Viral News: ಹೊಟ್ಟೆನೋವಿನಿಂದ ನರಳುತ್ತಿದ್ದ ಮಹಿಳೆಗೆ ವಿಮಾನದಲ್ಲೇ ಹೆರಿಗೆ ಮಾಡಿಸಿದ ಸಿಬ್ಬಂದಿ
ಫೇಸ್‌ಬುಕ್‌ನಲ್ಲಿ ಫ್ರಾಂಟಿಯರ್ ಏರ್‌ಲೈನ್ಸ್ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಪ್ರಯಾಣಿಕಳಿಗೆ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯರೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಆ ವಿಮಾನದ ಸಿಬ್ಬಂದಿಯೇ ಸೇರಿ ಆಕೆಗೆ ಹೆರಿಗೆ ಮಾಡಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಇಲ್ಲಿನ ಫ್ರಾಂಟಿಯರ್ ಏರ್‌ಲೈನ್ಸ್ ಫ್ಲೈಟ್ ಅಟೆಂಡೆಂಟ್ ಕೊಲೊರಾಡೋದಿಂದ ಫ್ಲೋರಿಡಾಕ್ಕೆ ಸಾಗುತ್ತಿದ್ದ ವಿಮಾನದಲ್ಲಿದ್ದ ಮಗುವನ್ನು ಹೆರಿಗೆ ಮಾಡಿಸಲು ಸಹಾಯ ಮಾಡಿದ ಕಾರಣ ಆ ಸಿಬ್ಬಂದಿಯನ್ನು “ಹೀರೋ” ಎಂದು ಎಲ್ಲರೂ ಕೊಂಡಾಡುತ್ತಿದ್ದಾರೆ.
ಫೇಸ್‌ಬುಕ್‌ನಲ್ಲಿ ಫ್ರಾಂಟಿಯರ್ ಏರ್‌ಲೈನ್ಸ್ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಪ್ರಯಾಣಿಕಳಿಗೆ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ಫ್ಲೈಟ್ ಅಟೆಂಡೆಂಟ್ ಡಯಾನಾ ಗಿರಾಲ್ಡೊ ಗರ್ಭಿಣಿ ಮಹಿಳೆಗೆ ಸಹಾಯ ಮಾಡಿ, ಸುರಕ್ಷಿತವಾಗಿ ಮಗುವನ್ನು ಹೊರತೆಗೆದರು. ಬಳಿಕ ವಿಮಾನವನ್ನು ಲ್ಯಾಂಡ್ ಮಾಡಿದ ನಂತರ ಆ ಮಹಿಳೆ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ: Viral News: ರಸ್ತೆ ಮಧ್ಯೆ ಅಡ್ಡ ನಿಂತ ಆನೆ; ಆ್ಯಂಬುಲೆನ್ಸ್ನಲ್ಲೇ ಗರ್ಭಿಣಿಗೆ ಹೆರಿಗೆ!
ಸಾಮಾಜಿಕ ಮಾಧ್ಯಮ ಬಳಕೆದಾರರು ಹೊಸ ತಾಯಿಯನ್ನು ಅಭಿನಂದಿಸಿದ್ದಾರೆ. ಹಾಗೇ, ಈ ಉತ್ತಮ ಕೆಲಸ ಮಾಡಿದ ಫ್ರಾಂಟಿಯರ್ ಏರ್‌ಲೈನ್ಸ್ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. “ಇದು ಬಹಳ ಉತ್ತಮ ಕೆಲಸವಾಗಿದೆ” ಎಂದು ಕ್ಯಾಪ್ಟನ್ ನೈ ಹೇಳಿದ್ದಾರೆ. ವಿಮಾನದಲ್ಲಿ ನವಜಾತ ಶಿಶುವನ್ನು ಯಶಸ್ವಿಯಾಗಿ ಹೆರಿಗೆ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದನ್ನು ನೋಡಲು ಸಂತೋಷವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ