ಗಂಡನನ್ನು ನದಿಗೆ ತಳ್ಳಿ ಕೊಲೆ ಯತ್ನ ಪ್ರಕರಣ: ಖಚಿತವಾಗಿ ಕೊಲೆ ಯತ್ನ ನಡೆದಿದೆ ಎನ್ನುತ್ತಾರೆ ಸಂಬಂಧಿಕರು
ಗದ್ದೆಮ್ಮಳಿಗೆ ತಾತಪ್ಪನನ್ನು ಮದುವೆಯಾಗುವ ಮನಸ್ಸು ಇಲ್ಲದೇ ಹೋಗಿದ್ದರೆ ಮದುವೆಗೆ ಮೊದಲೇ ಸ್ಪಷ್ಟಪಡಿಸಬೇಕಿತ್ತು. ಗಂಡನ ಮನೆಯವರು ಪೊಲೀಸ್ ದೂರು ನೀಡದೆ ಆಕೆಯನ್ನು ಕ್ಷಮಿಸಿ, ಡಿವೋರ್ಸ್ ಪಡೆದುಕೊಂಡು ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಿದ್ದು ಅಕೆಯ ಅದೃಷ್ಟವಲ್ಲದೆ ಮತ್ತೇನೂ ಅಲ್ಲ. ಈಗಾಗಲೇ ಮದುವೆಯಾಗಿ ಕೊಲೆ ಯತ್ನದ ಅರೋಪವನ್ನೂ ಹೊತ್ತಿರುವ ಆಕೆ ಪುನರ್ವಿವಾಹ ಸುಲಭವಲ್ಲ, ಆಕೆ ಯಾರನ್ನಾದರೂ ಪ್ರೀತಿಸುತ್ತಿದ್ದರೆ ಆ ವಿಷಯ ಬೇರೆ.
ರಾಯಚೂರು, ಜುಲೈ 15: ಗಂಡನನ್ನು ಗುರ್ಜಾಪುರ ಸೇತುವೆಯ ಮೇಲೆ ನಿಲ್ಲಿಸಿ ಫೋಟೋ ಕ್ಲಿಕ್ಕಿಸುವ ನೆಪ ಕೃಷ್ಣಾ ನದಿಗೆ ತಳ್ಳಿ ಪತ್ನಿಯು ಕೊಲೆಗೆ ಯತ್ನ ನಡೆಸಿದಳೆಂಬ ಅರೋಪದ ಸುದ್ದಿ ಮತ್ತು ಗಂಡ ಬದುಕುಳಿದ ವಿಡಿಯೋ ಸಾಕಷ್ಟು ವೈರಲ್ ಅಗಿದೆ. ರಾಯಚೂರು ತಾಲೂಕಿನಲ್ಲಿ ನಡೆದ ಪ್ರಕರಣವು ನದಿಗೆ ತಳ್ಳಿಸಿಕೊಂಡ ಗಂಡ ತಾತಪ್ಪ ಮತ್ತು ತಳ್ಳಿದ ಆರೋಪ ಹೊತ್ತಿರುವ ಪತ್ನಿ ಗದ್ದೆಮ್ಮ ರಾಜಿ ಸಂಧಾನದ ನಂತರ ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆಯಲು ನಿರ್ಧರಿಸುವ ಮೂಲಕ ಅಂತ್ಯ ಕಂಡಿದೆ. ನಮ್ಮ ರಾಯಚೂರು ವರದಿಗಾರನೊಂದಿಗೆ ಮಾತಾಡಿರುವ ತಾತಪ್ಪನ ಸಹೋದರರು ಡಿವೋರ್ಸ್ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ತಮ್ಮಲ್ಲಿರುವ ಕೆಲವು ಫೋಟೋಗಳನ್ನು ತೋರಿಸುವ ಅವರು ಕೊಲೆಗೆ ಯತ್ನ ನಡೆದಿರುವುದು ಖಚಿತ ಎನ್ನುತ್ತಾರೆ.
ಇದನ್ನೂ ಓದಿ: ಗಂಡನನ್ನು ಕೊಲ್ಲುವುದು ಹೇಗೆಂದು ಯೂಟ್ಯೂಬ್ನಲ್ಲಿ ಹುಡುಕಾಟ; ಕೊನೆಗೆ ಪತ್ನಿ ಆಯ್ಕೆ ಮಾಡಿಕೊಂಡ ವಿಧಾನವಿದು!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

