AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಗೃಹಪ್ರವೇಶದ ಆಹ್ವಾನ ಪತ್ರಿಕೆ ನೀಡಿ ಮರಳುತ್ತಿದ್ದ ತಂದೆ-ಮಗಳಿಗೆ ಕಾರು ಡಿಕ್ಕಿ; ತಂದೆ ಸಾವು, ಮಗಳು ಗಂಭೀರ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ದಾರುಣ ಅಪಘಾತ ಸಂಭವಿಸಿದೆ. ಗೃಹಪ್ರವೇಶದ ಆಹ್ವಾನ ಪತ್ರ ನೀಡುತ್ತಿದ್ದ ತಂದೆ-ಮಗಳ ಬೈಕ್‌ಗೆ ವೇಗದ ಕಾರು ಡಿಕ್ಕಿ ಹೊಡೆದಿದೆ. ಪ್ರಕಾಶ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು, ಪುತ್ರಿ ಶ್ರುತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಕುಟುಂಬದ ಸಂಭ್ರಮವನ್ನು ದುಃಖಕ್ಕೆ ತಿರುಗಿಸಿದೆ. ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಗೃಹಪ್ರವೇಶದ ಆಹ್ವಾನ ಪತ್ರಿಕೆ ನೀಡಿ ಮರಳುತ್ತಿದ್ದ ತಂದೆ-ಮಗಳಿಗೆ ಕಾರು ಡಿಕ್ಕಿ; ತಂದೆ ಸಾವು, ಮಗಳು ಗಂಭೀರ
ಅಪ್ಪ - ಮಗಳು
TV9 Web
| Edited By: |

Updated on: Nov 29, 2026 | 10:34 PM

Share

ಹಾಸನ , ನ.29: ಮನೆಯ ಗೃಹಪ್ರವೇಶದ ಆಹ್ವಾನ ಪತ್ರಿಕೆಯನ್ನು ಸಂಬಂಧಿಕರಿಗೆ ನೀಡಿ ಖುಷಿಯಿಂದ ಮನೆಗೆ ಹಿಂದಿರುಗುತ್ತಿದ್ದ ತಂದೆ ಮತ್ತು ಮಗಳ ಬೈಕ್‌ಗೆ ಅತಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ತಂದೆ ಸ್ಥಳದಲ್ಲೇ ಮೃತಪಟ್ಟು, ಮಗಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜೋಗಿಪುರ ಗೇಟ್ ಬಳಿ ನಡೆದಿದೆ. ಮೃತರನ್ನು ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಗ್ರಾಮದ ನಿವಾಸಿ ಪ್ರಕಾಶ್ (58) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರ ಪುತ್ರಿ ಶ್ರುತಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕಾಶ್ ಅವರು ತಮ್ಮ ಪುತ್ರಿ ಶ್ರುತಿ ಜೊತೆಗೂಡಿ ಮನೆಯ ಗೃಹಪ್ರವೇಶ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ನೀಡಿ ಬೈಕ್‌ನಲ್ಲಿ ಸ್ವಗ್ರಾಮ ಬೇಡಿಗನಹಳ್ಳಿಯತ್ತ ಹಿಂದಿರುಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 75ರ (NH-75) ಜೋಗಿಪುರ ಗೇಟ್ ಬಸ್ ನಿಲ್ದಾಣದ ಎದುರು ಬೈಕ್ ಸಾಗುತ್ತಿದ್ದಾಗ, ಅತಿ ವೇಗವಾಗಿ ಬಂದ KA-13-Z-0995 ನೋಂದಣಿ ಸಂಖ್ಯೆಯ ಕಿಯಾ (Kia) ಕಾರು ಬೈಕ್‌ಗೆ ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಪ್ರಕಾಶ್ ಅವರು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪುತ್ರಿ ಶ್ರುತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಜೀವಾವಧಿ ಕೈದಿ ಪರಾರಿ: ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ

ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಕಿಯಾ ಕಾರು ಚಾಲಕನ ವಿರುದ್ಧ ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗೃಹಪ್ರವೇಶದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈ ದುರ್ಘಟನೆಯಿಂದಾಗಿ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಬಿಗ್​ಬಾಸ್: ‘ಜುಂ ಜುಂ ಮಾಯ’ ಹಾಡಿಗೆ ತಾಂಡವ್ ಸಖತ್ ಸ್ಟೆಪ್ಪು
ಬಿಗ್​ಬಾಸ್: ‘ಜುಂ ಜುಂ ಮಾಯ’ ಹಾಡಿಗೆ ತಾಂಡವ್ ಸಖತ್ ಸ್ಟೆಪ್ಪು
ನಾನು ಕೆಪಿಸಿಸಿ ಅಧ್ಯಕ್ಷನಾಗುವವನು, ಸಿಎಂ ಆಗುವ ಕ್ಯಾಂಡಿಡೇಟ್: ಮಹದೇವಪ್ಪ
ನಾನು ಕೆಪಿಸಿಸಿ ಅಧ್ಯಕ್ಷನಾಗುವವನು, ಸಿಎಂ ಆಗುವ ಕ್ಯಾಂಡಿಡೇಟ್: ಮಹದೇವಪ್ಪ
ದೇವರ ಹಳೆಯ ಫೋಟೋಗಳನ್ನು ಕಸಕ್ಕೆ ಎಸೆಯುವ ಮುನ್ನ ಈ ವಿಡಿಯೋ ನೋಡಿ
ದೇವರ ಹಳೆಯ ಫೋಟೋಗಳನ್ನು ಕಸಕ್ಕೆ ಎಸೆಯುವ ಮುನ್ನ ಈ ವಿಡಿಯೋ ನೋಡಿ
2 ಹಸು ವಿತರಣೆ ಭರವಸೆಯ ಹಿಂದಿನ ಅಸಲಿ ಗೇಮ್‌ಪ್ಲಾನ್ ಏನು ಗೊತ್ತಾ?
2 ಹಸು ವಿತರಣೆ ಭರವಸೆಯ ಹಿಂದಿನ ಅಸಲಿ ಗೇಮ್‌ಪ್ಲಾನ್ ಏನು ಗೊತ್ತಾ?
ಗರ್ಭಿಣಿ ಮಹಿಳೆಯರಂತೆಯೇ ಎರಡು ಹಸುಗಳಿಗೆ ಸೀಮಂತ ಸಂಭ್ರಮ
ಗರ್ಭಿಣಿ ಮಹಿಳೆಯರಂತೆಯೇ ಎರಡು ಹಸುಗಳಿಗೆ ಸೀಮಂತ ಸಂಭ್ರಮ
ಬೆಂಗಳೂರಲ್ಲಿ 191 ಮಸಾಜ್, ಸ್ಪಾಗಳ ಮೇಲೆ ಪೊಲೀಸರ ದಿಢೀರ್​ ದಾಳಿ
ಬೆಂಗಳೂರಲ್ಲಿ 191 ಮಸಾಜ್, ಸ್ಪಾಗಳ ಮೇಲೆ ಪೊಲೀಸರ ದಿಢೀರ್​ ದಾಳಿ
ನನ್ನ ಹೆಣವೂ 7.59 ಲಕ್ಷ ಹಣ ಪಾವತಿಸುವುದಿಲ್ಲ; ಅಡ್ಡಂಡ ಕಾರ್ಯಪ್ಪ ಆಕ್ರೋಶ
ನನ್ನ ಹೆಣವೂ 7.59 ಲಕ್ಷ ಹಣ ಪಾವತಿಸುವುದಿಲ್ಲ; ಅಡ್ಡಂಡ ಕಾರ್ಯಪ್ಪ ಆಕ್ರೋಶ
ಗಗನ್ ಮಾತಿನಿಂದ ಬೇಸರ; ಸುದೀಪ್ ಎದುರು ಕಣ್ಣೀರು ಹಾಕಿದ ತಾಂಡವ್ ರಾಮ್
ಗಗನ್ ಮಾತಿನಿಂದ ಬೇಸರ; ಸುದೀಪ್ ಎದುರು ಕಣ್ಣೀರು ಹಾಕಿದ ತಾಂಡವ್ ರಾಮ್
ಮಲೆನಾಡಿಗೆ ಬಂದಿಳಿದ ನಟಿ ತ್ರಿಷಾ ಕೃಷ್ಣನ್: ತೀರ್ಥಹಳ್ಳಿ ಶೂಟಿಂಗ್
ಮಲೆನಾಡಿಗೆ ಬಂದಿಳಿದ ನಟಿ ತ್ರಿಷಾ ಕೃಷ್ಣನ್: ತೀರ್ಥಹಳ್ಳಿ ಶೂಟಿಂಗ್
ಡಿಲಿಮಿಟೇಶನ್ ಬಿಲ್ ಫ್ರಾಡ್ ಎಂದ ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ ಕೌಂಟರ್
ಡಿಲಿಮಿಟೇಶನ್ ಬಿಲ್ ಫ್ರಾಡ್ ಎಂದ ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ ಕೌಂಟರ್