Income Tax: ಕೇಂದ್ರ ಬಜೆಟ್ 2022ರ ನಂತರ ಹಿರಿಯ ನಾಗರಿಕರ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?
2022ರ ಬಜೆಟ್ ನಂತರ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಹೊಣೆಗಾರಿಕೆ ಎಷ್ಟು ಬರುತ್ತದೆ? ಅದರ ಲೆಕ್ಕಾಚಾರ ಹೇಗೆ ಎಂಬುದರ ವಿವರಣೆ ಇಲ್ಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಕೇಂದ್ರ ಬಜೆಟ್ 2022-23 ಅನ್ನು ಸಂಸತ್ನಲ್ಲಿ ಮಂಡಿಸಿದ್ದಾರೆ. ವೈಯಕ್ತಿಕ ಆದಾಯ ತೆರಿಗೆಯ (Income Tax) ಸ್ಲ್ಯಾಬ್ನಲ್ಲಿ ಮತ್ತು ದರದಲ್ಲಿ ಈ ಬಾರಿಯ ಬಜೆಟ್ ವೇಳೆ ಏನೇನೂ ಬದಲಾವಣೆ ಮಾಡಿಲ್ಲ. ಆದ್ದರಿಂದ ಆದಾಯ ತೆರಿಗೆ ದರ ಮತ್ತು ಸ್ಲ್ಯಾಬ್ನಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ದರಿಂದ ವೈಯಕ್ತಿಕ ತೆರಿಗೆದಾರರು 2022-23ರಲ್ಲಿ ಯಾವ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುತ್ತಾರೋ ಅದರ ತೆರಿಗೆ ದರದ ಆಧಾರದಲ್ಲಿ ಪಾವತಿಸುತ್ತಾರೆ. ಈ ಲೇಖನದಲ್ಲಿ ಹಳೆಯ ತೆರಿಗೆ ಪದ್ಧತಿ (ಕಡಿತ ಮತ್ತು ವಿನಾಯಿತಿಯೊಂದಿಗೆ) ಮತ್ತು ಹೊಸ ತೆರಿಗೆ ಪದ್ಧತಿ (ಕಡಿತ ಹಾಗೂ ವಿನಾಯಿತಿಯೊಂದಿಗೆ) ವಿವರ ಇದೆ.
ಹಳೆಯ ತೆರಿಗೆ ಪದ್ಧತಿ (ಕಡಿತ ಮತ್ತು ವಿನಾಯಿತಿಯೊಂದಿಗೆ):
– ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಯೊಳಗೆ ಇರುವ ವ್ಯಕ್ತಿಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ.
– 2.5 ಲಕ್ಷದಿಂದ ಐದು ಲಕ್ಷ ವಾರ್ಷಿಕ ಆದಾಯಕ್ಕೆ ಶೇ 5ರಷ್ಟು ತೆರಿಗೆ
– 5 ಲಕ್ಷ 1 ರೂಪಾಯಿಂದ 7.5 ಲಕ್ಷ ರೂಪಾಯಿ ಗಳಿಸುವವರು ಶೇ 20ರಷ್ಟು ತೆರಿಗೆ ಕಟ್ಟಬೇಕು.
– 7,50,001 ರೂಪಾಯಿಯಿಂದ 10 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರು ಆದಾಯದ ಶೇ 20ರಷ್ಟು ಪಾವತಿಸಬೇಕು.
– 10 ಲಕ್ಷದ 1 ರೂಪಾಯಿಯಿಂದ 12.5 ಲಕ್ಷದ ಮಧ್ಯೆ ಆದಾಯ ಗಳಿಸುವವರು ತಮ್ಮ ಗಳಿಕೆಯ ಶೇ 30ರಷ್ಟು ಪಾವತಿಸಬೇಕು.
– 12,50,001 ರೂಪಾಯಿಯಿಂದ 15 ಲಕ್ಷ ವಾರ್ಷಿಕ ಆದಾಯಕ್ಕೆ ಶೇ 30ರಷ್ಟು ಕಟ್ಟಬೇಕು.
– 15,00,001 ರೂಪಾಯಿಯಿಂದ ಹೆಚ್ಚಿನ ಆದಾಯ ಇರುವವರು ಗಳಿಕೆ ಮೇಲೆ ಶೇ 30ರಷ್ಟು ಪಾವತಿ ಮಾಡಬೇಕಾಗುತ್ತದೆ.
ಹೊಸ ತೆರಿಗೆ ಪದ್ಧತಿ (ಕಡಿತ ಹಾಗೂ ವಿನಾಯಿತಿಯೊಂದಿಗೆ)
– ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಯೊಳಗೆ ಇರುವ ವ್ಯಕ್ತಿಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ.
– 2.5 ಲಕ್ಷದಿಂದ ಐದು ಲಕ್ಷ ವಾರ್ಷಿಕ ಆದಾಯಕ್ಕೆ ಶೇ 5ರಷ್ಟು ತೆರಿಗೆ
– 5 ಲಕ್ಷ 1 ರೂಪಾಯಿಂದ 7.5 ಲಕ್ಷ ರೂಪಾಯಿ ಗಳಿಸುವವರು ಶೇ 10ರಷ್ಟು ತೆರಿಗೆ ಕಟ್ಟಬೇಕು.
– 7,50,001 ರೂಪಾಯಿಯಿಂದ 10 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರು ಆದಾಯದ ಶೇ 15ರಷ್ಟು ಪಾವತಿಸಬೇಕು.
– 10 ಲಕ್ಷದ 1 ರೂಪಾಯಿಯಿಂದ 12.5 ಲಕ್ಷದ ಮಧ್ಯೆ ಆದಾಯ ಗಳಿಸುವವರು ತಮ್ಮ ಗಳಿಕೆಯ ಶೇ 20ರಷ್ಟು ಪಾವತಿಸಬೇಕು.
– 12,50,001 ರೂಪಾಯಿಯಿಂದ 15 ಲಕ್ಷ ವಾರ್ಷಿಕ ಆದಾಯಕ್ಕೆ ಶೇ 25ರಷ್ಟು ಕಟ್ಟಬೇಕು.
– 15,00,001 ರೂಪಾಯಿಯಿಂದ ಹೆಚ್ಚಿನ ಆದಾಯ ಇರುವವರು ಗಳಿಕೆ ಮೇಲೆ ಶೇ 30ರಷ್ಟು ಪಾವತಿ ಮಾಡಬೇಕಾಗುತ್ತದೆ.
60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ಹಿಂದಿನ ವರ್ಷಗಳ ತೆರಿಗೆಗೆ ವೈಯಕ್ತಿಕವಾಗಿ (ನಿವಾಸಿ ಅಥವಾ ಅನಿವಾಸಿಗಳು) ಸದ್ಯದ ಆದಾಯ ತೆರಿಗೆ ಸ್ಲ್ಯಾಬ್ ಹೀಗಿದೆ: (ಹಳೆ ತೆರಿಗೆ ಪದ್ಧತಿ- ಕಡಿತ ಮತ್ತು ವಿನಾಯಿತಿಯೊಂದಿಗೆ)
– ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಯೊಳಗೆ ತೆರಿಗೆಯಿಂದ ವಿನಾಯಿತಿ ಇದೆ.
– 2.50,001 ಐದು ಲಕ್ಷ ವಾರ್ಷಿಕ ಆದಾಯಕ್ಕೆ ತೆರಿಗೆ ಇಲ್ಲ.
– 5 ಲಕ್ಷ 1 ರೂಪಾಯಿಂದ 7.5 ಲಕ್ಷ ರೂಪಾಯಿ ಗಳಿಸುವವರಿಗೆ ಶೇ 20ರಷ್ಟು ತೆರಿಗೆ ಕಟ್ಟಬೇಕು.
– 7,50,001 ರೂಪಾಯಿಯಿಂದ 10 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರು ಆದಾಯದ ಶೇ 20ರಷ್ಟು ಪಾವತಿಸಬೇಕು.
– 10 ಲಕ್ಷದ 1 ರೂಪಾಯಿಯಿಂದ 12.5 ಲಕ್ಷದ ಮಧ್ಯೆ ಆದಾಯ ಗಳಿಸುವವರು ತಮ್ಮ ಗಳಿಕೆಯ ಶೇ 20ರಷ್ಟು ಪಾವತಿಸಬೇಕು.
– 12,50,001 ರೂಪಾಯಿಯಿಂದ 15 ಲಕ್ಷ ವಾರ್ಷಿಕ ಆದಾಯಕ್ಕೆ ಶೇ 25ರಷ್ಟು ಕಟ್ಟಬೇಕು.
– 15,00,001 ರೂಪಾಯಿಯಿಂದ ಹೆಚ್ಚಿನ ಆದಾಯ ಇರುವವರು ಗಳಿಕೆ ಮೇಲೆ ಶೇ 30ರಷ್ಟು ಪಾವತಿ ಮಾಡಬೇಕಾಗುತ್ತದೆ.
60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ಹಿಂದಿನ ವರ್ಷಗಳ ತೆರಿಗೆಗೆ ವೈಯಕ್ತಿಕವಾಗಿ (ನಿವಾಸಿ ಅಥವಾ ಅನಿವಾಸಿಗಳು) ಸದ್ಯದ ಆದಾಯ ತೆರಿಗೆ ಸ್ಲ್ಯಾಬ್ ಹೀಗಿದೆ: (ಹೊಸ ತೆರಿಗೆ ಪದ್ಧತಿ- ಕಡಿತ ಮತ್ತು ವಿನಾಯಿತಿಯೊಂದಿಗೆ)
– ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಯೊಳಗೆ ಇರುವ ವ್ಯಕ್ತಿಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ.
– 2.5 ಲಕ್ಷದಿಂದ ಐದು ಲಕ್ಷ ವಾರ್ಷಿಕ ಆದಾಯಕ್ಕೆ ಶೇ 5ರಷ್ಟು ತೆರಿಗೆ
– 5 ಲಕ್ಷ 1 ರೂಪಾಯಿಂದ 7.5 ಲಕ್ಷ ರೂಪಾಯಿ ಗಳಿಸುವವರು ಶೇ 10ರಷ್ಟು ತೆರಿಗೆ ಕಟ್ಟಬೇಕು.
– 7,50,001 ರೂಪಾಯಿಯಿಂದ 10 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರು ಆದಾಯದ ಶೇ 15ರಷ್ಟು ಪಾವತಿಸಬೇಕು.
– 10 ಲಕ್ಷದ 1 ರೂಪಾಯಿಯಿಂದ 12.5 ಲಕ್ಷದ ಮಧ್ಯೆ ಆದಾಯ ಗಳಿಸುವವರು ತಮ್ಮ ಗಳಿಕೆಯ ಶೇ 20ರಷ್ಟು ಪಾವತಿಸಬೇಕು.
– 12,50,001 ರೂಪಾಯಿಯಿಂದ 15 ಲಕ್ಷ ವಾರ್ಷಿಕ ಆದಾಯಕ್ಕೆ ಶೇ 25ರಷ್ಟು ಕಟ್ಟಬೇಕು.
– 15,00,001 ರೂಪಾಯಿಯಿಂದ ಹೆಚ್ಚಿನ ಆದಾಯ ಇರುವವರು ಗಳಿಕೆ ಮೇಲೆ ಶೇ 30ರಷ್ಟು ಪಾವತಿ ಮಾಡಬೇಕಾಗುತ್ತದೆ.
80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಈ ಹಿಂದಿನ ವರ್ಷಗಳ ತೆರಿಗೆಗೆ ವೈಯಕ್ತಿಕವಾಗಿ (ನಿವಾಸಿ ಅಥವಾ ಅನಿವಾಸಿಗಳು) ಸದ್ಯದ ಆದಾಯ ತೆರಿಗೆ ಸ್ಲ್ಯಾಬ್ ಹೀಗಿದೆ: (ಹಳೆ ತೆರಿಗೆ ಪದ್ಧತಿ- ಕಡಿತ ಮತ್ತು ವಿನಾಯಿತಿಯೊಂದಿಗೆ)
– ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಯೊಳಗೆ ಇರುವ ವ್ಯಕ್ತಿಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ.
– 2,50,001ರಿಂದ ಮೂರು ಲಕ್ಷ ವಾರ್ಷಿಕ ಆದಾಯಕ್ಕೆ ತೆರಿಗೆ ಇಲ್ಲ
– 3 ಲಕ್ಷ 1 ರೂಪಾಯಿಂದ 5 ಲಕ್ಷ ರೂಪಾಯಿ ಗಳಿಸುವವರು ಶೇ 5ರಷ್ಟು ತೆರಿಗೆ ಕಟ್ಟಬೇಕು.
– 5,00,001 ರೂಪಾಯಿಯಿಂದ 7.5 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರು ಆದಾಯದ ಶೇ 20ರಷ್ಟು ಪಾವತಿಸಬೇಕು.
– 7,50,001 ಲಕ್ಷದ 10 ಲಕ್ಷದ ಮಧ್ಯೆ ಆದಾಯ ಗಳಿಸುವವರು ತಮ್ಮ ಗಳಿಕೆಯ ಶೇ 20ರಷ್ಟು ಪಾವತಿಸಬೇಕು.
– 10,50,001 ರೂಪಾಯಿಯಿಂದ 12.5 ಲಕ್ಷ ವಾರ್ಷಿಕ ಆದಾಯಕ್ಕೆ ಶೇ 30ರಷ್ಟು ಕಟ್ಟಬೇಕು.
– 12,50,001 ರೂಪಾಯಿಯಿಂದ 15 ಲಕ್ಷ ರೂಪಾಯಿ ಆದಾಯ ಇರುವವರು ಗಳಿಕೆ ಮೇಲೆ ಶೇ 30ರಷ್ಟು ಪಾವತಿ ಮಾಡಬೇಕಾಗುತ್ತದೆ.
– 15,00,001 ರೂಪಾಯಿ ಮತ್ತು ಮೇಲ್ಪಟ್ಟು ಶೇ 30ರಷ್ಟು ಪಾವತಿ ಮಾಡಬೇಕಾಗುತ್ತದೆ
80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಈ ಹಿಂದಿನ ವರ್ಷಗಳ ತೆರಿಗೆಗೆ ವೈಯಕ್ತಿಕವಾಗಿ (ನಿವಾಸಿ ಅಥವಾ ಅನಿವಾಸಿಗಳು) ಸದ್ಯದ ಆದಾಯ ತೆರಿಗೆ ಸ್ಲ್ಯಾಬ್ ಹೀಗಿದೆ: (ಹೊಸ ತೆರಿಗೆ ಪದ್ಧತಿ- ಕಡಿತ ಮತ್ತು ವಿನಾಯಿತಿಯೊಂದಿಗೆ)
– ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಯೊಳಗೆ ಇರುವ ವ್ಯಕ್ತಿಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ.
– 2,50,001ರಿಂದ ಮೂರು ಲಕ್ಷ ವಾರ್ಷಿಕ ಆದಾಯಕ್ಕೆ ಶೇ 5
– 3 ಲಕ್ಷ 1 ರೂಪಾಯಿಂದ 5 ಲಕ್ಷ ರೂಪಾಯಿ ಗಳಿಸುವವರು ಶೇ 5ರಷ್ಟು ತೆರಿಗೆ ಕಟ್ಟಬೇಕು.
– 5,00,001 ರೂಪಾಯಿಯಿಂದ 7.5 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರು ಆದಾಯದ ಶೇ 10ರಷ್ಟು ಪಾವತಿಸಬೇಕು.
– 7,50,001 ಲಕ್ಷದ 10 ಲಕ್ಷದ ಮಧ್ಯೆ ಆದಾಯ ಗಳಿಸುವವರು ತಮ್ಮ ಗಳಿಕೆಯ ಶೇ 15ರಷ್ಟು ಪಾವತಿಸಬೇಕು.
– 10,50,001 ರೂಪಾಯಿಯಿಂದ 12.5 ಲಕ್ಷ ವಾರ್ಷಿಕ ಆದಾಯಕ್ಕೆ ಶೇ 20ರಷ್ಟು ಕಟ್ಟಬೇಕು.
– 12,50,001 ರೂಪಾಯಿಯಿಂದ 15 ಲಕ್ಷ ರೂಪಾಯಿ ಆದಾಯ ಇರುವವರು ಗಳಿಕೆ ಮೇಲೆ ಶೇ 25ರಷ್ಟು ಪಾವತಿ ಮಾಡಬೇಕಾಗುತ್ತದೆ.
– 15,00,001 ರೂಪಾಯಿ ಮತ್ತು ಮೇಲ್ಪಟ್ಟು ಶೇ 30ರಷ್ಟು ಪಾವತಿ ಮಾಡಬೇಕಾಗುತ್ತದೆ
ಏಪ್ರಿಲ್ 1, 2020ರಿಂದ ಅನ್ವಯ ಆಗುವಂತೆ ವೇತನದಾರ ತೆರಿಗೆ ಪಾವತಿದಾರರಿಗೆ ಆಯ್ಕೆ ನೀಡಲಾಗಿದೆ. ಹಳೆ ತೆರಿಗೆ ಪದ್ಧತಿಯಲ್ಲಿ ಮುಂದುವರಿಯಬಹುದು ಹಾಗೂ 80ಸಿ, 80ಡಿ ಕಡಿತ, ಎಚ್ಆರ್ಎ, ಎಲ್ಟಿಎ ತೆರಿಗೆ ವಿನಾಯಿತಿ ಮುಂತಾದವನ್ನು ಪಡೆಯಬಹುದು. ಅಥವಾ ಹೊಸ ತೆರಿಗೆ ಪದ್ಧತಿ ಆರಿಸಿಕೊಂಡು, ಅಂದಾಜು 70 ಕಡಿತ ಹಾಗೂ ತೆರಿಗೆ ವಿನಾಯಿತಿಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಹಳೇ ತೆರಿಗೆ ಪದ್ಧತಿಗೆ ಹೋಲಿಸಿದರೆ ಹೊಸ ತೆರಿಗೆ ದರವು ಕಡಿಮೆ ಇದೆ. ಎರಡೂ ತೆರಿಗೆ ಪದ್ಧತಿಯಲ್ಲಿ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 87ಎ ಅಡಿಯಲ್ಲಿ 12,500 ರೂಪಾಯಿ ತನಕ ರಿಬೇಟ್ ಸಿಗುತ್ತದೆ. ಇದನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಬೇಕಾದಲ್ಲಿ ಹಳೆಯದೋ ಅಥವಾ ಹೊಸ ತೆರಿಗೆ ಪದ್ಧತಿಯೋ 5 ಲಕ್ಷ ರೂಪಾಯಿ ತನಕದ ನಿವ್ವಳ ತೆರಿಗೆ ಆದಾಯಕ್ಕೆ ತೆರಿಗೆ ಕಟ್ಟಬೇಕಾದ ಅಗತ್ಯ ಇಲ್ಲ.
ಮತ್ತೊಂದು ಸಂಗತಿ ಈ ಹಳೇ ತೆರಿಗೆ ಪದ್ಧತಿಯಲ್ಲಿ ಗಮನದಲ್ಲಿ ಇಟ್ಟುಕೊಳ್ಳುಬೇಕು. ಅದೇನೆಂದರೆ, ವೈಯಕ್ತಿಕ ತೆರಿಗೆ ಪಾವತಿದಾರರ ವಯಸ್ಸು, ನಿವಾಸ (ರೆಸಿಡೆನ್ಷಿಯಲ್) ಸ್ಥಿತಿಯ ಮೇಲೆ ಪ್ರಾಥಮಿಕ ತೆರಿಗೆ ವಿನಾಯಿತಿ ನಿರ್ಧಾರ ಆಗುತ್ತದೆ. ಆದರೆ ಹೊಸ ತೆರಿಗೆ ಪದ್ಧತಿಯಲ್ಲಿ ಪ್ರಾಥಮಿಕ ವಿನಾಯಿತಿ ಒಂದು ಹಣಕಾಸು ವರ್ಷದಲ್ಲಿ 2.5 ಲಕ್ಷ ರೂಪಾಯಿ.
ಆದಾಯ ತೆರಿಗೆ ವೆಬ್ಸೈಟ್ ಪ್ರಕಾರ ಎರಡು ಮುಖ್ಯ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಎರಡೂ ತೆರಿಗೆ ಪದ್ಧತಿಯಲ್ಲಿ (ಹಳೆಯದು ಹಾಗೂ ಹೊಸದು) ಸರ್ ಚಾರ್ಜ್, ಆರೋಗ್ಯ ಸೆಸ್ ಮತ್ತು ಎಜುಕೇಷನ್ ಸೆಸ್ ಒಂದೇ ಆಗಿರುತ್ತದೆ. ಇನ್ನು ಸೆಕ್ಷನ್ 87ರ ರಿಬೇಟ್ ಅಡಿಯಲ್ಲಿ ವೈಯಕ್ತಿಕ ನಿವಾಸಿಗಳಿಗೆ 5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇಲ್ಲ ಎಂದಾದಲ್ಲಿ ಆದಾಯ ತೆರಿಗೆಯ ಶೇ 100ರ ತನಕ ಅಥವಾ 12,500 ರೂಪಾಯಿ ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು ರಿಬೇಟ್ ಸಿಗುತ್ತದೆ. ಎರಡೂ ತೆರಿಗೆ ಪದ್ಧತಿ ಅಡಿಯಲ್ಲಿ ರಿಬೇಟ್ ದೊರೆಯುತ್ತದೆ.
2021ರ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದಂತೆ, 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಯಾರು ಪೆನ್ಷನ್ ಮತ್ತು ಬಡ್ಡಿಯನ್ನಷ್ಟೇ ಆದಾಯದ ಮೂಲವಾಗಿ ಹೊಂದಿರುತ್ತಾರೋ ಅಂಥವರಿಗೆ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ನಿಂದ ವಿನಾಯಿತಿ ನೀಡಲಾಗಿದೆ. ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಾತನಾಡುವಾಗ, 75 ವರ್ಷದ ನಮ್ಮ ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸರ್ಕಾರವು 75 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ಮೇಲಿನ ಆದಾಯ ತೆರಿಗೆ ಹೊರೆ ಇಳಿಸಲಿದೆ ಎಂದಿದ್ದರು.
ಇನ್ನೊಂದು ವಿಷಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. 75 ವರ್ಷ ವಯಸ್ಸು ಹಾಗೂ ಅದಕ್ಕಿಂತ ಮೇಲಿನ ವಯಸ್ಸಿನವರು ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆದಿಲ್ಲ. ಆದರೆ ಐಟಿಆರ್ ಫೈಲಿಂಗ್ನಿಂದ ವಿನಾಯಿತಿ ನೀಡಲಾಗಿದೆ. ಒಂದು ವೇಳೆ ಅವರು ಕೆಲವು ಷರತ್ತುಗಳಿಗೆ ಅನ್ವಯ ಆಗಿದ್ದಲ್ಲಿ ಮಾತ್ರ. ಇನ್ನು ಐಟಿಆರ್ ಫೈಲಿಂಗ್ನಿಂದ ವಿನಾಯಿತಿ ದೊರೆಯುವುದು ಪೆನ್ಷನ್ ಎಲ್ಲಿಗೆ ಜಮೆ ಆಗುತ್ತದೋ ಅದೇ ಬ್ಯಾಂಕ್ನಿಂದ ಬಡ್ಡಿ ಆದಾಯವನ್ನು ಪಡೆದಿದ್ದಲ್ಲಿ ಮಾತ್ರ ವಿನಾಯಿತಿ ದೊರೆಯುತ್ತದೆ.
ಇದನ್ನೂ ಓದಿ: Income Tax Return Filing: ಆದಾಯ ತೆರಿಗೆ ರಿಟರ್ನ್ನ ಈ ನಿಯಮ ಉಲ್ಲಂಘನೆಯಿಂದ ದಂಡ ಪಾವತಿ ಜತೆ ಜೈಲು ಶಿಕ್ಷೆ
Published On - 9:07 pm, Thu, 3 February 22