Stock Market Holiday: ಮೇ 3ನೇ ತಾರೀಕಿಗೆ ಷೇರು ಮಾರುಕಟ್ಟೆ ರಜಾ, ಬ್ಯಾಂಕ್​ಗಳು ಕಾರ್ಯ ನಿರ್ವಹಿಸಲ್ಲ

ರಂಜಾನ್ ಪ್ರಯುಕ್ತ ಮೇ 3ನೇ ತಾರೀಕಿನ ಮಂಗಳವಾರದಂದು ಷೇರುಪೇಟೆ ವಿನಿಮಯ ಕೇಂದ್ರಗಳಾದ ಬಿಎಸ್​ಇ, ಎನ್​ಎಸ್​ಇಗೆ ರಜಾ ಇರುತ್ತದೆ.

Stock Market Holiday: ಮೇ 3ನೇ ತಾರೀಕಿಗೆ ಷೇರು ಮಾರುಕಟ್ಟೆ ರಜಾ, ಬ್ಯಾಂಕ್​ಗಳು ಕಾರ್ಯ ನಿರ್ವಹಿಸಲ್ಲ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 02, 2022 | 12:31 PM

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (BSE) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (NSE) ನಾಳೆ (ಮೇ 3, 2022) ಈದ್-ಉಲ್-ಫಿತ್ರ್​ (Id-Ul-Fitr) ಪ್ರಯುಕ್ತ ರಜಾ ಇದ್ದು, ಕಾರ್ಯ ನಿರ್ವಹಣೆ ಇರುವುದಿಲ್ಲ. ಭಗವಾನ್ ಶ್ರೀ ಪರಶುರಾಮ ಜಯಂತಿ, ರಂಜಾನ್-ಈದ್ (ಈದ್-ಉಲ್-ಫಿತ್ರ್), ಬಸವ ಜಯಂತಿ ಮತ್ತು ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಮೇ 3ನೇ, 2022ರಂದು ಭಾರತದಾದ್ಯಂತ ಬ್ಯಾಂಕ್‌ಗಳು ಸಹ ಮುಚ್ಚಿರುತ್ತವೆ. ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಮಾತ್ರ ಬ್ಯಾಂಕ್‌ಗಳು ಮೇ 3ರಂದು ತೆರೆದಿರುತ್ತವೆ. ಆರ್‌ಬಿಐ ರಜೆಯ ಕ್ಯಾಲೆಂಡರ್ ಪ್ರಕಾರ, ಈದ್-ಉಲ್-ಫಿತ್ರ್​ ಆಚರಿಸಲು ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಮೇ 2, 2022ರಂದು ಬ್ಯಾಂಕ್​ಗಳು ಮುಚ್ಚಿರುತ್ತವೆ.

ಈದ್ 2022 ಮೇ 3 ರಂದು ಭಾರತದಲ್ಲಿ ಈದ್-ಉಲ್-ಫಿತ್ರ್ ಆಚರಿಸಲಾಗುವುದು ಎಂದು ದೇಶಾದ್ಯಂತದ ಧರ್ಮಗುರುಗಳು ಘೋಷಿಸಿದರು. ಲಖನೌದ ಮರ್ಕಝಿ ಚಂದ್ ಸಮಿತಿಯು ಭಾನುವಾರ ಸಂಜೆ ಶವ್ವಾಲ್ ಅರ್ಧಚಂದ್ರಾಕೃತಿಯನ್ನು ನೋಡಲಿಲ್ಲ. ಆದ್ದರಿಂದ ಮೇ 2 ಅನ್ನು ಕೊನೆಯ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಿದೆ. ಮೇ 3ರಂದು ರಂಜಾನ್ ಮತ್ತು ಈದ್- ಉಲ್-ಫಿತ್ರ್ ಆಚರಿಸಲಾಗುತ್ತದೆ. ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಗುರುತಿಸಲು ಜಗತ್ತಿನಾದ್ಯಂತ ಮುಸ್ಲಿಮರು ಈದ್-ಉಲ್-ಫಿತ್ರ್ ಆಚರಿಸುತ್ತಾರೆ.

ಈದ್-ಉಲ್-ಫಿತ್ರ್ ರಂಜಾನ್ ಉಪವಾಸದ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ 10ನೇ ತಿಂಗಳಾದ ಶವ್ವಾಲ್‌ನ ಮೊದಲ ದಿನದಂದು ಹಬ್ಬವನ್ನು ಆಚರಿಸಲಾಗುತ್ತದೆ. ಹತ್ ಕಾ ಸೇವಿಯಾನ್, ನಮ್ಮಕ್ ಕಾ ಸೇವಿಯಾನ್, ಚಕ್ಲೆ ಕಾ ಸೇವಿಯಾನ್ ಮತ್ತು ಲಡ್ಡು ಸೇವಿಯನ್​ನಂತಹ ವಿವಿಧ ಪ್ರಭೇದಗಳ ಅಡಿಯಲ್ಲಿ ಬರುವ ಶಾವಿಗೆ ಅನ್ನು ಹಂಚುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಈ ಎಲ್ಲ ಬಗೆಯ ಶೀರ್‌ಕುರ್ಮಾ ಎಂಬ ಭಕ್ಷ್ಯದಲ್ಲಿ ಬಳಸಬಹುದು, ಇದನ್ನು ಈದ್‌ನಲ್ಲಿ ತಯಾರಿಸಲಾಗುತ್ತದೆ ಮತ್ತು ಸ್ನೇಹಿತರು ಮತ್ತು ಸಂಬಂಧಿಕರ ಮಧ್ಯೆ ವಿತರಿಸಲಾಗುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: Ramadan Eid Moon Sight: ರಂಜಾನ್ ಹಬ್ಬದಲ್ಲಿ ಚಂದ್ರನ ದರ್ಶನಕ್ಕಿದೆ ವಿಶೇಷ ಮಹತ್ವ