AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಐಸಿ ಆ್ಯಂಕರ್ ಬುಕ್​ನಲ್ಲಿ ಭಾಗವಹಿಸುತ್ತಿಲ್ಲ 28 ಮ್ಯೂಚುಯಲ್ ಫಂಡ್​ಗಳು: ಇಲ್ಲಿದೆ ಪಟ್ಟಿ

ರಿಟೇಲ್‌ ಹೂಡಿಕೆದಾರರಿಗೂ, ಪಾಲಿಸಿದಾರರಿಗೂ, ಜನಸಾಮಾನ್ಯರಿಗೂ ಎಲ್‌ಐಸಿಯ ಷೇರುಗಳನ್ನು ತಮ್ಮದಾಗಿಸುವ ಅವಕಾಶ ಸೃಷ್ಟಿಯಾಗಿದೆ. ಆದಾಗ್ಯೂ, 28 ದೇಶೀಯ ಮ್ಯೂಚುಯಲ್ ಫಂಡ್‌ಗಳು (Mutual Funds) ಆಂಕರ್ ಬುಕ್​ನಲ್ಲಿ (Anchor Book) ಭಾಗವಹಿಸುತ್ತಿಲ್ಲ.

ಎಲ್​ಐಸಿ ಆ್ಯಂಕರ್ ಬುಕ್​ನಲ್ಲಿ ಭಾಗವಹಿಸುತ್ತಿಲ್ಲ 28 ಮ್ಯೂಚುಯಲ್ ಫಂಡ್​ಗಳು: ಇಲ್ಲಿದೆ ಪಟ್ಟಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:May 04, 2022 | 9:53 AM

Share

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಬಹು ನಿರೀಕ್ಷೆಯ ಮೆಗಾ ಆರಂಭಿಕ ಷೇರು ಬಿಡುಗಡೆ (ಐಪಿಒ) ಇಂದಿನಿಂದ ( ಮೇ. 4) ಆರಂಭವಾಗಿದೆ. ಇದು ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಗಳಿಸಿದ್ದು, ಈಗಾಗಲೇ ಆ್ಯಂಕರ್‌ ಹೂಡಿಕೆದಾರರಿಗೆ ಆರಂಭಿಕ ಷೇರುಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದ್ದು, ಆ್ಯಂಕರ್‌ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಎಲ್ಐಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್​ಐಸಿ ಶೇ. 3.5ರಷ್ಟು ಷೇರುಗಳನ್ನು ಬಿಡುಗಡೆಗೊಳಿಸಿ 20,557 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ. ರಿಟೇಲ್‌ ಹೂಡಿಕೆದಾರರಿಗೂ, ಪಾಲಿಸಿದಾರರಿಗೂ, ಜನಸಾಮಾನ್ಯರಿಗೂ ಎಲ್‌ಐಸಿಯ ಷೇರುಗಳನ್ನು ತಮ್ಮದಾಗಿಸುವ ಅವಕಾಶ ಸೃಷ್ಟಿಯಾಗಿದೆ. ಆದಾಗ್ಯೂ, 28 ದೇಶೀಯ ಮ್ಯೂಚುಯಲ್ ಫಂಡ್‌ಗಳು (Mutual Funds) ಆಂಕರ್ ಬುಕ್​ನಲ್ಲಿ (Anchor Book) ಭಾಗವಹಿಸುತ್ತಿಲ್ಲ.

ಗೈರುಹಾಜರಾದ ಕೆಲವು ಪ್ರಮುಖ ಹೆಸರುಗಳಲ್ಲಿ ಡಿಎಸ್‌ಪಿ ಮ್ಯೂಚುಯಲ್ ಫಂಡ್, ಮಿರೇ ಅಸೆಟ್ ಮ್ಯಾನೇಜ್‌ಮೆಂಟ್, ಎಡೆಲ್‌ವೀಸ್ ಮ್ಯೂಚುಯಲ್ ಫಂಡ್, ಕೆನರಾ ರೋಬೆಕೊ ಮ್ಯೂಚುಯಲ್ ಫಂಡ್, ಮೋತಿಲಾಲ್ ಓಸ್ವಾಲ್ ಮ್ಯೂಚುಯಲ್ ಫಂಡ್, ಪಿಪಿಎಫ್‌ಎಎಸ್ ಮ್ಯೂಚುಯಲ್ ಫಂಡ್, ಎಲ್‌ಐಸಿ ಮ್ಯೂಚುಯಲ್ ಫಂಡ್, ಪಿಜಿಐಎಮ್ ಮ್ಯೂಚುಯಲ್ ಫಂಡ್, ಹೆಚ್​ಎಸ್​ಬಿಸಿ ಮ್ಯೂಚುಯಲ್ ಫಂಡ್, ಮಹೀಂದ್ರಾ ಮನುಲೈಫ್, ಯೂನಿಯನ್ ಮ್ಯೂಚುಯಲ್ ಫಂಡ್, ಕ್ಯೂನತ್, ಎನ್​ಜೆ ಮ್ಯೂಚುಯಲ್ ಫಂಡ್, ಐಐಎಫ್​ಎಲ್, ಐಡಿಬಿಐ ಮ್ಯೂಚುಯಲ್ ಫಂಡ್, ಬಿಓಐ ಎಸಕ್ಸ್​ಎ, ಐಟಿಐ ಮ್ಯೂಚುಯಲ್ ಫಂಡ್, ಜೆಎಮ್​, ಕ್ವಾಂಟಮ್ ಮ್ಯೂಚುಯಲ್ ಫಂಡ್, ಐಎಲ್ ಮತ್ತು ಎಫ್​ಎಸ್​, ಟ್ರಸ್ಟ್ ಮ್ಯೂಚುಯಲ್ ಫಂಡ್, ನೇವಿ ಮ್ಯೂಚುಯಲ್ ಫಂಡ್, ಇಂಡಿಯಾ ಬುಲ್ಸ್, ಟೌರಸ್, ಸ್ಯಾಮ್​ಕೊ ಮ್ಯೂಚುಯಲ್ ಫಂಡ್, ಶ್ರೀರಾಮ್ ಮ್ಯೂಚುಯಲ್ ಫಂಡ್, ವೈಟ್​ವೋಕ್ ಕ್ಯಾಪಿಟಲ್ ಹೀಗೆ ಒಟ್ಟು 28 ಮ್ಯೂಚುಯಲ್ ಫಂಡ್‌ಗಳು ಆಂಕರ್ ಬುಕ್​ನಲ್ಲಿ ಪಾಲ್ಗೊಂಡಿಲ್ಲ.

Credit Score: ಸಾಲ ಪಡೆಯುವುದಕ್ಕೆ ಮುಖ್ಯವಾದ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲು ಇಲ್ಲಿದೆ 5 ಮಾರ್ಗಗಳು

ಒಟ್ಟಾರೆಯಾಗಿ, ಆಂಕರ್ ಪುಸ್ತಕದಲ್ಲಿ 59.2 ಮಿಲಿಯನ್ ಷೇರುಗಳನ್ನು ನೀಡಲಾಗಿದೆ. ಇದರಲ್ಲಿ 42.1 ಮಿಲಿಯನ್ ಷೇರುಗಳನ್ನು ಮ್ಯೂಚುವಲ್ ಫಂಡ್‌ಗಳು ಖರೀದಿಸಿವೆ. ಒಟ್ಟು 99 ಯೋಜನೆಗಳ ಮೂಲಕ 15 ದೇಶೀಯ ಮ್ಯೂಚುವಲ್ ಫಂಡ್‌ಗಳು ಭಾಗವಹಿಸಿದ್ದವು. ರೂ 21,000-ಕೋಟಿ ಸಂಚಿಕೆಯು ಆ್ಯಂಕರ್ ಹೂಡಿಕೆದಾರರಿಂದ ರೂ 5,627 ಕೋಟಿಗಳನ್ನು ಸಂಗ್ರಹಿಸಿದೆ. ಇವುಗಳಲ್ಲಿ, ಮ್ಯೂಚುವಲ್ ಫಂಡ್‌ಗಳು 4,002 ಕೋಟಿ ರೂ. ಗಳನ್ನು ಕೊಡುಗೆಯಾಗಿ ನೀಡಿವೆ.

ಎಸ್‌ಬಿಐ ಮ್ಯೂಚುಯಲ್ ಫಂಡ್, ಐಸಿಐಸಿಐ ಪ್ರುಡೆನ್ಶಿಯಲ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಆದಿತ್ಯ ಬಿರ್ಲಾ ಸನ್ ಲೈಫ್, ಆಕ್ಸಿಸ್ ಮ್ಯೂಚುಯಲ್ ಫಂಡ್, ಎಚ್‌ಡಿಎಫ್‌ಸಿ ಟ್ರಸ್ಟಿ, ನಿಪ್ಪಾನ್ ಲೈಫ್, ಕೋಟಕ್ ಮಹೀಂದ್ರಾ ಲೈಫ್ ಇನ್ಶುರೆನ್ಸ್, ಎಲ್ & ಟಿ ಮ್ಯೂಚುಯಲ್ ಫಂಡ್, ಟಾಟಾ ಇನ್ವೆಸ್ಟ್‌ಮೆನೆಟ್ ಕಾರ್ಪೊರೇಷನ್, ಯುಟಿಐ ಮ್ಯೂಚುಯಲ್ ಫಂಡ್, ಸುಂದರಂ, ಮ್ಯುಚುಯಲ್ ಫಂಡ್ ಸೇರಿದಂತೆ ದೇಶೀಯ ಹೂಡಿಕೆದಾರರು IDFC MF, ಮತ್ತು Bajaj Allianz General Insurance, LIC ನಲ್ಲಿ ಬಲವಾದ ಆಸಕ್ತಿಯನ್ನು ತೋರಿಸಿದ್ದಾರೆ.

ವಿದೇಶಿ ಹೂಡಿಕೆದಾರರಲ್ಲಿ ಬಿಎನ್​​ಪಿ ಇನ್ವೆಸ್ಟ್ ಮೆಂಟ್ಸ್  (BNP Investments) 449.99 ಕೋಟಿ ರೂ. ಮೌಲ್ಯದ ಷೇರುಗಳನ್ನು, ನಾರ್ವೆ ಸರ್ಕಾರಿ ಪಿಂಚಣಿ ನಿಧಿ ಗ್ಲೋಬಲ್ ಆಫ್ ನಾರ್ವೆ 224.99 ಕೋಟಿ ರೂ., ಸಿಂಗಾಪುರ ಸರ್ಕಾರ 151.67 ಕೋಟಿ ರೂ. ಹಾಗೂ ಸಿಂಗಾಪುರದ ಹಣಕಾಸು ಪ್ರಾಧಿಕಾರ 38.32 ಕೋಟಿ ರೂ. ಹೂಡಿಕೆ ಮಾಡಿವೆ. ಆ್ಯಂಕರ್‌ ಹೂಡಿಕೆದಾರರಿಗೆ ಮೀಸಲಿಟ್ಟ 5,627 ಕೋಟಿ ರೂ.ಗಿಂತಲೂ ಹೆಚ್ಚಿನ 7,000 ಕೋಟಿ ರೂ. ತನಕ  ಹೂಡಿಕೆದಾರರು ಬಿಡ್ ಮಾಡಿದ್ದರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಐಪಿಒ ಮೇ 9ರಂದು ಮುಕ್ತಾಯವಾದರೆ, ಮೇ 12ರಂದು ಷೇರುಗಳ ಮಂಜೂರಾತಿ ಅಂತಿಮವಾಗಲಿದೆ. ಐಪಿಒ ಮುಕ್ತಾಯವಾದ ಒಂದು ವಾರದ ಬಳಕ, ಷೇರು ವಿನಿಮಯ ಕೇಂದ್ರಗಳಲ್ಲಿ ಮೇ 17ರಂದು ಎಲ್‌ಐಸಿ ಷೇರು ನೋಂದಣಿಯಾಗಲಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:52 am, Wed, 4 May 22

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು