Viral Video: ಕೇದಾರನಾಥಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದು, ತಿಲಕವಿಟ್ಟ ಯಾತ್ರಿಕ; ಕೇಸ್ ದಾಖಲು

Kedarnath Temple: ಕೇದಾರನಾಥನ ಸನ್ನಿಧಿಗೆ ಹಸ್ಕಿ ನಾಯಿಯನ್ನು ಹೊತ್ತೊಯ್ದಿದ್ದ ರೋಹನ್ ತ್ಯಾಗಿ ಅದಕ್ಕೆ ತಿಲಕವನ್ನು ಇಟ್ಟಿದ್ದರು. ಕೇದಾರನಾಥ ದೇವಸ್ಥಾನದ ಎದುರು ನಾಯಿಯನ್ನು ಕೂರಿಸಿ ಫೋಟೋವನ್ನೂ ತೆಗೆದಿದ್ದರು. ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

Viral Video: ಕೇದಾರನಾಥಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದು, ತಿಲಕವಿಟ್ಟ ಯಾತ್ರಿಕ; ಕೇಸ್ ದಾಖಲು
ಕೇದಾರನಾಥ ದೇವಸ್ಥಾನದಲ್ಲಿ ಹಸ್ಕಿ ನಾಯಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 19, 2022 | 9:06 PM

ಚಾರ್​ಧಾಮ್ ಯಾತ್ರೆಗೆ ತನ್ನ ಮುದ್ದಿನ ನಾಯಿಯನ್ನು ಕರೆದೊಯ್ದ ಭಕ್ತರೊಬ್ಬರು ಇದೀಗ ಫಜೀತಿಗೆ ಸಿಲುಕಿದ್ದಾರೆ. ಭಾರತೀಯ ಮೂಲದ ಸೋಶಿಯಲ್ ಮೀಡಿಯಾ (Social Media) ಬಳಕೆದಾರರೊಬ್ಬರು ತಮ್ಮ ಪ್ರೀತಿಯ ನವಾಬ್ ಎಂಬ ಮುದ್ದಿನ ನಾಯಿಯನ್ನು ಕೇದಾರನಾಥ ದೇವಸ್ಥಾನಕ್ಕೆ (Kedarnath Temple) ಕರೆದುಕೊಂಡು ಹೋಗಿದ್ದರು. ಕೇದಾರನಾಥನ ಸನ್ನಿಧಿಗೆ ಹಸ್ಕಿ ನಾಯಿಯನ್ನು ಹೊತ್ತೊಯ್ದಿದ್ದ ರೋಹನ್ ತ್ಯಾಗಿ ತನ್ನ ಮುದ್ದಿನ ನಾಯಿಗೆ ತಿಲಕವನ್ನು ಇಟ್ಟಿದ್ದರು. ಕೇದಾರನಾಥ ದೇವಸ್ಥಾನದ ಎದುರು ನಾಯಿಯನ್ನು ಕೂರಿಸಿ ಫೋಟೋವನ್ನೂ ತೆಗೆದಿದ್ದರು. ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ನಾಯಿಯನ್ನು ಕೇದಾರನಾಥಕ್ಕೆ ಕರೆದುಕೊಂಡು ಹೋಗಿದ್ದ ರೋಹನ್ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ನವಾಬ್ ತ್ಯಾಗಿ ಎಂಬ ನಾಯಿ ಮತ್ತು ಅದರ ಮಾಲೀಕ ರೋಹನ್ ತ್ಯಾಗಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಇತರರು ಈ ಕ್ರಮವು ಪ್ರಪಂಚದಾದ್ಯಂತದ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಟೀಕಿಸಿದ್ದಾರೆ. ನಾಲ್ಕೂವರೆ ವರ್ಷದ ಹಸ್ಕಿ ನಾಯಿಯಾದ ನವಾಬ್ ತ್ಯಾಗಿ ಕೆಲವು ದಿನಗಳ ಹಿಂದೆ ನೋಯ್ಡಾ ಮೂಲದ ತನ್ನ ಮಾಲೀಕರೊಂದಿಗೆ ‘ಚಾರ್ ಧಾಮ್ ಯಾತ್ರೆ’ಯಲ್ಲಿ ಭಾಗವಹಿಸಿತ್ತು. ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ನವಾಬ್ ತ್ಯಾಗಿ ವಿಡಿಯೋಗಳಿಗೆ ಭಾರೀ ಬೇಡಿಕೆ ಬಂದಿದೆ. ಈ ಇನ್​ಸ್ಟಾಗ್ರಾಂ ಪೇಜ್ 74,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.

ಇದನ್ನೂ ಓದಿ
Image
Shocking News: ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಶುಲ್ಕ ವಿಧಿಸಿದ ವೈದ್ಯರು; ಬಿಲ್ ನೋಡಿ ಮಹಿಳೆ ಶಾಕ್
Image
Viral News: ಹೊಟ್ಟೆನೋವಿನಿಂದ ನರಳುತ್ತಿದ್ದ ಮಹಿಳೆಗೆ ವಿಮಾನದಲ್ಲೇ ಹೆರಿಗೆ ಮಾಡಿಸಿದ ಸಿಬ್ಬಂದಿ
Image
Ratan Tata: ಬಾಡಿಗಾರ್ಡ್​ ಇಲ್ಲದೆ ತಾಜ್ ಹೋಟೆಲ್​ಗೆ ನ್ಯಾನೋ ಕಾರಲ್ಲಿ ಬಂದಿಳಿದ ರತನ್ ಟಾಟಾ; ಸರಳತೆಗೆ ನೆಟ್ಟಿಗರು ಫಿದಾ
Image
Shocking News: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಕಣ್ಣಿಗೆ ಕಚ್ಚಿದ ಇಲಿ; ಆಮೇಲೇನಾಯ್ತು?

ಇದನ್ನೂ ಓದಿ: ಕೇದಾರನಾಥದ​ ಶಂಕರಾಚಾರ್ಯರ ಮೂರ್ತಿ ನೋಡಬೇಕು; ಪ್ರಧಾನಿ ಮೋದಿಗೆ ಹೆಚ್​ಡಿ ದೇವೇಗೌಡರಿಂದ ಪತ್ರ

ನವಾಬ್ ಎಂಬ ಈ ನಾಯಿ ಕೇದಾರನಾಥ ದೇವಸ್ಥಾನದಲ್ಲಿ ಶಿವನ ಗೂಳಿ, ನಂದಿಯಿಂದ ಆಶೀರ್ವಾದ ಪಡೆಯುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನವಾಬ್ ತ್ಯಾಗಿ ತನ್ನ ಕಾಲುಗಳಿಂದ ವಿಗ್ರಹದ ಪಾದಗಳನ್ನು ಸ್ಪರ್ಶಿಸುವುದನ್ನು ಕಾಣಬಹುದು. ಇದನ್ನು ನೋಡಿದ ಬದರಿನಾಥ್- ಕೇದಾರನಾಥ ದೇವಾಲಯ ಸಮಿತಿಯು (BKTC) ನವಾಬ್ ಎಂಬ ಈ ನಾಯಿಯ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಸಮಿತಿಯ ಪ್ರಕಾರ, ಭಕ್ತ ತನ್ನ ಸಾಕುಪ್ರಾಣಿಯನ್ನು ದೇಗುಲಕ್ಕೆ ಕೊಂಡೊಯ್ಯುವುದು ಖಂಡನೀಯವಾಗಿದೆ.

ನೋಯ್ಡಾದ ವ್ಲಾಗರ್ ರಾಹುಲ್ ತ್ಯಾಗಿ ಅವರು ತಮ್ಮ ಸಾಕುನಾಯಿಯನ್ನು ಕೇದಾರನಾಥ ದೇಗುಲಕ್ಕೆ ಕರೆದೊಯ್ದು ಅದಕ್ಕೆ ಸಿಂಧೂರ ತಿಲಕವನ್ನು ಹಾಕಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿ ಫೆಡರಲ್ ವರದಿಯ ಪ್ರಕಾರ, ತ್ಯಾಗಿ ಅವರು ನಡೆಯುತ್ತಿರುವ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ತಮ್ಮ ನಾಲ್ಕೂವರೆ ವರ್ಷದ ನವಾಬ್ ಎಂಬ ಮುದ್ದಿನ ಹಸ್ಕಿಯನ್ನು ಕರೆದೊಯ್ದಿದ್ದರು. ದೇವಸ್ಥಾನದ ಹೊರಗಿರುವ ನಂದಿಯ ವಿಗ್ರಹವನ್ನು ಅದರ ಕಾಲಿನಿಂದ ಸ್ಪರ್ಶಿಸುವ ಮೂಲಕ ನವಾಬ್ ಆಶೀರ್ವಾದ ಪಡೆಯುವ ವಿಡಿಯೋ ವೈರಲ್ ಆಗಿದೆ. ಕೋಟಿಗಟ್ಟಲೆ ಜನರು ಬಾಬಾ ಕೇದಾರನಾಥದಲ್ಲಿ ನಂಬಿಕೆ ಹೊಂದಿದ್ದಾರೆ, ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳ ಇಂತಹ ಚಟುವಟಿಕೆಗಳಿಂದ ಅವರ ಭಾವನೆಗಳಿಗೆ ಘಾಸಿಯಾಗಿದೆ. ಈ ಜನರಿಗೆ ಯಾವುದೇ ಭಕ್ತಿ ಇಲ್ಲ, ಅವರು ಹಿನ್ನಲೆಯಲ್ಲಿ ಬಾಲಿವುಡ್ ಹಾಡುಗಳನ್ನು ಪ್ಲೇ ಮಾಡುವ ರೀಲ್‌ಗಳು ಮತ್ತು ವೀಡಿಯೊಗಳನ್ನು ಶೂಟ್ ಮಾಡಲು ಮಾತ್ರ ಇಲ್ಲಿಗೆ ಬರುತ್ತಾರೆ. ಬಾಬಾ ಕೇದಾರನಾಥನ ಆಶೀರ್ವಾದ ಪಡೆಯಲು ಬರುವ ಯಾತ್ರಾರ್ಥಿಗಳಿಗೆ ಇದು ಅಡ್ಡಿಯಾಗುತ್ತದೆ ಎಂದು ಅನೇಕರು ಟೀಕಿಸಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್