Tax Exemption: ಪೋಷಕರಿಗೆ ನೀಡುವ ಹಣಕ್ಕೆ ದೊರೆಯಲಿದೆ ತೆರಿಗೆ ವಿನಾಯಿತಿ; ಯಾವ್ಯಾವುದಕ್ಕೆ ಸಿಗಲಿದೆ ಇಲ್ಲಿದೆ ವಿವರ

ಪೋಷಕರಿಗೆ ಹಣಕಾಸಿನ ನೆರವು ಮಾಡಿದರೆ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ದೊರೆಯುವ ವಿನಾಯಿತಿ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.

Tax Exemption: ಪೋಷಕರಿಗೆ ನೀಡುವ ಹಣಕ್ಕೆ ದೊರೆಯಲಿದೆ ತೆರಿಗೆ ವಿನಾಯಿತಿ; ಯಾವ್ಯಾವುದಕ್ಕೆ ಸಿಗಲಿದೆ ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 02, 2022 | 11:14 AM

ಆದಾಯ ತೆರಿಗೆ (Income Tax) ಪಾವತಿ ಮಾಡುವ ವೇಳೆಗೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಹತ್ತಾರು ಮಾರ್ಗಗಳಿವೆ. ಕೆಲವಂತೂ ಅಷ್ಟೇನೂ ಜನಪ್ರಿಯವಾದದ್ದೇನಲ್ಲ. ಕೆಲವು ವೆಚ್ಚಗಳಿಗೆ ಆದಾಯ ತೆರಿಗೆ ವಿನಾಯಿತಿ ಇದ್ದು, ಅವುಗಳನ್ನು ಬಳಸಿಕೊಂಡು, ಹೊರೆಯನ್ನು ತಗ್ಗಿಸಿಕೊಳ್ಳಬಹುದು. ಅದರಲ್ಲಿ ಕುಟುಂಬ ಸದಸ್ಯರು ನಿರ್ದಿಷ್ಟವಾಗಿ ಈ ವಿಚಾರವಾಗಿ ಗಮನದಲ್ಲಿ ಇರಬೇಕು. ಒಂದು ವೇಳೆ ಪೋಷಕರು ತೆರಿಗೆ ವ್ಯಾಪ್ರಿಗೆ ಬಾರದ ಆದಾಯದ ಬ್ರ್ಯಾಕೆಟ್​ನೊಳಗೆ ಇದ್ದರೆ ಅಂಥ ಸನ್ನಿವೇಶದಲ್ಲಿ ಉಡುಗೊರೆ ನಿಯಮಾವಳಿ ಅಡಿಯಲ್ಲಿ ಹೂಡಿಕೆ ಮಾಡುವುದಕ್ಕೆ ಅವಕಾಶ ಇರುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದು. ಪೋಸ್ಟ್​ ಆಫೀಸ್ ಅಥವಾ ಇತರ ತೆರಿಗೆ ಉಳಿತಾಯ ಯೋಜನೆಗಳಾದ ಫಿಕ್ಸೆಡ್​ ಡೆಪಾಸಿಟ್​ನಂಥದ್ದರಲ್ಲಿ ಹಣ ತೊಡಗಿಸಬಹುದು. ಹಿರಿಯ ನಾಗರಿಕರಿಗೆ ಪ್ರಾಥಮಿಕವಾಗಿ 3 ಲಕ್ಷ ರೂಪಾಯಿ ತನಕ ವಿನಾಯಿತಿ ಸಿಗುತ್ತದೆ. ಇನ್ನು 80 ವರ್ಷದ ಮೇಲ್ಪಟ್ಟವರಿಗೆ 5 ಲಕ್ಷದ ತನಕ ದೊರೆಯುತ್ತದೆ.

ಇದರ ಜತೆಗೆ ಬಡ್ಡಿ ಆದಾಯಕ್ಕೆ , ಅಂದರೆ ಬ್ಯಾಂಕ್​, ಪೋಸ್ಟ್​ ಆಫೀಸ್​ಗಳು, ಕೋ-ಆಪರೇಟಿವ್​ಗಳು ಮುಂತಾದೆಡೆ ಇರುವ ಎಫ್​ಡಿಗಳ ಮೇಲೆ ಬರುವ 50 ಸಾವಿರ ರೂಪಾಯಿ ತನಕದ ಬಡ್ಡಿಗೆ 60 ವರ್ಷದ ಮೇಲ್ಪಟ್ಟವರಿಗೆ ವಿನಾಯಿತಿ ದೊರೆಯುತ್ತದೆ. ಒಂದು ವೇಳೆ ಅವರು ಬಡ್ಡಿ ಆದಾಯವು ತೆರಿಗೆ ವ್ಯಾಪ್ತಿಗೆ ಬರುತ್ತಿದ್ದರೂ ನೀವು ಪಾವತಿ ಮಾಡಬೇಕಾದ್ದಕ್ಕಿಂತ ಕಡಿಮೆ ದರದಲ್ಲಿ ಅವರು ಕಟ್ಟಬೇಕಾಗುತ್ತದೆ ಎಂಬುದು ಗಮನದಲ್ಲಿರಲಿ. ಮಕ್ಕಳಿಂದ ಉಡುಗೊರೆಯಾಗಿ ಪಡೆಯುವ ಹಣಕ್ಕೆ ಮತ್ತು ಅದರಿಂದ ಗಳಿಸುವ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ತೆರಿಗೆ ಲೆಕ್ಕಾಚಾರಕ್ಕೆ ಇದನ್ನು ನಿಮ್ಮ ಗಳಿಕೆಯ ಭಾಗ ಎಂದು ಪರಿಗಣಿಸುವುದಿಲ್ಲ.

ಪೋಷಕರಿಗೆ ಬಾಡಿಗೆ ಪಾವತಿಸಿ ವೇತನ ಬರುವ ಉದ್ಯೋಗಿಗಳು ತಮ್ಮ ಪೋಷಕರ ಮನೆಯಲ್ಲಿ ಇದ್ದು, ಅದಕ್ಕೆ ಒಂದು ವೇಳೆ ಸಹ-ಮಾಲೀಕರು ಆಗದಿದ್ದಲ್ಲಿ ಬಾಡಿಗೆಯನ್ನು ಪಾವತಿಸಬಹುದು ಹಾಗೂ ಎಚ್​ಆರ್​ಎ (ಹೌಸ್ ರೆಂಟ್ ಅಲೋವೆನ್ಸ್) ಅಡಿಯಲ್ಲಿ ಸೆಕ್ಷನ್ 10(13ಎ) ವಿನಾಯಿತಿ ಕ್ಲೇಮ್ ಕೂಡ ಮಾಡಬಹುದು. ಒಂದು ವೇಳೆ ಅವರು ತೆರಿಗೆ ವಿನಾಯಿತಿ ಹೊಂದಿದ್ದಲ್ಲಿ ಅಥವಾ ನಿಮಗಿಂತ ಕಡಿಮೆ ಆದಾಯ ಬ್ರ್ಯಾಕೆಟ್​ನಲ್ಲಿ ಬರುವವರಾದರೆ ಅನುಕೂಲ ಆಗುತ್ತದೆ. ಗಮನಿಸಬೇಕಾದ್ದೇನೆಂದರೆ ಪೋಷಕರ ವಾರ್ಷಿಕ ಮಾಹಿತಿ ಹೇಳಿಕೆ (AIS)ಯಲ್ಲಿ ಜಾಣಿಸಿಕೊಳ್ಳುವಂತೆ ವಾಸ್ತವದಲ್ಲಿ ಇದನ್ನು ಪಾವತಿಸಬೇಕು. ಏಕೆಂದರೆ, ಇದರ ಮೇಲೆ ತೆರಿಗೆ ಇಲಾಖೆ ನಿಗಾ ಇಡಬಹುದು.

ಇನ್ಷೂರೆನ್ಸ್ ಖರೀದಿಸಿ ಯಾರಿಗೆ ಅವಲಂಬಿತ ಪೋಷಕರಿದ್ದಾರೋ ಅವರು ಇನ್ಷೂರೆನ್ಸ್ ಖರೀದಿ ಮಾಡಬಹುದು. ಕೊವಿಡ್-19 ನಂತರ ಇದು ಬಹಳ ಮುಖ್ಯವಾಗಿದೆ. 60 ವರ್ಷದೊಳಗಿನ ಪೋಷಕರಿಗಾದರೆ ಸೆಕ್ಷನ್ 80ಡಿ ಅಡಿಯಲ್ಲಿ 25 ಸಾವಿರ ರೂಪಾಯಿ ತನಕ ವಿನಾಯಿತಿ, 60 ವರ್ಷದ ಮೇಲ್ಪಟ್ಟಲ್ಲಿ 50 ಸಾವಿರ ರೂಪಾಯಿ ವಿನಾಯಿತಿ ಆರೋಗ್ಯ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಮೇಲೆ ಸಿಗುತ್ತದೆ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Income Tax: ಕೇಂದ್ರ ಬಜೆಟ್​ 2022ರ ನಂತರ ಹಿರಿಯ ನಾಗರಿಕರ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?