AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ಮೇಲೆ ಯುದ್ಧ ಸಾರಿದ 4 ತಿಂಗಳ ಅವಧಿಯಲ್ಲಿ ರಷ್ಯಾದ ರಕ್ಷಣಾ ವೆಚ್ಚ ಶೇಕಡಾ 40ರಷ್ಟು ಹೆಚ್ಚಾಗಿದೆ

ಏಪ್ರಿಲ್ ತಿಂಗಳೊಂದರಲ್ಲೇ ರಷ್ಯಾ 628 ಬಿಲಿಯನ್ ರೂಬಲ್ ಗಳಷ್ಟು (ಸುಮಾರು 750 ಕೋಟಿ ರೂ.) ಹಣವನ್ನು ತನ್ನ ಸೇನೆಯ ಮೇಲೆ ಖರ್ಚು ಮಾಡಿದ್ದು ಕಳೆದ ವರ್ಷದ ಏಪ್ರಿಲ್ ಗೆ ಹೋಲಿಸಿದರೆ ಇದು ಶೇಕಡಾ 128 ರಷ್ಟು ಹೆಚ್ಚು.

ಉಕ್ರೇನ್ ಮೇಲೆ ಯುದ್ಧ ಸಾರಿದ 4 ತಿಂಗಳ ಅವಧಿಯಲ್ಲಿ ರಷ್ಯಾದ ರಕ್ಷಣಾ ವೆಚ್ಚ ಶೇಕಡಾ 40ರಷ್ಟು ಹೆಚ್ಚಾಗಿದೆ
ಯುದ್ಧಭೂಮಿಯ ದೃಶ್ಯImage Credit source: NPR
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: May 19, 2022 | 7:49 AM

Share

ಮಾಸ್ಕೊ:  ರಷ್ಯಾದ ಆರ್ಥಿಕ ಸಚಿವಾಲಯ (Defense Ministry) ಬುಧವಾರ ಬಿಡುಗಡೆ ಮಾಡಿರುವ ಪೂರ್ವಭಾವಿ ವರದಿಯೊಂದರ (preliminary report) ಪ್ರಕಾರ ಉಕ್ರೇನ್ (Ukraine) ಮೇಲೆ ಪೂರ್ಣ ಪ್ರಮಾಣದ ಯುದ್ಧ ಸಾರಿದ ನಂತರದ 4 ತಿಂಗಳ ಅವಧಿಯಲ್ಲಿ ಆ ದೇಶದ ರಕ್ಷಣಾ ವೆಚ್ಚ ಶೇಕಡಾ 40 ರಷ್ಟು ಹೆಚ್ಚಾಗಿದೆ. ಜನೆವರಿಯಿಂದ ಏಪ್ರಿಲ್ ವರೆಗೆ ರಷ್ಯಾ 1.17 ಟ್ರಿಲಿಯನ್ ರೂಬಲ್ಗಳನ್ನು (ರೂ. 2640 ಕೋಟಿ) ಖರ್ಚು ಮಾಡಿದ್ದು ಇದು 2022 ರ ಸಾಲಿಗೆ ಮಂಡಿಸಲಾಗಿದ್ದ ಬಜೆಟ್ ನ ಸುಮಾರು ಅರ್ಧದಷ್ಟು ಅಥವಾ ಆ ದೇಶದ ಜಿಡಿಪಿಯ ಶೇಕಡಾ 2.6 ರಷ್ಟಿದೆ.

ಆರಂಭದಲ್ಲಿ, ಸಚಿವಾಲಯವು 2022 ಸಾಲಿಗೆ ಶೇಕಡಾ 1 ಅಥವಾ 1.3 ಟ್ರಿಲಿಯನ್ ರೂಬಲ್ಗಳ ಹೆಚ್ಚುವರಿ ಬಜೆಟ್ ಮುನ್ಸೂಚನೆ ನೀಡಿತ್ತು. ಆದರೆ ಈಗ ಕನಿಷ್ಠ 1.6 ಟ್ರಿಲಿಯನ್ ರೂಬಲ್ಗಳ ಕೊರತೆಯನ್ನು ಎದುರಸಲಿದ್ದು, ಅದು ಪಾಶ್ಚಿಮಾತ್ಯ ರಾಷ್ಟ್ರಗಳ ಅಭೂತಪೂರ್ವ ಆರ್ಥಿಕ ನಿರ್ಬಂಧಗಳ ಪರಿಣಾಮವನ್ನು ಎದುರಿಸಲು ಬೆಂಬಲ ಪಾವತಿಗಳಿಗೆ ಅವಕಾಶ ನೀಡುತ್ತದೆ.

ಕೊರತೆಯನ್ನು ನೀಗಿಸಲು ಸರ್ಕಾರವು ತೈಲ ಮತ್ತು ಅನಿಲ ಆದಾಯದಿಂದ ನಿರ್ಮಿಸಲಾದ ರಷ್ಯಾದ ರಾಷ್ಟ್ರೀಯ ಸಂಪತ್ತು ನಿಧಿಯನ್ನು (ಎನ್ ಡಬ್ಲ್ಯೂ ಎಫ್) ಬಳಸುವುದರ ಜೊತೆಗೆ ಫೆಬ್ರುವರಿ 24 ರಂದು ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಬಳಿಕ ತೀವ್ರ ಸ್ವರೂಪದಲ್ಲಿ ಕುಸಿದಿರುವ ಶೇರು ಮತ್ತು ಬಾಂಡ್​ಗಳ ಮೌಲ್ಯ ಬೆಂಬಲಿಸಲು ಸಹ ಉಪಯೋಗಿಸುತ್ತದೆ.

ಎನ್ ಡಬ್ಲ್ಯೂ ಎಫ್ ಮೊತ್ತದ ಸ್ವಲ್ಪ ಭಾಗವನ್ನು ಆರ್ಥಿಕ ಮಾರುಕಟ್ಟೆಗಳಲ್ಲಿ ತೊಡಗಿಸಲಾಗಿದೆ ಮತ್ತು ಫೆಬ್ರುವರಿ ಆರಂಭದ ದಿನಗಳು ಮತ್ತು ಏಪ್ರಿಲ್ ಆವಧಿಯ ನಡುವೆ ಅದರ ಮೌಲ್ಯವು 20 ಬಿಲಿಯನ್ ಡಾಲರ್ ಕುಸಿದು 155 ಬಿಲಿಯನ್ ಡಾಲರ್ ಗಳಿಗೆ ಬಂದಿದೆ ಎಂದು ಸೋಮವಾರ ಬಿಡುಗಡೆ ಮಾಡಲಾದ ವರದಿ ಸೂಚಿಸುತ್ತದೆ.

ಏಪ್ರಿಲ್ ತಿಂಗಳೊಂದರಲ್ಲೇ ರಷ್ಯಾ 628 ಬಿಲಿಯನ್ ರೂಬಲ್ ಗಳಷ್ಟು (ಸುಮಾರು 750 ಕೋಟಿ ರೂ.) ಹಣವನ್ನು ತನ್ನ ಸೇನೆಯ ಮೇಲೆ ಖರ್ಚು ಮಾಡಿದ್ದು ಕಳೆದ ವರ್ಷದ ಏಪ್ರಿಲ್ ಗೆ ಹೋಲಿಸಿದರೆ ಇದು ಶೇಕಡಾ 128 ರಷ್ಟು ಜಾಸ್ತಿ. ಈ ವರ್ಷದಲ್ಲಿ ಮೊದಲ ಬಾರಿಗೆ ಮಾಸಿಕ ಬಜೆಟ್ ಕೊರತೆ ಉಂಟಾಗುವುದಕ್ಕೆ ಅದು ಕಾರಣವಾಗಿದೆ.

ಸುದ್ದಿ ಸಂಸ್ಥೆಗಳು ವಿಷಯವನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ ಸಚಿವಾಲಯವು ಪ್ರತಿಕ್ರಿಯಿಸಲು ನಿರಾಕರಿಸಿತು.

ಪಾಶ್ವಿಮಾತ್ಯರ ಪ್ರಾಬಲ್ಯವನ್ನು ಕಡಿಮೆ ಮಾಡಲು ಮತ್ತು ರಷ್ಯನ್ ಭಾಷೆ ಮಾತಾಡುವ ಜನರ ಮೇಲೆ ನಡೆಯುವ ಶೋಷಣೆಯನ್ನು ನಿಲ್ಲಿಸಲು ಉಕ್ರೇನ್ ಮೇಲೆ ಯುದ್ಧ ಸಾರುವುದು ಅನಿವಾರ್ಯವಾಗಿತ್ತು ಎಂದು ತನ್ನ ಆಕ್ರಮಣವನ್ನು ರಷ್ಯಾ ಸಮರ್ಥಿಸಿಕೊಳ್ಳುತ್ತಿದೆ.

ಅದರೆ ಯುದ್ಧ ಆರಂಭಗೊಂಡ ಬಳಿಕ ಸಾವಿರಾರು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಸುಮಾರು ಒಂದೂವರೆ ಕೋಟಿ ಉಕ್ರೇನಿಯನ್ನರು ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ.

ರಷ್ಯಾದ ವಾದವನ್ನು ಕೇವಲ ಬೊಗಳೆ ಎಂದಿರುವ ಉಕ್ರೇನ್, ಬಿರುಸು ರಾಷ್ಟ್ರವಾದ, ರಷ್ಯನ್ ಭಾಷೆ ಮಾತಾಡುವವರ ಹಿತಾಸಕ್ತಿಯನ್ನು ಕಾಪಾಡುವುದು ಎಲ್ಲ ಸುಳ್ಳು ಘೋಷಣೆಗಳು, ಅದು ಕೇವಲ ತನ್ನ ಸಾರ್ವಭೌಮತ್ವ ಸ್ಥಾಪಿಸಲು ಯುದ್ಧ ನಡೆಸುತ್ತಿದೆ ಅಂತ ಹೇಳಿದೆ.

ಇದನ್ನೂ ಓದಿ:   Russia Ukraine War: ಮರಿಯುಪೋಲ್ ಪ್ರತಿರೋಧ ಮುಕ್ತಾಯ ಎಂದ ಉಕ್ರೇನ್, ಭವಿಷ್ಯದ ಆಹಾರ ಬಿಕ್ಕಟ್ಟಿಗೆ G7 ಕಾರಣ ಎಂದ ರಷ್ಯಾ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು