Best Smartphone: ಮೇ ತಿಂಗಳಲ್ಲಿ ನೀವು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ಫೋನ್ಗಳು ಇಲ್ಲಿದೆ ನೋಡಿ
Trending Smartphone: ಸದ್ಯ ಭಾರತದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿರುವ ಟಾಪ್ ಐದು ಸ್ಮಾರ್ಟ್ಫೋನ್ಗಳು (Smartphone) ಯಾವುವು?, ಅವುಗಳ ಫೀಚರ್ಸ್, ಬೆಲೆ ಏನಿದೆ ಎಂಬುದನ್ನು ನೋಡೋಣ.
ಭಾರತದ ಮೊಬೈಲ್ (Mobile) ಮಾರುಕಟ್ಟೆ ಇಂದು ವಿಸ್ತಾರವಾಗಿ ಬೆಳೆದು ನಿಂತಿದೆ. ಕಡಿಮೆ ಬೆಲೆಯಿಂದ ಹಿಡಿದು ಹೈ ರೇಂಜ್ ಮಾದರಿಯ ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತದೆ. ಇದಕ್ಕಾಗಿಯೆ ವಿದೇಶಿ ಮೊಬೈಲ್ ಕಂಪನಿಗಳ ನೆಚ್ಚಿನ ತಾಣ ಭಾರತವೇ ಆಗಿದೆ. ದೇಶದಲ್ಲಿ ಈಗ ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಲೇ ಇರುತ್ತದೆ. ಹೆಚ್ಚಾಗಿ ಭಾರತದಲ್ಲಿ ಶವೋಮಿ (Xiaomi), ಸ್ಯಾಮ್‌ಸಂಗ್, ರಿಯಲ್ ಮಿ, ಒನ್ಪ್ಲಸ್ ಹಾಗೂ ಒಪ್ಪೋ ಫೋನ್ಗಳಿಗೆ ಬೇಡಿಕೆಯಿದೆ. ಈ ಕಂಪನಿಗಳು ತಿಂಗಳಿಗೆ ಕನಿಷ್ಠ ಒಂದಾದರೂ ಫೋನನ್ನು ಅನಾವರಣ ಮಾಡುತ್ತಿದೆ. ಅದಾಗ್ಯೂ ಬಿಡುಗಡೆ ಆಗುವ ಪ್ರತಿಯೊಂದು ಫೋನ್ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗುವುದಿಲ್ಲ. ಅವುಗಳಲ್ಲಿ ಕೆಲವೊಂದು ಮಾತ್ರ ಲೀಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗಾದ್ರೆ ಸದ್ಯ ಭಾರತದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿರುವ ಟಾಪ್ ಐದು ಸ್ಮಾರ್ಟ್ಫೋನ್ಗಳು (Smartphone) ಯಾವುವು?, ಅವುಗಳ ಫೀಚರ್ಸ್, ಬೆಲೆ ಏನಿದೆ ಎಂಬುದನ್ನು ನೋಡೋಣ.
ಎರಡು ವಾರದ ಹಿಂದೆಯಷ್ಟೆ ಭಾರತದಲ್ಲಿ ರಿಯಲ್ ಮಿ GT 2 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದ್ದು, ಇದು ಸಖತ್ ಸೇಲ್ ಆಗುತ್ತಿದೆ. ಇದರ ಬೇಸ್ ಮಾಡೆಲ್ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 49,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ 1,440×3,216 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ 2K LTPO 2.0 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು ಆಕರ್ಷಕವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು 65W ಸೂಪರ್‌ಡಾರ್ಟ್ ಚಾರ್ಜ್ ವರ್ಧಿತ ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ.
ಇನ್ನು ರಿಯಲ್ ಮಿ 9 ಪ್ರೊ ಪ್ಲಸ್ ಫೋನ್ ಜನಪ್ರಿಯ ಬ್ರ್ಯಾಂಡ್ ರಿಯಲ್ ಮಿಯ ಆಕರ್ಷಕ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ 6.4 ಇಂಚಿನ ಸ್ಕ್ರೀನ್ ಒಳಗೊಂಡಿದೆ. ಜೊತೆಗೆ ಟಫ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 MT6877T ಪ್ರೊಸೆಸರ್ ಪಡೆದಿದ್ದು, ಇದಕ್ಕೆ ಪೂರಕವಾಗಿ 6 GB RAM ಸಾಮರ್ಥ್ಯ ವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ 4500 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಬಲವನ್ನು ಒಳಗೊಂಡಿದೆ.
ವಿವೋ ಸಂಸ್ಥೆಯ ವಿವೋ V23 5G ಸ್ಮಾರ್ಟ್‌ಫೋನ್ ಆಕರ್ಷಕ ಲುಕ್ ಪಡೆದಿದೆ. ಇದು 6.44 ಇಂಚಿನ ಸ್ಕ್ರೀನ್ ಅನ್ನು ಪಡೆದಿದೆ. ಅಲ್ಲದೇ ಗಟ್ಟಿಮುಟ್ಟಾದ ಮೀಡಿಯಾ ಟೆಕ್ ಡೈಮೆನ್ಸಿಟಿ 920 MT6877T ಪ್ರೊಸೆಸರ್ ಬಲವನ್ನು ಪಡೆದಿದೆ. ಇದರೊಂದಿಗೆ ಈ ಫೋನ್ 4,200 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇನ್ನು ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ.
ಸ್ಯಾಮ್‌ಸಂಗ್ ಕಂಪನಿ ಈ ತಿಂಗಳು ಬಿಡುಗಡೆ ಮಾಡಿದ ಗ್ಯಾಲಕ್ಸಿ A73 5G ಸ್ಮಾರ್ಟ್‌ಫೋನ್ ಕೂಡ ಭರ್ಜರಿ ಮಾರಾಟ ಆಗುತ್ತಿದೆ. ಇದರ ಬೆಲೆ 41,999 ರೂ. ಇದು 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಒಂದು UI 4.1 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಇದರ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದ್ದು, ಇದರಲ್ಲಿರುವ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. 5,000mAh ಬ್ಯಾಟರಿಯನ್ನು ಹೊಂದಿದೆ.
ಕೊನೆಯದಾಗಿ ಶವೋಮಿ 11T ಪ್ರೊ 5G ಸ್ಮಾರ್ಟ್‌ಫೋನ್ ಕೂಡ ಟ್ರೆಂಡಿಂಗ್ನಲ್ಲಿದೆ. ಇದು 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ