AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo Y21: ವಿವೋದಿಂದ ಬಜೆಟ್ ಬೆಲೆಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೆ?

ಭಾರತದಲ್ಲಿ ಸದ್ಯ ವಿವೋ Y21 ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. 4GB RAM ಮತ್ತು 128GB ಸ್ಟೋರೆಜ್ ರೂಪಾಂತರಕ್ಕೆ 15,490 ರೂ. ನಿಗದಿ ಮಾಡಲಾಗಿದೆ.

Vivo Y21: ವಿವೋದಿಂದ ಬಜೆಟ್ ಬೆಲೆಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೆ?
Vivo Y21
TV9 Web
| Edited By: |

Updated on:Aug 21, 2021 | 11:56 AM

Share

ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್​ಫೋನ್ ಬ್ರ್ಯಾಂಡ್ ವಿವೋ ಭಾರತದಲ್ಲಿ ತನ್ನ ಹೊಸ ವಿವೋ ವೈ21 (Vivo Y21) ಫೋನನ್ನು ಅನಾವರಣ ಮಾಡಿದೆ. ವಾಟರ್‌ಡ್ರಾಪ್ ಶೈಲಿಯ ನಾಚ್ ಡಿಸ್‌ಪ್ಲೇ, 13 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೇರಿದಂತೆ ಬಲಿಷ್ಠ ಬ್ಯಾಟರಿವುಳ್ಳ ಈ ಸ್ಮಾರ್ಟ್​ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದ. ವಿಶೇಷ ಎಂದರೆ ಈ ಸ್ಮಾರ್ಟ್​​ಫೊನ್ ಬಜೆಟ್ ಬೆಲೆಗೆ ಲಭ್ಯವಿದೆ.

ಭಾರತದಲ್ಲಿ ಸದ್ಯ ವಿವೋ Y21 ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. 4GB RAM ಮತ್ತು 128GB ಸ್ಟೋರೆಜ್ ರೂಪಾಂತರಕ್ಕೆ 15,490 ರೂ. ನಿಗದಿ ಮಾಡಲಾಗಿದೆ. 4GB RAM ಮತ್ತು 64GB ಸ್ಟೋರೆಜ್ ಆಯ್ಕೆಯ ಫೋನ್ ಸದ್ಯದಲ್ಲೇ ಪರಿಚಯಿಸುತ್ತೇವೆ ಎಂದು ಕಂಪೆನಿ ತಿಳಿಸಿದೆ.

ಈ ಸ್ಮಾರ್ಟ್‌ಫೋನ್‌ ವಿವೋ ಇಂಡಿಯಾ ಇ-ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್, ಪೇಟಿಎಂ, ಟಾಟಾಕ್ಲಿಕ್, ಬಜಾಜ್ ಫಿನ್‌ಸರ್ವ್ ಇಎಂಐ ಸ್ಟೋರ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಲಾಂಚ್ ಆಫರ್‌ನಲ್ಲಿ HDFC ಬ್ಯಾಂಕ್ ಕಾರ್ಡ್‌ಗಳು ಮತ್ತು ICICI ಬ್ಯಾಂಕ್ ಕಾರ್ಡ್‌ಗಳ ಮೇಲೆ 500 ಕ್ಯಾಶ್‌ಬ್ಯಾಕ್ ದೊರೆಯಲಿದೆ.

ವಿವೋ Y21 ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ HD+ (ಗಳು) IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ P35 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಫನ್‌ಟಚ್ ಓಎಸ್ 11.1 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ವಿಶೇಷವಾಗಿ ಈ ಸ್ಮಾರ್ಟ್​ಫೋನ್ 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ 4ಜಿ ಬೆಂಬಲ ಸೇರಿದಂತೆ ಇತ್ತಿಚೆಗಿನ ಆಯ್ಕೆ ನೀಡಲಾಗಿದೆ.

Flipkart Mobiles Bonanza sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಹೊಸ ಮೇಳ: ಈ ಫೋನ್​ಗಳ ಮೇಲೆ 10,000 ರೂ. ಡಿಸ್ಕೌಂಟ್

Redmi 10: ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಶವೋಮಿಯಿಂದ ಹೊಸ ಫೋನ್ ಬಿಡುಗಡೆ

(Vivo Y21 With 5000mAh Battery and MediaTek Helio P35 SoC Launched in India Price Specifications)

Published On - 11:55 am, Sat, 21 August 21

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್