New Column: ‘ಎಲ್ರೂ ಬದುಕಬೇಕಲ್ವಾ?’ ಏ. 27ರಿಂದ ಡಾ. ಸಹನಾ ಪ್ರಸಾದ್ ಅಂಕಣ ಪ್ರಾರಂಭ

Dr. Sahana Prasad : ಮಗುವಿನಿಂದ ಹಿಡಿದು ಮುಪ್ಪಾನುಮುದುಕರವರೆಗೂ ತಂತ್ರಜ್ಞಾನ ಬಳಕೆ ಅತಿವೇಗದಲ್ಲಿ ಸಾಧ್ಯವಾಯಿತು. ಆದರೆ ಸಂಬಂಧಗಳ ಹೊಂದಾಣಿಕೆಯಲ್ಲಿ? ನಮ್ಮತನದಲ್ಲಿ ನಾವೂ ಬದುಕಬೇಕು, ನಿಮ್ಮ ಪಾಪ, ಪುಣ್ಯ, ಕರ್ಮ, ತ್ಯಾಗ ಎಲ್ಲ ಪಕ್ಕಕ್ಕಿಡಿ ಎನ್ನುವುದನ್ನು ಉಪಾಯವಾಗಿ ಹೇಳುತ್ತಿದೆ ಇಂದಿನ ಪೀಳಿಗೆ!

New Column: ‘ಎಲ್ರೂ ಬದುಕಬೇಕಲ್ವಾ?’ ಏ. 27ರಿಂದ ಡಾ. ಸಹನಾ ಪ್ರಸಾದ್ ಅಂಕಣ ಪ್ರಾರಂಭ
Follow us
ಶ್ರೀದೇವಿ ಕಳಸದ
|

Updated on:Apr 27, 2022 | 4:32 PM

ಎಲ್ರೂ ಬದುಕಬೇಕಲ್ವಾ? : ಕಾಂಪ್ರೊಮೈಸ್ ಈಸ್ ಅ ಡರ್ಟಿ ವರ್ಡ್’ ಎನ್ನುವ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಆದರೆ ರಾಜಿ ಆಗುವುದು, ಸಂಧಾನ ಮಾಡಿಕೊಳ್ಳುವುದು, ಹೊಂದಿಕೊಂಡು ಬಾಳುವುದು ಒಂದು ಕಲೆ. ಸಿಟ್ಟು, ರೋಷ, ದ್ವೇಷ, ಅಸೂಯೆ ಮುಂತಾದವುಗಳನ್ನು ಬಿಟ್ಟು, ತಾಳ್ಮೆ, ಉಪಾಯ ಮತ್ತು ಸಹನೆಯಿಂದ ವಿವೇಚಿಸಿ ಬಾಳುವುದು ರೂಢಿಸಿಕೊಳ್ಳುವುದು ಯಾವ ಕಾಲಕ್ಕೂ ಯಾರಿಗೂ ಅತ್ಯಗತ್ಯ. ಇಲ್ಲವಾದರೆ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಕಾಡಿ ಬದುಕು ದುಸ್ತರವಾಗುತ್ತದೆ. ಪ್ರಕೃತಿಯಂಥ ಪ್ರಕೃತಿ, ಪ್ರಾಣಿಗಳಂಥ ಪ್ರಾಣಿಗಳೂ ತಮ್ಮದೇ ಆದ ರೀತಿಯಲ್ಲಿ ಹೊಂದಾಣಿಕೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುವಾಗ ಮನುಷ್ಯನಿಗೆ ಇದು ಅಸಾಧ್ಯವೆ? ನಮ್ಮ ಆಲೋಚನಾ ಕ್ರಮಗಳನ್ನು ಮತ್ತು ಅದರ ಅನುಸರಣೆಗಾಗಿ ತಕ್ಕುದಾದ ಬದಲಾವಣೆಗಳನ್ನು ಮಾಡಿಕೊಂಡರೆ ಎಲ್ಲರೂ ಅವರವರ ನೆಲೆಯಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಮನೆಯಲ್ಲಿ, ಸಮಾಜದಲ್ಲಿ, ವೃತ್ತಿಯಲ್ಲಿ, ಸ್ನೇಹಿತರ ಒಡನಾಟದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಹಲವಾರೆಡೆ ಎದುರಾಗುವ ಸಂಘರ್ಷಗಳಿಂದ ಪಾರಾಗಲು ಖಂಡಿತ ಮಾರ್ಗೋಪಾಯಗಳಿವೆ. ಡಾ. ಸಹನಾ ಪ್ರಸಾದ್ (Dr. Sahana Prasad)

ಅತ್ತೆ-ಸೊಸೆ, ಗಂಡ -ಹೆಂಡತಿ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಸೋದರ ಸಂಬಂಧಿಗಳು, ದೂರದ ಸಂಬಂಧಿಗಳು, ನೆರೆಹೊರೆ, ಸ್ನೇಹಿತರು ಹೀಗೆ ಅನೇಕರು ನಮ್ಮ ಜೀವನದ ಅಭಿವಾಜ್ಯ ಅಂಗವಾಗಿರುತ್ತಾರೆ. ಕೆಲವರು ನಮಗೆ ಒಳ್ಳೆಯ ಸ್ನೇಹಿತರಾಗಿರುತ್ತಾರೆ, ಹಲವರು ನಮ್ಮ ಪಾಲಿಗೆ ಮುಳ್ಳಾಗಿ ಇರುತ್ತಾರೆ. ಕೆಲವರು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾ ಅವಕಾಶವಾದಿಗಳಾಗಿಯೂ ಇರುತ್ತಾರೆ. ಯಾರೊಬ್ಬರೂ ನಮ್ಮ ಇಷ್ಟಕ್ಕೆ ತಕ್ಕಂತೆ ಬದಲಾಗುವುದಿಲ್ಲ. ಅವರಿಗೆ ಬೇಕಾದ ತರಹ ನಾವೂ ಬದಲಾಗಲು ಕಷ್ಟವಾಗಬಹುದು. ಯಾರಿಗೆ ಯಾರು ಸರಿ? ಯಾರು ತಪ್ಪು ಎನ್ನುವ ತರ್ಕಕ್ಕೆ ಕೊನೆಯೇ ಇಲ್ಲ. ಹೀಗಿದ್ದಾಗ ವಾದವಾಗ್ವಾದ, ವಿರಸಗಳು ಭುಗಿಲೆದ್ದು ಉಸಿರಾಡುವುದು ಕಷ್ಟವಾಗುತ್ತದೆ. ಪರಿಣಾಮವಾಗಿ ಹಿಂಸೆ, ನೋವು, ಅಸಹಾಯಕತೆ ಮನಸ್ಸಿಗೆ ಘಾಸಿ ಮಾಡುತ್ತವೆ. ಈ ಜಂಜಡದಿಂದ ತಪ್ಪಿಸಿಕೊಳ್ಳುವ ದಾರಿಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಒಟ್ಟಾರೆಯಾಗಿ ನೋಡಿದಾಗ, ಪರಂಪರಾಗತ ಮನಸ್ಥಿತಿಗಳಿಗೂ ಆಧುನಿಕ ಓಟಕ್ಕೂ ಮಧ್ಯೆ ಹೊಂದಾಣಿಕೆ ಸುಲಭಸಾಧ್ಯವಲ್ಲ. ಮಕ್ಕಳು, ಗಂಡಸರು, ವಯಸ್ಸಾದವರು ಹೀಗೆ ಎಲ್ಲರ ಮಧ್ಯೆ ನಲಗುವುದು ಹೆಣ್ಣುಮಕ್ಕಳೇ. ಒಂದೆಡೆ ಸಮಾಜದ ಕಟ್ಟುಪಾಡುಗಳನ್ನು ಮೀರಲಾಗದ ಪರಿಸ್ಥಿತಿ. ಇನ್ನೊಂದೆಡೆ ತನ್ನತನವನ್ನು ಕಾಯ್ದಿಟ್ಟುಕೊಳ್ಳುವ ತರಾತುರಿ. ಎಲ್ಲರಿಗೂ ಇರುವುದೊಂದೇ ಬದುಕು. ಅವರವರಿಗೆ ಅನುಸರಿಸಿಕೊಂಡು ಹೋಗುವುದರಲ್ಲಿ ಅರ್ಧದಷ್ಟು ಬದುಕು ಕಳೆದೇ ಹೋಗಿರುತ್ತದೆ. ವಯಸ್ಸಾದವರಿಗೆ ತಮ್ಮ ವಯಸ್ಸು, ಅನುಭವಕ್ಕೆ ಮರ್ಯಾದೆ ಸಿಗಬೇಕು, ತಮ್ಮ ಮಾತೇ ನಡೆಯಬೇಕು ಎನ್ನುವ ಹಟ, ಅಹಂ. ಬರುಬರುತ್ತ ಅದೇ ಅವರ ಅಸ್ತಿತ್ವವೂ ಆಗಿ ಮನೆಪೂರ್ತಿ ರಣರಂಗ! ಆದರೆ ಕಿರಿಯರೂ ಕೂಡ ದಡ್ದರೇನಲ್ಲ. ಅವರಿಗೆ ಹೆಚ್ಚು ತಿಳಿವಳಿಕೆ, ಪ್ರಪಂಚದ ಜ್ಞಾನವಿದೆ. ಅದನ್ನು ದೊಡ್ಡವರಿಗೆ ಜಾಣತನದಿಂದಲೇ ಉಪಾಯವಾಗಿ ತಿಳಿಸಿಕೊಡಬೇಕಾಗುತ್ತದೆ. ತಮ್ಮ ಬದುಕನ್ನು ತ್ಯಾಗ ಮಾಡಿ ಬದುಕುವಂಥ ಮನಸ್ಥಿತಿ ಈಗಿನ ಪೀಳಿಗೆಗಿಲ್ಲ. ದುಡಿಯುವ ಒತ್ತಡಗಳು, ಸುಖಸಮಾಧಾನದ ಹುಡುಕಾಟ, ಗುರಿಯ ಧಾವಂತದ ಮಧ್ಯೆ ಅವರಿಗೆ ಅರಿವಿಲ್ಲದೆಯೇ ಕಟುಮಾತು, ಕಠಿಣ ನಿರ್ಧಾರಗಳಿಗೆ ಬರಬೇಕಾದ ಒತ್ತಡ ಉಂಟಾಗುತ್ತಿದೆ.

ಆದ್ದರಿಂದ ಎಲ್ಲರೊಂದಿಗೂ ಬೆರೆಯುತ್ತಲೇ ತನ್ನತನವನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದನ್ನು ತಂದೆತಾಯಿಗಳು ಮಕ್ಕಳಿಗೆ ಬಾಲ್ಯದಿಂದಲೇ ಪ್ರಯೋಗಾತ್ಮಕವಾಗಿ ತಿಳಿಸಿಕೊಡುವುದು ಇಂದಿನ ತುರ್ತು. ನಮಗೆ ಬೇಕಾದವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆ? ಹೊಂದಾಣಿಕೆ ಇಲ್ಲದಿದ್ದರೂ ಜಾಣ್ಮೆಯಿಂದ ನಿಭಾಯಿಸುವುದು ಹೇಗೆ? ವಿರಸ ಕಟ್ಟಿಕೊಳ್ಳದೆ ಬಂದದ್ದನ್ನು ಧೈರ್ಯದಿಂದ ಎದುರಿಸಿ, ವಿವೇಚನೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ? ಇತ್ಯಾದಿ.

ಸಂಘರ್ಷಗಳನ್ನು ಎದುರಿಸುವುದು ಸುಲಭವಲ್ಲ, ಆದರೆ ಅದು ಕಷ್ಟವೂ ಅಲ್ಲ ಎಂದು ನಮ್ಮ ದಿನ ನಿತ್ಯದ ವ್ಯವಹಾರಗಳು, ಮಾತು, ಕೃತಿಗಳಿಂದ ತಿಳಿಸಿಕೊಡಲು ಸಾಧ್ಯವಿದೆ. ಅದಕ್ಕೆ ಜಾಣತನ, ವಿವೇಕ ಬೇಕು. ನಮ್ಮ ನಿತ್ಯದ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಸಮಾನಮನಸ್ಕರೊಂದಿಗೆ ಬೆರೆಯಲು ಸಾಕಷ್ಟು ಅವಕಾಶ, ತಂತ್ರಜ್ಞಾನ ಇಂದು ಲಭ್ಯವಿದೆ. ಒತ್ತಡ ನಿಭಾವಣೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಹಾಗಾಗಿ ನನ್ನಂತೆಯೇ ಬದುಕು ಎಂದರೆ ಯಾರಿಗೂ ಶಕ್ಯವಿಲ್ಲ. ಸ್ವಕೇಂದ್ರಿತ ಜೀವನಶೈಲಿಗೆ ತೆರೆದುಕೊಂಡಿರುವ ನಾವುಗಳು ನಮ್ಮ ನಮ್ಮ ಕಂಪಾರ್ಟ್​ಮೆಂಟುಗಳಲ್ಲಿ ಬದುಕುವುದನ್ನು ಈಗಾಗಲೇ ರೂಢಿಸಿಕೊಳ್ಳುತ್ತಿದ್ದೇವೆ. ಆದರೆ ಇದೂ ಕೂಡ ಒಂದು ವಿಶಾಲದೃಷ್ಟಿಕೋನದಿಂದಲೇ ಸಾಧ್ಯವಾಗಬೇಕು. ರಚನಾತ್ಮಕವಾಗಿ ಯೋಚಿಸಿ ನಡೆದುಕೊಳ್ಳುವುದರಿಂದ ನಾವು ಅನೇಕ ಹಿಂಸೆಗಳಿಂದ ಪಾರಾಗುತ್ತ ಬರುತ್ತೇವೆ. ಹೀಗೆ ಈ  ಎಲ್ಲ ವಿಚಾರಗಳನ್ನು ಕೇಂದ್ರೀಕರಿಸಿದ ನಿಜ ಘಟನೆ, ಪ್ರಸಂಗಗಳು ಕಥಾನಕ ಶೈಲಿಯಲ್ಲಿ ಹದಿನೈದು ದಿನಕ್ಕೊಮ್ಮೆ, ಬುಧವಾರ ನಿಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತವೆ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಸಹನಾ ಪ್ರಸಾದ್ ಬರೆದ ಈ ಬರಹವನ್ನೂ ಓದಿ : Smart Phone : ಎರಡೇ ತಿಂಗಳಲ್ಲಿ ಅತ್ತೆಯನ್ನು ಬದಲಾಯಿಸಿದ ಕಥೆ ಇದು!

Published On - 1:16 pm, Tue, 26 April 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ