AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನ್-ಕಮರ್ಷಿಯಲ್ ವಾಹನಗಳಿಗೆ ಫಾಸ್​​ಟ್ಯಾಗ್ ಆಧಾರಿತ ವಾರ್ಷಿಕ ಪಾಸ್; ಬೆಲೆ 3,000 ರೂ; 200 ಟ್ರಿಪ್ ಮಿತಿ

Nitin Gadkari announces FASTag based annual pass scheme: ಕೇಂದ್ರ ಸರ್ಕಾರ ಶೀಘ್ರದಲ್ಲೇ ಫಾಸ್​ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ವಿತರಣೆ ಆರಂಭಿಸಲಿದೆ. ವಾಣಿಜ್ಯೇತರ ಖಾಸಗಿ ಕಾರು, ಜೀಪು, ವ್ಯಾನ್ ವಾಹನಗಳಿಗೆ ಈ ಪಾಸ್ ಕೊಡಲಾಗುತ್ತದೆ. ಒಂದು ವರ್ಷದ ವ್ಯಾಲಿಡಿಟಿ ಇರುವ ಈ ಪಾಸ್​​ನಲ್ಲಿ ಗರಿಷ್ಠ 200 ಟ್​ರಿಪ್ ಮಾಡಬಹುದು. ಆಗಸ್ಟ್ 15ರಿಂದ ಪಾಸ್ ವಿತರಣೆ ಆರಂಭವಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಾನ್-ಕಮರ್ಷಿಯಲ್ ವಾಹನಗಳಿಗೆ ಫಾಸ್​​ಟ್ಯಾಗ್ ಆಧಾರಿತ ವಾರ್ಷಿಕ ಪಾಸ್; ಬೆಲೆ 3,000 ರೂ; 200 ಟ್ರಿಪ್ ಮಿತಿ
ಫಾಸ್​​ಟ್ಯಾಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 18, 2025 | 2:12 PM

Share

ನವದೆಹಲಿ, ಜೂನ್ 18: ಬಸ್, ಮೆಟ್ರೋ ಇತ್ಯಾದಿಯಲ್ಲಿ ಇರುವಂತೆ ಹೆದ್ದಾರಿ ಟೋಲ್​​​ಗಳಿಗೂ ಪಾಸ್ ಸಿಸ್ಟಂ ಬರುತ್ತಿದೆ. ಫಾಸ್​ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಸಿಸ್ಟಂ (FASTag based annual pass) ಅನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಈ ಪಾಸ್ ಸ್ಕೀಮ್ ಅನ್ನು ಘೋಷಿಸಿದ್ದಾರೆ. ‘ಮೂರು ಸಾವಿರ ರೂ ಬೆಲೆಯ ಫಾಸ್​​ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದೇವೆ’ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಕಮರ್ಷಿಯಲ್ ವಾಹನಗಳಿಗೆ ಈ ಪಾಸ್ ಲಭ್ಯ ಇರೋದಿಲ್ಲ. ಕಮರ್ಷಿಯಲ್ ಅಲ್ಲದ ಕಾರ್, ಜೀಪ್, ವ್ಯಾನ್ ಇತ್ಯಾದಿ ಖಾಸಗಿ ವಾಹನಗಳಿಗೆ (Non commercial private cars) ಮಾತ್ರ ಇದು ಸಿಗುತ್ತದೆ. 2025ರ ಆಗಸ್ಟ್ 15ರಿಂದ ಈ ಫಾಸ್​​ಟ್ಯಾಗ್ ಪಾಸ್ ವಿತರಣೆ ನಡೆಯಲಿದೆ. ಒಂದು ಪಾಸ್ ಬೆಲೆ 3,000 ರೂ ಇರಲಿದೆ. ಪಾಸ್ ಆ್ಯಕ್ಟಿವೇಟ್ ಆಗಿ ಒಂದು ವರ್ಷದವರೆಗೆ ಸಿಂಧು (valid) ಇರುತ್ತದೆ. ಆದರೆ, 200 ಟ್ರಿಪ್ ಮಿತಿ ಇರುತ್ತದೆ.

ದೇಶದಲ್ಲಿ ಯಾವುದೇ ಭಾಗದಲ್ಲೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತವಾಗಿ ವಾಹನಗಳಲ್ಲಿ ಹೋಗಲು ಈ ವಾರ್ಷಿಕ ಪಾಸ್ ಅನುವು ಮಾಡಿಕೊಡುತ್ತದೆ. ಈ ಪಾಸ್ ಸ್ಕೀಮ್​​ನಲ್ಲಿ ವರ್ಷಕ್ಕೆ 200 ಟ್ರಿಪ್ ಮಿತಿ ಎಂದು ಹೇಳಲಾಗಿದೆ. ಆದರೆ, ಒಂದು ಟ್ರಿಪ್ ಎಂದರೆ ಏನೆಂದು ಸಚಿವರು ಇಲ್ಲಿ ಸ್ಪಷ್ಟಪಡಿಸಿಲ್ಲ. ಒಂದು ಟೋಲ್ ಪ್ಲಾಜಾ ದಾಟಿದರೆ ಅದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಾಗಬಹುದು.

ಇದನ್ನೂ ಓದಿ: ಗಮನಿಸಿ, ಐಸಿಐಸಿಐ ಬ್ಯಾಂಕ್​​ನ ಎಟಿಎಂ ಟ್ರಾನ್ಸಾಕ್ಷನ್, ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ

ರಾಜಮಾರ್ಗ್ ಯಾತ್ರಾ ಆ್ಯಪ್​​ನಲ್ಲಿ ಆ್ಯಕ್ಟಿವೇಶನ್ ಲಿಂಕ್

ಫಾಸ್​​ಟ್ಯಾಗ್ ಆಧಾರಿತವಾದ ವಾರ್ಷಿಕ ಪಾಸ್ ಅನ್ನು ಆನ್​​​ಲೈನ್​​ನಲ್ಲೇ ಪಡೆಯಬಹುದು. ರಾಜಮಾರ್ಗ್ ಯಾತ್ರಾ ಆ್ಯಪ್​ನಲ್ಲಿ, ಎನ್​​ಎಚ್​​ಎಐ ವೆಬ್​​​ಸೈಟ್, ಹಾಗು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ವೆಬ್​​ಸೈಟ್​​ಗಳಲ್ಲಿ ಶೀಘ್ರದಲ್ಲೇ ಈ ಪಾಸ್ ಪಡೆಯಲು ಲಿಂಕ್ ಪ್ರಕಟವಾಗಲಿದೆ. ಅಲ್ಲಿ ಪಾಸ್ ಅನ್ನು ಆ್ಯಕ್ಟಿವೇಟ್ ಮಾಡುವ ಮತ್ತು ರಿನಿವಲ್ ಮಾಡುವ ಅವಕಾಶ ನೀಡಲಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Wed, 18 June 25

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ