Viral Video: ಫ್ಯಾನ್​ಗೆ ದುಪಟ್ಟಾ ಸಿಲುಕಿಕೊಂಡು ಉಸಿರುಗಟ್ಟಿದ ನಾಯಕಿ; ಮತ್ತೆ ಟ್ರೋಲ್ ಆಯ್ತು ಹಿಂದಿ ಸೀರಿಯಲ್

Funny Video: ಇದೀಗ ವೈರಲ್ ಆಗಿರುವ ಹಿಂದಿ ಧಾರಾವಾಹಿಯ ವಿಡಿಯೋದಲ್ಲಿ ಯುವತಿಯೊಬ್ಬಳು ಸಿನಿಮೀಯವಾಗಿ ದುಪಟ್ಟಾದಿಂದ ಕುತ್ತಿಗೆ ಬಿಗಿದುಕೊಂಡಿರುವುದನ್ನು ನೋಡಬಹುದು.

Viral Video: ಫ್ಯಾನ್​ಗೆ ದುಪಟ್ಟಾ ಸಿಲುಕಿಕೊಂಡು ಉಸಿರುಗಟ್ಟಿದ ನಾಯಕಿ; ಮತ್ತೆ ಟ್ರೋಲ್ ಆಯ್ತು ಹಿಂದಿ ಸೀರಿಯಲ್
ಹಿಂದಿ ಧಾರಾವಾಹಿಯ ವಿಡಿಯೋ ವೈರಲ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 13, 2022 | 4:27 PM

ಈ ಧಾರಾವಾಹಿಗಳಲ್ಲಿ ಕೆಲವೊಮ್ಮೆ ಏನೇನೋ ಪ್ರಯೋಗಗಳನ್ನು ಮಾಡುತ್ತಾರೆ. ಅದೆಲ್ಲ ಸತ್ಯವಲ್ಲ ಎಂದು ತಿಳಿದಿದ್ದರೂ ಅದನ್ನು ನೋಡಿ ನಕ್ಕು ಸುಮ್ಮನಾಗಿಬಿಡುತ್ತೇವೆ. ಇನ್ನು ಕೆಲವೊಮ್ಮೆ ಧಾರಾವಾಹಿಗಳಲ್ಲಿರುವ ಅತಿರೇಕವಾದ ದೃಶ್ಯಗಳನ್ನು ನೋಡಿ ಟ್ರೋಲ್ ಮಾಡುತ್ತೇವೆ. ಧಾರಾವಾಹಿಗಳನ್ನು ಬೈದುಕೊಳ್ಳುತ್ತಲೇ ಅದನ್ನು ನೋಡುವುದನ್ನು ಮಾತ್ರ ಮಿಸ್ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ಹಿಂದಿ ಧಾರಾವಾಹಿಗಳು ಆಗಾಗ ಟ್ರೋಲ್ ಆಗುತ್ತಲೇ ಇರುತ್ತವೆ. ಅದನ್ನು ಬರೆಯುವವರ ತಲೆಯಲ್ಲಿ ಬುದ್ಧಿಯೇ ಇರುವುದಿಲ್ಲವೇ? ಎಂದು ಬೈದುಕೊಳ್ಳುತ್ತಲೇ ಆ ಧಾರಾವಾಹಿಗಳನ್ನು ಎಂಜಾಯ್ ಮಾಡುವವರಿದ್ದಾರೆ. ಈ ರೀತಿಯ ನೆಗೆಟಿವ್ ಪಬ್ಲಿಸಿಟಿ ಸಿಕ್ಕು, ತಮ್ಮ ಧಾರಾವಾಹಿಯನ್ನು (Serials) ಎಲ್ಲರೂ ನೋಡಲಿ ಎಂಬ ಕಾರಣಕ್ಕೇ ಕೆಲವು ಧಾರಾವಾಹಿಗಳ ನಿರ್ದೇಶಕರು ಬ್ಲಂಡರ್ ಆದ ಸ್ಕ್ರೀನ್​ ಪ್ಲೇಗಳನ್ನು ಮಾಡುತ್ತಾರೆ. ಇದೀಗ ವೈರಲ್ ಆಗಿರುವ ಹಿಂದಿ ಧಾರಾವಾಹಿಯ ವಿಡಿಯೋದಲ್ಲಿ ಯುವತಿಯೊಬ್ಬಳು ಸಿನಿಮೀಯವಾಗಿ ದುಪಟ್ಟಾದಿಂದ ಕುತ್ತಿಗೆ ಬಿಗಿದುಕೊಂಡಿರುವುದನ್ನು ನೋಡಬಹುದು.

ಹಿಂದಿ ಧಾರಾವಾಹಿಯಲ್ಲಿ ಗೋಪಿ ಬಹು ಲ್ಯಾಪ್‌ಟಾಪ್ ಅನ್ನು ನೀರು ಮತ್ತು ಸೋಪಿನಿಂದ ತೊಳೆಯುವುದರಿಂದ ಹಿಡಿದು, ಮಹಿಳೆ ತನ್ನ ಮನೆಯಲ್ಲಿದ್ದ ಮೊನಾಲಿಸಾಳ ಫೋಟೋಗೆ ಹಾರ ಹಾಕಿ, ಮಂಗಳಾರತಿ ಮಾಡುವವರೆಗೆ ಅನೇಕ ತಮಾಷೆಯ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಈ ರೀತಿಯ ಲಾಜಿಕ್ ಇಲ್ಲದ ಸ್ಕ್ರೀನ್​ ಪ್ಲೇಗೆ ಭಾರತದ ಧಾರಾವಾಹಿಗಳು ಹೆಸರುವಾಸಿಯಾಗಿವೆ.

ಇದನ್ನೂ ಓದಿ
Image
Viral News: 1 ವರ್ಷದೊಳಗೆ ಮೊಮ್ಮಗುವನ್ನು ಕೊಡದಿದ್ದರೆ 5 ಕೋಟಿ ಪರಿಹಾರ ಕೊಡಬೇಕು; ಮಗ-ಸೊಸೆ ವಿರುದ್ಧವೇ ದೂರು ನೀಡಿದ ದಂಪತಿ!
Image
Viral Video: ಬಾವಿಗೆ ಬಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ಕೊಯಮತ್ತೂರಿನ ಅರಣ್ಯಾಧಿಕಾರಿಗಳು; ವಿಡಿಯೋ ವೈರಲ್
Image
ನಿಮಗಿದು ಗೊತ್ತೇ?; 73 ವರ್ಷಗಳಿಂದ ಭಾರತದ ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಜನರು!
Image
Love Story: ಕತ್ತಲೆಯಲ್ಲಿ ಪ್ರೇಯಸಿಯನ್ನು ಭೇಟಿಯಾಗಲು ಇಡೀ ಗ್ರಾಮದ ಕರೆಂಟ್ ತೆಗೆದ ಭೂಪ; ಕೋಪಗೊಂಡ ಜನರು ಮಾಡಿದ್ದೇನು?

ಇದೀಗ ಸಂಗೀತಾ ಘೋಷ್ ನಿರ್ವಹಿಸಿದ ಪಾತ್ರ ತನ್ನ ಭುಜದ ಮೇಲೆ ತನ್ನ ದುಪಟ್ಟಾ ಹಾಕಿಕೊಳ್ಳುವಾಗ ಅಚಾನಕ್ಕಾಗಿ ಆ ದುಪಟ್ಟಾ ಹಿಂದೆ ಇದ್ದ ಫ್ಯಾನ್​ಗೆ ಸಿಕ್ಕಿಹಾಕಿಕೊಳ್ಳುತ್ತದೆ. ಸುತ್ತಲೂ ಆಕೆಯ ಜೊತೆ ಕೆಲಸ ಮಾಡುವ ವೈದ್ಯರು ನೋಡುತ್ತಾ ನಿಂತಿರುತ್ತಾರೆ. ಆಗ ದುಪಟ್ಟಾ ಫ್ಯಾನ್​ಗೆ ಸಿಕ್ಕಿಕೊಂಡು ಆಕೆಯ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ. ಇದರಿಂದ ಆಕೆ ಉಸಿರುಗಟ್ಟಿ ಇನ್ನೇನು ಸಾಯುತ್ತಾಳೆ ಎಂಬ ಸ್ಥಿತಿಗೆ ಬರುತ್ತಾರೆ.

ಮಹಿಳೆ ಉಸಿರಾಡಲು ಕಷ್ಟಪಡುತ್ತಿರುವಾಗ ಫ್ಯಾನ್‌ನ ಬ್ಲೇಡ್‌ಗಳಲ್ಲಿ ದುಪಟ್ಟಾ ಸಿಕ್ಕಿಹಾಕಿಕೊಳ್ಳುತ್ತದೆ. ಅಷ್ಟರಲ್ಲಿ ಆಕೆಯ ಪ್ರಿಯಕರ ಭಯದಿಂದ ಆಕೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ.

ಆಗ ಮತ್ತೊಬ್ಬಳು ಯುವತಿ ಓಡಿಹೋಗಿ ಫ್ಯಾನ್​ನ ಸ್ವಿಚ್ ಆಫ್ ಮಾಡಲು ಓಡುತ್ತಾಳೆ. ಸುಮಾರು ಎರಡು ನಿಮಿಷಗಳ ನಂತರ ಆಕೆಯ ಪ್ರಿಯಕರ ತನ್ನ ಹಲ್ಲುಗಳನ್ನು ಬಳಸಿ ದುಪಟ್ಟಾವನ್ನು ಕಚ್ಚಿ, ಅದನ್ನು ತುಂಡು ಮಾಡಿ ಆಕೆಯ ಪ್ರಾಣ ಉಳಿಸುತ್ತಾನೆ.

ಈ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 1.3 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೋ ನೋಡಿದ ನೆಟಿಜನ್‌ಗಳು ಕಂಗಾಲಾಗಿದ್ದಾರೆ. ಇನ್ನೂ ಈ ಕಣ್ಣಲ್ಲಿ ಏನೇನು ನೋಡಬೇಕೋ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ