Viral News: ಕೆಟ್ಟ ಕನಸಿಗೆ ಹೆದರಿ ಕದ್ದ ದೇವರ ವಿಗ್ರಹಗಳನ್ನು ವಾಪಾಸ್ ತಂದಿಟ್ಟ ಕಳ್ಳರು; ಅಂಥದ್ದೇನಾಯ್ತು?

ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು ಆ ದೇವಸ್ಥಾನದ ದೇವರ ಮೂರ್ತಿಗಳನ್ನು ಕದ್ದ ಕೆಲವೇ ದಿನಗಳಲ್ಲಿ ಅವುಗಳನ್ನು ಅರ್ಚಕರಿಗೆ ವಾಪಾಸ್ ತಂದು ಕೊಟ್ಟಿರುವ ವಿಚಿತ್ರ ಘಟನೆ ನಡೆದಿದೆ.

Viral News: ಕೆಟ್ಟ ಕನಸಿಗೆ ಹೆದರಿ ಕದ್ದ ದೇವರ ವಿಗ್ರಹಗಳನ್ನು ವಾಪಾಸ್ ತಂದಿಟ್ಟ ಕಳ್ಳರು; ಅಂಥದ್ದೇನಾಯ್ತು?
ದೇವಸ್ಥಾನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 17, 2022 | 6:06 PM

ಕಳ್ಳತನ ಮಾಡುವ ಕಳ್ಳರಿಗೂ ಭಯ, ಭಕ್ತಿಯೆಂಬುದು ಇರುತ್ತದೆ. ಈ ಹಿಂದೆ ದೇವಸ್ಥಾನದ (Hindi Temple) ದೇವಿಯ ಆಭರಣವನ್ನು ಕದಿಯಲು ಹೋದ ಕಳ್ಳ ತಾನೇ ಕೊರೆದ ರಂಧ್ರದಲ್ಲಿ ಸಿಲುಕಿಕೊಂಡ ಘಟನೆ ಭಾರೀ ವೈರಲ್ ಆಗಿತ್ತು. ವೃದ್ಧರ ಮನೆಯಿಂದ ಕಳ್ಳರು (Thieves) ಒಡವೆ ಕದ್ದುಕೊಂಡು ಹೋಗುವಾಗ ಆ ಮನೆಯ ಮಾಲೀಕರ ಕಾಲಿಗೆ ನಮಸ್ಕಾರ ಮಾಡಿ, ಆ ಆಭರಣವನ್ನೆಲ್ಲ ಬೇಗ ವಾಪಾಸ್ ಕೊಡುತ್ತೇವೆ ಎಂದು ಹೇಳಿ ಹೋದ ಘಟನೆ ಕೂಡ ನಡೆದಿತ್ತು. ಇದೀಗ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು ಆ ದೇವಸ್ಥಾನದ ದೇವರ ಮೂರ್ತಿಗಳನ್ನು ಕದ್ದ ಕೆಲವೇ ದಿನಗಳಲ್ಲಿ ಅವುಗಳನ್ನು ಅರ್ಚಕರಿಗೆ ವಾಪಾಸ್ ತಂದು ಕೊಟ್ಟಿರುವ ವಿಚಿತ್ರ ಘಟನೆ ನಡೆದಿದೆ.

ಕಳ್ಳತನದ ನಂತರ ಕಳ್ಳರು ವಸ್ತುಗಳನ್ನು ಹಿಂದಿರುಗಿಸುವ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಉತ್ತರ ಪ್ರದೇಶದಲ್ಲಿ ಇಂತಹದೊಂದು ಅಪರೂಪದ ಘಟನೆ ಇತ್ತೀಚೆಗೆ ನಡೆದಿದೆ. ಚಿತ್ರಕೂಟದ ತಾರೌನ್ಹಾದಲ್ಲಿರುವ ಪುರಾತನ ಬಾಲಾಜಿ ದೇವಸ್ಥಾನದಿಂದ ಅಷ್ಟಧಾತು ವಿಗ್ರಹಗಳನ್ನು ಕದ್ದ ಕೆಲವು ದಿನಗಳ ನಂತರ ಕಳ್ಳರು 14 ವಿಗ್ರಹಗಳನ್ನು ಅರ್ಚಕರಿಗೆ ಹಿಂದಿರುಗಿಸಿದ್ದಾರೆ. ಅಪರಾಧ ಮಾಡಿದ ನಂತರ ಆ ಕಳ್ಳರಿಗೆ ದುಃಸ್ವಪ್ನ ಬಿದ್ದಿತ್ತು. ತಮಗೆ ಬಿದ್ದ ಕೆಟ್ಟ ಕನಸಿನಿಂದ ಹೆದರಿದ ಅವರು ತಾವು ಕದ್ದ ವಿಗ್ರಹಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: Viral Video: ಸರ್ಕಾರಿ ಶಾಲೆಯಲ್ಲಿ ಒಂದೇ ಬೋರ್ಡ್​ ಮೇಲೆ 2 ಭಾಷೆ ಕಲಿಸುತ್ತಿರುವ ಶಿಕ್ಷಕರ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಮೂರು ಅನಾಥ ಹುಲಿ ಮರಿಗಳನ್ನು ಸಾಕುತ್ತಿದೆ ಈ ನಾಯಿ!; ವಿಡಿಯೋ ನೋಡಿ ನೆಟ್ಟಿಗರು ಶಾಕ್
Image
Viral News: ಬರೋಬ್ಬರಿ 30 ವರ್ಷ ಗಂಡಿನ ವೇಷದಲ್ಲಿ ಬದುಕಿದ ತಮಿಳುನಾಡಿನ ಮಹಿಳೆ!; ಕಾರಣವೇನು ಗೊತ್ತಾ?
Image
Viral News: 1 ವರ್ಷದೊಳಗೆ ಮೊಮ್ಮಗುವನ್ನು ಕೊಡದಿದ್ದರೆ 5 ಕೋಟಿ ಪರಿಹಾರ ಕೊಡಬೇಕು; ಮಗ-ಸೊಸೆ ವಿರುದ್ಧವೇ ದೂರು ನೀಡಿದ ದಂಪತಿ!
Image
Love Story: ಕತ್ತಲೆಯಲ್ಲಿ ಪ್ರೇಯಸಿಯನ್ನು ಭೇಟಿಯಾಗಲು ಇಡೀ ಗ್ರಾಮದ ಕರೆಂಟ್ ತೆಗೆದ ಭೂಪ; ಕೋಪಗೊಂಡ ಜನರು ಮಾಡಿದ್ದೇನು?

ಮೇ 9ರಂದು ರಾತ್ರಿ ತಾರೌನ್ಹಾದಲ್ಲಿರುವ ಪುರಾತನ ಬಾಲಾಜಿ ದೇವಸ್ಥಾನದಿಂದ ಹಲವು ಕೋಟಿ ರೂ. ಮೌಲ್ಯದ 16 ಅಷ್ಟಧಾತು ವಿಗ್ರಹಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಅಪರಿಚಿತ ಕಳ್ಳರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸದರ್ ಕೊತ್ವಾಲಿ ಕಾರ್ವಿಯ ಸ್ಟೇಷನ್ ಹೌಸ್ ಆಫೀಸರ್ ರಾಜೀವ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕಳುವಾದ 16 ವಿಗ್ರಹಗಳ ಪೈಕಿ 14 ವಿಗ್ರಹಗಳು ಭಾನುವಾರ ಮಹಂತ್ ರಾಮಬಾಲಕ್ ಎಂಬ ಅರ್ಚಕರ ನಿವಾಸದ ಬಳಿ ಗೋಣಿಚೀಲದಲ್ಲಿ ನಿಗೂಢವಾಗಿ ಪತ್ತೆಯಾಗಿತ್ತು. ರಾತ್ರಿ ವೇಳೆ ಭಯಂಕರ ಕನಸು ಬೀಳುತ್ತಿದೆ. ಹೀಗಾಗಿ, ಈ ವಿಗ್ರಹಗಳು ನಮಗೆ ಬೇಡ ಎಂದು ಕಳ್ಳರು ಅರ್ಚಕರಿಗೆ ಬರೆದಿರುವ ಪತ್ರವೂ ಗೋಣಿಚೀಲದ ಜೊತೆ ಸಿಕ್ಕಿತ್ತು. ಭಯದ ಕಾರಣದಿಂದ ಕಳ್ಳರು ವಿಗ್ರಹಗಳನ್ನು ಹಿಂತಿರುಗಿಸುತ್ತಿದ್ದಾರೆ.

ಇದನ್ನೂ ಓದಿ: Viral Video: ಮೂರು ಅನಾಥ ಹುಲಿ ಮರಿಗಳನ್ನು ಸಾಕುತ್ತಿದೆ ಈ ನಾಯಿ!; ವಿಡಿಯೋ ನೋಡಿ ನೆಟ್ಟಿಗರು ಶಾಕ್ 

ಪ್ರಸ್ತುತ ಎಲ್ಲಾ 14 ‘ಅಷ್ಟಧಾತು’ (ಎಂಟು ಲೋಹಗಳಿಂದ ಮಾಡಲ್ಪಟ್ಟಿದೆ) ವಿಗ್ರಹಗಳನ್ನು ಕೊತ್ವಾಲಿಯಲ್ಲಿ ಠೇವಣಿ ಮಾಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ