Sony Xperia 10 III Lite: ಸೋನಿಯಿಂದ ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನು ವಿಶೇಷತೆ?

ಸೋನಿ ಎಕ್ಸ್‌ಪೀರಿಯಾ 10 III ಲೈಟ್‌ ಸ್ಮಾರ್ಟ್‌ಫೋನ್ 1,080x2,520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿದೆ.

Sony Xperia 10 III Lite: ಸೋನಿಯಿಂದ ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನು ವಿಶೇಷತೆ?
Sony Xperia 10 III Lite
Follow us
TV9 Web
| Updated By: Vinay Bhat

Updated on: Aug 21, 2021 | 3:14 PM

ಎಕ್ಸ್‌ಪೀರಿಯಾ 10 ಸ್ಮಾರ್ಟ್‌ಫೋನ್​ಗಳನ್ನು ಪರಿಚಯಿಸಿ ಸಾಕಷ್ಟು ಪ್ರಸಿದ್ಧಿ ಪಡೆದ ಸೋನಿ ಕಂಪೆನಿ ಸದ್ಯ ಇದೇ ಸರಣಿಯಲ್ಲಿ ಸೋನಿ ಎಕ್ಸ್‌ಪೀರಿಯಾ 10 III ಲೈಟ್ (Sony Xperia 10 III Lite) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಭರ್ಜರಿ ಸದ್ದು ಮಾಡುತ್ತಿದೆ. ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್, OLED ಡಿಸ್‌ಪ್ಲೇ ಸೇರಿದಂತೆ ಆಕರ್ಷಕ ಫೀಚರ್ಸ್‌ಗಳನ್ನು ಈ ಸ್ಮಾರ್ಟ್​ಫೋನ್ ಒಳಗೊಂಡಿದೆ.

ಸೋನಿ ಎಕ್ಸ್‌ಪೀರಿಯಾ 10 III ಲೈಟ್‌ ಸ್ಮಾರ್ಟ್‌ಫೋನ್ 1,080×2,520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ 120Hz ರೀಫ್ರೇಶ್‌ ರೇಟ್ ಒಳಗೊಂಡಿದೆ. ಸದ್ಯಕ್ಕೆ ಈ ಸ್ಮಾರ್ಟ್​ಫೋನ್ ಜಪಾನ್​ನಲ್ಲಿ ರಿಲೀಸ್ ಆಗಿದೆ. ಸದ್ಯದಲ್ಲೇ ಭಾರತದ ಮಾರುಕಟ್ಟೆಗೂ ಕಾಲಿಡಲಿದೆ.

ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 690 SoC ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಆಂಡ್ರಾಯ್ಡ್‌ 11 ಓಎಸ್‌ ಹಾಗೂ 6GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೂ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶ ಮಾಡಿಕೊಟ್ಟಿದೆ.

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್‌ ಪಡೆದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು 8 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಫ್ರಂಟ್ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್‌ ಕ್ಯಾಮೆರಾ ಹೊಂದಿದೆ.

ಇದು 4,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಅದಕ್ಕೆ ಪೂರಕ ಚಾರ್ಜಿಂಗ್ ವ್ಯವಸ್ಥೆ ಒದಗಿಸಲಾಗಿದೆ. ಇದರೊಂದಿಗೆ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಸೋನಿ ಎಕ್ಸ್‌ಪೀರಿಯಾ 10 III ಲೈಟ್‌ ಸ್ಮಾರ್ಟ್‌ಫೋನ್ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆಯು ಜಪಾನ್‌ನಲ್ಲಿ JPY 46,800 ಅಂದರೆ ಭಾರತದಲ್ಲಿ ಅಂದಾಜು 31,600 ರೂ. ಇರಬಹುದು.

ಭಾರತೀಯ ಸ್ಮಾರ್ಟ್​ಫೋನ್ ಮಾರ್ಕೆಟ್​ನಲ್ಲಿ ಹೊಸ ದಾಖಲೆ: ಅರ್ಧ ವರ್ಷದಲ್ಲಿ ಸೇಲ್ ಆದ ಫೋನ್ ಎಷ್ಟು ಗೊತ್ತೇ?

Samsung Galaxy M52: ಸ್ಯಾಮ್​ಸಂಗ್ ತಯಾರಿಸುತ್ತಿರುವ ಹೊಸ 5G ಸ್ಮಾರ್ಟ್​ಫೋನ್ ಬಗ್ಗೆ ವಿಶೇಷ ಮಾಹಿತಿ ಬಹಿರಂಗ

(Sony Xperia 10 III Lite With Snapdragon 690 SoC Triple Rear Cameras Launched Price Specifications)