Sony Xperia Ace 3: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ಸೋನಿ ಎಕ್ಸ್‌ಪಿರಿಯಾ ಏಸ್ 3 ಫೋನ್: ಬೆಲೆ ಎಷ್ಟು?
ಸಂಸ್ಥೆಯು ಕಳೆದ ವರ್ಷ ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿ ಗಮನ ಸೆಳೆದಿತ್ತು. ಇದೀಗ ಹೊಸದಾಗಿ ಎಕ್ಸ್‌ಪಿರಿಯಾ ಏಸ್ 3 (Sony Xperia Ace 3) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಆಕರ್ಷಕ ಫೋನ್‌ಗಳನ್ನು ಬಿಡುಗಡೆ ಮಾಡುವ ಕಂಪನಿಗಳಲ್ಲಿ ಸೋನಿ (Sony) ಪ್ರಮುಖವಾದೂದು. ವರ್ಷಕ್ಕೆ ಎರಡು ಅಥವಾ ಮೂರು ಮೊಬೈಲ್ಗಳನ್ನಷ್ಟೆ ಅನಾವರಣ ಮಾಡುವ ಸೋನಿ ಕಂಪನಿಯ ಜನಪ್ರಿಯ ಎಕ್ಸಪಿರಿಯಾ ಸ್ಮಾರ್ಟ್‌ಫೋನ್ ಸರಣಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಈ ಸರಣಿಯಲ್ಲಿ ಹಲವು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಸಂಸ್ಥೆಯು ಕಳೆದ ವರ್ಷ ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿ ಗಮನ ಸೆಳೆದಿತ್ತು. ಇದೀಗ ಹೊಸದಾಗಿ ಎಕ್ಸ್‌ಪಿರಿಯಾ ಏಸ್ 3 (Sony Xperia Ace 3) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480 5G SoC ಪ್ರೊಸೆಸರ್ ಒಳಗೊಂಡಿದ್ದು, 4,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
- ಸೋನಿ ಎಕ್ಸ್‌ಪಿರಿಯಾ ಏಸ್ 3 ಸ್ಮಾರ್ಟ್‌ಫೋನ್ ಸದ್ಯಕ್ಕೆ ಜಪಾನ್‌ನಲ್ಲಿ ಅನಾವರಣಗೊಂಡಿದೆ. ಇದು 4GB RAM + 64GB ಆನ್‌ಬೋರ್ಡ್ ಸ್ಟೋರೇಜ್ ರೂಪಾಂತರವನ್ನು ಮಾತ್ರ ಹೊಂದಿದೆ. ಇದರ ಬೆಲೆ JPY 34,408. ಭಾರತದಲ್ಲಿ ಸುಮಾರು 20,500 ರೂ. ಎಂದು ಅಂದಾಜಿಸಲಾಗಿದೆ.
- ಈ ಸ್ಮಾರ್ಟ್‌ಫೋನ್ ಅನ್ನು ಕಪ್ಪು, ನೀಲಿ, ಬ್ರಿಕ್ ಆರೆಂಜ್ ಮತ್ತು ಗ್ರೇ ಎಂಬ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಸದ್ಯಕ್ಕೆ ವಿದೇಶದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್‌ಫೋನ್ ಕೆಲವೇ ತಿಂಗಳಲ್ಲಿ ಭಾರತಕ್ಕೆ ಕಾಲಿಡಲಿದೆ ಎಂದು ಹೇಳಲಾಗಿದೆ.
- ಸೋನಿ ಎಕ್ಸ್‌ಪಿರಿಯಾ ಏಸ್ 3 ಸ್ಮಾರ್ಟ್‌ಫೋನ್ 720 x 1,496 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ವಾಟರ್‌ಡ್ರಾಪ್ ನಾಚ್ ರಚನೆಯಿಂದ ಕೂಡಿದ್ದು, ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಪಡೆದಿದೆ.
- ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480 5G SoC ಪ್ರೊಸೆಸರ್ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಅನ್ನು ಪಡೆದಿದೆ. 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಇದ್ದು, ಜೊತೆಗೆ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಬಹುದಾಗಿದೆ.
- ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಫ್ರಂಟ್ ಸೆಲ್ಫಿ ಕ್ಯಾಮೆರಾವು 5 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಹೊಂದಿದೆ.
- ಸೋನಿ ಎಕ್ಸ್‌ಪಿರಿಯಾ ಏಸ್ 3 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಇದೆ. ಹಾಗೆಯೇ IP68 ರೇಟ್ ಮಾಡಿದ ನೀರು ಮತ್ತು ಧೂಳಿನ ಪ್ರತಿರೋಧ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್, 5ಜಿ, 3.5 ಎಂಎಂ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ನೀಡಲಾಗಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Fri, 13 May 22