100 ಜಾಗತಿಕ ತಂತ್ರಜ್ಞಾನ ನಾಯಕರ ಪಟ್ಟಿಯಲ್ಲಿ ಕೂ ಸಹ-ಸಂಸ್ಥಾಪಕ ರಾಧಾಕೃಷ್ಣಗೆ ಸ್ಥಾನ

100 ಜಾಗತಿಕ ತಂತ್ರಜ್ಞಾನ ನಾಯಕರ ಪಟ್ಟಿಯಲ್ಲಿ ಕೂ ಸಹ-ಸಂಸ್ಥಾಪಕ ರಾಧಾಕೃಷ್ಣಗೆ ಸ್ಥಾನ

ರೆಸ್ಟ್ ಆಫ್ ದಿ ವರ್ಲ್ಡ್ (RoW) ನಿಂದ ಬೆಂಗಳೂರು ಮೂಲದ ಕೂ ಅಪ್ಲಿಕೇಶನ್ (Koo App) ಸಹ-ಸಂಸ್ಥಾಪಕ ಮತ್ತು ಸಿಇಓ ಅಪ್ರಮಯ ರಾಧಾಕೃಷ್ಣ(Aprameya Radhakrishna)  ಅವರು ಟಾಪ್ 100 ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

TV9kannada Web Team

| Edited By: Vinay Bhat

May 13, 2022 | 3:12 PM

ಅಂತರರಾಷ್ಟ್ರೀಯ ಲಾಭರಹಿತ ಪತ್ರಿಕೋದ್ಯಮ ಸಂಸ್ಥೆಯಾದ ರೆಸ್ಟ್ ಆಫ್ ದಿ ವರ್ಲ್ಡ್ (RoW) ನಿಂದ ಬೆಂಗಳೂರು ಮೂಲದ ಕೂ ಅಪ್ಲಿಕೇಶನ್ (Koo App) ಸಹ-ಸಂಸ್ಥಾಪಕ ಮತ್ತು ಸಿಇಓ ಅಪ್ರಮಯ ರಾಧಾಕೃಷ್ಣ(Aprameya Radhakrishna)  ಅವರು ಟಾಪ್ 100 ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಯನ್ನು ಸಕ್ರಿಯಗೊಳಿಸುವ ಕೂ ವೇದಿಕೆಯ ಮೌಲ್ಯಯುತವಾದ ಪ್ರತಿಪಾದನೆ ಲಕ್ಷಾಂತರ ಜನಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತ, ನೈಜ ಜಾಗತಿಕ ಸಮಸ್ಯೆಯನ್ನು ಪರಿಹರಿಸುವ ನವೀನ ಆವಿಷ್ಕಾರವೆಂದು ಗುರುತಿಸಲ್ಪಟ್ಟಿದೆ. ಕೂ ವೇದಿಕೆಯ ಸಹ ಸಂಸ್ಥಾಪಕ ಮತ್ತು ಸಿಇಓ ಅಪ್ರಮೇಯ ರಾಧಾಕೃಷ್ಣ ಅವರು ಅನನ್ಯ ಸವಾಲುಗಳನ್ನು ಜಯಿಸುತ್ತಾ ಸಮುದಾಯಕ್ಕಾಗಿ ಉತ್ತಮ ಉತ್ಪನ್ನಗಳನ್ನು ನಿರ್ಮಿಸುತ್ತಿರುವ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ RoW ನಿಂದ ಗುರುತಿಸಲ್ಪಟ್ಟಿದ್ದಾರೆ.

ಕೇವಲ 10 ಪ್ರತಿಶತದಷ್ಟು ಜನರು ಇಂಗ್ಲೀಷ್ ಮಾತಾಡುವ ಈ ದೇಶದಲ್ಲಿ ತಮ್ಮ ಸ್ಥಳೀಯ ಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು, ಅನ್ವೇಷಿಸಲು ಮತ್ತು ತಮ್ಮ ಸ್ಥಳೀಯ ಭಾಷೆಗಳ ಸಮುದಾಯಗಳ ಜೊತೆ ಸಂಹವನ ನಡೆಸಲಿಕ್ಕಾಗಿ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರನ್ನು ಸಶಕ್ತಗೊಳಿಸಲು ಕೂ ವೇದಿಕೆಯನ್ನು ನಿರ್ಮಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳ ಹೊರಗಿನ ಡೈನಮಿಕ್ ಉದ್ಯಮಿಗಳು, ನವೋದ್ಯಮಿಗಳು ಮತ್ತು ಹೂಡಿಕೆದಾರರು ಹಾಗೂ ಅವರ ಜಾಗತಿಕ ಸಮುದಾಯಗಳನ್ನು ಬದಲಾಯಿಸುವ ಅತ್ಯುತ್ತಮ ಕೊಡುಗೆಗಳನ್ನು ತಿಳಿಸುವ ರಾಯಭಾರಿಯಾದ RoW100: ಗ್ಲೋಬಲ್ ಟೆಕ್ಸ್ ಚೇಂಜ್ ಮೇಕರ್ಸ್’ನ “ಸಂಸ್ಕೃತಿ ಮತ್ತು ಸಾಮಾಜಿಕ ಮಾಧ್ಯಮ” ವಿಭಾಗದಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಉದ್ಯಮಿ ಕೂ ವೇದಿಕೆಯ ಅಪ್ರಮೇಯ ರಾಧಾಕೃಷ್ಣ.

ಅಪ್ರಮೇಯ ರಾಧಾಕೃಷ್ಣ, ಕೂ ಸಹ-ಸಂಸ್ಥಾಪಕ ಮತ್ತು ಸಿಇಒ, ಮಾತನಾಡಿ “ನಾವು ರೋಡಬ್ಲ್ಯೂ 100: ಗ್ಲೋಬಲ್ ಟೆಕ್‌ನ ಚೇಂಜ್‌ಮೇಕರ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದೇವೆ ಮತ್ತು ಈ ಗೌರವಕ್ಕೆ ಸಂತಸವಾಗುತ್ತಿದೆ. ಇದು ಜಾಗತಿಕ ಮಟ್ಟದ ಅತ್ಯಂತ ಸಮೃದ್ಧ ಉದ್ಯಮಿಗಳು ಮತ್ತು ದಾರ್ಶನಿಕರನ್ನು ಒಳಗೊಂಡಿದ್ದು, ಅವರು ಅನನ್ಯ, ಅದ್ಭುತ ಆವಿಷ್ಕಾರಗಳ ಮೂಲಕ ಲಕ್ಷಾಂತರ ಜನರ ಜೀವನವನ್ನು ರೂಪಿಸುತ್ತಿದ್ದಾರೆ. ರೆಸ್ಟ್ ಆಫ್ ವರ್ಲ್ಡ್ ನಂತಹ ಪ್ರತಿಷ್ಠಿತ ಸಂಸ್ಥೆಯಿಂದ ಗುರುತಿಸಲ್ಪಟ್ಟಿರುವುದು ನಮಗೆ ನಿಜಕ್ಕೂ ಹೆಮ್ಮೆ ತಂದಿದೆ.”

“ನಾವು ಈವರೆಗೂ ಅಂತರವನ್ನು ಕಾಯ್ದುಕೊಂಡಿದ್ದ ಭಾಷಾ-ಆಧಾರಿತ ಮೈಕ್ರೋ-ಬ್ಲಾಗಿಂಗ್‌ನಲ್ಲಿ ಉತ್ತಮವಾದ ಮತ್ತು ಪ್ರೀತಿಯಿಂದ ತೊಡಗಿಸಿಕೊಳ್ಳಬಹುದಾದ ಬಹು-ಭಾಷಾ ಅನುಭವವನ್ನು ನೀಡುವ ವೇದಿಕೆಯೊಂದನ್ನು ನಿರ್ಮಿಸಿದ್ದೇವೆ. ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಯ ಅಗತ್ಯವು ಭಾರತಕ್ಕೆ ವಿಶಿಷ್ಟವಷ್ಟೇ ಅಲ್ಲ ಜಾಗತಿಕ ಸವಾಲಾಗಿದೆ, ಏಕೆಂದರೆ ಪ್ರಪಂಚದಾದ್ಯಂತ ಜನರು 80% ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯನ್ನೇ ಮಾತನಾಡುತ್ತಾರೆ.”

“ನಮ್ಮ ಈ ಆವಿಷ್ಕಾರವು ಜಾಗತಿಕವಾಗಿ ಉನ್ನತ ಸ್ಥಾನ ಕಾಯ್ದುಕೊಂಡಿದ್ದು ಜಾಗತಿಕ ಮಾರುಕಟ್ಟೆಗಳಿಗೆ ಸಂಬಂಧಿಸಿದ ಉತ್ಕೃಷ್ಟ ಮೌಲ್ಯವನ್ನು ಹೊಂದಿದೆ. ಮುಕ್ತ ಅಂತರ್ಜಾಲದಲ್ಲಿ ಭಾಷೆಯ ವಿಭಜನೆಯನ್ನು ಕಡಿಮೆ ಮಾಡಲು, ಭಾಷಾ ಸಂಸ್ಕೃತಿಗಳಾದ್ಯಂತ ಜನರನ್ನು ಸಂಪರ್ಕಿಸಲು ಮತ್ತು ಭಾರತದಲ್ಲಿ ನಿರ್ಮಿಸಲಾದ ನಮ್ಮ ಉತ್ಪನ್ನವನ್ನು ಪ್ರಪಂಚದ ಇತರ ಭಾಗಗಳಿಗೂ ಕೊಂಡೊಯ್ಯುವ ನಿಟ್ಟಿನಲ್ಲಿ ನಾವು ಗಮನಹರಿಸಿದ್ದೇವೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Most Read Stories

Click on your DTH Provider to Add TV9 Kannada