AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾರಿಯಲ್ಲಿ ಹಣ್ಣುಗಳನ್ನು ಬೀಳಿಸಿಕೊಂಡ ವ್ಯಕ್ತಿಯ ನೆರವಿಗೆ ಧಾವಿಸಿದ ಪುಟಾಣಿಗಳು; ವಿಡಿಯೋ ವೈರಲ್

Viral Video: ವ್ಯಕ್ತಿಯೋರ್ವರು ಹಣ್ಣುಗಳನ್ನು ಸಾಗಿಸುತ್ತಾ ಇರುವಾಗ ಆಯತಪ್ಪಿ ಹಣ್ಣುಗಳೆಲ್ಲವೂ ಕೆಳಗುರುಳುತ್ತವೆ. ತಕ್ಷಣವೇ ಸುತ್ತಮುತ್ತ ಇದ್ದ ಪುಟಾಣಿ ಮಕ್ಕಳು ಆಗಮಿಸಿ ಹಣ್ಣುಗಳನ್ನು ಕಾರ್ಟ್​ಗೆ ತುಂಬಿಸುತ್ತಾರೆ. ಈ ಸಂದರ್ಭದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ದಾರಿಯಲ್ಲಿ ಹಣ್ಣುಗಳನ್ನು ಬೀಳಿಸಿಕೊಂಡ ವ್ಯಕ್ತಿಯ ನೆರವಿಗೆ ಧಾವಿಸಿದ ಪುಟಾಣಿಗಳು; ವಿಡಿಯೋ ವೈರಲ್
ಮಕ್ಕಳು ಸಹಾಯ ಮಾಡುತ್ತಿರುವ ದೃಶ್ಯ
Follow us
TV9 Web
| Updated By: shivaprasad.hs

Updated on: May 17, 2022 | 2:40 PM

ಯಾವುದೇ ಪ್ರತಿಫಲದ ಅಪೇಕ್ಷಿಯಿಲ್ಲದೆ ಮತ್ತೋರ್ವರಿಗೆ ಸಹಾಯ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆಯುತ್ತವೆ. ದಯೆಯನ್ನು ವ್ಯಕ್ತಪಡಿಸುವ ಇಂತಹ ವಿಡಿಯೋಗಳು ವೀಕ್ಷಿಸಲು ಹೃದಯಸ್ಪರ್ಶಿಯಾಗಿರುತ್ತವೆ. ಹೀಗಾಗಿಯೇ ಜನರು ಇವುಗಳನ್ನು ಇಷ್ಟಪಟ್ಟು ನೋಡುತ್ತಾರೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಶಾಪಿಂಗ್ ಕಾರ್ಟ್​​ನಲ್ಲಿಟ್ಟು (Shopping Cart) ಹಣ್ಣುಗಳನ್ನು ಸಾಗಿಸುವ ವ್ಯಕ್ತಿಯೋರ್ವರಿಗೆ ಪುಟಾಣಿ ಮಕ್ಕಳು ಸಹಾಯ ಮಾಡುವ ದೃಶ್ಯವಿದೆ. ಆ ವ್ಯಕ್ತಿ ಹಣ್ಣುಗಳನ್ನು ಸಾಗಿಸುತ್ತಾ ಇರುವಾಗ ಆಯತಪ್ಪಿ ಹಣ್ಣುಗಳೆಲ್ಲವೂ (Fruits) ಕೆಳಗುರುಳುತ್ತವೆ. ತಕ್ಷಣವೇ ಸುತ್ತಮುತ್ತ ಇದ್ದ ಪುಟಾಣಿ ಮಕ್ಕಳು ಆಗಮಿಸಿ ಹಣ್ಣುಗಳನ್ನು ಕಾರ್ಟ್​ಗೆ ತುಂಬಿಸುತ್ತಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಶೇಷವೆಂದರೆ ಶಾಪಿಂಗ್ ಕಾರ್ಟ್​ನಿಂದ ಹಣ್ಣುಗಳು ಕೆಳಗೆ ಬಿದ್ದಾಗ ಆ ವ್ಯಕ್ತಿ ಯಾರನ್ನೂ ಸಹಾಯಕ್ಕೆ ಕರೆದಿರುವುದಿಲ್ಲ. ಆದರೆ ಅಸಹಾಯಕತೆಯಿಂದ ನೋಡುತ್ತಿರುತ್ತಾನೆ. ಸುತ್ತಮುತ್ತ ಸೈಕ್ಲಿಂಗ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಮಕ್ಕಳು ತಕ್ಷಣ ನೆರವಿಗೆ ಧಾವಿಸುತ್ತಾರೆ. ಎಲ್ಲರೂ ಒಟ್ಟಾಗಿ ಆ ಮಾರಾಟಗಾರನಿಗೆ ಸಹಾಯ ಮಾಡುತ್ತಾ ಹಣ್ಣುಗಳನ್ನು ಕಾರ್ಟ್​​ಗೆ ಹಾಕುತ್ತಾರೆ. ಈ ವೇಳೆ ಹಿರಿಯರೂ ಮಕ್ಕಳ ಕಾರ್ಯಕ್ಕೆ ಜತೆಯಾಗುತ್ತಾರೆ. ಈ ದೃಶ್ಯವೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Image
Guinness World Record: 3 ರುಬಿಕ್ಸ್​​ ಕ್ಯೂಬ್​ಗಳೊಂದಿಗೆ ಕಸರತ್ತು ಮಾಡುತ್ತಲೇ ಅವನ್ನು ಜೋಡಿಸಿ ವಿಶ್ವದಾಖಲೆ ಬರೆದ ಯುವಕ; ಈ ವಿಡಿಯೋ ಮಿಸ್ ಮಾಡಲೇಬೇಡಿ
Image
Viral Video: ಏಕಾಂಗಿಯಾಗಿ ಸರ್ಫಿಂಗ್ ಮಾಡಿ ಅಚ್ಚರಿ ಮೂಡಿಸಿದ ಶ್ವಾನ; ಇಲ್ಲಿದೆ ವಿಡಿಯೋ
Image
Viral: ಯದ್ವಾತದ್ವಾ ಗಾಡಿ ಓಡಿಸಿ ಅರೆಸ್ಟ್​ ಆದ 19 ವರ್ಷದ ಯುವತಿ; ಕಾರಣ ಕೇಳಿ ದಂಗಾದ ಪೊಲೀಸರು
Image
ಅಡುಗೆಯ ಲೈವ್-ಸ್ಟ್ರೀಮ್ ಮಾಡುವಾಗ ಹೊತ್ತಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ, ಪ್ರಾಣಾಪಾಯದಿಂದ ಪಾರಾದ ಮಹಿಳೆ

ಚೀನಾದ (China) ಟ್ಯಾಂಗ್​ಶಾನ್ ಹೆಬೈ ನಗರದಲ್ಲಿ ನಡೆದ ಘಟನೆ ಇದಾಗಿದ್ದು, ‘ಗುಡ್​ ನ್ಯೂಸ್ ಮೂವ್​ಮೆಂಟ್’ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ. ವಿಡಿಯೋವು ಇದುವರೆಗೆ ಸುಮಾರು 6.7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಸರಿಸುಮಾರು ಲಕ್ಷದಷ್ಟು ಜನರು ಇಷ್ಟಪಟ್ಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ:

ಇನ್​ಸ್ಟಾಗ್ರಾಂ ಬಳಕೆದಾರರು ಹಲವು ಮೆಚ್ಚುಗೆಯ ಕಾಮೆಂಟ್​ಗಳನ್ನು ಬರೆದಿದ್ದಾರೆ. ‘‘ಸುತ್ತಮುತ್ತ ಜಗತ್ತಿನಲ್ಲಿ ನಡೆಯುತ್ತಿರುವ ಹಲವು ಕೆಟ್ಟ ಘಟನೆಗಳನ್ನು ನೋಡುವುದಕ್ಕಿಂತ ಇಂತವುಗಳನ್ನು ನೋಡುವುದು ಮನಸ್ಸಿಗೆ ಬಹಳ ನೆಮ್ಮದಿ ನೀಡುತ್ತದೆ’’ ಎಂದು ಓರ್ವರು ಬರೆದಿದ್ದಾರೆ. ಮತ್ತೋರ್ವರು, ‘‘ಮಕ್ಕಳ ಮನಸ್ಸು ಬಹಳ ಶುದ್ಧವಾಗಿರುತ್ತದೆ’’ ಎಂದು ಪ್ರತಿಕ್ರಿಯಿಸಿದ್ದಾರೆ.

ಟ್ವಿಟರ್​ನಲ್ಲಿ ಡ್ಯಾನಿ ಡೆರಾನಿ ಎನ್ನುವವರು ವಿಡಿಯೋ ಹಂಚಿಕೊಂಡಿದ್ದು, ‘ಒಳ್ಳೆಯ ವ್ಯಕ್ತಿಯಾಗಲು 0 ಡಾಲರ್​ ಖರ್ಚಾಗುತ್ತದೆ’ ಎಂಬರ್ಥದಲ್ಲಿ ಶೀರ್ಷಿಕೆ ನೀಡಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ | ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ