AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali Shares: ಬೋನಸ್ ಷೇರು ನೀಡಲು ನಿರ್ಧಾರ; ಝರ್ರನೆ ಏರಿದ ಪತಂಜಲಿ ಷೇರುಬೆಲೆ

Patanjali Foods share price rises: ಪತಂಜಲಿ ಫೂಡ್ಸ್ ಷೇರುಬೆಲೆ ಇವತ್ತು ಮಂಗಳವಾರ 1,673 ರೂನಿಂದ 1,739 ರೂಗೆ ಏರಿದೆ. ಜುಲೈ 17ರಂದು ಬೋರ್ಡ್ ಮೀಟಿಂಗ್​ನಲ್ಲಿ ಬೋನಸ್ ಷೇರು ಬಿಡುಗಡೆ ಘೋಷಿಸಲಾಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇದು ನಡೆದಿದೆ. ಬೋನಸ್ ಷೇರು ವಿತರಣೆ ನಿರ್ಧಾರದ ಬಳಿಕ ಪತಂಜಲಿ ಫೂಡ್ಸ್ ಷೇರಿಗೆ ಬೇಡಿಕೆ ಹೆಚ್ಚಾಗಿದೆ.

Patanjali Shares: ಬೋನಸ್ ಷೇರು ನೀಡಲು ನಿರ್ಧಾರ; ಝರ್ರನೆ ಏರಿದ ಪತಂಜಲಿ ಷೇರುಬೆಲೆ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 15, 2025 | 7:41 PM

Share

ನವದೆಹಲಿ, ಜುಲೈ 15: ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಫೂಡ್ಸ್ ಸಂಸ್ಥೆಯ ಷೇರುಬೆಲೆ (Patanjali Foods share price) ಇವತ್ತು ಮಂಗಳವಾರ ಸಖತ್ತಾಗಿ ಏರಿದೆ. ಸೋಮವಾರ ದಿನಾಂತ್ಯದಲ್ಲಿ 1,673.70 ರೂ ಇದ್ದ ಅದರ ಷೇರುಬೆಲೆ ಇವತ್ತು 65 ರೂ ಹೆಚ್ಚಳ (ಶೇ. 3.90) ಆಗಿ 1,739 ರೂ ಮುಟ್ಟಿದೆ. ಇವತ್ತು ಒಂದು ಹಂತದಲ್ಲಿ ಬೆಲೆ 1,746 ರೂವರೆಗೂ ಹೋಗಿತ್ತು. ಅದರ ಮಾರುಕಟ್ಟೆ ಸಂಪತ್ತು ಕೂಡ 6,316 ಕೋಟಿ ರೂಗೆ ಹಿಗ್ಗಿದೆ.

ಬೋನಸ್ ಷೇರು ವಿತರಿಸುವುದಾಗಿ ಘೋಷಣೆ

ಪತಂಜಲಿ ಫೂಡ್ಸ್ ಕಂಪನಿಯ ಬೋರ್ಡ್ ಮೀಟಿಂಗ್ ಜುಲೈ 17, ಗುರುವಾರದಂದು ಇದೆ. ಅಂದು ಬೋನ್ ಷೇರುಗಳನ್ನು ವಿತರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅದರ ಬೆನ್ನಲ್ಲೇ ಪತಂಜಲಿ ಷೇರುಗಳಿಗೆ ಭರ್ಜರಿ ಡಿಮ್ಯಾಂಡ್ ಸಿಕ್ಕಿದೆ. ಕಂಪನಿಯಿಂದ ಬೋನಸ್ ಷೇರುಗಳ ವಿತರಣೆ ಆಗುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಷೇರುಮಾರುಕಟ್ಟೆ ಮೇಲೆ ಬಾಂಬ್ ಬೆದರಿಕೆ; ‘ಕಾಮ್ರೇಡ್ ಪಿಣರಾಯಿ ವಿಜಯನ್’ ಹೆಸರಿಂದ ಬಂದ ಇಮೇಲ್

ಬೋನಸ್ ಷೇರುಗಳಿಂದ ಏನು ಪ್ರಯೋಜನ?

ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಹರಿವು ಹೆಚ್ಚಲು ಮತ್ತು ಮಾರುಕಟ್ಟೆ ಬಂಡವಾಳವನ್ನು ಹಿಗ್ಗಿಸಲು ಬೋನಸ್ ಷೇರುಗಳನ್ನು ವಿತರಿಸಲಾಗುತ್ತದೆ. ಎಫ್​ಎಂಸಿಜಿ ಮಾರುಕಟ್ಟೆಯಲ್ಲಿ ಪತಂಜಲಿ ಸಂಸ್ಥೆ ಹಂತ ಹಂತವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದು, ಬೋನಸ್ ಷೇರುಗಳ ಮೂಲಕ ಸ್ಟಾಕ್ ಮಾರ್ಕೆಟ್​ನಲ್ಲೂ ಕಂಪನಿ ಛಾಪು ಮೂಡಿಸುತ್ತಿದೆ.

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಪತಂಜಲಿ ಆಯುರ್ವೇದ ಸಂಸ್ಥೆ ರುಚಿ ಸೋಯಾ ಸಂಸ್ಥೆಯನ್ನು ಖರೀದಿಸಿತು. 2022ರ ಜೂನ್​​ನಲ್ಲಿ ರುಚಿ ಸೋಯಾವನ್ನು ಪತಂಜಲಿ ಫೂಡ್ಸ್ ಎಂದು ಹೆಸರು ಬದಲಿಸಿತು.

ಇದನ್ನೂ ಓದಿ: ಎಫ್​ಎಂಸಿಜಿ ಮಾರುಕಟ್ಟೆಯ ಕಿಂಗ್ ಮಾತ್ರವಲ್ಲ, ಇತರ ಕ್ಷೇತ್ರಗಳಲ್ಲೂ ಮಿಂಚುತ್ತಿದೆ ಪತಂಜಲಿ

ಪತಂಜಲಿ ಫೂಡ್ಸ್ 2022ರಿಂದಲೂ ತನ್ನ ಷೇರುದಾರರಿಗೆ ಡಿವಿಡೆಂಡ್ ನೀಡುತ್ತಾ ಬಂದಿದೆ. 2022ರ ಸೆಪ್ಟೆಂಬರ್, 2023ರ ಸೆಪ್ಟೆಂಬರ್​​ನಲ್ಲಿ ಲಾಭಾಂಶವನ್ನು ಪ್ರಕಟಿಸಿತ್ತು. 2024ರಲ್ಲಿ ಪ್ರತಿ ಶೇರಿಗೆ 6 ರೂ ಡಿವಿಡೆಂಡ್ ಕೊಟ್ಟಿತು. 2024ರ ನವೆಂಬರ್​​ನಲ್ಲಿ 8 ರೂ ಮಧ್ಯಂತರ ಡಿವಿಡೆಂಡ್ ಪ್ರಕಟಿಸಿತು. ಈಗ 2025ರಲ್ಲೂ ಅದು ಡಿವಿಡೆಂಡ್ ಪ್ರಕಟಿಸುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ