Government Borrowing: ಕೇಂದ್ರ ಸರ್ಕಾರದಿಂದ ಭಾರೀ ಸಾಲ; FY22ರಲ್ಲಿ ಶೇ 46ರಷ್ಟು ಮಾರುಕಟ್ಟೆಯಲ್ಲಿ ಸಂಗ್ರಹ
2021- 22ನೇ ಸಾಲಿಗೆ ಸರ್ಕಾರಕ್ಕೆ ಪೆಟ್ರೋಲ್- ಡೀಸೆಲ್ ಸುಂಕದ ಆದಾಯ, ಜಿಎಸ್ಟಿ ತೆರಿಗೆ ಆದಾಯದ ಹೊರತಾಗಿಯೂ ಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ಸಾಲ ಪಡೆಯಲಾಗಿದೆ.
Updated on:Aug 21, 2021 | 7:29 PM

ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆಯಿಂದ ಗಳಿಕೆ, ಜಿಎಸ್ಟಿ ಸಂಗ್ರಹದ ಹೊರತಾಗಿಯೂ ಕೇಂದ್ರ ಸರ್ಕಾರವು ಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ಸಾಲ ಪಡೆದಿದೆ. ಈ ವರೆಗೆ ಅಧಿಸೂಚನೆ ಹೊರಡಿಸಿದ ಶೇ 90 ರಷ್ಟು ಮೊತ್ತ ಅಥವಾ ಹಣಕಾಸು ವರ್ಷ 2022ರ ಒಟ್ಟಾರೆ ಸಾಲದ ಶೇ 46ರಷ್ಟು ಸಾಲ ಮಾಡಲಾಗಿದೆ, ಎರಡನೇ ತ್ರೈಮಾಸಿಕದ ಹಾದಿಯ ಅರ್ಧದಲ್ಲಿ ಇರುವಾಗಲೇ ಇಂಥ ಪರಿಸ್ಥಿತಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೊದಲನೇ ತ್ರೈಮಾಸಿಕದಲ್ಲಿ ಒಟ್ಟಾರೆಯಾಗಿ ಸರ್ಕಾರವು ಅಂದಾಜು ಮಾಡಿದ ತೆರಿಗೆಯ ಶೇ 25.1ರಷ್ಟು ಸಂಗ್ರಹ ಮಾಡಿದೆ. ಸಾಂಪ್ರದಾಯಿಕವಾಗಿ ನೋಡಿದರೆ ತೆರಿಗೆಯಲ್ಲಿ ಇದು ಕಡಿಮೆ. ಕೊವಿಡ್-19 ಎರಡನೇ ಅಲೆಯ ಹೊರತಾಗಿಯೂ ಮೊದಲನೇ ತ್ರೈಮಾಸಿಕದ ಒಟ್ಟಾರೆ ತೆರಿಗೆ ಸಂಗ್ರಹವು ಶೇ 39ರಷ್ಟು ಏರಿಕೆಯಾಗಿ, 5.6 ಲಕ್ಷ ಕೋಟಿ ರೂಪಾಯಿ ತಲುಪಿದೆ ಎಂದು ಇಕ್ರಾ (Icra) ರೇಟಿಂಗ್ಸ್ನ ವಿಶ್ಲೇಷಣೆಯಿಂದ ಗೊತ್ತಾಗಿದೆ. ಅದರ ಅಂದಾಜಿನ ಪ್ರಕಾರ, FY22 ಬಜೆಟ್ನಲ್ಲಿ ಅಂದಾಜು ಮಾಡಿರುವ 22.2 ಲಕ್ಷ ಕೋಟಿ ರೂಪಾಯಿಯ ಮೊತ್ತವನ್ನೂ ಮೀರಿಹೋಗುತ್ತದೆ.

RBI Scraps One Click Purchase From January 1 2022

Depositors Of Stressed Banks Will Get Money Up to Rs 5 Lakhs Within 90 Days From November 30 2021

2021 August Month GST Revenue Collection At Rs 1.12 Lakh Crore Here Is The Details

ಮತ್ತೊಂದು ಕಾರಣ ಏನೆಂದರೆ, GSAP ಕಾರ್ಯಕ್ರಮದ ಅಡಿಯಲ್ಲಿ 25 ಸಾವಿರ ಕೋಟಿ ರೂಪಾಯಿ ಮೊತ್ತದ ಗಿಲ್ಟ್ಸ್ ಮುಂದಿನ ವಾರ ಖರೀದಿ ಮಾಡುವುದಾಗಿ ಆರ್ಬಿಐ ತಿಳಿಸಿದೆ. ಇದರಿಂದಾಗಿ ಹೂಡಿಕೆದಾರರ ಭಾವನೆಗಳಿಗೆ ಉತ್ತೇಜನ ನೀಡಿದೆ ಎಂದು ಸೇರಿಸಲಾಗಿದೆ. ಆದರೆ ಯೀಲ್ಡ್ಸ್ ಮೇಲ್ಮಟ್ಟದಲ್ಲಿ ಮುಂದುವರಿದಿದೆ. ಜೂನ್ ಮೂರನೇ ವಾರದಲ್ಲಿ ಶೇ 6.20ರ ಸಮೀಪದಲ್ಲಿದೆ. ಈ ವರ್ಷದಲ್ಲಿ ಇಲ್ಲಿಯ ತನಕ ಯೀಲ್ಡ್ಸ್ 18 ಬಿಪಿಎಸ್ ಏರಿಕೆಯಾಗಿದೆ. ಬೇಡಿಕೆ- ಪೂರೈಕೆಯ ಕಾರಣಕ್ಕೆ ಈ ಬೆಳವಣಿಗೆ ಆಗಿದೆ. ಈ ಮಧ್ಯೆ, FY22ರಲ್ಲಿ 67000 ಕೋಟಿ ರೂಪಾಯಿ ಮೊತ್ತದ್ದು ಹಾಗೂ 10 ವರ್ಷದ ಸೆಕ್ಯೂರಿಟಿಯಲ್ಲಿ ಶೇ 84ರಷ್ಟು ಅಥವಾ 56 ಸಾವಿರ ಕೋಟಿ ರೂಪಾಯಿಯಷ್ಟು ಹರಾಜು ರದ್ದಾಗಿದೆ.
Published On - 7:28 pm, Sat, 21 August 21



















