Viral News: 1 ವರ್ಷದೊಳಗೆ ಮೊಮ್ಮಗುವನ್ನು ಕೊಡದಿದ್ದರೆ 5 ಕೋಟಿ ಪರಿಹಾರ ಕೊಡಬೇಕು; ಮಗ-ಸೊಸೆ ವಿರುದ್ಧವೇ ದೂರು ನೀಡಿದ ದಂಪತಿ!

Trending News: ನಮ್ಮ ಮಗನಿಗೆ 2016ರಲ್ಲಿ ಮದುವೆ ಮಾಡಿಸಿದ್ದೆವು. ನಮ್ಮ ಸ್ವಂತ ಹಣದಿಂದ ಹನಿಮೂನ್‍ಗೆ ಥೈಲ್ಯಾಂಡ್‍ಗೂ ಕಳುಹಿಸಿದ್ದೆವು. ಆದರೆ, ಇದುವರೆಗೂ ನಮ್ಮ ಮಗ ಸೊಸೆ ಮೊಮ್ಮಗುವನ್ನು ನೀಡಿಲ್ಲ ಎಂದು ದಂಪತಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

Viral News: 1 ವರ್ಷದೊಳಗೆ ಮೊಮ್ಮಗುವನ್ನು ಕೊಡದಿದ್ದರೆ 5 ಕೋಟಿ ಪರಿಹಾರ ಕೊಡಬೇಕು; ಮಗ-ಸೊಸೆ ವಿರುದ್ಧವೇ ದೂರು ನೀಡಿದ ದಂಪತಿ!
ಮೊಮ್ಮಗು ಬೇಕೆಂದು ಕೇಸ್ ಹಾಕಿದ ಪೋಷಕರುImage Credit source: India Today
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 12, 2022 | 8:53 PM

ಹರಿದ್ವಾರ: ಮಕ್ಕಳ ಮದುವೆ ಮಾಡಬೇಕು, ಮೊಮ್ಮಕ್ಕಳನ್ನು ನೋಡಬೇಕೆಂಬ ಆಸೆ ಎಲ್ಲ ಪೋಷಕರಿಗೂ ಇದ್ದೇ ಇರುತ್ತದೆ. ಆದರೆ, ಇಲ್ಲೊಂದು ದಂಪತಿ “ನಮಗೆ ಒಂದು ವರ್ಷದ ಒಳಗೆ ಮೊಮ್ಮಗು ಬೇಕು, ಇಲ್ಲದಿದ್ದರೆ ನನ್ನ ಮಗ-ಸೊಸೆ ನಮಗೆ 5 ಕೋಟಿ ರೂ. ಪರಿಹಾರ ನೀಡಬೇಕು” ಎಂದು ಉತ್ತರಾಖಂಡದ ಕೋರ್ಟ್‌ (Uttarakhand Court) ಮೆಟ್ಟಿಲೇರಿದ್ದಾರೆ. ಎಸ್‌ಆರ್ ಪ್ರಸಾದ್ ಮತ್ತು ಅವರ ಪತ್ನಿ ಉತ್ತರಾಖಂಡದ ನ್ಯಾಯಾಲಯದಲ್ಲಿ ತಮ್ಮ ಮಗ ಹಾಗೂ ಸೊಸೆಯ ವಿರುದ್ಧವೇ ದಾವೆ ಹೂಡಿದ್ದಾರೆ.

ಮೊಮ್ಮಗುವಿಗಾಗಿ ತಮ್ಮ ಮಗನ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿರುವ ದಂಪತಿಯ ವಿಚಿತ್ರ ಘಟನೆ ಹರಿದ್ವಾರದಲ್ಲಿ ನಡೆದಿದೆ. ತಮ್ಮ ಮಗನಿಗೆ ಅಮೆರಿಕದಲ್ಲಿ ಶಿಕ್ಷಣ ಕೊಡಿಸಿದ ನಂತರ ತಮ್ಮ ಬಳಿ ಯಾವುದೇ ಹಣ ಉಳಿದಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ. ನಮ್ಮ ಮಗನಿಗೆ 2016ರಲ್ಲಿ ಮದುವೆ ಮಾಡಿಸಿದ್ದೆವು. ನಮಗೆ ಮೊಮ್ಮಕ್ಕಳನ್ನು ನೋಡುವ ಆಸೆ ಇತ್ತು. ಆದರೆ, ಇದುವರೆಗೂ ನಮ್ಮ ಮಗ ಸೊಸೆ ನಮಗೆ ಮೊಮ್ಮಗುವನ್ನು ನೀಡಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
Viral Video: ಬಾವಿಗೆ ಬಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ಕೊಯಮತ್ತೂರಿನ ಅರಣ್ಯಾಧಿಕಾರಿಗಳು; ವಿಡಿಯೋ ವೈರಲ್
Image
ನಿಮಗಿದು ಗೊತ್ತೇ?; 73 ವರ್ಷಗಳಿಂದ ಭಾರತದ ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಜನರು!
Image
Love Story: ಕತ್ತಲೆಯಲ್ಲಿ ಪ್ರೇಯಸಿಯನ್ನು ಭೇಟಿಯಾಗಲು ಇಡೀ ಗ್ರಾಮದ ಕರೆಂಟ್ ತೆಗೆದ ಭೂಪ; ಕೋಪಗೊಂಡ ಜನರು ಮಾಡಿದ್ದೇನು?
Image
Viral Video: 28 ಹೆಂಡತಿಯರು, 135 ಮಕ್ಕಳು, 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವೃದ್ಧ; ವಿಡಿಯೋ ವೈರಲ್!

ನನ್ನ ಮಗನಿಗೆ ನನ್ನ ಎಲ್ಲ ಹಣವನ್ನೂ ಕೊಟ್ಟಿದ್ದೇನೆ. ಆತನನ್ನು ಅಮೆರಿಕದಲ್ಲಿ ಓದಿಸಿದ್ದೇನೆ. ಈಗ ನನ್ನ ಬಳಿ ಹಣ ಉಳಿದಿಲ್ಲ. ನಮ್ಮ ಮನೆ ಕಟ್ಟಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದೆವು. ನಾವು ಆರ್ಥಿಕವಾಗಿ ಮತ್ತು ವೈಯಕ್ತಿಕವಾಗಿ ತೊಂದರೆಯಲ್ಲಿದ್ದೇವೆ. ಹೀಗಾಗಿ, ಮಗ ಹಾಗೂ ಸೊಸೆಯಿಂದ ತಲಾ 5 ಕೋಟಿ ರೂ ಪರಿಹಾರ ಕೇಳಿದ್ದೇವೆ ಎಂದು ಅವರು ಹೇಳಿದ್ದಾರೆ.

ಮೊಮ್ಮಗುವನ್ನು ಮಾಡಿಕೊಳ್ಳಲು ನಮ್ಮ ಮಗ ಮತ್ತು ಸೊಸೆ ನಿರಾಕರಿಸುತ್ತಿದ್ದಾರೆ. ಇದರಿಂದ ನಾವು ಮಾನಸಿಕವಾಗಿ ನೊಂದಿದ್ದೇವೆ. ನಮ್ಮ ಮಗನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಹಣ ಖರ್ಚು ಮಾಡಿ ಆತನನ್ನು ಉತ್ತಮ ಪೈಲಟ್ ಆಗಿ ಮಾಡಿದ್ದೇವೆ. 2016ರಲ್ಲಿ ಭಾರೀ ಖರ್ಚು ಮಾಡಿ ನಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದೇವೆ. ಮಗ-ಸೊಸೆಯನ್ನು ನಮ್ಮ ಸ್ವಂತ ಹಣದಿಂದ ಹನಿಮೂನ್‍ಗೆ ಥೈಲ್ಯಾಂಡ್‍ಗೆ ಕಳುಹಿಸಿದ್ದೆವು. ಆದರೆ, ಅವರಿಬ್ಬರೂ ಮದುವೆಯಾಗಿ 6 ವರ್ಷಗಳಾದರೂ ಮೊಮ್ಮಗುವನ್ನು ನೀಡಲು ನಿರಾಕರಿಸುತ್ತಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. ತಮಗೆ ನ್ಯಾಯ ಕೊಡಿಸುವಂತೆ ಹರಿದ್ವಾರದ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಮದುವೆಯ ನಂತರ ನನ್ನ ಸೊಸೆ ನನ್ನ ಮಗನ ಬಳಿ ಹೈದರಾಬಾದ್‍ಗೆ ಶಿಫ್ಟ್ ಆಗೋಣ ಎಂದು ಒತ್ತಾಯಿಸಿದಳು. ಅಂದಿನಿಂದ ಮಗ, ಸೊಸೆ ನಮ್ಮೊಂದಿಗೆ ಮಾತನಾಡುತ್ತಿಲ್ಲ. ನನ್ನ ಸೊಸೆಯ ಕುಟುಂಬದ ಜವಾಬ್ದಾರಿಯನ್ನು ನನ್ನ ಮಗನ ಸಂಬಳದಲ್ಲಿಯೇ ನಡೆಸಲಾಗುತ್ತಿದೆ. ಹೆಂಡತಿಯ ಅನುಮತಿ ಇಲ್ಲದೆ ನನ್ನ ಮಗ ಏನೂ ಮಾಡುತ್ತಿಲ್ಲ. ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಮುಂದಿನ ಒಂದು ವರ್ಷದೊಳಗೆ ನಮ್ಮ ಸೊಸೆ ಗರ್ಭ ಧರಿಸಬೇಕು ಎಂದು ಮಗ ಮತ್ತು ಸೊಸೆಗೆ ಕೋರ್ಟ್​ ಸೂಚನೆ ನೀಡಬೇಕು. ಇನ್ನೊಂದು ವರ್ಷದಲ್ಲಿ ನಮಗೆ ಮೊಮ್ಮಗುವನ್ನು ನೀಡದೆ ಹೋದರೆ ನಮಗೆ ಅವರು 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಮೊಕದ್ದಮೆಯಲ್ಲಿ ಮನವಿ ಮಾಡಲಾಗಿದೆ. ಈ ವಿಚಿತ್ರವಾದ ಪ್ರಕರಣ ಎಲ್ಲೆಡೆ ಭಾರೀ ಸುದ್ದಿಯಾಗುತ್ತಿದೆ.

ಇತರೆ ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Thu, 12 May 22

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್