ಲೋಕಲ್​ ಟ್ರೇನ್​ನಲ್ಲಿ ಗಡದ್ದಾಗಿ ನಿದ್ರಿಸುತ್ತಲೇ ಕೆಳಕ್ಕೆ ಬಿದ್ದ ವ್ಯಕ್ತಿ; ಇಲ್ಲಿದೆ ವೈರಲ್ ವಿಡಿಯೋ

ಆತ ನಿದ್ರಿಸುತ್ತಿರುವ ಶೈಲಿಯನ್ನು ಕಂಡು ಓರ್ವ ವ್ಯಕ್ತಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ವಿಡಿಯೋ ಮಾಡೋಕೆ ಶುರು ಹಚ್ಚಿಕೊಂಡಿದ್ದ. ಮೊಬೈಲ್​ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದ ವ್ಯಕ್ತಿ ಊಹಿಸದೇ ಇರುವ ರೀತಿಯ ಘಟನೆ ಅಲ್ಲಿ ನಡೆಯಿತು.

ಲೋಕಲ್​ ಟ್ರೇನ್​ನಲ್ಲಿ ಗಡದ್ದಾಗಿ ನಿದ್ರಿಸುತ್ತಲೇ ಕೆಳಕ್ಕೆ ಬಿದ್ದ ವ್ಯಕ್ತಿ; ಇಲ್ಲಿದೆ ವೈರಲ್ ವಿಡಿಯೋ
ವೈರಲ್ ವಿಡಿಯೋ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 15, 2022 | 8:48 PM

ಟ್ರಾವೆಲ್ ಮಾಡುವಾಗ ನಿದ್ರಿಸೋದು ಎಂದರೆ ಅನೇಕರಿಗೆ ಸಖತ್ ಇಷ್ಟ. ಕೂರೋಕೆ ಒಂದು ಆಸನ ಸಿಕ್ಕರೆ ಸಾಕು ಐಷಾರಾಮಿ ಕೊಠಡಿ (Luxury Room) ಸಿಕ್ಕಂತೆ ನಿದ್ರಿಸುವವರಿದ್ದಾರೆ. ಇವರ ನಿದ್ರೆಯಿಂದ ಕೆಲವೊಮ್ಮೆ ಅಕ್ಕ-ಪಕ್ಕದವರಿಗೆ ಕಿರಿಕಿರಿ ಆದ ಉದಾರಣೆ ಇದೆ. ಇನ್ನೂ ಕೆಲವರು ನಿದ್ರಿಸುತ್ತಾ ಪಕ್ಕದಲ್ಲಿರುವ ವ್ಯಕ್ತಿಮೇಲೆ ಬೀಳುತ್ತಾರೆ. ಈ ರೀತಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಕ್ಷಣಮಾತ್ರದಲ್ಲಿ ವೈರಲ್ ಆಗಿ ಬಿಡುತ್ತದೆ. ಈಗ ವ್ಯಕ್ತಿಯೋರ್ವ ನಿದ್ರಿಸುತ್ತಲೇ ಕೆಳಕ್ಕೆ ಬಿದ್ದ ವಿಡಿಯೋ ವೈರಲ್ (Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಸದ್ಯ ಎಲ್ಲೆಲ್ಲೂ ಬೇಸಿಗೆಯ ಅಬ್ಬರ ಜೋರಾಗಿದೆ. ದೆಹಲಿ ಭಾಗದಲ್ಲಿ ಅತಿ ಹೆಚ್ಚು ಉಷ್ಣತೆ ದಾಖಲಾಗಿದೆ. ಟ್ರೇನ್ ಅಥವಾ ಬಸ್​ಮೇಲೆ ಕುಳಿತಾಗ ಅದು ಚಲಿಸಿದರೆ ಸಾಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಚಲಿಸುವಾಗ ತಂಪಾದ ಗಾಳಿ ಬಂದರೆ ಅಲ್ಲಿಯೇ ನಿದ್ದೆ ಬಂದು ಬಿಡುತ್ತದೆ. ಈ ವಿಡಿಯೋದಲ್ಲಿರುವ ವ್ಯಕ್ತಿಗೂ ಹಾಗೆಯೇ ಆಗಿದೆ.

ಇದನ್ನೂ ಓದಿ
Image
Guinness World Record: 75ರ ಹರೆಯದಲ್ಲಿ ಶೀರ್ಷಾಸನ ಮಾಡಿ ವಿಶ್ವ ದಾಖಲೆ ಬರೆದ ವ್ಯಕ್ತಿ; ವಿಡಿಯೋ ಇಲ್ಲಿದೆ
Image
ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಬದುಕುಳಿಯಿತು ಕಾಡಾನೆ ಜೀವ: ನೆಟ್ಟಿಗರಿಂದ ಎಲ್ಲೆಡೆ ಶ್ಲಾಘನೆ
Image
Best Smartphone: ಮೇ ತಿಂಗಳಲ್ಲಿ ನೀವು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​​ಫೋನ್​ಗಳು ಇಲ್ಲಿದೆ ನೋಡಿ
Image
Trending | ಗೀತಾ ಭಾಟಿ ಚಪ್ಪಲಿಯನ್ನು ವಾಪಸ್ ಕೊಡ್ರಪ್ಪೋ ಎಂದ ಟ್ವೀಟಿಗರು

ಲೋಕಲ್​ ಟ್ರೇನ್​ನಲ್ಲಿ ವ್ಯಕ್ತಿಯೋರ್ವ ಚಲಿಸುತ್ತಿದ್ದ. ಆತ ಟ್ರೇನ್ ಸೀಟ್ ಮೇಲೆ ಕುಳಿತು ನಿದ್ರಿಸುತ್ತಿದ್ದ. ಅಕ್ಕ ಪಕ್ಕದಲ್ಲಿ ಕುಳಿತವರು ತಮ್ಮತಮ್ಮ ಆಲೋಚನೆಯಲ್ಲಿ ಮುಳುಗಿದ್ದರು. ಆತ ನಿದ್ರಿಸುತ್ತಿರುವ ಶೈಲಿಯನ್ನು ಕಂಡು ಓರ್ವ ವ್ಯಕ್ತಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ವಿಡಿಯೋ ಮಾಡೋಕೆ ಶುರು ಹಚ್ಚಿಕೊಂಡಿದ್ದ. ಮೊಬೈಲ್​ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದ ವ್ಯಕ್ತಿ ಊಹಿಸದೇ ಇರುವ ರೀತಿಯ ಘಟನೆ ಅಲ್ಲಿ ನಡೆಯಿತು.

ಮಲಗಿದ್ದ ವ್ಯಕ್ತಿ ನೋಡನೋಡುತ್ತಿದ್ದಂತೆ ಸೀಟ್​ನಿಂದ ಬಿದ್ದಿದ್ದಾನೆ. ಪಕ್ಕದಲ್ಲಿ ಕುಳಿತಿದ್ದವರು ಒಮ್ಮೆ ಅವಾಕ್ಕಾಗಿದ್ದಾರೆ. ಬಿದ್ದ ನಂತರದಲ್ಲಿ ಆತನಿಗೆ ತಾನು ಬಿದ್ದಿದ್ದೇನೆ ಎನ್ನುವ ವಿಚಾರ ಗೊತ್ತಾಗಿದೆ. ನಂತರ ಆತ ನೆಲದಿಂದ ಎದ್ದಿದ್ದಾನೆ. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ.

ಕೆಲವರು ಆ ವ್ಯಕ್ತಿ ನಿದ್ದೆ ಮಾಡುವ ರೀತಿಗೆ ಅಚ್ಚರಿ ಹೊರಹಾಕಿದ್ದಾರೆ. ಇನ್ನೂ ಕೆಲವರು ಆತನ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ‘ಕೆಲಸ ಮಾಡಿ ಸುಸ್ತಾಗಿ ಬಂದಿರುತ್ತಾನೆ. ನಿದ್ರಿಸಲು ಒಂದು ಜಾಗ ಸಿಕ್ಕಿರುತ್ತದೆ. ಆತನಿಗೆ ಹೀಗೆ ಆಗಬಾರದಿತ್ತು’ ಎಂದು ಕೆಲವರು ಹೇಳಿದ್ದಾರೆ. ಸದ್ಯ, ಈ ವಿಡಿಯೋ ನಾನಾ ಟ್ರೋಲ್​ ಪೇಜ್​ಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿದ್ದು ಎಲ್ಲಿ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:03 pm, Sun, 15 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ