‘ಬ್ಯಾಂಗಲ್ ಬಂಗಾರಿ ಹಾಡು ಸಿಎಂ ತನಕ ತಲುಪಿದೆ’: ಯುವ ರಾಜ್ಕುಮಾರ್
ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಚಿತ್ರ ರಿಲೀಸ್ಗೆ ಸಜ್ಜಾಗಿದೆ. ಈ ಸಿನಿಮಾದ ‘ಬ್ಯಾಂಗಲ್ ಬಂಗಾರಿ’ ಸಾಂಗ್ ಸೂಪರ್ ಹಿಟ್ ಆಗಿದೆ. ಚರಣ್ ರಾಜ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ‘ಎಕ್ಕ’ ಸಿನಿಮಾದ ತಂಡದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು.
ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಸಿನಿಮಾ (Ekka Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ‘ಬ್ಯಾಂಗಲ್ ಬಂಗಾರಿ’ (Bangle Bangari) ಹಾಡು ಸೂಪರ್ ಹಿಟ್ ಆಗಿದೆ. ಚರಣ್ ರಾಜ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ‘ಎಕ್ಕ’ ಚಿತ್ರತಂಡದವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆ ಬಗ್ಗೆ ಟಿವಿ9 ಸಂದರ್ಶನದಲ್ಲಿ ಯುವ ರಾಜ್ಕುಮಾರ್ ಅವರು ಮಾತನಾಡಿದ್ದಾರೆ. ‘ಮುಖ್ಯಮಂತ್ರಿಗಳ ತನಕ ಸಾಂಗ್ ತಲುಪಿದೆ. ಅವರ ತಂಡದವರು ಅವರಿಗೆ ಹಾಡು ತೋರಿಸಿದ್ದಾರೆ ಅನಿಸುತ್ತದೆ. ಅವರು ನಮಗೆ ತಂಡಕ್ಕೆ ಶುಭ ಕೋರಿದ್ದು ತುಂಬಾ ಖುಷಿ ಆಯಿತು’ ಎಂದು ಯುವ ರಾಜ್ಕುಮಾರ್ (Yuva Rajkumar) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.