Digital Payment: 2022ರ ಏಪ್ರಿಲ್ನಲ್ಲಿ 558 ಕೋಟಿಯಷ್ಟು- 9.83 ಲಕ್ಷ ಕೋಟಿ ಮೌಲ್ಯದ ಡಿಜಿಟಲ್ ವಹಿವಾಟು; ಸಾರ್ವಕಾಲಿಕ ದಾಖಲೆ
2022ರ ಏಪ್ರಿಲ್ ತಿಂಗಳಲ್ಲಿ 9.83 ಲಕ್ಷ ಕೋಟಿ ರೂಪಾಯಿ ಮೌಲ್ಯದ 5.58 ಲಕ್ಷ ಕೋಟಿ ವಹಿವಾಟುಗಳೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದೆ.
ಡಿಜಿಟಲ್ ಪಾವತಿಗಳ (Digital Payment) ಪ್ಲಾಟ್‌ಫಾರ್ಮ್ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) 2022ರ ಏಪ್ರಿಲ್ ತಿಂಗಳಲ್ಲಿ 5.58 ಶತಕೋಟಿ ವಹಿವಾಟುಗಳನ್ನು ದಾಖಲಿಸಿದೆ. ಇದರ ಪ್ರಾರಂಭದ ದಿನದಿಂದಲೂ ಇಲ್ಲಿಯವರೆಗಿನ ದಾಖಲೆಯಲ್ಲಿ ಪಾವತಿಯ ಪ್ಲಾಟ್‌ಫಾರ್ಮ್‌ಗೆ ಇದು ಹೊಸ ಸಾರ್ವಕಾಲಿಕ ಗರಿಷ್ಠವಾಗಿದೆ ಎಂದು ರಾಷ್ಟ್ರೀಯ ಪಾವತಿಗಳ ನಿಗಮದ (NPCI) ದತ್ತಾಂಶವು ಬಹಿರಂಗಪಡಿಸಿದೆ. ಮೌಲ್ಯದ ಲೆಕ್ಕಾಚಾರದಿಂದ ನೋಡುವುದಾದರೆ, ಈ ಪೇಮೆಂಟ್ ಪ್ಲಾಟ್‌ಫಾರ್ಮ್ 9.83 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಹಿವಾಟುಗಳನ್ನು ಕಂಡಿದೆ. 2022ರ ಮಾರ್ಚ್ನಲ್ಲಿ ಯುಪಿಐ 9.6 ಲಕ್ಷ ಕೋಟಿ ರೂಪಾಯಿ ಮೌಲ್ಯದ 5.4 ಶತಕೋಟಿ ವಹಿವಾಟುಗಳನ್ನು ದಾಖಲಿಸಿದೆ. ತಿಂಗಳ ಆಧಾರದ ಮೇಲೆ ಯುಪಿಐ ವಹಿವಾಟಿನ ಪ್ರಮಾಣದಲ್ಲಿ ಶೇ 3.33ರಷ್ಟು ಜಿಗಿತವನ್ನು ಮತ್ತು ವಹಿವಾಟಿನ ಮೌಲ್ಯದಲ್ಲಿ ಶೇ 2.36ರಷ್ಟು ಹೆಚ್ಚಳವನ್ನು ದಾಖಲಿಸಿದೆ.
ವರ್ಷದಿಂದ ವರ್ಷಕ್ಕೆ (YoY) ವಹಿವಾಟಿನ ಪ್ರಮಾಣವು ಶೇ 111ರಷ್ಟು ಜಿಗಿದಿದೆ ಮತ್ತು ವಹಿವಾಟಿನ ಮೌಲ್ಯವು ಶೇ 100ರಷ್ಟು ಹೆಚ್ಚಳವನ್ನು ದಾಖಲಿಸಿದೆ. 2021ರ ಏಪ್ರಿಲ್ ತಿಂಗಳಲ್ಲಿ ಯುಪಿಐ 4.93 ಟ್ರಿಲಿಯನ್ ಮೌಲ್ಯದ 2.64 ಬಿಲಿಯನ್ ವಹಿವಾಟುಗಳನ್ನು ಪ್ರೊಸೆಸ್ ಮಾಡಿದೆ. 2016ರಲ್ಲಿ ಪ್ರಾರಂಭವಾದಾಗಿನಿಂದ ಯುಪಿಐ ಬೃಹತ್ ಮಟ್ಟದ ಸ್ವೀಕೃತಿಗೆ ಸಾಕ್ಷಿಯಾಗಿದ್ದು, ಇದು ಕೊವಿಡ್-19 ಸಾಂಕ್ರಾಮಿಕದಿಂದ ಉತ್ತೇಜಿತವಾಗಿದೆ. 2021-22ರ ಹಣಕಾಸು ವರ್ಷದಲ್ಲಿ ಯುಪಿಐ ವಹಿವಾಟು ಮೌಲ್ಯಗಳಲ್ಲಿ 1-ಟ್ರಿಲಿಯನ್ ಡಾಲರ್ ಅನ್ನು ದಾಟಿದೆ. ಪಾವತಿ ವ್ಯವಸ್ಥೆಗೆ ಇದು ಪ್ರಮುಖ ಮೈಲುಗಲ್ಲು ಎಂದು ಪರಿಗಣಿಸಲಾಗಿದೆ.
ಯುಪಿಐ, ರುಪೇ (RuPay), ಭಾರತ್ ಬಿಲ್ ಪೇ (Bharat Bill Pay) ಇತ್ಯಾದಿಗಳನ್ನು ನಿರ್ವಹಿಸುವ ಘಟಕ ಎನ್ಪಿಸಿಐ. ಮುಂದಿನ 2-3 ವರ್ಷಗಳಲ್ಲಿ ದಿನಕ್ಕೆ 1 ಶತಕೋಟಿ ಡಾಲರ್ ಮೌಲ್ಯದ ಯುಪಿಐ ವಹಿವಾಟಿನ ಗುರಿಯನ್ನು ಹೊಂದಿದೆ. ಎನ್ಪಿಸಿಐ ಎರಡು ಪ್ರಮುಖ ಕಾರ್ಯಗಳನ್ನು ಹೊಂದಿದೆ-ಫೀಚರ್ ಫೋನ್‌ಗಳಲ್ಲಿ ಯುಪಿಐ ಅನ್ನು ಸಕ್ರಿಯಗೊಳಿಸುವುದು ಮತ್ತು ಸ್ಮಾರ್ಟ್‌ಫೋನ್‌ಗಳಿಗಾಗಿ ಆಫ್‌ಲೈನ್ ಮೋಡ್‌ನಲ್ಲಿ ಒದಗಿಸುವುದು. ಫೀಚರ್ ಫೋನ್‌ಗಳಿಗಾಗಿ UPI 123Pay ಅನ್ನು ಪರೀಕ್ಷಿಸಲಾಗುತ್ತಿದ್ದು, ಯುಪಿಐ ಲೈಟ್ ಆಫ್‌ಲೈನ್ ಮೋಡ್‌ನಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತು ಎನ್ಪಿಸಿಐ ಸುತ್ತೋಲೆಯನ್ನು ಹೊರಡಿಸಿದೆ.
ಹೆಚ್ಚಿನ ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆರ್ಬಿಐನಿಂದ ಗುಡ್ನ್ಯೂಸ್; ಫೀಚರ್ ಫೋನ್ನಿಂದಲೂ ಡಿಜಿಟಲ್ ಪಾವತಿಗೆ ಅವಕಾಶ, ಇಂಟರ್ನೆಟ್ ಅಗತ್ಯವೂ ಇರುವುದಿಲ್ಲ !