Digital Payments: ಡಿಜಿಟಲ್ ಪಾವತಿ ಜನಪ್ರಿಯತೆಗೆ ಆಸಕ್ತಿಕರವಾದ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ
ಭಾರತದಲ್ಲಿ ಡಿಜಿಟಲ್ ಪಾವತಿಯ ಜನಪ್ರಿಯತೆಯ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ವಿಡಿಯೋವೊಂದನ್ನು ಟ್ವಿಟರ್ ಮೂಲಕ ಹಚ್ಚಿಕೊಂಡಿದ್ದಾರೆ.
ನವೆಂಬರ್ 8, 2021ಕ್ಕೆ ನೋಟು ನಿಷೇಧಕ್ಕೆ 5 ವರ್ಷ ಪೂರ್ತಿ ಆಗುತ್ತದೆ. ಜನರು ಡಿಜಿಟೈಸೇಷನ್ ಕಡೆಗೆ ಸಾಗಬೇಕು ಎಂಬ ಕಾರಣಕ್ಕೂ ಈ ನಿರ್ಧಾರ ಮಾಡಲಾಗಿತ್ತು. ಭಾರತದಲ್ಲಿ ಡಿಜಿಟೈಸೇಷನ್ ಸ್ಥಿತಿ ಹೇಗಿದೆ. ಅದರ ಬಳಕೆಯನ್ನು ಜನರು ಹೇಗೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನವೆಂಬರ್ 6ನೇ ತಾರೀಕಿನಂದು ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ವ್ಯಕ್ತಿಯೊಬ್ಬರು ಯುಪಿಐ ಬಳಸಿ “ಕೋಲೆ ಬಸವ”ದೊಂದಿಗೆ ಬರುವ ವ್ಯಕ್ತಿಗೆ ಹಣ ನೀಡಿದ್ದಾರೆ. “ದೊಡ್ಡ ಮಟ್ಟದಲ್ಲಿ ಡಿಜಿಟಲ್ ಪಾವತಿಗೆ ಭಾರತದಲ್ಲಿ ಬದಲಾವಣೆ ಆಗಿದ್ದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕೆ” ಎಂದು ಮಹೀಂದ್ರಾ ಸಮೂಹದ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ. ಕೋಲೆ ಬಸವದ ಹಣೆ ಮೇಲೆ ನೇತು ಹಾಕಿರುವ ಯುಪಿಐ ಕೋಡ್ ಮೇಲೆ ವ್ಯಕ್ತಿಯೊಬ್ಬರು ಸ್ಕ್ಯಾನ್ ಮಾಡಿ, ಹಣ ಪಾವತಿಸುತ್ತಿದ್ದಾರೆ. ರಾಸುವಿನ ಜತೆಗಿರುವ ವ್ಯಕ್ತಿ ನಾದಸ್ವರವನ್ನು ನುಡಿಸುತ್ತಿದ್ದಾರೆ ಎಂಬುದು ವಿಡಿಯೋದಲ್ಲಿ ಕಂಡುಬರುತ್ತದೆ.
ಇಂಟರ್ನೆಟ್ ಮತ್ತು ಸ್ಮಾರ್ಟ್ಫೋನ್ ಬಳಕೆ ಹೆಚ್ಚಾಗುತ್ತಿದ್ದಂತೆ ದೇಶದಾದ್ಯಂತ ಡಿಜಿಟಲ್ ಪಾವತಿ ಜಾಸ್ತಿ ಆಗುತ್ತಿದೆ. ಹಬ್ಬದ ಋತುವಿನ ಪ್ರಯುಕ್ತ ಖರೀದಿ ಪ್ರಮಾಣವು ಜಾಸ್ತಿ ಆಗುವುದರೊಂದಿಗೆ 2021ರ ಅಕ್ಟೋಬರ್ನಲ್ಲಿ ಡಿಜಿಟಲ್ ಪಾವತಿಯು ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ಮುಟ್ಟಿದೆ. ಅಂದ ಹಾಗೆ ಈ ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ದೈತ್ಯ ಕಂಪೆನಿಗಳು ವಾರ್ಷಿಕ ಮಾರಾಟವನ್ನು ಆಯೋಜಿಸಿದವು. ಅಕ್ಟೋಬರ್ಗೆ ಯುಪಿಐ ವಹಿವಾಟುಗಳು ಮೊತ್ತವು 10,000 ಕೋಟಿ ಅಮೆರಿಕನ್ ಡಾಲರ್ ದಾಟಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 7.71 ಲಕ್ಷ ಕೋಟಿ ಆಗಿದೆ. ಮತ್ತು ಒಟ್ಟು 421 ಕೋಟಿ ವಹಿವಾಟುಗಳು ಅಕ್ಟೋಬರ್ನಲ್ಲಿ ಅನುಷ್ಠಾನ ಆಗಿವೆ. ಈ ಎಲ್ಲವೂ ಸಾರ್ವಕಾಲಿಕ ದಾಖಲೆ ಆಗಿದೆ.
Do you need any more evidence of the large-scale conversion to digital payments in India?! pic.twitter.com/0yDJSR6ITA
— anand mahindra (@anandmahindra) November 6, 2021
2016ರಲ್ಲಿ ಯುಪಿಐ ಆರಂಭಿಸಿದ ಮೇಲೆ ತಿಂಗಳ ವಹಿವಾಟು 3.86 ಲಕ್ಷ ಕೋಟಿ ದಾಟಲು ನಾಲ್ಕು ವರ್ಷ, 2020ರ ಅಕ್ಟೋಬರ್ ಆಗಬೇಕಾಯಿತು. ಆ ಮೊತ್ತವು ಒಂದು ವರ್ಷದಲ್ಲಿ, ಅಂದರೆ ಈ ವರ್ಷದ ಅಕ್ಟೋಬರ್ನಲ್ಲಿ ಹತ್ತಿರ ಹತ್ತಿರ ದುಪ್ಪಟ್ಟು ಆಗಿ 7 ಲಕ್ಷ ಕೋಟಿ ರೂಪಾಯಿಯನ್ನು ದಾಟಿದೆ.
ಇದನ್ನೂ ಓದಿ: Viral Video: ಚುರುಕಾದ ಶ್ವಾನದ ವಿಡಿಯೋ ಹಂಚಿಕೊಂಡು ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ; ವಿಡಿಯೋ ನೋಡಿ
Published On - 2:48 pm, Sat, 6 November 21