AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೃತ್ಯ ಶಿಕ್ಷಕಿ ಎದುರು ಮುದ್ದಾದ ಬಾಲೆಯ ಸಖತ್ ಸ್ಟೆಪ್: ವೈರಲ್ ಆಗುತ್ತಿದೆ ಬಾಲಕಿಯ ನೃತ್ಯ

ವಯಸ್ಕರಿಗೆ ನೃತ್ಯ ಕಲಿಸುತ್ತಿದ್ದ ಶಿಕ್ಷಕಿಯ ಎದುರು ನಿಂತ ಪುಟ್ಟ ಬಾಲಕಿ, ಶಿಕ್ಷಕಿಯನ್ನೇ ಅನುಸರಿಸುತ್ತಾ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

Viral Video: ನೃತ್ಯ ಶಿಕ್ಷಕಿ ಎದುರು ಮುದ್ದಾದ ಬಾಲೆಯ ಸಖತ್ ಸ್ಟೆಪ್: ವೈರಲ್ ಆಗುತ್ತಿದೆ ಬಾಲಕಿಯ ನೃತ್ಯ
ಬಾಲಕಿ ನೃತ್ಯ ಮಾಡುತ್ತಿರುವುದು
TV9 Web
| Edited By: |

Updated on:May 19, 2022 | 12:23 PM

Share

ಮಕ್ಕಳ ಎದುರು ನಾವು ಹೇಗೆ ನಡೆದುಕೊಳ್ಳಬೇಕು ಎಂದು ಹಿರಿಯರು ಹೇಳಿಕೊಂಡು ಬರುತ್ತಲೇ ಇದ್ದಾರೆ. ಏಕೆಂದರೆ, ಮಕ್ಕಳು ತನಗಿಂತ ದೊಡ್ಡವರ ನಡವಳಿಕೆಯನ್ನು ಬಹಳ ಬೇಗನೇ ನೋಡಿ ಕಲಿಯುತ್ತಾರೆ. ಹಿರಿಯರ ವರ್ತನೆಯನ್ನು ಅವರೂ ಅನುಸರಿಸುತ್ತಾರೆ. ಅದರಂತೆ, ನೃತ್ಯ(Dance) ಶಿಕ್ಷಕಿಯೊಬ್ಬರು ವಯಸ್ಕರಿಗೆ ನೃತ್ಯ ಕಲಿಸುತ್ತಿರುವಾಗ ಶಿಕ್ಷಕಿಯನ್ನು ಅನುಸರಿಸಿದ ಮುದ್ದಾದ ಬಾಲಕಿಯೊಬ್ಬಳು, ಸಖತ್ ಆಗಿ ಸ್ಟೆಪ್ ಹಾಕಿದ್ದಾಳೆ. ಇದರ ವಿಡಿಯೋ(Video) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗುತ್ತಿದೆ.

ಇದನ್ನೂ ಓದಿ: ವೈರಲ್ ವಿಡಿಯೋ

ವೈರಲ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಉತ್ತಮವಾದ ಕಮೆಂಟ್​ಗಳು ಕೂಡ ಬರುತ್ತಿವೆ. ಮಕ್ಕಳ ಅವಲೋಕನವು ತುಂಬಾ ಪ್ರಬಲವಾಗಿದೆ. ನಾವು ಅವರ ಮುಂದೆ ಏನು ಮಾಡಿದರೂ ಅವರು ನಮ್ಮನ್ನು ಪುನರಾವರ್ತಿಸುತ್ತಾರೆ ಎಂದು ಓರ್ವ ನೆಟ್ಟಿಗರು ಹೇಳಿದರೆ, ಮತ್ತೊಬ್ಬ ನೆಟ್ಟಿಗರು, ಅವಳು ತುಂಬಾ ಮುದ್ದಾಗಿದ್ದಾಳೆ ಎಂದಿದ್ದಾರೆ. ಇನ್ನೊಂದಷ್ಟು ನೆಟ್ಟಿಗರು ಆಕೆಯ ಪ್ರತಿಭೆಯನ್ನು ಮುಕ್ತವಾಗಿ ಹೊಗಳಿದ್ದಾರೆ.

ಸದ್ಯ ಶಿಕ್ಷಕಿಯ ಮುಂದೆ ಶಿಕ್ಷಕಿ ಹಾಕಿದ ಸ್ಪೆಪ್ ಅನ್ನು ತಪ್ಪದೇ ಅನುಸರಿಸಿದ ಬಾಲಕಿ ನೆಟ್ಟಿಗರನ್ನು ಮನರಂಜಿಸಿದ್ದಾಳೆ. ಈಕೆಗೆ ಸರಿಯಾದ ತರಬೇತಿ ನೀಡಿದ್ದಲ್ಲಿ ಮುಂದೊಂದು ದಿನ ಆಕೆ ದೊಡ್ಡ ನೃತ್ಯಗಾರ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

Published On - 12:19 pm, Thu, 19 May 22