Viral Video: ಏಕಾಂಗಿಯಾಗಿ ಸರ್ಫಿಂಗ್ ಮಾಡಿ ಅಚ್ಚರಿ ಮೂಡಿಸಿದ ಶ್ವಾನ; ಇಲ್ಲಿದೆ ವಿಡಿಯೋ
Rosie Drottar: ಶ್ವಾನವೊಂದು ಸರ್ಫಿಂಗ್ ಮಾಡಿದ್ದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಈ ವಿಶೇಷ ತರಬೇತಿ ಹೊಂದಿರುವ ಶ್ವಾನದ ಹೆಸರು ರೋಸಿ ಡ್ರಾಟ್ಟರ್. ನೆಟ್ಟಿಗರ ಮನಗೆಲ್ಲುತ್ತಿರುವ ವಿಡಿಯೋ ಇಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾಕು ಪ್ರಾಣಿಗಳ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿರುತ್ತವೆ. ಅದರಲ್ಲೂ ಶ್ವಾನಗಳ ತುಂಟಾಟಗಳಂತೂ ಪ್ರಾಣಿ ಪ್ರಿಯರಿಗೆ ಬಹು ಆಪ್ತವಾಗುತ್ತವೆ. ಇತ್ತೀಚೆಗೆ ಅಂಥದ್ದೇ ಒಂದು ವಿಡಿಯೋ ವೈರಲ್ (Viral Video) ಆಗಿದೆ. ಅದರಲ್ಲಿ ಶ್ವಾನವೊಂದು ಸಮುದ್ರದಲ್ಲಿ ಸರ್ಫಿಂಗ್ (Surfing) ಮಾಡಿದ್ದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ತನ್ನ ಒಡೆಯನ ಜತೆಗೆ ಶ್ವಾನಗಳು ಸರ್ಫಿಂಗ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಈ ಶ್ವಾನವು ಏಕಾಂಗಿಯಾಗಿ ಕುಳಿತು ಸರ್ಫಿಂಗ್ ನಡೆಸಿದೆ. ದೊಡ್ಡ ಅಲೆಗಳ ನಡುವೆ ಕಸರತ್ತು ಮಾಡುವ ಅದರ ವಿಡಿಯೋ ಸದ್ಯ ನೆಟ್ಟಿಗರ ಮನಗೆದ್ದಿದೆ. 25 ಸೆಕೆಂಡ್ಗಳ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.
ಅಂದಹಾಗೆ ಈ ಶ್ವಾನದ ಹೆಸರು ರೋಸಿ ಡ್ರಾಟ್ಟರ್ (Rosie Drottar). ಇನ್ಸ್ಟಾಗ್ರಾಂನಲ್ಲಿ ರೋಸಿಗೆ ಅಪಾರ ಅಭಿಮಾನಿ ಬಳಗವಿದೆ. ವಿಡಿಯೋದಲ್ಲಿ ರೋಸಿಯ ತರಬೇತುದಾರ ಸರ್ಫಿಂಗ್ ಬೋರ್ಡ್ ಮೇಲೆ ಅದನ್ನು ಹತ್ತಿಸುತ್ತಾನೆ. ಅಲೆ ಬರುತ್ತಿದ್ದಂತೆಯೇ ‘ಸರ್ಫ್, ಸರ್ಫ್’ ಎಂದು ಸಲಹೆ ನೀಡುತ್ತಾನೆ. ಅಲ್ಲಿಂದ ರೋಸಿ ಸರ್ಫ್ ಮಾಡುತ್ತಾ ತೆರಳುವುದು ಸೆರೆಯಾಗಿದೆ. ಈ ವಿಡಿಯೋವನ್ನು ಸುಮಾರು 11ಸಾವಿರ ಜನರು ಇಷ್ಟಪಟ್ಟಿದ್ದಾರೆ.
ಇಲ್ಲಿದೆ ವಿಡಿಯೋ:
View this post on Instagram
ರೋಸಿ ಡ್ರಾಟ್ಟರ್ಗೆ ಇನ್ಸ್ಟಾಗ್ರಾಂನಲ್ಲಿ ಸುಮಾರು 38 ಸಾವಿರಕ್ಕೂ ಅಧಿಕ ಫಾಲೋವರ್ಗಳಿದ್ದಾರೆ. ವಿಶೇಷವೆಂದರೆ ರೋಸಿ ಇದೇ ಮೊದಲ ಬಾರಿಗೆ ಸರ್ಫಿಂಗ್ ಮಾಡಿದ್ದೇನೂ ಅಲ್ಲ. ಅದು ಸರ್ಫಿಂಗ್ ವಿಭಾಗದಲ್ಲಿ ತರಬೇತಿ ಪಡೆದಿರುವ ವಿಶೇಷ ಶ್ವಾನ. ಇನ್ಸ್ಟಾಗ್ರಾಂನಲ್ಲಿ ಆಗಾಗ ರೋಸಿಯ ಸರ್ಫಿಂಗ್ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಅವುಗಳೆಲ್ಲವೂ ವೈರಲ್ ಆಗಿವೆ. ಇದೇ ಕಾರಣದಿಂದ ರೋಸಿಯ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ರೋಸಿ ಸರ್ಫಿಂಗ್ ಮಾಡುತ್ತಿರುವ ಮತ್ತೊಂದು ವಿಡಿಯೋ:
View this post on Instagram
ರೋಸಿ ಡ್ರಾಟ್ಟರ್ ವಿಡಿಯೋಗಳನ್ನು ನೋಡಿದ ನೆಟ್ಟಿಗರು ಮನಸೋತಿದ್ದು, ಬಗೆಬಗೆಯ ಕಾಮೆಂಟ್ಗಳ ಮೂಲಕ ಅದನ್ನು ಹೊಗಳಿದ್ದಾರೆ. ಹಲವರು ರೋಸಿಯ ಧೈರ್ಯವನ್ನು ಮೆಚ್ಚಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?
ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ | ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Tue, 17 May 22