Viral: ಯದ್ವಾತದ್ವಾ ಗಾಡಿ ಓಡಿಸಿ ಅರೆಸ್ಟ್​ ಆದ 19 ವರ್ಷದ ಯುವತಿ; ಕಾರಣ ಕೇಳಿ ದಂಗಾದ ಪೊಲೀಸರು

Viral News: ಯುವತಿಯೋರ್ವಳು ಯದ್ವಾತದ್ವಾ ಗಾಡಿ ಓಡಿಸಿ ಪೊಲೀಸರ ಅತಿಥಿಯಾಗಿದ್ದಾಳೆ. ಅದಕ್ಕೆ ಆಕೆ ನೀಡಿದ ಕಾರಣ ಕೇಳಿ ಪೊಲೀಸರು ದಂಗಾಗಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ ಓದಿ.

Viral: ಯದ್ವಾತದ್ವಾ ಗಾಡಿ ಓಡಿಸಿ ಅರೆಸ್ಟ್​ ಆದ 19 ವರ್ಷದ ಯುವತಿ; ಕಾರಣ ಕೇಳಿ ದಂಗಾದ ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: May 17, 2022 | 9:46 AM

ಎಲ್ಲರಿಗೂ ಅವರದ್ದೇ ಆದ ಕನಸುಗಳಿರುತ್ತವೆ. ಇದಲ್ಲದೇ ಜೀವನದಲ್ಲಿ ಒಮ್ಮೆಯಾದರೂ ಟ್ರೈ ಮಾಡಬೇಕು ಎನ್ನುವ ವಿಕ್ಷಿಪ್ತ ಆಸೆಗಳೂ ಇರುತ್ತವೆ. ಇದನ್ನು ಜನರು ತಮ್ಮ ‘ಬಕೆಟ್ ಲಿಸ್ಟ್​’ಗೆ ಸೇರಿಸಿಕೊಂಡಿರುತ್ತಾರೆ. ‘ಬಕೆಟ್ ಲಿಸ್ಟ್’ (Bucket List) ಎಂದರೆ ಜೀವನದಲ್ಲಿ ಮಾಡಬೇಕಾದ ಕಾರ್ಯಗಳ ಲೀಸ್ಟ್. ಇದೀಗ ಯುವತಿಯೋರ್ವಳು ತನ್ನ ವಿಚಿತ್ರ ಬಯಕೆಯನ್ನು ಈಡೇರಿಸಲು ಮುಂದಾಗಿ ಪೊಲೀಸರ ಅತಿಥಿಯಾಗಿದ್ದಾಳೆ. ಅದು ಯಾವ ಕೆಲಸ ಎಂದು ಯೋಚಿಸುತ್ತಿದ್ದೀರಾ? ಅಲ್ಲೇ ಇರೋದು ಟ್ವಿಸ್ಟ್​! ಆ ಯುವತಿಯ ಆಸೆಯೇ ಜೀವನದಲ್ಲಿ ಒಮ್ಮೆಯಾದರೂ ಪೊಲೀಸರಿಂದ ಅರೆಸ್ಟ್ (Arrest)​ ಆಗಬೇಕು ಅನ್ನೋದು! ಕೊನೆಗೂ ತನ್ನ ಕನಸನ್ನು ಅವಳು ಈಡೇರಿಸಿಕೊಂಡಿದ್ದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾಳೆ. ಆದರೆ ಆ ಯುವತಿ ನೀಡಿದ ‘ಬಕೆಟ್ ಲಿಸ್ಟ್​’ ಕಾರಣ ಕೇಳಿ ಪೊಲೀಸರು ದಂಗಾಗಿದ್ದಾರೆ. ಏನಿದು ಪ್ರಕರಣ? ಪೂರ್ಣ ವಿವರ ಇಲ್ಲಿದೆ ನೋಡಿ.

ಜಾನಿಯಾ ಶೈಮಿರಾಕಲ್ ಡೌಗ್ಲಾಸ್ 19 ವರ್ಷದ ಯುವತಿ. ಮೇ 12ರಂದು ಫ್ಲೋರ್ಡಿಯಾದ ಕಾರ್ಡ್ ಸೌಂಡ್ ರಸ್ತೆಯಲ್ಲಿ ಅತ್ಯಂತ ವೇಗವಾಗಿ ವಾಹನ ಚಾಲನೆ ಮಾಡಿದ ಕಾರಣದಿಂದ ಆಕೆಯನ್ನು ಬಂಧಿಸಲಾಗಿತ್ತು. ನಂತರ ಪೊಲೀಸರ ವಿಚಾರಣೆಯಲ್ಲಿ ಆಕೆ ತಪ್ಪೊಪ್ಪಿಕೊಂಡಿದ್ದು, ‘‘ನನ್ನ ‘ಬಕೆಟ್​ ಲಿಸ್ಟ್​​​’ನಲ್ಲಿ ಅರೆಸ್ಟ್​​ ಆಗಬೇಕು ಎನ್ನುವುದೂ ಇತ್ತು. ಹೀಗಾಗಿ ವೇಗವಾಗಿ ವಾಹನ ಚಾಲನೆ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದೆ’’ ಎಂದಿದ್ದಾಳೆ.

ಅಚ್ಚರಿಯೆಂದರೆ ಹೈಸ್ಕೂಲ್​ನಿಂದಲೇ ಈ ವಿಚಿತ್ರ ಆಸೆಯನ್ನು ಹೊಂದಿದ್ದಳಂತೆ ಡೌಗ್ಲಾಸ್. ಇದೀಗ ಆಕೆಯ ಆಸೆ ನೆರವೇರಿದೆ! ಆದರೆ ಪೊಲೀಸರು ಇದನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ವೇಗವಾಗಿ ವಾಹನ ಚಾಲನೆ ಹಾಗೂ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಆರೋಪಗಳನ್ನು ಆಕೆಯ ಮೇಲೆ ಹೊರಿಸಲಾಗಿದೆ.

ಇದನ್ನೂ ಓದಿ
Image
Viral Video: ಸೌತೆಕಾಯಿ ಕಟ್ ಮಾಡಿ ಟ್ರೋಲ್ ಆದ ಮಾಡೆಲ್; ಈ ವಿಡಿಯೋ ಮಿಸ್ ಮಾಡಬೇಡಿ
Image
ಅಡುಗೆಯ ಲೈವ್-ಸ್ಟ್ರೀಮ್ ಮಾಡುವಾಗ ಹೊತ್ತಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ, ಪ್ರಾಣಾಪಾಯದಿಂದ ಪಾರಾದ ಮಹಿಳೆ
Image
ಪಟಾಕಿ ಶಬ್ದಕ್ಕೆ ಬೆಚ್ಚಿ ವರನನ್ನೇ ಹೊತ್ತು ಓಡಿದ ಕುದುರೆ; ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ
Image
Guinness World Record: 75ರ ಹರೆಯದಲ್ಲಿ ಶೀರ್ಷಾಸನ ಮಾಡಿ ವಿಶ್ವ ದಾಖಲೆ ಬರೆದ ವ್ಯಕ್ತಿ; ವಿಡಿಯೋ ಇಲ್ಲಿದೆ

ಮನ್ರೋ ಕೌಂಟಿ ಶೆರಿಫ್ ಕಚೇರಿಯು ಯುವತಿಯ ಬಂಧನದ ಬಗ್ಗೆ ಮಾಹಿತಿ ನೀಡಿದೆ. ‘‘ಜಾನಿಯಾ ಶೈಮಿರಾಕಲ್ ಡೌಗ್ಲಾಸ್ ಹೈಸ್ಕೂಲ್​ನಿಂದಲೂ ಅರೆಸ್ಟ್ ಆಗಬೇಕು ಎನ್ನುವುದನ್ನು ಬಕೆಟ್ ಲಿಸ್ಟ್​​ಗೆ ಸೇರಿಸಿಕೊಂಡಿದ್ದಳು. ಇದೀಗ ಪೊಲೀಸರು ಆಕೆಯನ್ನು ಅಜಾಗರೂಕ ಕಾರು ಚಾಲನೆ ಹಾಗೂ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಆರೋಪದಡಿ ಬಂಧಿಸಿದ್ದಾರೆ’’ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಕುರಿತ ಪೋಸ್ಟ್:

ಪ್ರಸ್ತುತ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುವತಿಯ ವಿಚಿತ್ರ ಬಯಕೆಯನ್ನು ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಒಬ್ಬರು ಪ್ರತಿಕ್ರಿಯಿಸಿ, ‘‘ಈ ಯುವತಿ ಬಂಧನವಾಗಿ, ಜಡ್ಜ್​ ಮುಂದೆ ತೆರಳಿ ಕೊನೆಗೆ ದಂಡವನ್ನೂ ಕಟ್ಟುವ ಬಯಕೆಯನ್ನು ಏಕೆ ಹೊಂದಿದ್ದಳು? ವಿಚಿತ್ರವಾಗಿದೆ’’ ಎಂದು ಪ್ರತಿಕ್ರಿಯಿಸಿದ್ದಾರೆ.

‘‘25ನೇ ವರ್ಷದವರೆಗೆ ಮೆದುಳು ಸಂಪೂರ್ಣ ಬೆಳವಣಿಗೆಯಾಗಿರುವುದಿಲ್ಲ’’ ಎಂದು ಓರ್ವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘‘ಇಂತಹ ಹುಚ್ಚು ಆಸೆಗಳನ್ನು ಹೊಂದಿರುವುದು ಅಪಾಯಕಾರಿ. ಇಂತಹ ವಿಚಿತ್ರ ಆಸೆಗಳು ಮತ್ತೆಷ್ಟಿರಬಹುದು?’’ ಎಂದು ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ 19 ವರ್ಷದ ಡೌಗ್ಲಾಸ್​ರನ್ನು ಜೈಲಿನಲ್ಲಿಡಲಾಗಿದೆ.

ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ | ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ