EPFO: ಪಿಂಚಣಿ ವೇತನದ ಮಿತಿ ರೂ. 15,000ದಿಂದ ರೂ. 21,000ಕ್ಕೆ ಹೆಚ್ಚಿಸಲು ಚಿಂತನೆ; ಇದರ ಪರಿಣಾಮ ಏನು?

ಪೆನ್ಷನ್ ಮಿತಿಯ ಪಿಎಫ್ ಅನ್ನು ಇಪಿಎಫ್​ಒದಿಂದ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ವರದಿ ಆಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

EPFO: ಪಿಂಚಣಿ ವೇತನದ ಮಿತಿ ರೂ. 15,000ದಿಂದ ರೂ. 21,000ಕ್ಕೆ ಹೆಚ್ಚಿಸಲು ಚಿಂತನೆ; ಇದರ ಪರಿಣಾಮ ಏನು?
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on:May 03, 2022 | 5:42 PM

ಪಿಂಚಣಿಗಾಗಿ ಅಸ್ತಿತ್ವದಲ್ಲಿರುವ ವೇತನ ಮಿತಿಯು 2014ರ ಸೆಪ್ಟೆಂಬರ್​ನಿಂದ ಬದಲಾಗದೆ ಇದ್ದು, ಅದನ್ನು ಹೆಚ್ಚಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪರಿಗಣಿಸುತ್ತಿದೆ. ವರದಿಗಳ ಪ್ರಕಾರ, ಇಪಿಎಫ್‌ಒ ಪಿಂಚಣಿಗಾಗಿ ಅಸ್ತಿತ್ವದಲ್ಲಿರುವ ವೇತನ ಮಿತಿಯನ್ನು ರೂ. 15,000ದಿಂದ ರೂ. 21,000ಕ್ಕೆ ಹೆಚ್ಚಿಸಲು ಪರಿಗಣಿಸುತ್ತಿದೆ. ಉದ್ದೇಶಪೂರ್ವಕವಾಗಿ ಇಪಿಎಫ್‌ಒ ಸದಸ್ಯರು ಪಿಂಚಣಿ ವೇತನದ ಹೆಚ್ಚಳದ ಪರವಾಗಿದ್ದಾರೆ. ಪಿಂಚಣಿ ವೇತನದ ಮಿತಿಯ ಮೇಲಿನ ಕೊನೆಯ ತಿದ್ದುಪಡಿಯನ್ನು 2014ರಲ್ಲಿ ಮಾಡಲಾಯಿತು. ಆಗ ಸರ್ಕಾರವು ಪಿಎಫ್ ವೇತನದ ಮಿತಿಯನ್ನು ರೂ. 6,500ರಿಂದ ರೂ. 15,000ಕ್ಕೆ ಏರಿಸಿತು.

ಒಂದೆಡೆ, ಹೊಸ ಮಿತಿಯು ಹೆಚ್ಚಿನ ಜನರನ್ನು ವ್ಯಾಪ್ತಿಗೆ ತರುತ್ತದೆ. ಆದರೆ ಇದು ಸರ್ಕಾರಕ್ಕೆ ಹೊರೆಯಾಗುತ್ತದೆ. ಸದ್ಯ ಈ ವಿಷಯ ಸರ್ಕಾರದ ಹಸಿರು ನಿಶಾನೆಗಾಗಿ ಕಾಯುತ್ತಿದೆ. ಹೆಚ್ಚಿದ ಪಿಎಫ್ ವೇತನ ಮಿತಿಗಾಗಿ ಸರ್ಕಾರವು 6,750 ಕೋಟಿ ರೂಪಾಯಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ವರದಿಯಾಗಿದೆ.

ಪ್ರಸ್ತುತ ಕೊಡುಗೆಯ ದರಗಳ ಪ್ರಕಾರ, ಅಸ್ತಿತ್ವದಲ್ಲಿರುವ ಇಪಿಎಸ್ ಸದಸ್ಯ (01-09-2014ರಂತೆ) ಅವರ ಪಿಂಚಣಿ ಕೊಡುಗೆಯ ಹಿಂದಿನ ಇಪಿಎಸ್ ವೇತನದ ಮಿತಿಯನ್ನು 01-09-2014ರಿಂದ ರೂ. 15,000ಕ್ಕಿಂತ ಹೆಚ್ಚಿನ ಕೊಡುಗೆಗೆ ರೂ. 6500ರ ಮೇಲಿನ ಕೊಡುಗೆಗೆ ಪಾವತಿಸಲಾಗಿದೆ/ಅವರು ಹೊಸ ಸಮ್ಮತಿಯನ್ನು ನೀಡಬೇಕು ಮತ್ತು ರೂ. 15,000ಕ್ಕಿಂತ ಹೆಚ್ಚಿನ ವೇತನದ ಮೇಲೆ ಶೇ 1.16ರ ಮೊತ್ತವನ್ನು ಉದ್ಯೋಗದಾತರ ಮೂಲಕ ಪಿಂಚಣಿ ನಿಧಿಗೆ (A/C No 10) ಕೊಡುಗೆ ನೀಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: New Labour Law: ಕೆಲಸದ ಸಮಯ, ಕೈಗೆ ಬರುವ ಸಂಬಳ, ಪಿಎಫ್​ ಹೀಗೆ ಜುಲೈ 1ರಿಂದ ನಿರೀಕ್ಷಿಸಿ ಹಲವು ಬದಲಾವಣೆ

Published On - 5:42 pm, Tue, 3 May 22