PF New Rules: ಪಿಎಫ್​ ಮೇಲೆ ತೆರಿಗೆ ಹಾಕುವುದಕ್ಕೆ ಏಪ್ರಿಲ್​ನಿಂದ ಎರಡು ಖಾತೆ; ಏನಿದು ಲೆಕ್ಕಾಚಾರ?

ಪಿಎಫ್​ ಮೇಲೆ ಕೊಡುಗೆ ಮೇಲೆ ತೆರಿಗೆ ಹಾಕುವ ಉದ್ದೇಶದಿಂದ ಏಪ್ರಿಲ್ 1ನೇ ತಾರೀಕಿನಿಂದ ಹೊಸ ನಿಯಮಾವಳಿ ಜಾರಿಗೆ ಬಂದಿದೆ. ಏನದು ನಿಯಮ ಎಂಬ ವಿವರ ಇಲ್ಲಿದೆ.

PF New Rules: ಪಿಎಫ್​ ಮೇಲೆ ತೆರಿಗೆ ಹಾಕುವುದಕ್ಕೆ ಏಪ್ರಿಲ್​ನಿಂದ ಎರಡು ಖಾತೆ; ಏನಿದು ಲೆಕ್ಕಾಚಾರ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 05, 2022 | 8:54 PM

ಏಪ್ರಿಲ್ 1, 2022ರಿಂದ ಅನ್ವಯ ಆಗುವಂತೆ ಸರ್ಕಾರಿ ಮತ್ತು ಖಾಸಗಿ ವಲಯದ ಸಿಬ್ಬಂದಿಯಾಗಿ, ಕೆಲವು  ತೆರಿಗೆ ಬ್ರ್ಯಾಕೆಟ್​ನೊಳಗೆ ಬರುವ ಸಿಬ್ಬಂದಿಗೆ ಪ್ರಾವಿಡೆಂಟ್ ಫಂಡ್​ (Provident Fund) ಮೇಲೆ ತೆರಿಗೆ ಬೀಳುವ ಸಾಧ್ಯತೆ ಇದೆ. ಒಂದು ವರ್ಷಕ್ಕೆ 2.50 ಲಕ್ಷ ರೂಪಾಯಿಗಿಂತ ಹೆಚ್ಚು ಇಪಿಎಫ್​ ಕೊಡುಗೆಗೆ ತೆರಿಗೆ ಹಾಕುವ ಯೋಜನೆ ಸರ್ಕಾರಕ್ಕೆ ಇದೆ. ನಿಯಮವು ಜಾರಿಗೆ ಬಂದ ಮೇಲೆ ಸರ್ಕಾರಿ ನೌಕರರರಿಗೆ ತೆರಿಗೆ ಮಿತಿಯನ್ನು 5 ಲಕ್ಷ ರೂಪಾಯಿಗೆ ನಿಗದಿ ಮಾಡಲಾಗಿದೆ. ಭಾರತದಾದ್ಯಂತ ಇರುವ ನೌಕರರ ಭವಿಷ್ಯ ನಿಧಿ (EPF) ಖಾತೆ ಕಡ್ಡಾಯವಾಗಿದ್ದು, ಸಾಮಾನ್ಯವಾಗಿ ಇದನ್ನು ಪಿಎಫ್ ಖಾತೆ ಎಂದು ಕರೆಯಲಾಗುವುದು, ನಿಧಿಯನ್ನು ನಿವೃತ್ತಿ ನಂತರ ಬಳಸಲಾಗುವುದು.

ಪಿಎಫ್​ ನಿಯಮಾವಳಿ ಬದಲಾವಣೆ ಬಗ್ಗೆ ಗೊತ್ತಿರಲೇಬೇಕಾದ ಮುಖ್ಯ ಸಂಗತಿಗಳಿವು 1. ಈ ನಡೆಯು ಹೆಚ್ಚಿನ ಗಳಿಕೆ ಇರುವವರಿಗೆ ಮಾತ್ರ ಮಾಡಲಾಗಿದೆ ಮತ್ತು ದೇಶದ ಕೆಲವೇ ತೆರಿಗೆದಾರರ ಮೇಲೆ ಮಾತ್ರ ಪರಿಣಾಮ ಬೀರಲಿದೆ. ಹೊಸ ನಿಯಮಾವಳಿಯ ಪ್ರಕಾರ, ಪಿಎಫ್​ ಖಾತೆಯು ತೆರಿಗೆ ವ್ಯಾಪ್ತಿಗೆ ಬರುವ ಹಾಗೂ ತೆರಿಗೆ ವ್ಯಾಪ್ತಿಗೆ ಬಾರದ ಕೊಡುಗೆ ಎಂದು ಹೊಸ ನಿಯಮಾವಳಿ ಅಡಿಯಲ್ಲಿ ವಿಭಜನೆ ಮಾಡಲಾಗುತ್ತದೆ. ಇಲ್ಲಿ ಇನ್ನೊಂದು ಮುಖ್ಯ ಸಂಗತಿ ಏನೆಂದರೆ, ಉದ್ಯೋಗಿಗಳ ಕೊಡುಗೆಗೆ ಮಾತ್ರ ಅನ್ವಯ ಆಗುತ್ತದೆ. ಉದ್ಯೋಗದಾತರ ಕೊಡುಗೆ ಅನ್ವಯಿಸಲ್ಲ.

2.ಇದನ್ನು ಇನ್ನೂ ವಿವರಿಸುವುದಾದರೆ, ಒಂದು ಹಣಕಾಸು ವರ್ಷದಲ್ಲಿ ಇಪಿಎಫ್ ಮತ್ತು ವಿಪಿಎಫ್​ ಠೇವಣಿ ಉದ್ಯೋಗಿಗಳಿಂದ 2.5 ಲಕ್ಷ ರೂಪಾಯಿ ದಾಟಿದಲ್ಲಿ, ಆ 2.5 ಲಕ್ಷ ರೂಪಾಯಿ ಮೇಲೆ ಗಳಿಸಿದ್ದ ಬಡ್ಡಿಗೆ ಉದ್ಯೋಗಿ ಕೈಯಲ್ಲಿ ತೆರಿಗೆ ಬೀಳುತ್ತದೆ. ಒಂದು ವೇಳೆ ಉದ್ಯೋಗದಾತರಿಂದ ಇಪಿಎಫ್​ಗೆ ಯಾವುದೇ ಕೊಡುಗೆ ಇಲ್ಲದಿದ್ದಲ್ಲಿ ಒಂದು ಹಣಕಾಸು ವರ್ಷಕ್ಕೆ 5 ಲಕ್ಷ ರೂಪಾಯಿ ಠೇವಣಿ ತೆರಿಗೆಮುಕ್ತವಾಗಿ ಇರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರದಿಂದ ಯಾವುದೇ ಕೊಡುಗೆ ಇರುವುದಿಲ್ಲ. ಆದ್ದರಿಂದ ಮಿತಿ ಹೆಚ್ಚಿಗೆ ಇರುತ್ತದೆ.

3. ಹೆಚ್ಚು ವೇತನ ಬಂದು, ಪಿಎಫ್​ಗೆ ಹೆಚ್ಚು ಮೊತ್ತ ಠೇವಣಿ ಮಾಡುವವರ ಮೇಲೆ ಪರಿಣಾಮ ಆಗುತ್ತದೆ. ಯಾರಿಗೆ ಪಿಎಫ್​ ವೇತನವು ಒಂದು ವರ್ಷದಲ್ಲಿ 21 ಲಕ್ಷಕ್ಕಿಂತ ಹೆಚ್ಚಾಗಿದ್ದಲ್ಲಿ ಇಪಿಎಫ್​ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ ಹಾಕಲಾಗುತ್ತದೆ. ಆ ತೆರಿಗೆ ಅಂದಾಜು ಪಿಎಫ್ ಕೊಡುಗೆ ಮೇಲೆ ಶೇ 1ರಷ್ಟಾಗುತ್ತದೆ. ಇದರ್ಥ ಏನೆಂದರೆ, ತಮ್ಮ ಪಿಎಫ್​ ಕೊಡುಗೆಗೆ ತೆರಿಗೆ ಬೀಳಬಹುದು ಎಂದು ಬಹುತೇಕ ವೇತನದಾರರು ಯೋಚಿಸುವ ಅಗತ್ಯ ಇಲ್ಲ.

4. ಆದಾಯ ಇಲಾಖೆಗೆ ನೀತಿ ರೂಪಿಸುವ ಸಿಬಿಡಿಟಿ, ಹೊಸ ನಿಯಮಾವಳಿ ಜಾರಿಗಾಗಿ ಆದಾಯ ತೆರಿಗೆ ನಿಯಮ, 1962ರ ಹೊಸ ಸೆಕ್ಷನ್ 9D ​ಸೃಷ್ಟಿಸಲಾಗಿದೆ. ಸಿಬಿಡಿಟಿ ಹೇಳಿರುವಂತೆ, ಮಾರ್ಚ್ 31, 2021ರ ತನಕದ ಪಿಎಫ್​ ಕೊಡುಗೆ ತೆರಿಗೆ ಮುಕ್ತವಾಗಿರುತ್ತದೆ. ಇದರ್ಥ ಏನೆಂದರೆ ಏಪ್ರಿಲ್ 1, 2021ರಿಂದ ನೀಡುವ ಕೊಡುಗೆಗೆ ಹೊಸ ನಿಯಮಾವಳಿ ಅಡಿಯಲ್ಲಿ ತೆರಿಗೆ ಆಗುತ್ತದೆ.

5. ಪಿಎಫ್​ ಕೊಡುಗೆಗೆ ಉದ್ಭವಿಸುವ ತೆರಿಗೆ ಹೊರೆಯನ್ನು ಉಳಿಸುವುದಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಬಹುದು. ವಿಪಿಎಫ್ ಕೊಡುಗೆಯನ್ನು ಎನ್​ಪಿಎಸ್​, ಯುಲಿಪ್​​ಗಳು ಮುಂತಾದವಕ್ಕೆ ತಿರುಗಿಸಬಹುದು. ಆದರೆ ಅದರಲ್ಲಿನ ತೆರಿಗೆ ಪರಿಣಾಮ ಗಮನಿಸಬೇಕು. ಐಟಿಆರ್ ಸಂಪತ್ತು ಸೃಷ್ಟಿಗೆ ಸಹಾಯ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಎಲ್ಲ ಆದಾಯಕ್ಕೂ ತೆರಿಗೆ ವಿನಾಯಿತಿ ಏನಿಲ್ಲ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: ಪಿಎಫ್ ಪರಿಷ್ಕೃತ​ ಬಡ್ಡಿ ದರವು ಇಂದಿನ ವಾಸ್ತವ ಸ್ಥಿತಿಯನ್ನು ಪ್ರತಿನಿಧಿಸುತ್ತದೆ: ನಿರ್ಮಲಾ ಸೀತಾರಾಮನ್