Akshaya Tritiya 2022: ಅಕ್ಷಯ ತೃತೀಯದಲ್ಲಿ ಆಭರಣ ಖರೀದಿಸಲು ಇಲ್ಲಿದೆ ಶುಭ ಮುಹೂರ್ತ

Akshaya Tritiya Festival 2022: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಇಂದು ಆಭರಣಕೊಂಡರೆ ಅದೃಷ್ಟ, ಸಮೃದ್ಧಿ ತರುತ್ತದೆ ಎಂಬ ನಂಬಿಕೆ ಇದೆ.

Akshaya Tritiya 2022: ಅಕ್ಷಯ ತೃತೀಯದಲ್ಲಿ ಆಭರಣ ಖರೀದಿಸಲು ಇಲ್ಲಿದೆ ಶುಭ ಮುಹೂರ್ತ
ಚಿನ್ನದ ಬೆಲೆ
Follow us
TV9 Web
| Updated By: Digi Tech Desk

Updated on:May 03, 2022 | 9:12 AM

ಈ ಬಾರಿ ಇಂದು (ಮೇ 03) ಅಕ್ಷಯ ತೃತೀಯವನ್ನು (Akshaya Tritiya) ಆಚರಿಸಲಾಗುತ್ತಿದೆ. ಈ ದಿನದಂದು ಆಭರಣ ಕೊಳ್ಳುವುದೇ ಸಂಪ್ರದಾಯವಾಗಿ ಬಿಟ್ಟಿದೆ. ಈ ದಿನದಂದೆ ಚಿನ್ನ (Gold), ಬೆಳ್ಳಿ (Silver) ಖರೀದಿ ಮಾಡಬೇಕು ಅಂತ ಕಾದು ಕೂತು ಖರೀದಿಸುತ್ತಾರೆ. ಆಭರಣ ಕೊಳ್ಳುವುದಕ್ಕೆ ಇಂದು ಶುಭವಾದ ದಿನ. ಹೀಗಾಗಿ ಆಭರಣ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿರುತ್ತದೆ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಇಂದು ಆಭರಣಕೊಂಡರೆ ಅದೃಷ್ಟ, ಸಮೃದ್ಧಿ ತರುತ್ತದೆ ಎಂಬ ನಂಬಿಕೆ ಇದೆ.

ಸಂಸ್ಕೃತದಲ್ಲಿ ಅಕ್ಷಯ ಅಂದರೆ ಸಂತೋಷ, ಯಶಸ್ಸು, ಮತ್ತು ಸಮೃದ್ಧಿ ಎಂದಿಗೂ ಕಡಿಮೆಯಾಗಲ್ಲ ಅಂತ. ತೃತೀಯ ಅಂದರೆ ಮೂರು. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಹಬ್ಬವನ್ನು ತೃತೀಯ ತಿಥಿ ಅಥವಾ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ತೃತೀಯ ದಿನದಂದು ಏನನ್ನೂ ಖರೀದಿಸಿದರೂ ಶಾಶ್ವತವಾಗಿ ಉಳಿಯುತ್ತದೆ ಎಂಬ ನಂಬಿಕೆ ಹೆಚ್ಚಿದೆ. ಇದೇ ಕಾರಣಕ್ಕೆ ಅಕ್ಷಯ ತೃತೀಯದಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿಸುವುದು ಸಂಪ್ರಾಯವಾಗಿದೆ. ಜೊತೆಗೆ ಹಲವರು ಈ ದಿನದಂದು ಆಸ್ತಿ, ವಾಹನಗಳನ್ನ ಖರೀದಿಸಲು ಮುಂದಾಗುತ್ತಾರೆ.

ಅಕ್ಷಯ ತೃತೀಯ ಇತಿಹಾಸ ಮತ್ತು ಮಹತ್ವ: ಈ ಶುಭ ದಿನದ ಹಿಂದೆ ಹಲವಾರು ಕಥೆಗಳು ಇವೆ. ಹಿಂದೂ ಪುರಾಣಗಳ ಪ್ರಕಾರ, ಇಂದು ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಜನ್ಮದಿನ. ಈ ದಿನದಂದು ಸುದಾಮನು ತನ್ನ ಸ್ನೇಹಿತನಾದ ಶ್ರೀಕೃಷ್ಣನನ್ನು ಭೇಟಿಯಾದನೆಂದು ನಂಬಲಾಗಿದೆ.

ವಿವಿಧ ನಗರಗಳಲ್ಲಿ ಚಿನ್ನವನ್ನು ಖರೀದಿಸಲು ಶುಭ ಸಮಯಗಳು: ಇಂದು ಆಭರಣಕೊಳ್ಳುವವರು ಈ ಶುಭ ಮುಹೂರ್ತದಲ್ಲಿ ಖರೀದಿಸಿ. ಬೆಳ್ಳಿಗೆ 5.39 ರಿಂದ ಮಧ್ಯಾಹ್ನ 12.18ರ ವರೆಗೆ ಆಭರಣ ಖರೀದಿ ಮಾಡಲು ಒಳ್ಳೆಯ ಮುಹೂರ್ತ ಇದೆ. ಇಂದು 6 ಗಂಟೆ 39 ನಿಮಿಷಗಳು ಕಾಲವಿದೆ. ಈ ಅವಧಿಯಲ್ಲೆ ಚಿನ್ನ, ಬೆಳ್ಳಿ ಕೊಳ್ಳಿ. ವಿವಿಧ ನಗರಗಳಲ್ಲಿ ಆಭರಣಕೊಳ್ಳಲು ಇರುವ ಶುಭ ಗಳಿಗೆಯನ್ನು ಇಲ್ಲಿ ತಿಳಿಸಲಾಗಿದೆ.

* ಬೆಂಗಳೂರು: ಬೆಳ್ಳಿಗ್ಗೆ 5.58ರಿಂದ ಮಧ್ಯಾಹ್ನ 12.17

* ದೆಹಲಿ: ಬೆಳ್ಳಿಗ್ಗೆ 5.39ರಿಂದ ಮಧ್ಯಾಹ್ನ 12.18

* ಮುಂಬೈ: ಬೆಳಿಗ್ಗೆ 6.10ರಿಂದ ಮಧ್ಯಾಹ್ನ 12.35

* ಕೋಲ್ಕತ್ತಾ: ಬೆಳಗ್ಗೆ 5.10ರಿಂದ ಬೆಳಿಗ್ಗೆ 11.34

* ಚೆನ್ನೈ: ಬೆಳಿಗ್ಗೆ 5.48ರಿಂದ ಮಧ್ಯಾಹ್ನ 12.06

* ಹೈದರಾಬಾದ್: ಬೆಳಿಗ್ಗೆ 5.49ರಿಂದ ಮಧ್ಯಾಹ್ನ 12.13

* ಪುಣೆ: ಬೆಳಿಗ್ಗೆ 6.06ರಿಂದ ಮಧ್ಯಾಹ್ನ 12.32

ಇದನ್ನೂ ಓದಿ

Shreyas Iyer: ಸತತ 5 ಸೋಲುಗಳ ಬಳಿಕ ಗೆಲುವು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು ಕೇಳಿ

ಬರ್ತ್​ಡೇಗೂ ಒಂದು ದಿನ ಮೊದಲು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮೇಘನಾ ರಾಜ್

Published On - 8:53 am, Tue, 3 May 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್