AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಸ್ಮಾರ್ಟ್​ಫೋನ್ ಮಾರ್ಕೆಟ್​ನಲ್ಲಿ ಹೊಸ ದಾಖಲೆ: ಅರ್ಧ ವರ್ಷದಲ್ಲಿ ಸೇಲ್ ಆದ ಫೋನ್ ಎಷ್ಟು ಗೊತ್ತೇ?

ಭಾರತದಲ್ಲಿ ಇಷ್ಟು ಮೊತ್ತದಲ್ಲಿ ಸ್ಮಾರ್ಟ್​ಫೋನ್ ಸೋಲ್ಡ್ ಆಗಿರುವುದು ಇದೇ ಮೊದಲ ಬಾರಿಯಂತೆ. ಅದರಲ್ಲೂ ಕೋವಿಡ್ ಲಾಕ್ಡೌನ್ ಮುಗಿದ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫೋನ್​​ಗಳು ಸೇಲ್ ಕಾಣುತ್ತಿವೆಯಂತೆ.

ಭಾರತೀಯ ಸ್ಮಾರ್ಟ್​ಫೋನ್ ಮಾರ್ಕೆಟ್​ನಲ್ಲಿ ಹೊಸ ದಾಖಲೆ: ಅರ್ಧ ವರ್ಷದಲ್ಲಿ ಸೇಲ್ ಆದ ಫೋನ್ ಎಷ್ಟು ಗೊತ್ತೇ?
Smartphones
TV9 Web
| Edited By: |

Updated on: Aug 21, 2021 | 2:19 PM

Share

ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆ ಈಗ ಮತ್ತಷ್ಟು ವಿಸ್ತಾರವಾಗಿದೆ. 2021ರ ಅರ್ಧವರ್ಷದಲ್ಲೇ ಬರೋಬ್ಬರಿ 173 ಮಿಲಿಯನ್ ಯುನಿಟ್​ನಷ್ಟು ಸ್ಮಾರ್ಟ್​ಫೋನ್​ಗಳು ಸೇಲ್ ಆಗಿವೆ. ವರ್ಷದಿಂದ ವರ್ಷಕ್ಕೆ ಶೇ. 14 ರಷ್ಟು ಹೆಚ್ಚು ಸೇಲ್ ಕಾಣುತ್ತಿವೆ ಎಂದು ಕೌಂಟರ್​ಪ್ರಿಂಟ್ ವರದಿ ಮಾಡಿದೆ. ಎರಡನೇ ಕ್ವಾರ್ಟರ್​ನಲ್ಲಿ 100 ಮಿಲಿಯನ್​ಗೂ ಅಧಿಕ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಸೇಲ್ ಕಾಣಲಿವೆ ಎಂದು ಹೇಳಲಾಗಿದೆ.

ಭಾರತದಲ್ಲಿ ಇಷ್ಟು ಮೊತ್ತದಲ್ಲಿ ಸ್ಮಾರ್ಟ್​ಫೋನ್ ಸೋಲ್ಡ್ ಆಗಿರುವುದು ಇದೇ ಮೊದಲ ಬಾರಿಯಂತೆ. ಅದರಲ್ಲೂ ಕೋವಿಡ್ ಲಾಕ್ಡೌನ್ ಮುಗಿದ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫೋನ್​​ಗಳು ಸೇಲ್ ಕಾಣುತ್ತಿವೆಯಂತೆ.

ಭಾರತ ಅತಿ ಹೆಚ್ಚು ಮಾರಾಟವಾಗುವ ಎರಡನೇ ಸ್ಮಾರ್ಟ್​ಫೋನ್ ಮಾರುಕಟ್ಟೆಯಾಗಿದೆ. ಮೊದಲ ಸ್ಥಾನದಲ್ಲಿ ಚೀನಾವಿದೆ. ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿರುವ ರಿಲಾಯನ್ಸ್ ಜಿಯೋ ಆಂಡ್ರಾಯ್ಡ್ ಫೋನ್ ದೊಡ್ಡ ಮಟ್ಟದಲ್ಲಿ ಸೇಲ್ ಕಾಣಲಿದೆ ಎಂದು ವರದಿ ಹೇಳಿದೆ.

ಇತ್ತ ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪೆನಿ ಇದೇ ಮೊದಲ ಬಾರಿಗೆ ಜೂನ್ ತಿಂಗಳ ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಜೂನ್​ನಲ್ಲಿ ಶವೋಮಿ ಕಂಪೆನಿ ಬರೋಬ್ಬರಿ ಶೇ. 26 ರಷ್ಟು ಬೆಳವಣಿಗೆ ಕಂಡಿದೆಯಂತೆ. ಈ ಬಗ್ಗೆ ಕೌಂಟರ್​ಪ್ರಿಂಟ್ ರಿಸರ್ಚ್ ಮಾಹಿತಿ ನೀಡಿದೆ. ಭಾರತ, ಚೀನಾ ಹಾಗೂ ಯುರೋಪ್ ದೇಶಗಳಲ್ಲಿ ಶವೋಮಿಯ ಸ್ಮಾರ್ಟ್​ಫೋನ್ ಅತಿ ಹೆಚ್ಚು ಸೇಲ್ ಕಂಡಿದೆಯಂತೆ.

ಭಾರತದಲ್ಲಿ ಶೇ. 28 ರಷ್ಟು ಮಾರ್ಕೆಟ್ ಅನ್ನು ಶವೋಮಿ ಹೊಂದಿದೆ. ಹೀಗಾಗಿ ಸ್ಯಾಮ್​ಸಂಗ್, ವಿವೋ, ರಿಯಲ್ ಮಿ ಮತ್ತು ಒಪ್ಪೋಗಳನ್ನು ಹಿಂದಿಕ್ಕಿ ಶವೋಮಿ ಕಳೆದ ಎರಡು ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿಯೇ ಭದ್ರವಾಗಿದೆ. ರೆಡ್ಮಿ 9 ಸರಣಿ ಮತ್ತು ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್​ಫೊನ್​ಗಳು ಭಾರತದಲ್ಲಿ ಅತಿ ಹೆಚ್ಚಿ ಮಾರಾಟವಾಗಿದೆಯಂತೆ.

Samsung Galaxy M52: ಸ್ಯಾಮ್​ಸಂಗ್ ತಯಾರಿಸುತ್ತಿರುವ ಹೊಸ 5G ಸ್ಮಾರ್ಟ್​ಫೋನ್ ಬಗ್ಗೆ ವಿಶೇಷ ಮಾಹಿತಿ ಬಹಿರಂಗ

Vivo Y21: ವಿವೋದಿಂದ ಬಜೆಟ್ ಬೆಲೆಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೆ?

(Indias smartphone market is set to hit a record high of 173 million units in 2021)

Follow Us
Web contact
Web contact

TV9 Kannada

Read More
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಎಲೆಕ್ಟ್ರಿಕ್ ಕಾರಿನ ಭೀಕರ ಅಪಘಾತದ ವಿಡಿಯೋ ವೈರಲ್
ಎಲೆಕ್ಟ್ರಿಕ್ ಕಾರಿನ ಭೀಕರ ಅಪಘಾತದ ವಿಡಿಯೋ ವೈರಲ್
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ