AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೌತೆಕಾಯಿ ಕಟ್ ಮಾಡಿ ಟ್ರೋಲ್ ಆದ ಮಾಡೆಲ್; ಈ ವಿಡಿಯೋ ಮಿಸ್ ಮಾಡಬೇಡಿ

ಕೈ ಕಟ್ ಆದೀತು ಜೋಪಾನ ಎಂದು ತಾಯಿ ಎಚ್ಚರಿಸುತ್ತಿದ್ದಂತೆ ಇನ್ನಷ್ಟು ಎಚ್ಚರಿಕೆಯಿಂದ ಸೌತೆಕಾಯಿ ಕಟ್ ಮಾಡುತ್ತಿರುವ ಕೆಂಡಾಲ್ ಅವರ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ಮಿಸ್ ಮಾಡಬೇಡಿ.

Viral Video: ಸೌತೆಕಾಯಿ ಕಟ್ ಮಾಡಿ ಟ್ರೋಲ್ ಆದ ಮಾಡೆಲ್; ಈ ವಿಡಿಯೋ ಮಿಸ್ ಮಾಡಬೇಡಿ
ಸೌತೆಕಾಯಿ ಕಟ್ ಮಾಡುತ್ತಿರುವ ಕೆಂಡಾಲ್Image Credit source: NDTV
TV9 Web
| Updated By: ಸುಷ್ಮಾ ಚಕ್ರೆ|

Updated on:May 16, 2022 | 7:59 PM

Share

ಕೆಲವು ಹೆಣ್ಣುಮಕ್ಕಳಿಗೆ ಅಡುಗೆ ಮನೆಯೆಂದರೆ ಬಹಳ ಇಷ್ಟ. ಅಲ್ಲಿ ಏನೇನು ಹೊಸ ಪ್ರಯೋಗಗಳನ್ನು ಮಾಡಬಹುದು ಎಂದು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ, ಇನ್ನು ಕೆಲವರಿಗೆ ಅಡುಗೆಯ ಅಆಇಈ ಕೂಡ ಗೊತ್ತಿರುವುದಿಲ್ಲ. ಈ ಎರಡನೇ ಕೆಟಗರಿಯವರಿಗೆ ಅಡುಗೆ ಮಾಡಲು ಬಿಟ್ಟರೆ ಏನು ಆಗಬಹುದು? ಅದರಲ್ಲೂ ತರಕಾರಿ ಹೆಚ್ಚುವುದು (ಕಟ್ ಮಾಡುವುದು) ಹೇಗೆಂದು ಕೂಡ ಗೊತ್ತಿಲ್ಲದವರನ್ನು ಕುಕಿಂಗ್ ಶೋಗೆ (Cooking Show) ಕರೆಸಿದರೆ ವೀಕ್ಷಕರಿಗೆ ಮನರಂಜನೆಯಂತೂ ತಪ್ಪಿದ್ದಲ್ಲ. ಇದೀಗ ಸೆಲೆಬ್ರಿಟಿಯೊಬ್ಬರ ಕುಕಿಂಗ್ ವಿಡಿಯೋ ಭಾರೀ ವೈರಲ್ ಆಗಿದೆ. ಅವರು ಸೌತೆಕಾಯಿ ಕಟ್ ಮಾಡುವುದನ್ನು ನೋಡಿದರೆ ನೀವು ಬಿದ್ದು ಬಿದ್ದು ನಗುವುದು ಗ್ಯಾರಂಟಿ.

ಸೆಲೆಬ್ರಿಟಿಗಳು ಮತ್ತು ಅವರ ವಿಲಕ್ಷಣ ವರ್ತನೆಗಳು ಆಗಾಗ ಹಾಸ್ಯಕ್ಕೀಡಾಗುತ್ತಿರುತ್ತದೆ. ನಿಗೆಲ್ಲಾ ಲಾಸನ್ ಎಂಬ ಸೆಲೆಬ್ರಿಟಿ ಆಕಸ್ಮಿಕವಾಗಿ ‘ಮೈಕ್ರೋವೇವ್’ ಪದವನ್ನು ಅಡುಗೆ ಕಾರ್ಯಕ್ರಮವೊಂದರಲ್ಲಿ ತಪ್ಪಾಗಿ ಉಚ್ಚರಿಸಿದ ಸಮಯವನ್ನು ನೆನಪಿಸಿಕೊಳ್ಳಿ. ಅದು ಯಾವ ರೀತಿ ವೈರಲ್ ಆಗಿತ್ತು ಎಂಬುದು ನಿಮಗೆ ನೆನಪಾಗುತ್ತದೆ. ತಪ್ಪು ಮಾಡುವ ಸೆಲೆಬ್ರಿಟಿಗಳು ಯಾರೇ ಆಗಿರಲಿ ಇಂಟರ್ನೆಟ್ ಬಳಕೆದಾರರು ತಕ್ಷಣವೇ ಎದ್ದು ಕುಳಿತು ಗಮನಿಸಿ ಅದನ್ನು ಟ್ರೋಲ್ ಮಾಡುತ್ತಾರೆ.

ಅಮೆರಿಕದ ಮಾಡೆಲ್ ಕೆಂಡಾಲ್ ಜೆನ್ನರ್ ಸೌತೆಕಾಯಿಯನ್ನು ಕತ್ತರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಂತರ್ಜಾಲವನ್ನು ಬೆಚ್ಚಿ ಬೀಳಿಸಿದೆ. ನೀವಿನ್ನೂ ಆ ವಿಡಿಯೋ ನೋಡದಿದ್ದರೆ ಒಮ್ಮೆ ನೋಡಿಬಿಡಿ.

ಈ ವೀಡಿಯೊಗಳನ್ನು ಟ್ವಿಟರ್‌ನಲ್ಲಿ qinnitan ಮತ್ತು badtasticb ಎಂಬುವವರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾವಿರಾರು ವೀಕ್ಷಣೆಗಳು, ಕಾಮೆಂಟ್‌ಗಳು ಮತ್ತು ಲೈಕ್​ಗಳನ್ನು ಗಳಿಸಿದೆ.

ಕೆಂಡಾಲ್ ಜೆನ್ನರ್ ಅವರ ವೀಡಿಯೊ OTT ಸರಣಿ ‘ದಿ ಕಾರ್ಡಶಿಯನ್ಸ್’ನಿಂದ ಬಂದಿದೆ. ಮೇ 13ರಂದು ಟ್ವಿಟರ್‌ನಲ್ಲಿ ಈ ವಿಡಿಯೋ ಕಾಣಿಸಿಕೊಂಡಿತ್ತು. ಸಂಚಿಕೆಯ ಒಂದು ವಿಭಾಗದಲ್ಲಿ ಅಮೇರಿಕನ್ ಮಾಡೆಲ್ ತನಗಾಗಿ ತಿಂಡಿ ಮಾಡಲು ಬಯಸಿದ್ದರು. ಅವಳ ತಾಯಿ ಕ್ರಿಸ್ ಜೆನ್ನರ್ ಆಕೆಗೆ ಸಹಾಯ ಮಾಡಲು ಅಡುಗೆವನನ್ನು ಕರೆಸಲು ಮುಂದಾದಳು. ಆದರೆ, ಕೆಂಡಾಲ್ ಅದಕ್ಕೆ ಒಪ್ಪದೆ ನಾನೇ ಅಡುಗೆ ಮಾಡುತ್ತೇನೆ ಎಂದು ಹೇಳಿದಳು. ಅಡುಗೆ ಮಾಡುವುದು ಬಹಳ ಸುಲಭ. ನಾನೇ ಮಾಡುತ್ತೇನೆ ಎಂದು ಆಕೆ ಹೇಳಿದಳು. ನಂತರ ಅವಳು ಸೌತೆಕಾಯಿಯನ್ನು ಅತ್ಯಂತ ವಿಲಕ್ಷಣವಾದ ಶೈಲಿಯಲ್ಲಿ ಕತ್ತರಿಸಲು ಪ್ರಾರಂಭಿಸಿದಳು. ನಾನು ಪ್ರೊಫೆಷನಲ್ ಕುಕ್ ಅಲ್ಲ, ಕ್ಯಾಮೆರಾವನ್ನು ನನ್ನ ಮೇಲೆ ಜೂಮ್ ಮಾಡಬೇಡಿ ಎಂದು ಹೇಳಿದ್ದು ಕೂಡ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.

ಕೈ ಕಟ್ ಆದೀತು ಜೋಪಾನ ಎಂದು ತಾಯಿ ಎಚ್ಚರಿಸುತ್ತಿದ್ದಂತೆ ಇನ್ನಷ್ಟು ಎಚ್ಚರಿಕೆಯಿಂದ ಸೌತೆಕಾಯಿ ಕಟ್ ಮಾಡುತ್ತಿರುವ ಕೆಂಡಾಲ್ ಅವರ ಇಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದವರು ಆಕೆ ಜೀವನದಲ್ಲಿ ಒಮ್ಮೆಯಾದರ ಅಡುಗೆ ಮನೆಗೆ ಹೋಗಿದ್ದಾರಾ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಜೀವನದಲ್ಲಿ ಮೊದಲ ಬಾರಿ ಆಕೆ ಸೌತೆಕಾಯಿ ಹೆಚ್ಚುತ್ತಿಬಹುದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:58 pm, Mon, 16 May 22

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ