AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC IPO: ಎಲ್​ಐಸಿ ಐಪಿಒ ಗ್ರೇ ಮಾರ್ಕೆಟ್​ನಲ್ಲಿ ಎಂಥ ಬೇಡಿಕೆ ಪಡೆದಿದೆ? ಏನಿದು ಗ್ರೇ ಮಾರ್ಕೆಟ್ ಗೊತ್ತಿದೆಯಾ?

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಐಪಿಒಗೆ ಗ್ರೇ ಮಾರ್ಕೆಟ್​ನಲ್ಲಿ ಎಂಥ ಬೇಡಿಕೆ ಇದೆ ಗೊತ್ತೆ? ಅದಕ್ಕೂ ಮುನ್ನ ಗ್ರೇ ಮಾರ್ಕೆಟ್ ಅಂದರೆ ಗೊತ್ತಿದೆಯಾ? ಆ ಬಗ್ಗೆ ಮಾಹಿತಿ ಇಲ್ಲಿದೆ.

LIC IPO: ಎಲ್​ಐಸಿ ಐಪಿಒ ಗ್ರೇ ಮಾರ್ಕೆಟ್​ನಲ್ಲಿ ಎಂಥ ಬೇಡಿಕೆ ಪಡೆದಿದೆ? ಏನಿದು ಗ್ರೇ ಮಾರ್ಕೆಟ್ ಗೊತ್ತಿದೆಯಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 02, 2022 | 1:20 PM

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (LIC) ಮೂಲಕ ದೇಶದ ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4ರಂದು ತೆರೆಯಲು ಸಿದ್ಧವಾಗಿದೆ ಮತ್ತು ಮೇ 9ರಂದು ಅದರ ಚಂದಾದಾರಿಕೆ (Subscription) ಕೊನೆಯಾಗಲಿದೆ. ಮಾರಾಟದ ಬೆಲೆಯನ್ನು ಪ್ರತಿ ಷೇರಿಗೆ ರೂ. 902ರಿಂದ ರೂ. 949 ರವರೆಗೆ ನಿಗದಿಪಡಿಸಲಾಗಿದ್ದು, ಮಾರುಕಟ್ಟೆ ವೀಕ್ಷಕರ ಪ್ರಕಾರ, ಷೇರುಗಳು ಇಂದು (ಮೇ 2) ಗ್ರೇ ಮಾರ್ಕೆಟ್​ನಲ್ಲಿ ರೂ. 75 ಪ್ರೀಮಿಯಂನಲ್ಲಿ ಲಭ್ಯವಿದೆ.

ಗ್ರೇ ಮಾರ್ಕೆಟ್ ಎಂದರೇನು? ಗ್ರೇ ಮಾರ್ಕೆಟ್ ಎಂಬುದು ಅನಧಿಕೃತ ಪ್ಲಾಟ್​ಫಾರ್ಮ್ ಆಗಿದ್ದು, ಐಪಿಒಗಳು ಘೋಷಣೆ ಮಾಡಿದ ಕಂಪೆನಿಗಳು ವಹಿವಾಟು ನಡೆಸುತ್ತವೆ. ಇನ್ನು ಹೆಸರೇ ಸೂಚಿಸುವಂತೆ ಇದು ಕಾನೂನುಬದ್ಧವಾದ ಪ್ಲಾಟ್​ಫಾರ್ಮ್ ಅಲ್ಲ. ಮತ್ತು ಅದರ ಮೇಲೆ ನಡೆಸುವ ಯಾವುದೇ ವಹಿವಾಟನ್ನು ಹೂಡಿಕೆದಾರರು ತಮ್ಮದೇ ಅಪಾಯದ ಮೇಲೆ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ ಕಂಪೆನಿಯ ಷೇರುಗಳ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಮುಂಬರುವ ಐಪಿಒ ಬೇಡಿಕೆ ಅಥವಾ ಜನಪ್ರಿಯತೆಯ ಬಗ್ಗೆ ಸೂಚನೆಯನ್ನು ನೀಡುತ್ತದೆ. ಎಲ್​ಐಸಿ ಐಪಿಒ ಬಿಡ್ಡರ್‌ಗಳ ಡಿಮ್ಯಾಟ್ ಖಾತೆಗೆ ಷೇರುಗಳ ಹಂಚಿಕೆಯು ಮೇ 16ರ ವೇಳೆಗೆ ನಡೆಯಲಿದೆ ಮತ್ತು ಷೇರುಗಳನ್ನು ಮೇ 17, 2022ರಂದು ಲಿಸ್ಟ್​ ಮಾಡಲಾಗುವುದು.

ಎಲ್​ಐಸಿಯಲ್ಲಿ ಶೇ 3.5ರಷ್ಟು ಪಾಲನ್ನು ಮಾರಾಟ ಮಾಡಲು ಸರ್ಕಾರ ಯೋಜಿಸಿದೆ (ಪ್ರಚಲಿತ ಮಾರುಕಟ್ಟೆ ಪರಿಸ್ಥಿತಿಗಳ ಕಾರಣದಿಂದಾಗಿ ಮೂಲ 5ರಷ್ಟು ಪಾಲಿನ ಗಾತ್ರದಿಂದ ಕಡಿತಗೊಳಿಸಿದ ನಂತರ) ಮತ್ತು ಎಲ್​ಐಸಿ ಐಪಿಒ ಸಂಪೂರ್ಣ ಮಾರಾಟದ ಪ್ರಸ್ತಾಪವಾಗಿದೆ (OFS). ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಕಳೆದ ವಾರ ಮಾತನಾಡಿ, ಎಲ್‌ಐಸಿ ಲಿಸ್ಟ್ ಮಾಡುವುದು ಸರ್ಕಾರದ ದೀರ್ಘಾವಧಿ ಕಾರ್ಯತಂತ್ರದ ದೃಷ್ಟಿಯ ಭಾಗವಾಗಿದೆ ಮತ್ತು ದೀರ್ಘಾವಧಿಯಲ್ಲಿ ಎಲ್​ಐಸಿ ಮೌಲ್ಯವನ್ನು ಇದು ಹೆಚ್ಚಿಸುತ್ತದೆ ಎಂದು ಹೇಳಿದ್ದರು.

“ಇದು (ಎಲ್‌ಐಸಿ ಐಪಿಒ) ಬಂಡವಾಳ ಮಾರುಕಟ್ಟೆ ಪರಿಸರವನ್ನು ಪರಿಗಣಿಸಿ ಸರಿಯಾದ ಗಾತ್ರದ್ದಾಗಿದೆ ಮತ್ತು ಈಗಿನ ಮಾರುಕಟ್ಟೆಯ ವಾತಾವರಣಕ್ಕೆ ಬಂಡವಾಳ ಪೂರೈಕೆ ಒತ್ತಡ ಆಗುವುದಿಲ್ಲ,” ಎಂದು ಪಾಂಡೆ ಏಪ್ರಿಲ್ 27ರಂದು ಹೇಳಿದ್ದರು. ಸುಮಾರು 20,557 ಕೋಟಿ ರೂಪಾಯಿಗೆ ಗಾತ್ರವನ್ನು ಕಡಿಮೆ ಮಾಡಿದ ನಂತರವೂ ಎಲ್​ಐಸಿ ಐಪಿಒ ದೇಶದಲ್ಲೇ ಅತ್ಯಂತ ದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆಯಾಗಲಿದೆ ಎಂದು ಅವರು ಹೇಳಿದ್ದರು. ಉದ್ಯೋಗಿಗಳಿಗೆ ಮೀಸಲಾದ ಭಾಗವು ಪೋಸ್ಟ್-ಆಫರ್ ಈಕ್ವಿಟಿ ಷೇರು ಬಂಡವಾಳದ ಶೇಕಡಾ 5 ರಷ್ಟಿರುತ್ತದೆ ಮತ್ತು ಪಾಲಿಸಿದಾರರ ಮೀಸಲಾತಿ ಭಾಗವು ಆಫರ್ ಗಾತ್ರದ ಶೇಕಡಾ 10 ರಷ್ಟಿರುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ದರ, ದಿನಾಂಕ, ಪಾಲಿಸಿದಾರರ ರಿಯಾಯಿತಿ, ಕೋಟಾ ಮಾಹಿತಿ ಇಲ್ಲಿದೆ

ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್