7 ಸಾವಿರಕ್ಕಿಂತ ಕಡಿಮೆ ಬೆಲೆಗೆ 6000mAh ಬ್ಯಾಟರಿ, 13mp ಕ್ಯಾಮೆರಾ ಸ್ಮಾರ್ಟ್​ಫೋನ್

Flipkart Mobiles Bonanza sale: ಇನ್ನು ಮೊಬೈಲ್​ನ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದ್ದು, ಇದರ ಜೊತೆಗೆ ಕಡಿಮೆ ಬೆಳಕಿನ ಸೆನ್ಸರ್ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

TV9 Web
| Updated By: ಝಾಹಿರ್ ಯೂಸುಫ್

Updated on: Aug 21, 2021 | 8:22 PM

ಜನಪ್ರಿಯ ಶಾಂಪಿಂಗ್ ವೆಬ್​ಸೈಟ್ ಫ್ಲಿಪ್​ ಕಾರ್ಟ್​ ಸ್ಮಾರ್ಟ್​ಫೋನ್​ಗಳ ಮೇಲೆ ಬೊನಾನ್ಝ ಆಫರ್ ನೀಡುತ್ತಿದೆ. ಈ ಆಫರ್​ನಲ್ಲಿ ಗ್ರಾಹಕರು ಸ್ಮಾರ್ಟ್ಫೋನ್​ಗಳ ಮೇಲೆ ವಿವಿಧ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಪಡೆಯಬಹುದು. ಈಗಾಗಲೇ ಈ ಮಾರಾಟ ಆರಂಭವಾಗಿದ್ದು ಆಗಸ್ಟ್ 23 ರವರೆಗೆ ಆಫರ್ ಇರಲಿದೆ.

1 / 7
ಈ ಆಫರ್ ಅಡಿಯಲ್ಲಿ, ಸ್ಯಾಮ್‌ಸಂಗ್, ಪೊಕೊ, ಇನ್ಫಿನಿಕ್ಸ್, ಐಫೋನ್, ಮೊಟೊರೊಲಾ ಮುಂತಾದ ಬ್ರಾಂಡ್‌ಗಳ ಫೋನ್‌ಗಳನ್ನು ಉತ್ತಮ ಡೀಲ್‌ಗಳಲ್ಲಿ ಖರೀದಿಸಬಹುದು. ಅದರಲ್ಲೂ ಇನ್ಫಿನಿಕ್ಸ್ ಸ್ಮಾರ್ಟ್ 5 ಅನ್ನು ಮೊದಲ ಬಾರಿಗೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ .

2 / 7
ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್ ಟೈಮ್ ಆನ್ ಆಫರ್ ಅಡಿಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 5 ಫೋನ್​ ಅನ್ನು 6999 ರೂ.ಗೆ ಮಾರಾಟ ಮಾಡುತ್ತಿದೆ. ಹಾಗಿದ್ರೆ ಈ ಫೋನಿನ ಸಂಪೂರ್ಣ ವಿಶೇಷತೆಗಳೇನು ತಿಳಿಯೋಣ ...

3 / 7
ಇನ್ಫಿನಿಕ್ಸ್ ಸ್ಮಾರ್ಟ್ 5 ಮೊಬೈಲ್​ 6.82-ಇಂಚಿನ HD+ ಡಿಸ್​​ಪ್ಲೇ ಹೊಂದಿದ್ದು, ಇದು 1640 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರಲಿದೆ. ಇನ್ನು ಇದರಲ್ಲಿ MediaTek Helio G25 ಪ್ರೊಸೆಸರ್ ನೀಡಲಾಗಿದ್ದು, ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸುತ್ತದೆ.

4 / 7
 ಈ ಫೋನ್‌ನಲ್ಲಿ 2 GB RAM + 32 GB ಇನ್​ಬಿಲ್ಟ್ ಸ್ಟೊರೇಜ್ ನೀಡಲಾಗಿದೆ. ಇದರ ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಫೋನ್‌ನ ಸ್ಟೊರೇಜ್​ ಅನ್ನು 256 ಜಿಬಿಗೆ ವಿಸ್ತರಿಸಬಹುದು.

5 / 7
ಇನ್ನು ಮೊಬೈಲ್​ನ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದ್ದು, ಇದರ ಜೊತೆಗೆ ಕಡಿಮೆ ಬೆಳಕಿನ ಸೆನ್ಸರ್ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

6 / 7
ಇನ್ಫಿನಿಕ್ಸ್ ಸ್ಮಾರ್ಟ್ 5 ಸ್ಮಾರ್ಟ್​ಫೋನ್​ನಲ್ಲಿ 6000mAh ಸಾಮರ್ಥ್ಯದ ಬ್ಯಾಟರಿ ನೀಡಿರುವುದು ವಿಶೇಷ. ಇದರಿಂದ ದೀರ್ಘಾವಧಿವರೆಗೂ ಫೋನ್​ನಲ್ಲಿ ಚಾರ್ಜ್ ನಿಲ್ಲಲಿದೆ. ಇದಲ್ಲದೆ, 4G VoLTE, GPS, GPRS, Bluetooth 5.0, Wi-Fi ನಂತಹ ವೈಶಿಷ್ಟ್ಯಗಳನ್ನು ಈ ಫೋನ್‌ನಲ್ಲಿ ನೀಡಲಾಗಿದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸರ್, ಆಂಬಿಯೆಂಟ್ ಲೈಟ್ ಸೆನ್ಸರ್, ಜಿ-ಸೆನ್ಸರ್, ಗೈರೊಸ್ಕೋಪ್ ಮತ್ತು ಇ-ಕಂಪಾಸ್ ಕೂಡ ಫೋನ್‌ನಲ್ಲಿವೆ.

7 / 7
Follow us