Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮುದ್ದೆ ಊಟ ಸವಿದ ಆಶಿಶ್ ವಿದ್ಯಾರ್ಥಿ; ಏನು ವಿಶೇಷ? ಇಲ್ಲಿದೆ ನೋಡಿ

Ashish Vidyarthi | Food Blog: ಇತ್ತೀಚೆಗೆ ಆಶಿಷ್ ವಿದ್ಯಾರ್ಥಿ ಹೊಸ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಬೆಂಗಳೂರಿನ ‘ಗೌಡರ ಮುದ್ದೆ ಮನೆ’ಯ ಊಟದ ಪರಿಚಯ ಮಾಡಿಕೊಟ್ಟಿದ್ದಾರೆ. ಮುದ್ದೆ ಹಾಗೂ ಮಟನ್​ ಸವಿದಿರುವ ಆಶಿಷ್ ವಿದ್ಯಾರ್ಥಿಯವರಿಗೆ ಮತ್ತೋರ್ವ ಪ್ರಖ್ಯಾತ ಫುಡ್​ ವಿ-ಲಾಗರ್ ಆಗಿರುವ ಕೃಪಾಲ್ ಅಮಾನ್ನ ಸಾಥ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮುದ್ದೆ ಊಟ ಸವಿದ ಆಶಿಶ್ ವಿದ್ಯಾರ್ಥಿ; ಏನು ವಿಶೇಷ? ಇಲ್ಲಿದೆ ನೋಡಿ
ಕೃಪಾಲ್ ಅಮಾನ್ನ ಹಾಗೂ ಆಶಿಶ್ ವಿದ್ಯಾರ್ಥಿ
Follow us
TV9 Web
| Updated By: ಮದನ್​ ಕುಮಾರ್​

Updated on:May 21, 2022 | 11:47 AM

ಸ್ಯಾಂಡಲ್​ವುಡ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ನಟ ಆಶಿಷ್ ವಿದ್ಯಾರ್ಥಿ. ಪ್ರಸ್ತುತ ಅವರು ಫುಡ್ ಬ್ಲಾಗರ್​ ಆಗಿ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ಆಹಾರದ ಜತೆಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಂಸ್ಕೃತಿಯನ್ನು ತಿಳಿಯುವ ಅವರು ಅದನ್ನೆಲ್ಲವನ್ನೂ ಯುಟ್ಯೂಬ್ ಮೂಲಕ ಹಾಗೂ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ. ಆಶಿಷ್ ವಿದ್ಯಾರ್ಥಿ (Ashish Vidyarthi) ಅವರು ಕರ್ನಾಟಕ ಸೇರಿದಂತೆ ದೇಶಾದ ವಿವಿಧ ಮೂಲೆಗಳಿಗೆ ಪ್ರವಾಸ ಮಾಡಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಆಹಾರದ ಕುರಿತ ಅವರ ವಿಡಿಯೋಗಳಂತೂ ನೋಡುಗರಿಗೆ ಬಾಯಲ್ಲಿ ನೀರೂರಿಸುತ್ತವೆ. ಇತ್ತೀಚೆಗೆ ಆಶಿಷ್ ವಿದ್ಯಾರ್ಥಿ ಹೊಸ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಬೆಂಗಳೂರಿನ (Bengaluru) ‘ಗೌಡರ ಮುದ್ದೆ ಮನೆ’ಯ ಊಟದ ಪರಿಚಯ ಮಾಡಿಕೊಟ್ಟಿದ್ದಾರೆ. ಮುದ್ದೆ ಹಾಗೂ ಮಟನ್​ ಸವಿದಿರುವ ಆಶಿಷ್ ವಿದ್ಯಾರ್ಥಿಯವರಿಗೆ ಮತ್ತೋರ್ವ ಪ್ರಖ್ಯಾತ ಫುಡ್​ ವಿ-ಲಾಗರ್ ಆಗಿರುವ ಕೃಪಾಲ್ ಅಮಾನ್ನ (Kripal Amanna) ಸಾಥ್ ನೀಡಿದ್ದಾರೆ.

ಬೆಂಗಳೂರಿನ ‘ಗೌಡರ ಮುದ್ದೆ ಮನೆ’ಗೆ ಭೇಟಿ ನೀಡಿರುವ ಕೃಪಾಲ್ ಹಾಗೂ ಆಶಿಶ್, ಅದರ ಸಂಪೂರ್ಣ ವಿಡಿಯೋ ಹಂಚಿಕೊಂಡಿದ್ದಾರೆ. ಆಹಾರದ ಕುರಿತ ವಿಡಿಯೋಗಳಿಂದ ದೇಶಾದ್ಯಂತ ಸುದ್ದಿಯಾಗಿರುವ ಆಶಿಶ್ ಹಾಗೂ ಕೃಪಾಲ್ ಸ್ವತಃ ತಮ್ಮೀರ್ವರ ಭೇಟಿಯ ಬಗ್ಗೆಯೂ ಬರೆದುಕೊಂಡಿದ್ದಾರೆ. ‘‘ಎರಡನೇ ಬಾರಿಗೆ ಕೃಪಾಲ್ ಅವರನ್ನು ಭೇಟಿಯಾಗುತ್ತಿದ್ದೇನೆ’’ ಎಂದು ಬರೆದುಕೊಂಡಿರುವ ಆಶಿಶ್ ವಿದ್ಯಾರ್ಥಿ, ‘‘ಇದಿನ್ನೂ ಹೆಚ್ಚಾಗಲಿದೆ. ಇದೀಗ ನಾವು ಗೌಡರ ಮುದ್ದೆ ಮನೆಗೆ ಭೇಟಿ ನೀಡಿದ್ದೇವೆ. ನಿಮಗೂ ವಿಡಿಯೋ ಇಷ್ಟವಾಗಬಹುದು’’ ಎಂದಿದ್ದಾರೆ.

ಇದನ್ನೂ ಓದಿ
Image
ಫ್ಯಾಟ್​ ಸರ್ಜರಿ ವೈಫಲ್ಯದಿಂದ ನಟಿ ಚೇತನಾ ರಾಜ್​ ನಿಧನ: ಪುತ್ರಿಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಪ್ಪ-ಅಮ್ಮ
Image
ದಾರಿಯಲ್ಲಿ ಹಣ್ಣುಗಳನ್ನು ಬೀಳಿಸಿಕೊಂಡ ವ್ಯಕ್ತಿಯ ನೆರವಿಗೆ ಧಾವಿಸಿದ ಪುಟಾಣಿಗಳು; ವಿಡಿಯೋ ವೈರಲ್
Image
ನಾಯಿಯ ಹಾಲು ಕುಡಿದ ಕರು; ಅಚ್ಚರಿ ವಿಡಿಯೋ ನೋಡಿ
Image
ಈ ಚಿತ್ರದಲ್ಲಿ ನೀವು ಮೊದಲು ಗುರುತಿಸುವ ಪ್ರಾಣಿ ಯಾವುದು? ಇದರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಬಹುದು!

ಆಶಿಶ್ ವಿದ್ಯಾರ್ಥಿ ಹಂಚಿಕೊಂಡಿರುವ ಟ್ವೀಟ್:

‘ಗೌಡರ ಮುದ್ದೆ ಮನೆ’ಯ ಪರಿಚಯ ಮಾಡಿಸಿರುವ ‘ಕೋಟಿಗೊಬ್ಬ’ ಖ್ಯಾತಿಯ ನಟ, ಫಾರ್ಮಸಿಸ್ಟ್​ ಆಗಿದ್ದು, ಇದೀಗ ಹೋಟೆಲ್ ನಡೆಸುತ್ತಿರುವ ಮಾಲಿಕ ಚಂದ್ರಶೇಖರ್ ಅವರನ್ನು ಜನರಿಗೆ ಪರಿಚಯಿಸಿದ್ದಾರೆ. ಜತೆಗೆ ಅಲ್ಲಿನ ಊಟವನ್ನು ಸವಿಯುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದು, ಅದರ ಹಿಂದಿನ ಪಾಕ ಪ್ರವೀಣರನ್ನೂ ಪರಿಚಯಿಸಿದ್ದಾರೆ. ಆಶಿಶ್ ವಿದ್ಯಾರ್ಥಿ ಸವಿದ ಆಹಾರದಲ್ಲಿ ಏನೇನು ವಿಶೇಷವಿದೆ ಎಂಬ ಕುತೂಹಲ ನಿಮಗಿದ್ದರೆ ವಿಡಿಯೋ ಇಲ್ಲಿದೆ.

ಆಶಿಶ್ ವಿದ್ಯಾರ್ಥಿ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

ಬಹುಭಾಷೆಗಳ ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಆಶಿಶ್ ವಿದ್ಯಾರ್ಥಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಹೊಸ ಹವ್ಯಾಸವು ಜನರನ್ನು ಭೇಟಿಯಾಗಲು, ಅವರನ್ನು ಅರ್ರತ ಮಾಡಿಕೊಳ್ಳುವ ವೇದಿಕೆ ಎನ್ನುವ ಆಶಿಶ್ ವಿದ್ಯಾರ್ಥಿ, ತಮ್ಮ ಅನುಭವಗಳನ್ನು ಯುಟ್ಯೂಬ್ ಮೂಲಕ ಜನರ ಮುಂದೆ ಪ್ರಸ್ತುತಪಡಿಸುತ್ತಾರೆ. ಸರಿಸುಮಾರು 8 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಅವರು ಹೊಂದಿದ್ದಾರೆ.

ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ | ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Tue, 17 May 22

ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ