Shocking News: ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಶುಲ್ಕ ವಿಧಿಸಿದ ವೈದ್ಯರು; ಬಿಲ್ ನೋಡಿ ಮಹಿಳೆ ಶಾಕ್

ಅಮೆರಿಕಾದ ವೈದ್ಯರ ಅಪಾಯಿಂಟ್‌ಮೆಂಟ್‌ನಲ್ಲಿ "ಅತ್ತಿದ್ದಕ್ಕಾಗಿ" ತನ್ನ ಸಹೋದರಿಗೆ ಸುಮಾರು 3,100 ರೂ. ವಿಧಿಸಲಾಗಿದೆ ಎಂದು ಅಮೆರಿಕಾದ ಮಹಿಳೆಯೊಬ್ಬರು ಇತ್ತೀಚೆಗೆ ಬಿಲ್​ನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

Shocking News: ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಶುಲ್ಕ ವಿಧಿಸಿದ ವೈದ್ಯರು; ಬಿಲ್ ನೋಡಿ ಮಹಿಳೆ ಶಾಕ್
ಬಿಲ್​Image Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 19, 2022 | 6:40 PM

ಒಮ್ಮೆ ಆಸ್ಪತ್ರೆಯ ಮೆಟ್ಟಿಲು ಹತ್ತಬೇಕೆಂದು ನಾಲ್ಕೈದು ಬಾರಿ ಪರ್ಸ್​ ಚೆಕ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಈಗ ಬಂದಿದೆ. ಆಸ್ಪತ್ರೆಗಳಲ್ಲಿ ಸಣ್ಣ ಪುಟ್ಟ ಟೆಸ್ಟ್​ಗೂ ಸಾವಿರಾರು ರೂ. ಬಿಲ್ ಮಾಡುವವರಿದ್ದಾರೆ. ಇಲ್ಲೊಬ್ಬರು ಅಮೆರಿಕದ ವೈದ್ಯರು ತನ್ನ ರೋಗಿ ತನ್ನ ಬಳಿ ಬಂದಾಗ ಅತ್ತಿದ್ದಕ್ಕೂ ಬಿಲ್ (Hospital Bill) ಮಾಡಿದ್ದಾರೆ. ರೋಗಿ ಅತ್ತಿದ್ದಾಳೆ ಎಂಬ ಕಾರಣಕ್ಕೆ ಸುಮಾರು 3,100 ರೂ. ಬಿಲ್ ಮಾಡಿದ್ದಾರೆ. ಈ ಬಿಲ್​ನ ರಶೀದಿ ಇದೀಗ ಭಾರೀ ವೈರಲ್ ಆಗಿದೆ.

ಅಮೆರಿಕಾದ ವೈದ್ಯರ ಅಪಾಯಿಂಟ್‌ಮೆಂಟ್‌ನಲ್ಲಿ “ಅತ್ತಿದ್ದಕ್ಕಾಗಿ” ತನ್ನ ಸಹೋದರಿಗೆ ಸುಮಾರು 3,100 ರೂ. ವಿಧಿಸಲಾಗಿದೆ ಎಂದು ಅಮೆರಿಕಾದ ಮಹಿಳೆಯೊಬ್ಬರು ಇತ್ತೀಚೆಗೆ ಬಿಲ್​ನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ಸಹೋದರಿಗೆ “ಅಪರೂಪದ ಕಾಯಿಲೆ” ಇತ್ತು. ಆಕೆಯನ್ನು ನಾವು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಆಕೆ ಭಾವುಕಳಾಗಿ ಕಣ್ಣೀರು ಹಾಕಿದಳು. ವೈದ್ಯರು ನೀಡಿರುವ ಬಿಲ್​ನಲ್ಲಿ ಬ್ರೀಫ್ ಎಮೋಷನ್/ ಬಿಹೇವಿಯರಲ್ ಅಸೆಸ್​ಮೆಂಟ್ ಎಂದು ನಮೂದಿಸಿ ಅದಕ್ಕೂ ಚಾರ್ಜ್ ಮಾಡಲಾಗಿದೆ.

ಬಿಲ್​ನಲ್ಲಿ ವೈದ್ಯರ ಭೇಟಿಯ ವಿವಿಧ ವೆಚ್ಚವು ಹೀಗಿದೆ. ದೃಷ್ಟಿ ಮೌಲ್ಯಮಾಪನ ಪರೀಕ್ಷೆ- 20 ಡಾಲರ್, ಹಿಮೋಗ್ಲೋಬಿನ್ ಪರೀಕ್ಷೆ- 15 ಡಾಲರ್, ಕ್ಯಾಪಿಲ್ಲರಿ ರಕ್ತ ಡ್ರಾ – 30 ಡಾಲರ್, ಆರೋಗ್ಯ ತಪಾಸಣೆ- 350 ಡಾಲರ್ ಮತ್ತು ಬ್ರೀಫ್ ಎಮೋಷನಲ್/ ಬಿಹೇವಿಯರಲ್ ಅಸೆಸ್​ಮೆಂಟ್​- 40 ಡಾಲರ್ ಶುಲ್ಕ ವಿಧಿಸಲಾಗಿದೆ.

ಇದನ್ನೂ ಓದಿ: Shocking News: ಮದುವೆ ಮಂಟಪದಲ್ಲೇ ವಧುವಿಗೆ ಶೂಟ್ ಮಾಡಿ ಕೊಂದ ಮಾಜಿ ಪ್ರಿಯಕರ!

ಈ ಬಿಲ್​ನ ಫೋಟೋಗೆ ಟ್ವಿಟ್ಟರ್​​ನಲ್ಲಿ 4,94,000ಕ್ಕೂ ಹೆಚ್ಚು ಲೈಕ್​ಗಳು ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ. ಇಂಟರ್ನೆಟ್ ಬಳಕೆದಾರರು ಅಧಿಕ ಶುಲ್ಕದ ವೈದ್ಯಕೀಯ ಬಿಲ್‌ಗಳೊಂದಿಗೆ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ