AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿನ ಮಾರುಕಟ್ಟೆ ತೆರೆದುಬಿಟ್ಟರೆ ಭಾರತೀಯ ರೈತರಿಗೆ ಲಕ್ಷ ಕೋಟಿ ನಷ್ಟ? ಎಸ್​ಬಿಐ ವರದಿಯಲ್ಲಿ ಆತಂಕ

SBI research report says, Indian farmers may lose Rs 1.03 lakh crore revenue: ಅಮೆರಿಕದೊಂದಿಗೆ ಮಾಡಿಕೊಳ್ಳಲಾಗುವ ವ್ಯಾಪಾರ ಒಪ್ಪಂದದಲ್ಲಿ ಡೈರಿ ಮಾರುಕಟ್ಟೆಯನ್ನು ಪೂರ್ಣವಾಗಿ ತೆರೆದಿಡಬಾರದು ಎನ್ನುವ ಸಲಹೆ ಇದೆ. ಒಂದು ವೇಳೆ ಈ ಸೆಕ್ಟರ್ ಅನ್ನು ಪೂರ್ಣವಾಗಿ ತೆರೆದುಬಿಟ್ಟರೆ ಭಾರತದ ಆರ್ಥಿಕತೆಗೆ 1.8 ಲಕ್ಷ ಕೋಟಿ ರೂ ನಷ್ಟವಾಗಬಹುದು. ಭಾರತೀಯ ರೈತರ ಆದಾಯದಲ್ಲಿ 1.03 ಲಕ್ಷ ಕೋಟಿ ರೂ ಖೋತಾ ಆಗಬಹುದ ಎಂದು ಎಸ್​​ಬಿಐನ ವರದಿಯೊಂದು ಹೇಳಿದೆ.

ಹಾಲಿನ ಮಾರುಕಟ್ಟೆ ತೆರೆದುಬಿಟ್ಟರೆ ಭಾರತೀಯ ರೈತರಿಗೆ ಲಕ್ಷ ಕೋಟಿ ನಷ್ಟ? ಎಸ್​ಬಿಐ ವರದಿಯಲ್ಲಿ ಆತಂಕ
ಡೈರಿ ಸೆಕ್ಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 15, 2025 | 2:13 PM

Share

ನವದೆಹಲಿ, ಜುಲೈ 15: ವ್ಯಾಪಾರ ಒಪ್ಪಂದ ಕುದುರಿಸಲು ಭಾರತ ಮತ್ತು ಅಮೆರಿಕ (India US trade deal) ಮಧ್ಯೆ ಮಾತುಕತೆ ನಿರಂತರವಾಗಿ ನಡೆಯುತ್ತಿದೆ. ಭಾರತದ ಡೈರಿ ಮಾರುಕಟ್ಟೆಯನ್ನು (Indian dairy market) ಪ್ರವೇಶಿಸಲು ಅಮೆರಿಕ ತುದಿಗಾಲಿನಲ್ಲಿ ನಿಂತಿದೆ. ಭಾರತೀಯರ ರೈತರ ಜೀವನಾಡಿಯಾದ ಡೈರಿ ಉದ್ಯಮವನ್ನು ಮುಕ್ತಗೊಳಿಸುವುದು ಭಾರತಕ್ಕೆ ಇಷ್ಟವಿಲ್ಲ. ಹೀಗಾಗಿ, ಒಪ್ಪಂದವು ತಾರ್ಕಿಕ ಅಂತ್ಯ ಮುಟ್ಟಲು ವಿಳಂಬವಾಗುತ್ತಿದೆ. ಒಂದು ವೇಳೆ, ಹೈನು ಮಾರುಕಟ್ಟೆಯನ್ನು ಭಾರತವು ಅಮೆರಿಕಕ್ಕೆ ತೆರೆದಿಟ್ಟರೆ ಏನಾಗುತ್ತದೆ, ಎಷ್ಟು ನಷ್ಟವಾಗುತ್ತದೆ? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿಯೊಂದರ ಪ್ರಕಾರ ಡೈರಿ ಸೆಕ್ಟರ್ ಅನ್ನು ಮುಕ್ತಗೊಳಿಸುವುದರಿಂದ ಭಾರತೀಯ ರೈತರಿಗೆ (Farmers) ಅಂದಾಜು 1.03 ಲಕ್ಷ ಕೋಟಿ ರೂ ನಷ್ಟವಾಗಬಹುದು. ದೇಶದ ಆದಾಯಕ್ಕೆ 1.8 ಲಕ್ಷ ಕೋಟಿ ರೂ ಸಂಚಕಾರ ಬೀಳಬಹುದು.

ಭಾರತದ ಡೈರಿ ಸೆಕ್ಟರ್ ಅನ್ನು ಅಮೆರಿಕಕ್ಕೆ ಮುಕ್ತಗೊಳಿಸಿದರೆ ಹಾಲಿನ ಆಮದು 25 ಮಿಲಿಯನ್ ಟನ್​ಗಳಷ್ಟು ಹೆಚ್ಚಬಹುದು. ಭಾರತದಲ್ಲಿ ಹಾಲಿನ ಬೆಲೆ ಶೇ. 15ರಷ್ಟಾದರೂ ಕಡಿಮೆ ಆಗಬಹುದು ಎಂದು ಈ ಎಸ್​ಬಿಐ ವರದಿ ಅಭಿಪ್ರಾಯಪಟ್ಟಿದೆ.

‘ದೇಶದ ಹಾಲಿನ ಬೆಲೆ ಶೇ. 15ರಷ್ಟು ಕಡಿಮೆ ಆಗಿಹೋದರೆ, ಒಟ್ಟು ಆದಾಯಕ್ಕೆ ಆಗುವ ನಷ್ಟ 1.8 ಲಕ್ಷ ಕೋಟಿ ರೂ. ಈ ಆದಾಯದಲ್ಲಿ ರೈತರ ಪಾಲು ಶೇ. 60 ಎಂದಾದಲ್ಲಿ ರೈತರಿಗೆ ಆಗಬಹುದಾದ ನಷ್ಟ 1.03 ಲಕ್ಷ ಕೋಟಿ ರೂ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಕನಾಮಿಕ್ ರಿಸರ್ಚ್ ಡಿಪಾರ್ಟ್ಮೆಂಟ್ ಸಿದ್ಧಪಡಿಸಿದ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಇದನ್ನೂ ಓದಿ
Image
ಸೌದಿಯಿಂದ ಭಾರತಕ್ಕೆ ರಸಗೊಬ್ಬರ ಪೂರೈಕೆ
Image
ಪಿಎಂ ಕಿಸಾನ್ ಹಣ ಸಿಗಲು ಮಾಡಬೇಕಾದ ಕೆಲಸಗಳಿವು
Image
ಡೈರಿ ಸೆಕ್ಟರ್ ರಕ್ಷಣೆಗೆ ಸರ್ಕಾರದ ಪ್ರಯತ್ನ ಯಾಕೆ?
Image
ಕೃಷಿ ಉತ್ಪಾದನೆ 12 ವರ್ಷದಲ್ಲಿ ಮೂರು ಪಟ್ಟು ಹೆಚ್ಚಳ

ಇದನ್ನೂ ಓದಿ: ಚೀನಾ ಬದಲು ಸೌದಿ ಅರೇಬಿಯಾ ದೇಶದಿಂದ ರಸಗೊಬ್ಬರ ಖರೀದಿಸಲಿದೆ ಭಾರತ

ಹಾಲಿನ ಬೆಲೆ ಶೇ. 15ರಷ್ಟು ಕಡಿಮೆಯಾದರೆ ಹಾಲಿಗೆ ಬೇಡಿಕೆ ಹೆಚ್ಚಬಹುದು. 14 ಮಿಲಿಯನ್ ಟನ್ ಹೆಚ್ಚುವರಿ ಹಾಲಿಗೆ ಬೇಡಿಕೆ ಬರಬಹುದು. ಅದೇ ವೇಳೆ ಹಾಲಿನ ಸರಬರಾಜಿನಲ್ಲಿ 11 ಮಿಲಿಯನ್ ಟನ್ ಹಾಲು ಕಡಿಮೆಗೊಳ್ಳಬಹುದು. ಈ 25 ಮಿಲಿಯನ್ ಟನ್ ಹಾಲಿನ ಅವಶ್ಯಕತೆಯನ್ನು ಆಮದು ಮೂಲಕ ಭರಿಸಬೇಕಾಗುತ್ತದೆ ಎಂದು ಈ ಎಸ್​​ಬಿಐ ವರದಿಯಲ್ಲಿ ಎಚ್ಚರಿಸಲಾಗಿದೆ.

ಅಮೆರಿಕದಲ್ಲಿ ಡೈರಿ ಉದ್ಯಮಕ್ಕೆ ಭಾರೀ ಸಬ್ಸಿಡಿಗಳನ್ನು ನೀಡಲಾಗುತ್ತದೆ. ಹೀಗಾಗಿ, ಕಡಿಮೆ ಬೆಲೆಗೆ ಹಾಲಿನ ಉತ್ಪನ್ನಗಳು ಸರಬರಾಜುತ್ತದೆ. ಇದು ಭಾರತೀಯ ರೈತರಿಗೆ ಮಾರಕವಾಗಬಹುದು. ಅದರಲ್ಲೂ ಕೆಲವೇ ಹಸುಗಳನ್ನು ಸಾಕಿ, ಅದರ ಹಾಲು ನಂಬಿಕೊಂಡೇ ಬದುಕು ನಡೆಸುತ್ತಿರುವ ಸಣ್ಣ ರೈತರಿಗೆ ಹೊಡೆತ ಬೀಳಬಹುದು ಎಂದು ಭಾವಿಸಲಾಗಿದೆ.

ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್​​ಗೆ ‘ಡೈರಿ’ ತಡೆ; ಅಮೆರಿಕದ ಹಾಲು ಭಾರತಕ್ಕೆ ಬಂದರೆ ಹೇಗೆ?

ಅಮೆರಿಕದಿಂದ ಕುಲಾಂತರಿ ತಳಿ ಆಹಾರದ ಬರುವ ಅಪಾಯ

ಅಮೆರಿಕದ ಡೈರಿ ಸೆಕ್ಟರ್​ನಲ್ಲಿ ಕುಲಾಂತರಿ ತಳಿ ಹಾಗು ಗ್ರೋತ್ ಹಾರ್ಮೋನುಗಳ ಬಳಕೆ ವ್ಯಾಪಕವಾಗಿದೆ. ಅಲ್ಲಿಂದ ಭಾರತಕ್ಕೆ ಕುಲಾಂತರಿ ಆಹಾರ ಸಾಕಷ್ಟು ಹರಿದುಬರುವ ಅಪಾಯ ಇದೆ ಎಂಬುದು ಇನ್ನೊಂದು ಗಮನಾರ್ಹ ಎಚ್ಚರಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ