- Kannada News Photo gallery Meghana Raj Birthday Meghana Married Chiranjeevi Sarja One day before her birthday
ಬರ್ತ್ಡೇಗೂ ಒಂದು ದಿನ ಮೊದಲು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮೇಘನಾ ರಾಜ್
ಇಂದು (ಮೇ 3) ಮೇಘನಾ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದಲೂ ಶುಭಾಶಯಗಳು ಬರುತ್ತಿವೆ.
Updated on: May 03, 2022 | 8:41 AM

ಇಂದು (ಮೇ 3) ಮೇಘನಾ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದಲೂ ಶುಭಾಶಯಗಳು ಬರುತ್ತಿವೆ.

ಮೇಘನಾ ರಾಜ್ ಅವರು ಸ್ಯಾಂಡಲ್ವುಡ್ ಹಾಗೂ ಮಲಯಾಳಂನಲ್ಲಿ ಹೆಚ್ಚು ಚಿರಪರಿಚಿತರಾದವರು. ಅವರು ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಅವರ ಜೀವನ ಮತ್ತೆ ಸಮಸ್ಥಿತಿಗೆ ಮರಳುತ್ತಿದೆ. ಮೇಘನಾ ಪ್ರೀತಿಸಿ ಮದುವೆ ಆದ ಚಿರಂಜೀವಿ ಸರ್ಜಾ ಅವರು ಇಹಲೋಕ ತ್ಯಜಿಸಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಈ ನೋವನ್ನು ಮೇಘನಾಗೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

2009ರಲ್ಲಿ ತೆರೆಗೆ ಬಂದ ತೆಲುಗು ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು ಮೇಘನಾ ರಾಜ್. ಇದಾದ ಬಳಿಕ 2010ರ ‘ಪುಂಡ’ ಚಿತ್ರದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಯವಾದರು. ನಂತರ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಮೇಘನಾ ಭೇಷ್ ಎನಿಸಿಕೊಂಡರು. 2013ರಲ್ಲಿ ತೆರೆಗೆ ಬಂದ ‘ರಾಜ ಹುಲಿ’ ಚಿತ್ರದಲ್ಲಿ ಯಶ್ಗೆ ಜತೆಯಾಗಿ ಮೇಘನಾ ನಟಿಸಿದರು. ಈ ಸಿನಿಮಾದಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚಿತು. ನಂತರ ಅವರಿಗೆ ಕನ್ನಡದಿಂದ ಹೆಚ್ಚು ಆಫರ್ಗಳು ಬಂದವು.

2018ರ ಏಪ್ರಿಲ್ 29 ಹಾಗೂ ಮೇ 2ರಂದು ಅನುಕ್ರಮವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು.

ಮೇ 2ರಂದು ತಮ್ಮ ಮದುವೆ ಆ್ಯನಿವರ್ಸರಿಯನ್ನು ಮೇಘನಾ ನೆನಪಿಸಿಕೊಂಡಿದ್ದಾರೆ.









