Viral Video: ಶಾಲಾ ಸಮವಸ್ತ್ರದಲ್ಲಿಯೇ ಜಡೆ ಹಿಡಿದು ಹೊಡೆದಾಡಿದ ಬಾಲಕಿಯರು, ವಿಡಿಯೊ ವೈರಲ್

ಶಾಲಾ ಸಮವಸ್ತ್ರದಲ್ಲಿಯೇ ಹೊಡೆದಾಡುತ್ತಿರುವ ಬಾಲಕಿಯರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Viral Video: ಶಾಲಾ ಸಮವಸ್ತ್ರದಲ್ಲಿಯೇ ಜಡೆ ಹಿಡಿದು ಹೊಡೆದಾಡಿದ ಬಾಲಕಿಯರು, ವಿಡಿಯೊ ವೈರಲ್
ಬೆಂಗಳೂರಿನಲ್ಲಿ ಬಾಲಕಿಯರ ಹೊಡೆದಾಟ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 18, 2022 | 1:29 PM

ಬೆಂಗಳೂರು: ನಗರದಲ್ಲಿ ಶಾಲಾ ಸಮವಸ್ತ್ರದಲ್ಲಿಯೇ ಹೊಡೆದಾಡುತ್ತಿರುವ ಬಾಲಕಿಯರ ವಿಡಿಯೊ (Girls Fighting Video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Social Media) ಆಗಿದೆ. ಈ ಘಟನೆ ಎಂದು ಮತ್ತು ಎಲ್ಲಿ ನಡೆದಿದೆ ಎಂಬ ಬಗ್ಗೆಯಾಗಲೀ, ಇವರ ಹೊಡೆದಾಟಕ್ಕೆ ಕಾರಣ ಏನು ಎಂಬ ಬಗ್ಗೆಯಾಗಲೀ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ಮಕ್ಕಳ ಸಮವಸ್ತ್ರದ ಬಣ್ಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಬರೆದಿರುವ ಒಕ್ಕಣೆಗಳನ್ನು ಗಮನಿಸಿ, ಈ ಬಾಲಕಿಯರು ಬಿಷಪ್ ಕಾಟನ್ ಶಾಲೆಗೆ ಸೇರಿದವರು ಎಂದು ಹೇಳಲಾಗುತ್ತಿದೆ. ಆದರೆ ವಿದ್ಯಾರ್ಥಿನಿಯರು ಹೀಗೆ ಗುಂಪುಗೂಡಲು ಮತ್ತು ಸಿಟ್ಟಿಗೇಳಲು ಏನು ಕಾರಣ ಎನ್ನುವುದು ತಿಳಿದುಬಂದಿಲ್ಲ.

ವೈರಲ್ ಆಗಿರುವ ವಿಡಿಯೊದಲ್ಲಿ ಬಾಲಕಿಯರು ಪರಸ್ಪರ ಹೊಡೆದಾಡುವ ದೃಶ್ಯಗಳು ಎದ್ದು ಕಾಣುತ್ತವೆ. ಒಬ್ಬ ಹುಡುಗಿಯು ಕೋಲು ಹಿಡಿದು ಮತ್ತೊಬ್ಬರನ್ನು ಹೊಡೆಯಲು ನುಗ್ಗಿ ಹೋದಾಗ ಒಂದಿಷ್ಟು ಹುಡುಗರು ಆಕೆಯನ್ನು ಸಮಾಧಾನಪಡಿಸಲು ಯತ್ನಿಸುತ್ತಾರೆ. ಹೊಡೆದಾಟ ಕೆಲ ಸಮಯ ಮುಂದುವರಿದ ನಂತರ ಒಂದಿಷ್ಟು ಜನರು ಉದ್ರಿಕ್ತ ಬಾಲಕಿಯರನ್ನು ಸಮಾಧಾನಪಡಿಸಲು ಯತ್ನಿಸುತ್ತಾರೆ. ವೈರಲ್ ಆಗಿರುವ ಇದೇ ಘಟನೆಯದ್ದು ಎನ್ನಲಾದ ಮತ್ತೊಂದು ವಿಡಿಯೊದಲ್ಲಿ ಕೆಲ ಬಾಲಕಿಯರು ಗಾಯಗೊಂಡಿರುವುದು ಕಂಡುಬರುತ್ತದೆ.

ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯು ಈವರೆಗೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಟ್ವಿಟರ್​ನಲ್ಲಿ ಮಾತ್ರ ಪ್ರತ್ಯಕ್ಷದರ್ಶಿಗಳು ಎನ್ನುವವರ ಮೆಸೇಜ್​ಗಳು ತುಂಬಿತುಳುಕುತ್ತಿವೆ. ವೈರಲ್ ಆಗಿರುವ ಸ್ಕ್ರೀನ್​ಶಾಟ್​ ಒಂದರ ಪ್ರಕಾರ, ರಚನಾ ಎನ್ನುವ ಹುಡುಗಿ ತನ್ನನ್ನು ಬಿಷಪ್​ಕಾಟನ್ ಶಾಲೆಗೆ ಬಂದು, ಯಾರಿಗೋ ಹೊಡೆಯಲು ಹೇಳಿದ್ದಳು ಎಂಬ ಒಕ್ಕಣೆ ಇದೆ.

ಬಾಲಕಿಯರ ಹೊಡೆದಾಟದ ವಿಡಿಯೊ ಹಂಚಿಕೊಳ್ಳುವ ಬಗ್ಗೆಯೂ ಸಂವೇದನಾಶೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಂಜುಳಾ ವೀರಪ್ಪ, ‘ಇದು ಅವಮಾನಕರ ಘಟನೆ. ಈ ಬಗ್ಗೆ ಮಕ್ಕಳ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಶಾಲೆಯ ಆಡಳಿತ ಮಂಡಳಿಯು ಶಿಸ್ತುಕ್ರಮಕ್ಕೆ ಮುಂದಾಗಿದೆ. ಈ ಘಟನೆಯನ್ನು ಅವರ ವಿವೇಚನೆಗೆ ಬಿಡೋಣ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Wed, 18 May 22