ಆರ್ಬಿಐನಿಂದ ಗುಡ್ನ್ಯೂಸ್; ಫೀಚರ್ ಫೋನ್ನಿಂದಲೂ ಡಿಜಿಟಲ್ ಪಾವತಿಗೆ ಅವಕಾಶ, ಇಂಟರ್ನೆಟ್ ಅಗತ್ಯವೂ ಇರುವುದಿಲ್ಲ !
RBI Monetary Policy Committee: ಫೀಚರ್ ಫೋನ್ಗಳಲ್ಲಿನ ಯುಪಿಐ ಆಧಾರಿತ ಪಾವತಿ ಉತ್ಪನ್ನಗಳನ್ನು ರಿಸರ್ವ್ ಬ್ಯಾಂಕ್ನ ರೆಗ್ಯೂಲೇಟರಿ ಸ್ಯಾಂಡ್ಬಾಕ್ಸ್ ನಿಯಂತ್ರಿಸುತ್ತದೆ ಎಂದೂ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.
ಡಿಜಿಟಲ್ ವ್ಯವಹಾರಗಳು ಹೆಚ್ಚುತ್ತಿರುವ ಬೆನ್ನಲ್ಲೇ ಆರ್ಬಿಐ ಒಂದು ಮಹತ್ವದ ಘೋಷಣೆ ಮಾಡಿದೆ. ಅತಿಶೀಘ್ರದಲ್ಲಿಯೇ ಫೀಚರ್ ಫೋನ್ಗಳಲ್ಲೂ ಕೂಡ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಅಂದರೆ ಇನ್ನುಮುಂದೆ ಫೀಚರ್ ಫೋನ್ಗಳಲ್ಲೂ ಕೂಡ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ -UPI) ಆಧಾರಿತ ವೈಶಿಷ್ಟ್ಯಗಳು ಸಿಗುವಂತೆ ಆರ್ಬಿಐ ರೂಪಿಸಲಿದೆ. ಹಾಗೇ, ಇದು ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಮುಕ್ತ ಯುಪಿಐ ಪಾವತಿಯನ್ನು ಸಾಧ್ಯವಾಗಿಸುತ್ತದೆ. ಇತ್ತೀಚೆಗೆ ನಡೆದ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC)y ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಈಗೀಗ ದೇಶದಲ್ಲಿ ಡಿಜಿಟಲ್ ಮಾದರಿಯ ಯುಪಿಐ ಪಾವತಿಯೇ ಹೆಚ್ಚಾಗಿದೆ. ಹಾಗಾಗಿ ಈ ಯುಪಿಐ ಪಾವತಿ ವ್ಯವಸ್ಥೆಯನ್ನು ಸರಳೀಕೃತಗೊಳಿಸಲು ಶಕ್ತಿಕಾಂತ್ ದಾಸ್ ಅವರು ಮೂರು ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ.
ದೇಶದಲ್ಲಿ ಒಟ್ಟಾರೆ ವ್ಯವಹಾರದಲ್ಲಿ ಬಳಕೆಯಾಗುವ ಏಕೈಕ ಅತ್ಯಂತ ದೊಡ್ಡ ಚಿಲ್ಲರೆ ಪಾವತಿ ವ್ಯವಸ್ಥೆಯೆಂದರೆ ಯುಪಿಐ. ಇದನ್ನು ಅನೇಕ ಜನರು ಬಳಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಡಿಮೆ ಮೊತ್ತದ ಪಾವತಿ ವ್ಯವಸ್ಥೆಯಲ್ಲಿ ಬಹುಮುಖ್ಯವಾಗಿ ಬಳಕೆಯಾಗುತ್ತದೆ. ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಆಳವಾಗಿಸಲು, ಮತ್ತಷ್ಟು ಒಳಗೊಳ್ಳಲು, ಗ್ರಾಹಕರಿಗೆ ವಹಿವಾಟುಗಳನ್ನು ಸುಲಭಗೊಳಿಸಲು, ಹಣಕಾಸು ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಚಿಲ್ಲರೆ ಗ್ರಾಹಕರ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಪೂರೈಕೆದಾರರ ಸಾಮರ್ಥ್ಯ ಹೆಚ್ಚಿಸಲು ಇದೀಗ ಫೀಚರ್ ಫೋನ್ನಲ್ಲೂ ಯುಪಿಐ ಆಧಾರಿತ ಪಾವತಿ ವ್ಯವಸ್ಥೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಫೀಚರ್ ಫೋನ್ಗಳಲ್ಲಿನ ಯುಪಿಐ ಆಧಾರಿತ ಪಾವತಿ ಉತ್ಪನ್ನಗಳನ್ನು ರಿಸರ್ವ್ ಬ್ಯಾಂಕ್ನ ರೆಗ್ಯೂಲೇಟರಿ ಸ್ಯಾಂಡ್ಬಾಕ್ಸ್ ನಿಯಂತ್ರಿಸುತ್ತದೆ ಎಂದೂ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.
ಹಣಕಾಸು ಮಾರುಕಟ್ಟೆಯಲ್ಲಿ ರಿಟೇಲ್ ಗ್ರಾಹಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಹಲವು ಕ್ರಮಗಳ ಮೂಲಕ ವಿಶೇಷ ಪ್ರಯತ್ನ ಮಾಡುತ್ತಿದೆ. ಉದಾಹರಣೆಗೆ ಇತ್ತೀಚೆಗೆ ಉದ್ಘಾಟಿಸಲಾದ ರಿಟೇಲ್ ಡೈರೆಕ್ಟ್ ಸ್ಕೀಮ್, ಇಂಟರ್ನೆಟ್ ಬ್ಯಾಂಕ್ ವ್ಯವಸ್ಥೆ. ಈ ವ್ಯವಸ್ಥೆಯನ್ನು ಪ್ರಾಥಮಿಕ ಮತ್ತು ದ್ವಿತೀಯ ಮಾರುಕಟ್ಟೆಗಳಲ್ಲೂ ಬಳಸಬಹುದು. ಅದರಲ್ಲೂ ಆರಂಭಿಕ ಸಾರ್ವಜನಿಕ ಕೊಡುಗೆಗಳ(IPO) ಕ್ಷೇತ್ರದಲ್ಲಿ ಯುಪಿಐ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಹೀಗಾಗಿ ವ್ಯವಹಾರ ಸರಳೀಕರಿಸಲು ಆರ್ಬಿಐ ಹೆಚ್ಚೆಚ್ಚು ಪ್ರಯತ್ನ ಮಾಡುತ್ತಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಇದನ್ನೂ ಓದಿ: ಪರಿಷತ್ ಆಪರೇಷನ್ ಆಟ ಶುರು: ಬೆಳಗ್ಗೆ ಬಿಜೆಪಿ ಸೇರ್ಪಡೆ, ಸಂಜೆ ಮತ್ತೆ ಕಾಂಗ್ರೆಸ್ ಸೇರ್ಪಡೆಯಾದ ಪೂರ್ಣಿಮಾ
Published On - 11:49 am, Wed, 8 December 21