AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್​ಗೆ ಆಯ್ಕೆಯಾದರೂ ಬಾಂಗ್ಲಾದೇಶ್ ಆಟಗಾರನಿಗೆ ಸಂಕಷ್ಟ

IPL 2025 Mustafizur Rahman: ಮುಸ್ತಫಿಝುರ್ ರೆಹಮಾನ್ ಐಪಿಎಲ್​ನಲ್ಲಿ ಈವರೆಗೆ 57 ಪಂದ್ಯಗಳನ್ನಾಡಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿರುವ ಮುಸ್ತಫಿಝುರ್ ಒಟ್ಟು 61 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದೀಗ ಐಪಿಎಲ್ ಸೀಸನ್​-18ಗೆ ಬದಲಿ ಆಟಗಾರನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಝಾಹಿರ್ ಯೂಸುಫ್
|

Updated on: May 15, 2025 | 7:55 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಉಳಿದ ಪಂದ್ಯಗಳು ಶನಿವಾರದಿಂದ (ಮೇ 17) ಶುರುವಾಗಲಿದೆ. ಆದರೆ ಈ ಪಂದ್ಯಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಯುವ ದಾಂಡಿಗ ಜೇಕ್ ಫ್ರೇಸರ್ ಮೆಕ್​ಗುರ್ಕ್​ ಅಲಭ್ಯರಾಗಿದ್ದಾರೆ. ಹೀಗಾಗಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬದಲಿ ಆಟಗಾರನಾಗಿ ಬಾಂಗ್ಲಾದೇಶ್ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

1 / 5
ಈ ಆಯ್ಕೆಯ ಹೊರತಾಗಿಯೂ ಮುಸ್ತಫಿಝುರ್ ರೆಹಮಾನ್ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಇನ್ನೂ ಸಹ ಖಚಿತವಾಗಿಲ್ಲ. ಏಕೆಂದರೆ ಇತ್ತ ಐಪಿಎಲ್​ಗೆ ಆಯ್ಕೆಯಾದ ಬೆನ್ನಲ್ಲೇ ಮುಸ್ತಫಿಝುರ್ ದುಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಅದು ಕೂಡ UAE ವಿರುದ್ಧ ಟಿ20 ಸರಣಿ ಆಡಲು. ಮೇ 17 ರಿಂದ ಬಾಂಗ್ಲಾದೇಶ್ ಹಾಗೂ ಯುಎಇ ನಡುವೆ 2 ಪಂದ್ಯಗಳ ಟಿ20 ಸರಣಿ ನಡೆಯಲಿದೆ. 

2 / 5
ಈ ಸರಣಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಮುಸ್ತಫಿಝುರ್ ರೆಹಮಾನ್ ಇದ್ದಾರೆ. ಯುಎಇ ವಿರುದ್ಧದ ಪಂದ್ಯಗಳ ಬಳಿಕ ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ನಡುವೆ 5 ಮ್ಯಾಚ್​ಗಳ ಟಿ20 ಸರಣಿ ನಡೆಯಲಿದೆ. ಈ ಸರಣಿ ಶುರುವಾಗುವುದು ಮೇ 25 ರಿಂದ. ಜೂನ್ 3 ರಂದು ಈ ಸರಣಿಯ ಕೊನೆಯ ಪಂದ್ಯವಾಡಲಿದ್ದಾರೆ.

3 / 5
ಅಂದರೆ ಐಪಿಎಲ್​ನ ಫೈನಲ್​​ವರೆಗೆ ಮುಸ್ತಫಿಝುರ್ ರೆಹಮಾನ್ ಬಾಂಗ್ಲಾದೇಶ್ ತಂಡದಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯ. ಇದೇ ಕಾರಣದಿಂದಾಗಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​, ಮುಸ್ತಫಿಝುರ್​ ರೆಹಮಾನ್​ಗೆ ಐಪಿಎಲ್ ಆಡಲು ಇನ್ನೂ ಸಹ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ನೀಡಿಲ್ಲ. 

4 / 5
ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾದರೂ ಮುಸ್ತಫಿಝುರ್​ ರೆಹಮಾನ್ ಐಪಿಎಲ್ ಆಡುತ್ತಾರೊ, ಇಲ್ಲವೊ ಎಂಬುದು ಇನ್ನೂ ಸಹ ಖಚಿತವಾಗಿಲ್ಲ. ಒಂದು ವೇಳೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಯುಎಇ ಸರಣಿ ಬಳಿಕ ಅವರಿಗೆ ಎನ್​ಒಸಿ ನೀಡಿದರೆ ಮೇ 20 ರಂದು ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೂಡಿಕೊಳ್ಳಬಹುದು. ಆದರೆ ಪಾಕ್ ವಿರುದ್ಧದ ಸರಣಿಯಿಂದ ಪ್ರಮುಖ ವೇಗಿ ಮುಸ್ತಫಿಝುರ್​ ರೆಹಮಾನ್ ಅವರನ್ನು ಬಿಸಿಬಿ ಹೊರಗಿಡುತ್ತಾ ಎಂಬುದೇ ಈಗ ದೊಡ್ಡ ಪ್ರಶ್ನೆ. 

5 / 5
Follow us
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ

ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್

Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ

ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ

ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ

ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ

ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್

ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ

ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ