AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Ramadan Eid 2022: ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ಪ್ರಾಮುಖ್ಯತೆ, ಇತಿಹಾಸ ಮತ್ತು ಆಚರಣೆ

Eid Mubarak 2022: ಮುಸ್ಲಿಮರ ಪವಿತ್ರ ಹಾಗೂ ದೊಡ್ಡ ಹಬ್ಬಗಳಲ್ಲಿ ರಂಜಾನ್ ಮೊದಲನೆಯದು. ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರವಾದಿ ಮುಹಮ್ಮದ್ ಈ ತಿಂಗಳು ಪವಿತ್ರ ಕುರಾನ್‌ನ ಬಹಿರಂಗ ಪಡಿಸಿದರು ಎಂದು ನಂಬಲಾಗಿದೆ.

Happy Ramadan Eid 2022: ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ಪ್ರಾಮುಖ್ಯತೆ, ಇತಿಹಾಸ ಮತ್ತು ಆಚರಣೆ
ರಂಜಾನ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: May 02, 2022 | 7:00 AM

Share

ಭಾರತವು ವಿವಿಧ ಧರ್ಮ, ಸಂಸ್ಕೃತಿ, ಸಂಪ್ರದಾಯ, ಜನಾಂಗಗಳು ಮತ್ತು ಆಚರಣೆಗಳಿಗೆ ನೆಲೆಯಾಗಿರುವ ದೇಶ. ಈ ಕಾರಣದಿಂದಾಗಿ, ಭಾರತದಲ್ಲಿ ವರ್ಷವಿಡೀ ಹಲವಾರು ಹಬ್ಬಗಳನ್ನು ಆಚರಿಸುತ್ತದೆ. ಸದ್ಯ ಮೇ 2ರಂದು ದೇಶಾದ್ಯಂತ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಿದ್ದಾರೆ. ಈದ್-ಉಲ್-ಫಿತರ್ ಇಸ್ಲಾಂ ಧರ್ಮದಲ್ಲಿ ಆಚರಿಸಲಾಗುವ ಪವಿತ್ರ ಹಬ್ಬಗಳಲ್ಲಿ ಒಂದು. ರಂಜಾನ್ನ 30 ದಿನಗಳ ಉದ್ದಕ್ಕೂ ಮುಸ್ಲಿಮರು ಉಪವಾಸ ಆಚರಿಸುವ ಮೂಲಕ ಈ ತಿಂಗಳನ್ನು ವರ್ಷದ ಪವಿತ್ರ ತಿಂಗಳಾಗಿಸುತ್ತಾರೆ. ಈ ತಿಂಗಳಲ್ಲಿ, ಇಸ್ಲಾಂ ಧರ್ಮವನ್ನು ಅನುಸರಿಸುವ ಮುಸ್ಲಿಮರು ಸೂರ್ಯೋದಯಕ್ಕೂ ಮುನ್ನ ಸೂರ್ಯಾಸ್ತದವರೆಗೆ ಉಪವಾಸ ಇರುತ್ತಾರೆ.

ಈದ್-ಉಲ್-ಫಿತರ್ ಯಾವಾಗ? ಈ ವರ್ಷ, ಈದ್-ಉಲ್-ಫಿತರ್ ಮೇ 2, 2022 ರಂದು ಆಚರಿಸಲಾಗುತ್ತಿದೆ. ಚಂದ್ರನ ವೀಕ್ಷಣೆಗೆ ಅನುಗುಣವಾಗಿ ಹಬ್ಬದ ದಿನಾಂಕ ಬದಲಾಗುತ್ತದೆ. ಈದ್-ಉಲ್-ಫಿತರ್ ರಂಜಾನ್ ತಿಂಗಳ ಅಂತ್ಯ ಮತ್ತು ಶವ್ವಾಲ್ ತಿಂಗಳ ಆರಂಭದ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸದ ಅಂತ್ಯವನ್ನು ಸೂಚಿಸುತ್ತದೆ.

ಈದ್-ಉಲ್-ಫಿತರ್ ಮಹತ್ವ ಮುಸ್ಲಿಮರ ಪವಿತ್ರ ಹಾಗೂ ದೊಡ್ಡ ಹಬ್ಬಗಳಲ್ಲಿ ರಂಜಾನ್ ಮೊದಲನೆಯದು. ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರವಾದಿ ಮುಹಮ್ಮದ್ ಈ ತಿಂಗಳು ಪವಿತ್ರ ಕುರಾನ್‌ನ ಬಹಿರಂಗ ಪಡಿಸಿದರು ಎಂದು ನಂಬಲಾಗಿದೆ. ಪವಿತ್ರ ರಂಜಾನ್ನಲ್ಲಿ ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗುತ್ತೆ. ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬುತ್ತಾರೆ. ಈ ತಿಂಗಳಲ್ಲಿ ಉಪವಾಸ ಮಾಡಿದ್ರೆ ಕಷ್ಟಸಂಕಷ್ಟಗಳು ಕಡಿಮೆಯಾಗುತ್ತವೆ ಎಂದು ಕೆಲವರು ನಂಬುತ್ತಾರೆ. ಈ ತಿಂಗಳಲ್ಲಿ ಮುಸ್ಲಿಮರು ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ.

ಈದ್-ಉಲ್-ಫಿತರ್ ಇತಿಹಾಸ ಈದ್-ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು ಎನ್ನಲಾಗಿದೆ. ಕೆಲವು ಸಂಪ್ರದಾಯಗಳ ಪ್ರಕಾರ, ಮೆಕ್ಕಾದಿಂದ ಮುಹಮ್ಮದ್ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು. ಇಸ್ಲಾಮಿಕ್ ಪ್ರವಾದಿಯ ಪ್ರಸಿದ್ಧ ಒಡನಾಡಿಯಾದ ಅನಸ್, ಮುಹಮ್ಮದ್ ಮದೀನಾಕ್ಕೆ ಆಗಮಿಸಿದಾಗ, ಜನರು ಎರಡು ನಿರ್ದಿಷ್ಟ ದಿನಗಳನ್ನು ಆಚರಿಸುವುದನ್ನು ಕಂಡುಕೊಂಡರು. ಈದ್-ಉಲ್-ಫಿತರ್ ಮತ್ತು ಈದ್-ಅಲ್-ಅಧಾ. ಇನ್ನು ಈ ಹಬ್ಬಕ್ಕೆ ಅದರದೇ ಆದ ಮಹತ್ವ ಇದೆ. ಈ ತಿಂಗಳಲ್ಲಿ ಆಚರಿಸುವ ಆಚರಣೆಗಳು ಮಹತ್ವದ ವೈಜ್ಞಾನಿಕ ಕಾರಣಗಳನ್ನು ಒಳಗೊಂಡಿವೆ.

ಈದ್-ಉಲ್-ಫಿತರ್ ಆಚರಣೆ ರಂಜಾನ್ ತಿಂಗಳಲ್ಲಿ ರೋಜಾ ಅಥವಾ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೋಹರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಇನ್ನು ರಂಜಾನ್ ಸಮಯದಲ್ಲಿ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಉಪವಾಸ ಮಾಡಿಸಲಾಗುತ್ತದೆ. ಮುಸ್ಲಿಮರು ಉಪವಾಸದ ವೇಳೆ ಸಿಗರೇಟ್, ಮದ್ಯ, ತಂಬಾಕು ಸೇವನೆ, ಲೈಂಗಿಕ ಸಂಬಂಧವನ್ನು ಬೆಳೆಸುವುದನ್ನೂ ಕೂಡ ತಪ್ಪಿಸುತ್ತಾರೆ. ಏಕೆಂದರೆ ಉಪವಾಸದ ಸಮಯದಲ್ಲಿ ಇಂಥ ಚಟುವಟಿಕೆಗಳನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ತಮ್ಮನ್ನು ಅಧ್ಯಾತ್ಮ ಪ್ರವೃತ್ತಿಗೆ ಅರ್ಪಿಸಿಕೊಳ್ಳುತ್ತಾರೆ.

ಈದ್ ಹಬ್ಬವು ಚಂದ್ರನನ್ನು ನೋಡಿದ ನಂತರವೇ ಪ್ರಾರಂಭವಾಗುತ್ತದೆ. ಈದ್ ಉಲ್-ಫಿತರ್ ಉಪವಾಸದ ಅಂತ್ಯವನ್ನು ಸೂಚಿಸುತ್ತದೆ. ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳ ದಾಖಲೆಯಾದ ಸುನ್ನತ್ ಅನ್ನು ಅನುಸರಿಸಿ, ಹಬ್ಬದಂದು ಮುಸ್ಲಿಮರು ಮುಂಜಾನೆ ಬೇಗನೆ ಎದ್ದು ತಮ್ಮ ಸಲಾತ್ ಉಲ್-ಫಜ್ರ್ (ದೈನಂದಿನ ಪ್ರಾರ್ಥನೆಗಳು) ಸಲ್ಲಿಸಿ, ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಇತ್ತರ್ (ಸುಗಂಧ ದ್ರವ್ಯ) ಧರಿಸುತ್ತಾರೆ. ಬಳಿಕ ಹಬ್ಬದ ಪ್ರಾರ್ಥನೆಗೆ ಹೋಗುವ ಮುನ್ನ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಯನ್ನು ಸೇವಿಸುತ್ತಾರೆ. ಹುಡುಗರು, ಯುವಕರು ಸೇರಿದಂತೆ ಈದ್ಗ್ ಬಳಿ ಎಲ್ಲಾ ಮುಸ್ಲಿಮರು ಒಟ್ಟಿಗೆ ಸೇರಿ ಹಬ್ಬದ ವಿಶೇಷ ಸಭೆಯಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಾರೆ. ಆದ್ರೆ ಹೆಣ್ಣು ಮಕ್ಕಳು, ಮಹಿಳೆಯರು ಮನೆಯಲ್ಲೇ ಹಬ್ಬನ ನಮಾಜ್ ಮಾಡುತ್ತಾರೆ.

ಜನರು ಬೆಳಿಗ್ಗೆ ಸಿಹಿ ತಿನ್ನುವ ಮೂಲಕ ದಿನವನ್ನು ಪ್ರಾರಂಭಿಸಿದರೆ ಅದನ್ನು ನಿಜವಾಗಿಯೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಈದ್ ಅನ್ನು ಮೀಥಿ ಈದ್ ಎಂದು ಕರೆಯಲಾಗುತ್ತದೆ. ಫಿರ್ಣಿ ಮತ್ತು ಖೀರ್, ಶೀರ್ ಕುರ್ಮಾ ಮುಂತಾದ ಖಾದ್ಯಗಳನ್ನು ಎಲ್ಲಾ ಮನೆಗಳಲ್ಲಿ ತಯಾರಿಸಲಾಗುತ್ತದೆ. ಹೆಂಗಸರೂ ಕೈಗೆ ಗೋರಂಟಿ ಹಚ್ಚಿಕೊಂಡು ಹೊಸ ಬಟ್ಟೆ ಧರಿಸುತ್ತಾರೆ. ಈ ದಿನದಂದು ಮಕ್ಕಳು ತಮ್ಮ ಕುಟುಂಬದ ಹಿರಿಯರಿಂದ ಈದಿ (ಹಣ) ಪಡೆಯುತ್ತಾರೆ, ಇದು ಅವರಿಗೆ ಹಬ್ಬವನ್ನು ಹೆಚ್ಚು ವಿಶೇಷವಾಗಿಸುತ್ತದೆ. ತಿಂಗಳ ಉಪವಾಸದ ಅಂತ್ಯವನ್ನು ಗುರುತಿಸಲು, ಮನೆಗಳಲ್ಲಿ ಅದ್ದೂರಿ ಹಬ್ಬಗಳನ್ನು ಆಯೋಜಿಸಲಾಗುತ್ತದೆ.

ಇನ್ನಷ್ಟು ರಂಜಾನ್ ಹಬ್ಬದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!