Viral Video: ಬಾವಿಗೆ ಬಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ಕೊಯಮತ್ತೂರಿನ ಅರಣ್ಯಾಧಿಕಾರಿಗಳು; ವಿಡಿಯೋ ವೈರಲ್

ಈ ಜಿಂಕೆ ಮರಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬಲೆಯ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಬಳಿಕ ಜಿಂಕೆ ಮರಿಯನ್ನು ರಕ್ಷಿಸಿ, ನಂತರ ಅದನ್ನು ಕಾಡಿಗೆ ಬಿಡಲಾಯಿತು.

Viral Video: ಬಾವಿಗೆ ಬಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ಕೊಯಮತ್ತೂರಿನ ಅರಣ್ಯಾಧಿಕಾರಿಗಳು; ವಿಡಿಯೋ ವೈರಲ್
ಜಿಂಕೆಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ
Follow us
| Updated By: ಸುಷ್ಮಾ ಚಕ್ರೆ

Updated on:May 12, 2022 | 6:47 PM

ಕೊಯಮತ್ತೂರು: ತೆರೆದ ಬಾವಿಗೆ ಬಿದ್ದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಜಿಂಕೆ  (Deer) ಮರಿಯನ್ನು ಪ್ರಾಣ ಹಂಗು ತೊರೆದು ಬಾವಿಗೆ ಹಾರಿ ಕಾಪಾಡಿರುವ ಅರಣ್ಯಾಧಿಕಾರಿಗಳ ವಿಡಿಯೋ ಭಾರೀ ವೈರಲ್ (Video Viral) ಆಗಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಖಾಸಗಿ ಜಮೀನಿನಲ್ಲಿ ತೆರೆದ ಬಾವಿಗೆ ಬಿದ್ದ 2 ವರ್ಷದ ಜಿಂಕೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅರಣ್ಯ ಇಲಾಖೆಯ ಸಿಬ್ಬಂದಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬಲೆಯ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಬಳಿಕ ಜಿಂಕೆ ಮರಿಯನ್ನು ರಕ್ಷಿಸಿ, ನಂತರ ಅದನ್ನು ಕಾಡಿಗೆ ಬಿಡಲಾಯಿತು. ಸುದ್ದಿ ಸಂಸ್ಥೆ ANI ರಕ್ಷಣಾ ಕಾರ್ಯಾಚರಣೆಯ ಫೋಟೋಗಳನ್ನು ಟ್ವಿಟ್ಟರ್​​ನಲ್ಲಿ ಶೇರ್ ಮಾಡಿದೆ. ಕೊಯಮತ್ತೂರಿನ ಪೀಡಂಪಲ್ಲಿ ಗ್ರಾಮದಲ್ಲಿ ಆಳವಾದ ಬಾವಿಯಲ್ಲಿ ಸಿಲುಕಿದ್ದ ಎರಡು ವರ್ಷದ ಜಿಂಕೆ ಮರಿಯನ್ನು ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿದ್ದಾರೆ. ನಂತರ ಜಿಂಕೆಯನ್ನು ನಂತರ ಕಾಡಿಗೆ ಬಿಡಲಾಯಿತು.

ಇದನ್ನೂ ಓದಿ
Image
ನಿಮಗಿದು ಗೊತ್ತೇ?; 73 ವರ್ಷಗಳಿಂದ ಭಾರತದ ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಜನರು!
Image
Love Story: ಕತ್ತಲೆಯಲ್ಲಿ ಪ್ರೇಯಸಿಯನ್ನು ಭೇಟಿಯಾಗಲು ಇಡೀ ಗ್ರಾಮದ ಕರೆಂಟ್ ತೆಗೆದ ಭೂಪ; ಕೋಪಗೊಂಡ ಜನರು ಮಾಡಿದ್ದೇನು?
Image
Viral Video: 28 ಹೆಂಡತಿಯರು, 135 ಮಕ್ಕಳು, 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವೃದ್ಧ; ವಿಡಿಯೋ ವೈರಲ್!

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಾಣಿಗಳ ರಕ್ಷಣೆಯ ಕಥೆಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಸುಪ್ರಿಯಾ ಸಾಹು ಅವರು ಈ ರಕ್ಷಣಾ ಕಾರ್ಯಾಚರಣೆಯ ನಂತರದ ದೃಶ್ಯದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಾವಿಯಿಂದ ಮೇಲೆ ಬಂದ ಹೆದರಿದ ಜಿಂಕೆ ಮರಿ ಕಾಡಿಗೆ ಓಡಿಹೋಗುವುದನ್ನು ಮತ್ತೊಂದು ವಿಡಿಯೋದಲ್ಲಿ ನೋಡಬಹುದು. ಅರಣ್ಯ ಇಲಾಖೆಯು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯ ಸಹಾಯದಿಂದ ತೆರೆದ ಬಾವಿಯಿಂದ ಜಿಂಕೆ ಮರಿಯನ್ನು ಸುರಕ್ಷಿತವಾಗಿ ರಕ್ಷಿಸಿ ಮತ್ತು ಬಿಡುಗಡೆ ಮಾಡಿದೆ.

ಅದೃಷ್ಟವಶಾತ್, ಜಿಂಕೆ ಆರೋಗ್ಯಕರವಾಗಿದೆ ಮತ್ತು ಅದರ ಮೇಲೆ ಸಣ್ಣ ಪುಟ್ಟ ಗಾಯಗಳಾಗಿವೆ. ಜಿಂಕೆಯ ಜೀವ ಉಳಿಸುವಲ್ಲಿ ಅರಣ್ಯಾಧಿಕಾರಿಗಳ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಈ ಜಗತ್ತಿನಲ್ಲಿ ಇನ್ನೂ ಮಾನವೀಯತೆ ಉಳಿದಿದೆ” ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತರೆ ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Thu, 12 May 22