರ: ವೇಸ್ಟೇಜ್, ಮೇಕಿಂಗ್ ಚಾರ್ಜ್ ಬಗ್ಗೆ ಜನರಿಗೆ ಇವತ್ತಿಗೂ ತಿಳಿವಳಿಕೆ, ಜ್ಞಾನ ಕಡಿಮೆ ಇದೆ. ಹತ್ತು ಗ್ರಾಮ್​ನದೇ ತೂಕದ್ದು ಎರಡು ಬೇರೆ- ಬೇರೆ ಆಭರಣಕ್ಕೆ ವಿಭಿನ್ನ ವೇಸ್ಟೇಜ್, ಮೇಕಿಂಗ್ ಚಾರ್ಜ್ ಆಗುತ್ತದೆ. ಏಕೆಂದರೆ ಅದರಲ್ಲಿನ ಕೆಲಸ. ಆರಂಭದಲ್ಲೇ ಹೇಳಿದಂತೆ ವರ್ಕ್​​ಮನ್​ಷಿಪ್ ಹಾಗೂ ಫಿನಿಷಿಂಗ್. ಇದರ ಬಗ್ಗೆ ಸಾವಧಾನವಾಗಿ ಆಭರಣ ಮಳಿಗೆಯವರಿಂದ ಕೇಳಿ, ತಿಳಿದುಕೊಳ್ಳಬೇಕು. ಆ್ಯಂಟಿಕ್ ಜ್ಯುವೆಲ್ಲರಿ, ಹ್ಯಾಂಡ್​ಮೇಡ್ ಜ್ಯುವೆಲ್ಲರಿ, ಉಳಿದ ಸಾಮಾನ್ಯ ಆಭರಣಗಳು ಎಲ್ಲಕ್ಕೂ ಒಂದೇ ಬಗೆಯ ವೇಸ್ಟೇಜ್, ಮೇಕಿಂಗ್ ಚಾರ್ಜ್ ಇರುವುದಿಲ್ಲ. ಒಂದು ಆಭರಣ ತಯಾರಿ ಆಗುವಾಗ ಅಷ್ಟು ಚಿನ್ನ ವ್ಯರ್ಥ ಆಗುತ್ತದೆ, ಕೆಲಸ ಹಿಡಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರೆ ತಾವು ಮೋಸ ಹೋಗಿಲ್ಲ ಎಂಬ ಭಾವನೆ ಮೂಡಬಹುದು. ಇನ್ನು ಮೋಸ ಹೋಗಬಾರದು ಎಂದಲ್ಲಿ ವಿಶ್ವಾಸಾರ್ಹವಾದ ಆಭರಣ ಮಳಿಗೆ, ಮಾರಾಟಗಾರರಲ್ಲೇ ಖರೀದಿಸುವುದು ಉತ್ತಮ.
  10. ಇದು ಯಾವಾಗಲೂ ಕೇಳಿಬರುವ ಪ್ರಶ್ನೆ, ಈಗ ಚಿನ್ನ ಖರೀದಿಸಬಹುದಾ? ರಾಘವೇಂದ್ರ: ಚಿನ್ನವನ್ನು ಯಾವಾಗಲೂ ಖರೀದಿಸಬಹುದು. ಹೂಡಿಕೆಗೆ ಎಂದು ಮೋಸ ಆಗುವುದಿಲ್ಲ.

ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Akshaya Tritiya 2022: ಅಕ್ಷಯ ತೃತೀಯದಲ್ಲಿ ಆಭರಣ ಖರೀದಿಸಲು ಇಲ್ಲಿದೆ ಶುಭ ಮುಹೂರ್ತ

Published On - 11:34 am, Tue, 3 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ