International Museum Day 2022 : ನಮಗೆಂಥ ಮ್ಯೂಸಿಯಂ ಬೇಕಿದೆ?

Museum : ಎಲ್ಲರಿಗೂ ಸರಿಹೊಂದುವ ಸಾಮಾನ್ಯ ನೆಲೆಯನ್ನು ಮರುಸ್ಥಾಪಿಸಲು ಮತ್ತು ವಿಭಜನೆಗಿಂತ ಸೇತುವೆಗಳನ್ನು ನಿರ್ಮಿಸಲು, ಹೊಸ ದೃಷ್ಟಿಕೋನವನ್ನು ನೀಡುವಲ್ಲಿ ವಸ್ತುಸಂಗ್ರಹಾಲಯಗಳು  ಪ್ರಮುಖ ಪಾತ್ರವಹಿಸುತ್ತವೆ.

International Museum Day 2022 : ನಮಗೆಂಥ ಮ್ಯೂಸಿಯಂ ಬೇಕಿದೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 18, 2022 | 10:01 AM

Museum : ಅಯ್ಯೋ, ಏನು ಬೇಕಾದರೂ ಇಂಟರ್ನೆಟ್ ಅಲ್ಲಿ ಸಿಗುತ್ತೆ. ಮ್ಯೂಸಿಯಂಗಳಿಗೆ ಯಾರು ಭೇಟಿ ನೀಡುತ್ತಾರೆ? ಅದೆಲ್ಲ ಹಳೆ ಕಾಲದಲ್ಲಿ ಆಯ್ತು. ಈಗಿನ ಕಾಲದಲ್ಲಿ  ಮ್ಯೂಸಿಯಂಗಳು  ಹಳತಾಯ್ತು. ಹೀಗೆ ಮೂಗು ಮುರಿಯುವವರೇ ಹೆಚ್ಚು. ಆದರೆ ತಾಂತ್ರಿಕವಾಗಿ ಮುಂದುವರಿದ ಇಂದಿನ ಸಮಾಜಕ್ಕೆ ವಸ್ತುಸಂಗ್ರಹಾಲಯಗಳು ಇನ್ನೂ ಹೆಚ್ಚು ಪ್ರಸ್ತುತವಾಗಿವೆ. ನಮ್ಮ ಸಮಾಜ ಹಿಂದೆ  ಏನಾಗಿತ್ತು, ಹೇಗೆ ಬದಲಾಗಿದೆ ಮತ್ತು ಮುಂದಿನ ಪೀಳಿಗೆಗೆ ಹೇಗಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊಬೈಲ್​ ಅಥವಾ ಕಂಪ್ಯೂಟರ್‌ನಲ್ಲಿ ಕಲೆ, ವಾಸ್ತುಶಿಲ್ಪ ಅಥವಾ ಇತಿಹಾಸದ ಛಾಯಾಚಿತ್ರಗಳನ್ನು ನೋಡುವುದು ಬೇರೆ ಕಣ್ಣೆದುರಿಗೆ ನೋಡುವುದು ಬೇರೆ. ಉದಾಹರಣೆಗೆ ಗಾಂಧೀಜಿಯವರ ವೇಷಭೂಷಣಗಳು ನಿಮಗೆ ಇಂಟರ್ನೆಟ್ ಅಲ್ಲೂ ಸಿಗುತ್ತವೆ. ಆದರೆ ಅದನ್ನು ನೇರವಾಗಿ ನೋಡುವುದು ಸಂಪೂರ್ಣವಾಗಿ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ಇಂಟರ್ನೆಟ್ಟಿನಲ್ಲಿ ಸಿಗುವ ಮಾಹಿತಿಗಿಂತ ಮ್ಯೂಸಿಯಂನಲ್ಲಿ ಹೆಚ್ಚು ವಿಷಯಗಳನ್ನು ತಿಳಿಯಬಹುದು. ಡಾ. ಸಹನಾ ಪ್ರಸಾದ್

ಅಂತರ್ಜಾಲದಲ್ಲಿ ಹುಡುಕಲು ಸಾಧ್ಯವಾಗದ ಹೊಸ ಮಾಹಿತಿ ನಮಗೆ ಮ್ಯೂಸಿಯಂನಲ್ಲಿ ಸಿಗುತ್ತದೆ. ಬರೀ ಪರದೆಯ ಮೂಲಕ ನೋಡಿ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಮ್ಯೂಸಿಯಂಗಳಿಗೆ  ಹೋಗುವುದು, ನೋಡುವುದು, ಅಲ್ಲಿನ ವಸ್ತುಗಳ ವಾಸನೆ ಅರಿಯುವುದು, ಆ ವಸ್ತುಗಳನ್ನು  ಸ್ಪರ್ಶಿಸುವುದು ನಮಗೆ ಬೇರೆಯೇ ಅನುಭವವನ್ನು ಕಟ್ಟಿಕೊಡುತ್ತದೆ. ಇತ್ತೀಚಿನ ತಂತ್ರಜ್ಞಾನವು ವಸ್ತುಸಂಗ್ರಹಾಲಯಗಳನ್ನು ಹಿಂದೆ ತಳ್ಳಿದರೂ ಸಹ, ಅವು ಇನ್ನೂ ಅಭಿವೃದ್ಧಿ ಹೊಂದುತ್ತಿವೆ. ವಸ್ತುಸಂಗ್ರಹಾಲಯಗಳು ಇನ್ನೂ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾರುವುದೇ ಇದಕ್ಕೆ ಸಾಕ್ಷಿ. ಕಲಿಯಬಹುದು, ಜಗತ್ತಿನಲ್ಲಿ ನಡೆದ ಯುದ್ಧಗಳು,  ಹತ್ಯಾಕಾಂಡಗಳು, ಬೃಹತ್ ಡೈನೋಸಾರ್‌ಗಳು, ಜನರನ್ನು ಬಳಿ ತೆಗೆದುಕೊಂಡ ಸಾಂಕ್ರಾಮಿಕ ರೋಗಗಳು ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಹುದು ವಸ್ತುಸಂಗ್ರಹಾಲಯಗಳು. ಯಾವುದೇ  ಎಲೆಕ್ಟ್ರಾನಿಕ್ ಸಾಧನಳನ್ನು  ಪ್ಲಗ್ ಮಾಡದೆಯೇ, ಜನರಿಗೆ ಕಲಿಯಲು ,  ಸಮಮನಸ್ಕರೊಂದಿಗೆ ಬೆರೆಯಲು, ಚರ್ಚಿಸಲು  ಅವಕಾಶ ನೀಡುತ್ತವೆ.

ವಸ್ತುಸಂಗ್ರಹಾಲಯಗಳು ನಮ್ಮ ಇತಿಹಾಸವನ್ನು , ನಮ್ಮ ಪೂರ್ವಜರ   ಜೀವನದ ಎಲ್ಲಾ ಅಂಶಗಳನ್ನು ಸಂಕ್ಷಿಪ್ತಗೊಳಿಸಿ , ನಮ್ಮ ಇತಿಹಾಸ, ನಮ್ಮ ಹಿಂದಿನ  ಸಮುದಾಯದ ಅನುಭವಗಳನ್ನು ನಾವು ಮರೆಯದಂತೆ, ಆ  ಅನುಭವಗಳನ್ನು ಸಂರಕ್ಷಿಸುವ ಮತ್ತು ಕಾಲಕಾಲಕ್ಕೆ ಅವುಗಳನ್ನು ನಮಗೆ ಮರು ಪ್ರಸ್ತುತಪಡಿಸುವ ಕೆಲಸ ಮಾಡುತ್ತದೆ. ಐತಿಹಾಸಿಕ, ಕಲಾತ್ಮಕ ಅಥವಾ ಸಾಂಸ್ಕೃತಿಕವಾಗಿ ನಾವು  ನೋಡಿರದ ನಾಗರಿಕತೆಗಳ ಚಿತ್ರವನ್ನು ನಮಗೆ ತಿಳಿಸಲು ಮ್ಯೂಸಿಯಂಗಳು ಸಹಾಯಕವಾಗಿವೆ. ಪರದೆಯ ಮೇಲೆ ಕಾಣುವ ಚಿತ್ರಗಳು ನಮಗೆ ಇವೆಲ್ಲರ ಅಂದಾಜು ಕೊಡಬಹುದು, ಅಷ್ಟೇ.

ಇದನ್ನೂ ಓದಿ
Image
World Hypertension Day 2022 : ‘ಪಕ್ಷಿಲೋಕವೇ ನನ್ನ ಹೃದಯದ ಡಾಕ್ಟರ್’ ಡಾ. ನಿಸರ್ಗ
Image
ಎಲ್ರೂ ಬದುಕಬೇಕಲ್ವಾ?: ಲೆಕ್ಕಾಚಾರದ ಮಾವ ಆನ್​ಲೈನ್​ ಶಾಪಿಂಗ್​ಗೆ​ ಒಪ್ಪಿದರೆ?

ಇದನ್ನೂ ಓದಿ : New Column: ‘ಎಲ್ರೂ ಬದುಕಬೇಕಲ್ವಾ?’ ಏ. 27ರಿಂದ ಡಾ. ಸಹನಾ ಪ್ರಸಾದ್ ಅಂಕಣ ಪ್ರಾರಂಭ

ವಸ್ತುಸಂಗ್ರಹಾಲಯಗಳಿಗೆ   ಶಾಲಾ ಮಕ್ಕಳನ್ನು ಕರೆದೊಯ್ದಾಗ ಅವರಿಗೆ ತಮ್ಮ ಕಣ್ಣೆದುರಿಗೆ ತೆರೆದುಕೊಳ್ಳುವ ಇತಿಹಾಸದ ಪುಟಗಳು ಶಾಲೆಯ ಪಾಠಗಳಿಗಿಂತ ಬೇಕಾದಷ್ಟು ಕಲಿಸುತ್ತವೆ. ಈ ನಿಟ್ಟಿನಲ್ಲಿ ಇವು ತರಗತಿಯ ವಿಸ್ತರಣೆ ಎಂದು ಪರಿಗಣಿಸಬಹುದು.

ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು ಮಾನವಕುಲದ ಇತಿಹಾಸದ ಒಳನೋಟವನ್ನು ನೀಡುತ್ತವೆ.  ಯಾವುದೇ ವಸ್ತುಸಂಗ್ರಹಾಲಯವು ಸಂಪೂರ್ಣ ಚಿತ್ರಣವನ್ನು ನೀಡುತ್ತದೆ ಎಂದು ಹೇಳಲಾಗದಿದ್ದರೂ, ಹಿಂದೆ ನಡೆದ  ಘಟನೆಗಳು, ಅದ್ಭುತಗಳು ಮತ್ತು ದುರಂತಗಳಿಂದ ನಾವು ಕಲಿಯಬಹುದಾದ ಪಾಠಗಳು ಅಮೂಲ್ಯವಾಗಿವೆ. ಇವು ಕಣ್ಣಿಂದ ನೋಡಿದಾಗ ನಮ್ಮ ಮನದ ಮೇಲೆ ಗಾಢ ಪ್ರಭಾವ ಬೀರುತ್ತವೆ.

ಈ ನಡುವೆ ಕಾಣುತ್ತಿರುವ ಪ್ರಕ್ಷುಬ್ಧತೆಯ ವಾತಾವರಣದಲ್ಲಿ , ರಾಷ್ಟ್ರಗಳ ನಡುವೆ, ರಾಜಕೀಯ ಪಕ್ಷಗಳ ನಡುವೆ ಮತ್ತು ವಿವಿಧ ಸಾಂಸ್ಕೃತಿಕ ಗುಂಪುಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿರ್ಲಕ್ಷಿಸುವುದು ಅಸಾಧ್ಯ. ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವ ಬದಲು ವರ್ಗ, ಜನಾಂಗ, ಲಿಂಗ ಮತ್ತು ಪರಿಸರವಾದದ ಸಮಸ್ಯೆಗಳು ಹೆಚ್ಚು ಧ್ರುವೀಕರಣಗೊಳ್ಳುತ್ತಿವೆ. ಎಲ್ಲರಿಗೂ ಸರಿಹೊಂದುವ ಸಾಮಾನ್ಯ ನೆಲೆಯನ್ನು ಮರುಸ್ಥಾಪಿಸಲು ಮತ್ತು  ವಿಭಜನೆಗಿಂತ ಸೇತುವೆಗಳನ್ನು ನಿರ್ಮಿಸಲು, ಹೊಸ ದೃಷ್ಟಿಕೋನವನ್ನು ನೀಡುವಲ್ಲಿ ವಸ್ತುಸಂಗ್ರಹಾಲಯಗಳು  ಪ್ರಮುಖ ಪಾತ್ರವಹಿಸುತ್ತವೆ. ಸ್ಥಳೀಯ ವಸ್ತುಸಂಗ್ರಹಾಲಯಗಳು ಸಾಮೂಹಿಕ ಪರಂಪರೆಯನ್ನು ಆಚರಿಸುವ ಮೂಲಕ ಸಮುದಾಯ ಮತ್ತು ಸ್ಥಳದ ಪ್ರಜ್ಞೆಯನ್ನು ಒದಗಿಸಿ, ಯಾವುದೇ  ನಿರ್ದಿಷ್ಟ ಪ್ರದೇಶದ ಇತಿಹಾಸವನ್ನು ತಿಳಿದುಕೊಳ್ಳಲು ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ : ಎಲ್ರೂ ಬದುಕಬೇಕಲ್ವಾ?: ಲೆಕ್ಕಾಚಾರದ ಮಾವ ಆನ್​ಲೈನ್​ ಶಾಪಿಂಗ್​ಗೆ​ ಒಪ್ಪಿದರೆ?

ತಂತ್ರಜ್ಞಾನ ಮತ್ತು ಡಿಜಿಟಲೀಕರಣವು  ಹೆಚ್ಚು ಹೆಚ್ಚು ಜಾಗತೀಕರಣಗೊಳ್ಳುತ್ತಿರುವ ಈ ಸಮಯದಲ್ಲಿ, ಸಮುದಾಯಗಳನ್ನು ಒಟ್ಟಿಗೆ ಸೇರಿಸುವ ಕೆಲಸವನ್ನು ವಸ್ತುಸಂಗ್ರಹಾಲಯಗಳು ಮಾಡುತ್ತಿವೆ. ಕಳೆದ ಎರಡು ದಶಕಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಹೆಚ್ಚಾದಂತೆ, ವಸ್ತುಸಂಗ್ರಹಾಲಯಗಳ ಅವಶ್ಯಕತೆಯನ್ನೇ  ಪ್ರಶ್ನಿಸಲಾಗುತ್ತಿದೆ  ಆದರೆ  ಆಧುನಿಕ ತಂತ್ರಜ್ಞಾನವು ವಸ್ತುಸಂಗ್ರಹಾಲಯಗಳನ್ನು ಬರೀ ನೋಡುವ ಸ್ಥಳ ಮಾತ್ರವಲ್ಲದೆ   ಕಲಿಯುವ ಸ್ಥಳಗಳಾಗಿಯೂ  ಪರಿವರ್ತಿಸುತ್ತಿದೆ.  ವಸ್ತುಸಂಗ್ರಹಾಲಯಗಳಿಗೆ  ವೈಯಕ್ತಿಕವಾಗಿ ಭೇಟಿ ನೀಡಲು  ಕಷ್ಟವಾಗುವವರಿಗೆ  , ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು ತಮ್ಮ ಸಂಗ್ರಹಣೆಗಳನ್ನು ಆನ್‌ಲೈನ್‌ನಲ್ಲಿ ಕೂಡ ಹಂಚಿಕೊಳ್ಳುತ್ತಿವೆ. ವರ್ಚುವಲ್ ರಿಯಾಲಿಟಿ, ಡಿಜಿಟಲ್ ಮಾರ್ಗದರ್ಶಿಗಳು, ಡೌನ್‌ಲೋಡ್‌ಗಳು, ಅಪ್ಲಿಕೇಶನ್‌ಗಳು ಮತ್ತು ಡಿಜಿಟಲ್ ಟ್ರೇಲ್‌ಗಳು  ಎಲ್ಲರಿಗೂ ಹೆಚ್ಚು ಲಭ್ಯವಾಗುತ್ತಿವೆ.

ಮುಂದಿನ  ಪೀಳಿಗೆಯ ಶಿಕ್ಷಣದಲ್ಲಿ ವಸ್ತುಸಂಗ್ರಹಾಲಯಗಳು ಮತ್ತು ಇತರ ಸಾಂಸ್ಕೃತಿಕ ಸಂಸ್ಥೆಗಳು ಇನ್ನೂ ಹೆಚ್ಚಿನ  ಪಾತ್ರವನ್ನು ವಹಿಸುತ್ತವೆ. ಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರದರ್ಶನಗಳನ್ನು ರಚಿಸುವುದರಿಂದ ಹಿಡಿದು ತರಗತಿಯ ವಾತಾವರಣದಲ್ಲಿ ಮಕ್ಕಳಿಗೆ ಕಲಿಸುವವರೆಗೆ, ಪ್ರಪಂಚದಾದ್ಯಂತದ ಸಂಸ್ಥೆಗಳು ಜ್ಞಾನವನ್ನು ರವಾನಿಸಲು ತಮ್ಮ ಕೈಲಾದಷ್ಟು ಮಾಡುತ್ತಿವೆ. ಈ ನಿಟ್ಟಿನಲ್ಲಿ ವಸ್ತುಸಂಗ್ರಹಾಲಯಗಳು ಎಂದೆಂದಿಗೂ ಪ್ರಸ್ತುತ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ