ಅಡುಗೆಯ ಲೈವ್-ಸ್ಟ್ರೀಮ್ ಮಾಡುವಾಗ ಹೊತ್ತಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ, ಪ್ರಾಣಾಪಾಯದಿಂದ ಪಾರಾದ ಮಹಿಳೆ

Viral Video: ಮಹಿಳೆಯೊಬ್ಬಳ್ಳು ಅಡುಗೆ ಮಾಡುವ ಲೈವ್-ಸ್ಟ್ರೀಮ್ ಮಾಡುವಾಗ ಎಣ್ಣೆ ಹಾಕಿದ ಬಾಣಲೆಯಲ್ಲಿ ಹೊಗೆ ಕಾಣಿಸಿಕೊಂಡಿತು. ನಂತರ ಹೊಗೆ ಜಾಸ್ತಿಯಾಗಿ ಬೆಂಕಿ ಹೊತ್ತಿಕೊಂಡಿತು.

ಅಡುಗೆಯ ಲೈವ್-ಸ್ಟ್ರೀಮ್ ಮಾಡುವಾಗ ಹೊತ್ತಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ, ಪ್ರಾಣಾಪಾಯದಿಂದ ಪಾರಾದ ಮಹಿಳೆ
ಅಡುಗೆ ಮಾಡುವಾಗ ಹೊತ್ತಿಕೊಂಡ ಬೆಂಕಿ
Follow us
TV9 Web
| Updated By: ವಿವೇಕ ಬಿರಾದಾರ

Updated on:May 16, 2022 | 5:00 PM

ಅಡುಗೆಮನೆಯಲ್ಲಿ (Kitchen) ಅಡುಗೆ ಮಾಡುವಾಗ ಬಹಳ ಜಾಗುರುಕತೆಯಿಂದ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಅನಾಹುತ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ಜೀವಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಬಹಳಷ್ಟು ಜಾಗರೂಕತೆಯಿಂದ ಮತ್ತು ಏಕಾಗ್ರತೆಯಿಂದ ಅಡುಗೆ ಮಾಡುವುದು ಒಳ್ಳೆಯದು. ಅಡುಗೆ ಮಾಡುವಾಗ ಸಲ್ಪ ಹೆಚ್ಚು-ಕಡಿಮೆ ಆದರೂ ದೊಡ್ಡ ಅವಗಡ ಸಂಭವಿಸುವ ಸಾಧ್ಯತೆಗಳಿರುತ್ತದೆ ಎನ್ನುವುದಕ್ಕೆ ಕೆಳಗಿನ ವಿಡಿಯೊನೇ ಸಾಕ್ಷಿ.

ವಿಡಿಯೋದಲ್ಲಿ ಮಹಿಳೆಯೊಬ್ಬಳ್ಳು ಅಡುಗೆ ಮಾಡುವ ಲೈವ್-ಸ್ಟ್ರೀಮ್ (Live Stream) ಮಾಡುವಾಗ ಎಣ್ಣೆ ಹಾಕಿದ ಬಾಣಲೆಯಲ್ಲಿ ಹೊಗೆ ಕಾಣಿಸಿಕೊಂಡಿತು. ನಂತರ ಮಹಿಳೆ ಬಾಣಲೆಯಿಂದ ಆಹಾರವನ್ನು (Food) ತೆಗೆದು, ಹೊಗೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸಿದರು. ಆದರೆ ಹೊಗೆ ಜಾಸ್ತಿಯಾಗಿ ಬೆಂಕಿ ಹೊತ್ತಿಕೊಂಡಿತು. ಇದರಿಂದ ಗಾಬರಿಗೊಂಡ ಮಹಿಳೆ ಬಾಣಲೆಯಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಆರಿಸಲು ಬಾಣಲೆಯನ್ನು ಸಿಂಕ್ ನಲ್ಲಿ ಅಡಿ ಇಟ್ಟು ನೀರು ಬಿಟ್ಟಳು. ಆದರೆ ಬೆಂಕಿ ಇನ್ನಷ್ಟು ಜೋರಾಗಿ ಉರಿಯಲು ಪ್ರಾರಂಭಿಸಿತು.

ಇದರಿಂದ ಆಕೆಯ ಅಡುಗೆಮನೆ ಸಂಪೂರ್ಣ ಹೊಗೆಯಿಂದ ತುಂಬಿಕೊಂಡಿತು. ಬೆಂಕಿಯನನ್ನು ನಂದಿಸಲು ಅಕ್ಕ-ಪಕ್ಕದಲ್ಲಿದ್ದ ಕ್ಯಾಮರಾ ಮೆನ್ ಅಥವಾ ಇನ್ನಿತರೆ ಸಹಾಯಕರನ್ನು ಕರೆದಳು. ಅವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಕೆಲವು ಸೆಕೆಂಡುಗಳ ನಂತರ, ವೀಡಿಯೊ ಥಟ್ಟನೆ ಕೊನೆಗೊಂಡಿತು.

ವಿಡಿಯೋದಲ್ಲಿದ್ದ ಮಹಿಳೆ ಹೆಸರು ಕ್ಯಾರನ್ ಆಗಿದ್ದು, ತಾನು ಚೆನ್ನಾಗಿದ್ದೇನೆ, ಆದರೆ ನನ್ನ ಕೈ ಸ್ವಲ್ಪ ಸುಟ್ಟಿದೆ ಎಂದು ತನ್ನ Instagram ಖಾತೆಯಲ್ಲಿ ಬರೆದುಕೊಂಡಿದ್ದಾಳೆ.ಮತ್ತೊಂದು ಪೋಸ್ಟ್‌ನಲ್ಲಿ, ಅವರು ನಾನು ಚೆನ್ನಾಗಿದ್ದೇನೆ ಮತ್ತು ಇನ್ನೂ ಸ್ಟ್ರೀಮಿಂಗ್ ಮಾಡುತ್ತಿದ್ದಾನೆ” ಎಂದು ಬರೆದಿದ್ದಾರೆ. ಕೆಲವರು ಆಕೆಯನ್ನು ಗೇಲಿ ಮಾಡಿ ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ಆಕೆ ಸುರಕ್ಷಿತವಾಗಿದ್ದಾರೆ ಎಂದು ಖುಷಿಪಟ್ಟಿದ್ದಾರೆ. ನಂತರ ಅವರು ಟ್ರೋಲಿಂಗ್‌ಗೆ ಪ್ರತಿಕ್ರಿಯಿಸಿ ಬರೆದಿದ್ದಾರೆ, ”ನನಗೆ ಬೆಂಕಿಯ ಅನುಭವವಿಲ್ಲ, ನಾನು ಭಯಭೀತಳಾಗಿದ್ದೆ. ಮತ್ತು ನಾನು ಸಹಾಯಕ್ಕಾಗಿ ನನ್ನ ನೆರೆಹೊರೆಯವರ ಬಳಿಗೆ ಓಡಿದೆ.

Published On - 5:00 pm, Mon, 16 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ