AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FASTag blacklisting: ಟೋಲ್ ಬಂದಾಗ ಕೈಯಲ್ಲಿ ಟ್ಯಾಗ್ ಹಿಡಿದು ತೋರಿಸ್ತಾರಾ? ಬ್ಲ್ಯಾಕ್​ಲಿಸ್ಟ್ ಆಗಲಿದೆ ನಿಮ್ಮ ಫಾಸ್​ಟ್ಯಾಗ್

NHAI is blacklisting loose FASTags: ವಾಹನದ ವಿಂಡ್ ಸ್ಕ್ರೀನ್​​ನಲ್ಲಿ ಅಂಟಿಸಲಾಗದ ಫಾಸ್​ಟ್ಯಾಗ್​ಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಲೂಸ್ ಫಾಸ್​ಟ್ಯಾಗ್​ಗಳ ಮೂಲಕ ಕೆಲ ವಾಹನ ಸವಾರರು ಟೋಲಿಂಗ್ ಸಿಸ್ಟಂ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ವಾಹನದವರು ಸಣ್ಣ ವಾಹನಗಳ ಫಾಸ್​ಟ್ಯಾಗ್ ಬಳಸಿ ಕಡಿಮೆ ಟೋಲ್ ನೀಡುವುದು ಇತ್ಯಾದಿ ವಂಚನೆಗಳು ನಡೆಯುತ್ತಿವೆ.

FASTag blacklisting: ಟೋಲ್ ಬಂದಾಗ ಕೈಯಲ್ಲಿ ಟ್ಯಾಗ್ ಹಿಡಿದು ತೋರಿಸ್ತಾರಾ? ಬ್ಲ್ಯಾಕ್​ಲಿಸ್ಟ್ ಆಗಲಿದೆ ನಿಮ್ಮ ಫಾಸ್​ಟ್ಯಾಗ್
ಫಾಸ್​ಟ್ಯಾಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 15, 2025 | 4:31 PM

Share

ನವದೆಹಲಿ, ಜುಲೈ 15: ನೀವು ಫಾಸ್​ಟ್ಯಾಗ್ (FASTag) ಹೊಂದಿದ್ದು ಅದನ್ನು ಕಾರಿನ ವಿಂಡ್​ಸ್ಕ್ರೀನ್​ನಲ್ಲಿ ಅಂಟಿಸಿಲ್ಲವಾ? ಹೆದ್ದಾರಿ ಟೋಲ್​ಬೂತ್​​ಗಳಿಗೆ ಹೋದಾಗ ಕೈಯಲ್ಲಿ ಫಾಸ್​ಟ್ಯಾಗ್ ಹಿಡಿದು ಸ್ಕ್ಯಾನಿಂಗ್​ಗೆ ತೋರಿಸುತ್ತಿದ್ದೀರಾ? ಹಾಗಾದರೆ, ನಿಮ್ಮ ಫಾಸ್​ಟ್ಯಾಗ್ ಮುಂದಿನ ದಿನಗಳಲ್ಲಿ ನಿಷ್ಕ್ರಿಯಗೊಳ್ಳಬಹುದು. ಹಾಗೊಂದು ನಿಯಮವನ್ನು ಸರ್ಕಾರ ರೂಪಿಸಿದೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ಪತ್ರಿಕಾ ಹೇಳಿಕೆ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಲೂಸ್ ಫಾಸ್​ಟ್ಯಾಗ್​ಗಳನ್ನು ಬ್ಲ್ಯಾಕ್​ಲಿಸ್ಟ್​​ಗೆ (blacklisting loose fastag) ಸೇರಿಸಲು ನಿರ್ಧರಿಸಿದೆ. ಲೂಸ್ ಫಾಸ್​ಟ್ಯಾಗ್ ಎಂದರೆ ಆಗಲೇ ಹೇಳಿದಂತೆ ವಾಹನದ ವಿಂಡ್​ಶೀಲ್ಡ್ ಮೇಲೆ ಅಂಟಿಸದೇ ಇರುವಂಥದ್ದು.

‘ವಾಹನದ ಮಾಲೀಕರು ತಮ್ಮ ಫಾಸ್​ಟ್ಯಾಗ್​ಗಳನ್ನು ಬೇಕಂತಲೇ ವಿಂಡ್​ಸ್ಕ್ರೀನ್ ಮೇಲೆ ಅಂಟಿಸಿರುವುದಿಲ್ಲ. ಇದರಿಂದಾಗಿ, ಟೋಲ್ ಬೂತ್​ಗಳಲ್ಲಿ ವಾಹನ ದಟ್ಟನೆ, ತಪ್ಪಾದ ಚಾರ್ಜ್​ಬ್ಯಾಕ್, ಟೋಲಿಂಗ್ ಸಿಸ್ಟಂ ದುರ್ಬಳಕೆ ಇತ್ಯಾದಿ ಮೂಲಕ ಒಟ್ಟಾರೆ ಟೋಲಿಂಗ್ ಸಿಸ್ಟಂ ಮೇಲೆ ಋಣಾತ್ಮಕ ಪರಿಣಾ ಬೀರುತ್ತದೆ. ಟೋಲ್ ಬೂತ್​ಗಳಲ್ಲಿ ವಾಹನ ಸಾಗುವುದು ವಿಳಂಬವಾಗಿ, ಇತರ ಹೆದ್ದಾರಿ ಬಳಕೆದಾರರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಎನ್​ಎಚ್​ಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹಾಲಿನ ಮಾರುಕಟ್ಟೆ ತೆರೆದುಬಿಟ್ಟರೆ ಭಾರತೀಯ ರೈತರಿಗೆ ಲಕ್ಷ ಕೋಟಿ ನಷ್ಟ? ಎಸ್​ಬಿಐ ವರದಿಯಲ್ಲಿ ಆತಂಕ

ಫಾಸ್​ಟ್ಯಾಗ್​ಗಳನ್ನು ಹೇಗೆ ಬ್ಲ್ಯಾಕ್​ಲಿಸ್ಟಿಂಗ್ ಮಾಡಲಾಗುತ್ತದೆ?

ಲೂಸ್ ಫಾಸ್​ಟ್ಯಾಗ್​ಗಳನ್ನು ರಿಪೋರ್ಟ್ ಮಾಡುವುದಕ್ಕೆಂದೇ ಹೆದ್ದಾರಿ ಪ್ರಾಧಿಕಾರವು ಪ್ರತ್ಯೇಕವಾದ ಇಮೇಲ್ ಐಡಿ ರಚಿಸಿದೆ. ಟೋಲ್ ಬೂತ್​ಗಳಲ್ಲಿ ಲೂಸ್ ಫಾಸ್​ಟ್ಯಾಗ್​ಗಳನ್ನು ಕಂಡಾಗ ಕಲೆಕ್ಷನ್ ಏಜೆನ್ಸಿಗಳು, ಕನ್ಸೆಶನರಿಗಳು ಕೂಡಲೇ ಮಾಹಿತಿಯನ್ನು ಆ ಇಮೇಲ್​ಗೆ ಕಳುಹಿಸುವಂತೆ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಇಂಥ ಫಾಸ್​ಟ್ಯಾಗ್​ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

ಲೂಸ್ ಫಾಸ್​​ಟ್ಯಾಗ್​ಗಳ ಮೂಲಕ ಹೇಗೆ ವಂಚನೆ ನಡೆಯುತ್ತದೆ?

ವಾಹನಗಳ ಪ್ರಾಕಾರವಾಗಿ ಫಾಸ್​ಟ್ಯಾಗ್​​ಗಳು ವ್ಯತ್ಯಾಸವಾಗಿರುತ್ತವೆ. ದೊಡ್ಡ ವಾಹನಗಳಿಗೆ ಟೋಲ್ ದರ ಹೆಚ್ಚಿರುವಂತೆ ಅಂಥ ವಾಹನಗಳಿಗೆ ಬೇರೆ ಫಾಸ್​ಟ್ಯಾಗ್​ಗಳಿರುತ್ತವೆ. ಸಣ್ಣ ಕಾರುಗಳಿಗೆ ಬೇರೆ ಫಾಸ್​ಟ್ಯಾಗ್​ಗಳಿರುತ್ತವೆ. ಆದರೆ, ದೊಡ್ಡ ವಾಹನದವರು ಸಣ್ಣ ವಾಹನಗಳಿಗೆ ನೀಡುವ ಫಾಸ್​ಟ್ಯಾಗ್​ಗಳನ್ನು ಬಳಸುವುದುಂಟು. ಈ ಮೂಲಕ ವಂಚನೆ ನಡೆಯಬಹುದು.

ಹಾಗೆಯೇ, ಕ್ಲೋಸ್ಡ್ ಲೂಪ್ ಟೋಲಿಂಗ್ ವ್ಯವಸ್ಥೆಯಲ್ಲಿ ವಿವಿಧ ವಾಹನಗಳ ಮಧ್ಯೆ ಫಾಸ್​ಟ್ಯಾಗ್ ಅನ್ನು ಅದಲುಬದಲು ಮಾಡಿಕೊಳ್ಳಬಹುದು. ಇದರಿಂದ ಟೋಲ್ ಕಟ್ಟುವುದರಿಂದ ತಪ್ಪಿಸಿಕೊಳ್ಳಬಹುದು. ಇಂಥ ಪ್ರಕರಣಗಳೂ ಕೂಡ ಸಾಕಷ್ಟು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಯುಪಿಐ ಚಾರ್ಜ್​ಬ್ಯಾಕ್; ಜುಲೈ 15ರಿಂದ ಹೊಸ ನಿಯಮ; ಪೇಮೆಂಟ್ ವ್ಯಾಜ್ಯಕ್ಕೆ ಸಿಗಲಿದೆ ತ್ವರಿತ ಪರಿಹಾರ

ಹಾಗೆಯೇ, ಫಾಸ್​ಟ್ಯಾಗ್ ವಿತರಿಸಿದ ಬ್ಯಾಂಕುಗಳು ಮತ್ತು ಟೋಲ್ ಆಪರೇಟರುಗಳಿಂದ ಚಾರ್ಜ್​ಬ್ಯಾಕ್ ಮನವಿ ಹೆಚ್ಚುತ್ತಿದೆಯಂತೆ. ಅಂದರೆ, ವಾಹನದ ವರ್ಗಕ್ಕೆ ತಕ್ಕುದಾದುದಲ್ಲದ ಫಾಸ್​ಟ್ಯಾಗ್​ಗಳನ್ನು ಬಳಸಿದಾಗ ಟೋಲ್ ಪ್ಲಾಜಾದಲ್ಲಿ ಅದು ಗೊತ್ತಾಗುತ್ತದೆ. ಆಗ ಚಾರ್ಜ್​ಬ್ಯಾಕ್ ಸಮಸ್ಯೆ ಉದ್ಭವವಾಗುತ್ತದೆ. ಫಾಸ್​ಟ್ಯಾಗ್ ಮತ್ತು ವಾಹನದ ನೊಂದಣಿ ಸಂಖ್ಯೆ ತಾಳೆಯಾಗುತ್ತಿದೆಯಾ ಎಂದು ಪರಿಶೀಲಿಸುವ ಟೆಕ್ನಾಲಜಿ ಇದೆ. ಆದರೆ, ಟೋಲ್ ಪ್ಲಾಜಾಗಳಲ್ಲಿ ಸದ್ಯ ಇರುವ ಸ್ಕ್ಯಾನರ್​ಗಳು ಟ್ಯಾಗ್ ಮಾಹಿತಿಯನ್ನು ಮಾತ್ರ ರೀಡ್ ಮಾಡುತ್ತವೆ. ವಾಹನ ನೊಂದಣಿ ಸಂಖ್ಯೆಗೆ ಟ್ಯಾಗ್ ಹೊಂದಿಕೆಯಾಗುತ್ತದಾ ಎಂದು ತುಲನೆ ಮಾಡುವುದಿಲ್ಲ.

ಎಎನ್​ಪಿಆರ್ ಟೆಕ್ನಾಲಜಿ ಅಳವಡಿಕೆ…

ಟೋಲ್ ಬೂತ್​ಗಳಲ್ಲಿ ನಂಬರ್ ಪ್ಲೇಟ್​​ಗಳನ್ನು ಗುರುತಿಸುವ ಎಎನ್​ಪಿಆರ್ ಟೆಕ್ನಾಲಜಿ ಅಳವಡಿಕೆ ಆಗಿದೆ. ಆದರೆ, ಬಹಳಷ್ಟು ವಾಹನಗಳು ಇನ್ನೂ ಈ ಹೊಸ ನಂಬರ್ ಪ್ಲೇಟ್​ಗಳನ್ನು ಅಳವಡಿಸಿಲ್ಲ. ಹಲವು ವಾಹನಗಳು ಎಎನ್​ಪಿಆರ್ ನಂಬರ್ ಪ್ಲೇಟ್​​ಗಳನ್ನು ಅಳವಡಿಸಿದರೂ ಸರಿಯಾಗಿ ಕಾಣುವ ಜಾಗದಲ್ಲಿ ಹಾಕಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ