Watch ಟೆಕ್ಸಾಸ್ ಶಾಲೆಯಲ್ಲಿ ಭಾರತೀಯ ಬಾಲಕನಿಗೆ ಸಹಪಾಠಿಯೊಬ್ಬ ನಿಂದಿಸಿ ಕಿರುಕುಳ ನೀಡುತ್ತಿರುವ ವಿಡಿಯೊ ವೈರಲ್, ವ್ಯಾಪಕ ಆಕ್ರೋಶ
ಮೇ 11 ರಂದು ಟೆಕ್ಸಾಸ್‌ನಲ್ಲಿ ಚಿತ್ರೀಕರಿಸಲಾದ ವಿಡಿಯೊದಲ್ಲಿ ಶಾನ್ ಪ್ರೀತ್ಮಣಿ ಕ್ಯಾಮೆರಾದ ಕಡೆಗೆ ಮುಖ ಮಾಡಿ ಕುಳಿತಿರುವುದನ್ನು ತೋರಿಸುತ್ತದೆ. ಬಿಳಿಯ ವಿದ್ಯಾರ್ಥಿಯು ಹಿಂದಿನಿಂದ ಬಂದು...
ದೆಹಲಿ: ಸುಮಾರು 14-15ರ ಹರೆಯದ ಭಾರತೀಯ ಅಮೆರಿಕನ್ ವಿದ್ಯಾರ್ಥಿಯನ್ನು ಅಮೆರಿಕದ ವಿದ್ಯಾರ್ಥಿಯೊಬ್ಬ ನಿಂದಿಸುತ್ತಿರುವ ವಿಡಿಯೊ ವೈರಲ್ (Viral Video) ಆಗಿದ್ದು , ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗುತ್ತಿದೆ. ವಿಡಿಯೊವನ್ನು ಕೊಪ್ಪೆಲ್ ಇಂಡಿಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್ನ (Coppell ISD ) ಸಹಪಾಠಿಗಳು ಚಿತ್ರೀಕರಿಸಿ ಶೇರ್ ಮಾಡಿದ್ದಾರೆ. ಶಾನ್ ಪ್ರೀತ್ಮಣಿ ಎಂದು ಗುರುತಿಸಲಾದ ಭಾರತೀಯ ಹುಡುಗನಿಗೆ “ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಜಗಳವಾಡಿದ್ದಕ್ಕಾಗಿ” 3-ದಿನ ಶಾಲೆಯಲ್ಲಿಯೇ ಅಮಾನತು “ಶಿಕ್ಷೆ” ನೀಡಲಾಗಿದೆ ಎಂದು ತಿಳಿದುಬಂದಿದೆ. ಮೇ 11 ರಂದು ಟೆಕ್ಸಾಸ್‌ನಲ್ಲಿ ಚಿತ್ರೀಕರಿಸಲಾದ ವಿಡಿಯೊದಲ್ಲಿ ಶಾನ್ ಪ್ರೀತ್ಮಣಿ ಕ್ಯಾಮೆರಾದ ಕಡೆಗೆ ಮುಖ ಮಾಡಿ ಕುಳಿತಿರುವುದನ್ನು ತೋರಿಸುತ್ತದೆ. ಬಿಳಿಯ ವಿದ್ಯಾರ್ಥಿಯು ಹಿಂದಿನಿಂದ ಬಂದು ಶಾನ್ನಲ್ಲಿ ಎದ್ದೇಳಲು ಹೇಳುತ್ತಾನೆ. ಶಾನ್ ನಿರಾಕರಿಸಿದಾಗ ಆತನಿಗೆ ಕಿರುಕುಳ ನೀಡುವುದನ್ನು ಮುಂದುವರೆಸುತ್ತಾನೆ ಮತ್ತು ಅವನ ಕುತ್ತಿಗೆಯ ಸುತ್ತ ಕೈಹಾಕಿ ಆತನನ್ನು ಅಲ್ಲಿಂದ ಕೆಳಗೆ ಬೀಳಿಸುತ್ತಾನೆ. ಬಿದ್ದ ಶಾನ್ ಭುಜದ ಮೇಲೆ ಆತ ಮತ್ತಷ್ಟು ಒತ್ತಡ ಹಾಕುತ್ತಿದ್ದರೆ,ಇತರ ವಿದ್ಯಾರ್ಥಿಗಳು ಪ್ರೋತ್ಸಾಹಿಸುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಶಾಲೆಯಿಂದ ಕ್ರಮ ಕೈಗೊಳ್ಳುವಂತೆ ಮತ್ತು ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಲು change.org ಮೂಲಕ ಮನವಿ ಮಾಡಲಾಗುತ್ತದೆ.
It’s a video circulating in WA. Apparently happened at Coppell school. IMO, victim would have died by asphyxia or permanently paralyzed neck down spending rest of life in wheelchair or could have other longterm consequences. @Coppelisd, @CoppellPolice,@AmerAcadPeds pic.twitter.com/LfXkWjEERm
— Sunil Thummala MD (@TX_neurologist) May 15, 2022
ವೈರಲ್ ಕ್ಲಿಪ್ ಬೆನ್ಲಲ್ಲೇ , ಡಿಸ್ಟ್ರಿಕ್ಟ್ 14ನಿಂದ TX SBOE ಅಭ್ಯರ್ಥಿ ಟ್ರೇಸಿ ಫಿಶರ್ ಅವರು ಕೊಪ್ಪೆಲ್ ಐಎಸ್ಡಿಯ ಯ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. “ಬೆದರಿಸುವ, ಮೌಖಿಕ ಮತ್ತು ದೈಹಿಕ ಮತ್ತು ದೈಹಿಕ ಆಕ್ರಮಣಕಾರಿ ಕ್ರಿಯೆಗಳು ಎಂದಿಗೂ ಸ್ವೀಕಾರಾರ್ಹವಲ್ಲ. ನಾವು ಯಾರೊಂದಿಗೂ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಮತ್ತೊಂದು ಟ್ವೀಟ್‌ನಲ್ಲಿ ಅವರು ಈ ಘಟನೆಯನ್ನು ಸಿಐಎಸ್‌ಡಿ ವಿದ್ಯಾರ್ಥಿ ನೀತಿ ಸಂಹಿತೆಯ ಪ್ರಕಾರ ಶಾಲೆ ಮತ್ತು ಜಿಲ್ಲೆಯಿಂದ ತನಿಖೆ ನಡೆಸಲಾಗುತ್ತಿದೆ, ನಾವು ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ